ಹೆಡ್‌ಫೋನ್‌ ವಿಚಾರಕ್ಕೆ ನಶೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿ ಸ್ನೇಹಿತನ ಹತ್ಯೆ  

Team Udayavani, Jan 3, 2023, 9:46 AM IST

ಹೆಡ್‌ಫೋನ್‌ ವಿಚಾರಕ್ಕೆ ನಶೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿ ಸ್ನೇಹಿತನ ಹತ್ಯೆ  

ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆ ಹೆಡ್‌ಫೋನ್‌ ವಿಚಾರಕ್ಕೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ಕಾರ್ತಿಕ್‌(27) ಕೊಲೆಯಾದವ.

ಈ ಸಂಬಂಧ ರಜನೀಶ್‌ ಮತ್ತು ರವಿ ಎಂಬುವರನ್ನು ಬಂಧಿಸಲಾಗಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯವರಾದ ಕಾರ್ತಿಕ್‌, ರಜನೀಶ್‌ ಮತ್ತು ರವಿ ದೊಡ್ಡನಾಗಮಂಗಲದ ಬಾಲಾಜಿ ಲೇಔಟ್‌ನಲ್ಲಿ ನಿರ್ಮಾಣ ಹಂತದ ಮನೆಯಲ್ಲಿ ಪೇಟಿಂಗ್‌ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ವಾಸವಾಗಿದ್ದರು. ಡಿ.31ರಂದು ಆರೋಪಿ ರಜನೀಶ್‌ ಹುಟ್ಟುಹಬ್ಬ ಹಾಗೂ ಹೊಸವರ್ಷದ ಸಂಭ್ರಮಾಚರಣೆಗಾಗಿ ನಿರ್ಮಾಣ ಹಂತದ ಕಟ್ಟಡದಲ್ಲೇ ಕಾರ್ತಿಕ್‌, ರವಿ ಹಾಗೂ ಇತರರು ಪಾರ್ಟಿ ಮಾಡಿದ್ದಾರೆ. ಈ ವೇಳೆ ಎಲ್ಲರೂ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಆಗ ರಜನೀಶ್‌ನ ಹೆಡ್‌ಫೋನ್‌ ಅನ್ನು ಕಾರ್ತಿಕ್‌ ತೆಗೆದುಕೊಂಡಿದ್ದಾನೆ. ಅದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ.

ಈ ವೇಳೆ ರಜನೀಶ್‌ ಸಹಾಯಕ್ಕೆ ಬಂದ ರವಿ ಹಾಗೂ ಇತರರು ಕಾರ್ತಿಕ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಕೈ ಮತ್ತು ಕಾಲುಗಳಲ್ಲೇ ಕಾರ್ತಿಕ್‌ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದರು. ಜತೆಗೆ ಗಾಜಿನಿಂದಲೂ ಹಲ್ಲೆ ನಡೆಸಿದ್ದಾರೆ. ಅನಂತರ ಎಲ್ಲರೂ ಮಲಗಲು ಹೋಗಿದ್ದಾರೆ. ಮರು ದಿನ ಬೆಳಗ್ಗೆ ಕಾರ್ತಿಕ್‌ ಎಚ್ಚರಗೊಂಡಿಲ್ಲ. ಬಳಿಕ ಇತರೆ ಕಾರ್ಮಿಕರು ಕಾರ್ತಿಕ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

