IPL 2023: ಡೆಲ್ಲಿ ಕ್ಯಾಪಿಟಲ್ಸ್‌ ಗೆ ಸತತ ಎರಡನೇ ಜಯ


Team Udayavani, Apr 25, 2023, 6:43 AM IST

deIPL 2023: ಡೆಲ್ಲಿ ಕ್ಯಾಪಿಟಲ್ಸ್‌ ಗೆ ಸತತ ಎರಡನೇ ಜಯ

ಹೈದರಾಬಾದ್‌: ಆರನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದ ಬಳಿಕ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಆಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್‌ 9 ವಿಕೆಟಿಗೆ 144 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿದೆ. ವಾಷಿಂಗ್ಟನ್‌ ಸುಂದರ್‌ ಒಂದೇ ಓವರ್‌ನಲ್ಲಿ 3 ವಿಕೆಟ್‌ ಉಡಾಯಿಸಿ ಡೆಲ್ಲಿಯನ್ನು ಸಂಕಷ್ಟಕ್ಕೆ ತಳ್ಳಿದರು.

ಎಂದಿನಂತೆ ಈ ಪಂದ್ಯದಲ್ಲೂ ಡೆಲ್ಲಿಯದು ಆಘಾತ ಕಾರಿ ಆರಂಭವಾಗಿತ್ತು. ಫಾರ್ಮ್ನಲ್ಲಿ ಲ್