Rain ಕಾಸರಗೋಡಿನಾದ್ಯಂತ ಬಿರುಸಿನ ಮಳೆ: ಇಬ್ಬರ ಸಾವು

Rain ಕಾಸರಗೋಡಿನಾದ್ಯಂತ ಬಿರುಸಿನ ಮಳೆ: ಇಬ್ಬರ ಸಾವು

Udupi ಜೂ. 4: ಮತ ಎಣಿಕೆ, ನಿಷೇಧಾಜ್ಞೆ ಜಾರಿ; ಜಿಲ್ಲಾಧಿಕಾರಿ ಆದೇಶ

Udupi ಜೂ. 4: ಮತ ಎಣಿಕೆ, ನಿಷೇಧಾಜ್ಞೆ ಜಾರಿ; ಜಿಲ್ಲಾಧಿಕಾರಿ ಆದೇಶ

Dharwad: ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಲೇಡಿ ಪಿಎಸ್ಐ

Dharwad: ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಲೇಡಿ ಪಿಎಸ್ಐ

Karkala ಬಸ್‌ ಪ್ರಯಾಣಿಕರಿಂದ ಟಿಪ್ಪರ್‌ ಚಾಲಕನಿಗೆ ಹಲ್ಲೆ: ದೂರು

Karkala ಬಸ್‌ ಪ್ರಯಾಣಿಕರಿಂದ ಟಿಪ್ಪರ್‌ ಚಾಲಕನಿಗೆ ಹಲ್ಲೆ: ದೂರು

Mallikarjun Kharge: ಅಧಿಕಾರಕ್ಕೆ ಬಂದರೆ ರಾಮ ಮಂದಿರ ಧ್ವಂಸ ಹೇಳಿಕೆ ಸುಳ್ಳು: ಖರ್ಗೆ ಆಕ್ರೋಶ

Mallikarjun Kharge: ಅಧಿಕಾರಕ್ಕೆ ಬಂದರೆ ರಾಮಮಂದಿರ ಧ್ವಂಸ ಹೇಳಿಕೆ ಸುಳ್ಳು: ಖರ್ಗೆ ಆಕ್ರೋಶ

Kota ಮಧುವನ; ರೈಲ್ವೇ ಹಳಿ ಪಕ್ಕದಲ್ಲಿ ಬೆಂಕಿ ಅಗ್ನಿಶಾಮಕದಳ ಕಾರ್ಯಚರಣೆ

Kota ಮಧುವನ; ರೈಲ್ವೇ ಹಳಿ ಪಕ್ಕದಲ್ಲಿ ಬೆಂಕಿ ಅಗ್ನಿಶಾಮಕದಳ ಕಾರ್ಯಚರಣೆ

ನನ್ನ ಖಾಸಗಿ ಫೋಟೋ ಬಿಡುಗಡೆಮಾಡಲು ಆಪ್‌ನಲ್ಲಿ ಸಂಚು ನಡೆಯುತ್ತಿದೆ: ಸ್ವಾತಿ ಮಲಿವಾಲ್‌

ನನ್ನ ಖಾಸಗಿ ಫೋಟೋ ಬಿಡುಗಡೆ ಮಾಡಲು ಆಪ್‌ನಲ್ಲಿ ಸಂಚು ನಡೆಯುತ್ತಿದೆ: ಸ್ವಾತಿ ಮಲಿವಾಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

8

Bengaluru Road: ಮಳೆ ನಿಂತ ನಂತರ ರಸ್ತೆ ಗುಂಡಿ ದುರಸ್ತಿ  ಶುರು 

7

ಹೊಯ್ಸಳ ಪೊಲೀಸರನ್ನು ಕಳ್ಳ ಕಳ್ಳ ಎಂದು ಬೆನ್ನಟ್ಟಿದ ಸಾರ್ವಜನಿಕರು!

6

Bengaluru: 13 ವರ್ಷದ ಅಪ್ರಾಪ್ತ ಸಹೋದರನಿಂದಲೇ 3 ತಿಂಗಳ ಗರ್ಭಿಣಿಯಾದ ತಂಗಿ!

Arrested: ಕಾರಿನಲ್ಲಿ ಆಂಧ್ರದಿಂದ ಬೆಂಗಳೂರಿಗೆ ಬಂದು ಮೊಬೈಲ್‌ ಕದಿಯುತ್ತಿದ್ದ ಖದೀಮರ ಬಂಧನ

Arrested: ಕಾರಿನಲ್ಲಿ ಆಂಧ್ರದಿಂದ ಬೆಂಗಳೂರಿಗೆ ಬಂದು ಮೊಬೈಲ್‌ ಕದಿಯುತ್ತಿದ್ದ ಖದೀಮರ ಬಂಧನ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rain ಕಾಸರಗೋಡಿನಾದ್ಯಂತ ಬಿರುಸಿನ ಮಳೆ: ಇಬ್ಬರ ಸಾವು

Rain ಕಾಸರಗೋಡಿನಾದ್ಯಂತ ಬಿರುಸಿನ ಮಳೆ: ಇಬ್ಬರ ಸಾವು

Udupi ಜೂ. 4: ಮತ ಎಣಿಕೆ, ನಿಷೇಧಾಜ್ಞೆ ಜಾರಿ; ಜಿಲ್ಲಾಧಿಕಾರಿ ಆದೇಶ

Udupi ಜೂ. 4: ಮತ ಎಣಿಕೆ, ನಿಷೇಧಾಜ್ಞೆ ಜಾರಿ; ಜಿಲ್ಲಾಧಿಕಾರಿ ಆದೇಶ

Dharwad: ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಲೇಡಿ ಪಿಎಸ್ಐ

Dharwad: ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಲೇಡಿ ಪಿಎಸ್ಐ

Karkala ಬಸ್‌ ಪ್ರಯಾಣಿಕರಿಂದ ಟಿಪ್ಪರ್‌ ಚಾಲಕನಿಗೆ ಹಲ್ಲೆ: ದೂರು

Karkala ಬಸ್‌ ಪ್ರಯಾಣಿಕರಿಂದ ಟಿಪ್ಪರ್‌ ಚಾಲಕನಿಗೆ ಹಲ್ಲೆ: ದೂರು

Mallikarjun Kharge: ಅಧಿಕಾರಕ್ಕೆ ಬಂದರೆ ರಾಮ ಮಂದಿರ ಧ್ವಂಸ ಹೇಳಿಕೆ ಸುಳ್ಳು: ಖರ್ಗೆ ಆಕ್ರೋಶ

Mallikarjun Kharge: ಅಧಿಕಾರಕ್ಕೆ ಬಂದರೆ ರಾಮಮಂದಿರ ಧ್ವಂಸ ಹೇಳಿಕೆ ಸುಳ್ಳು: ಖರ್ಗೆ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.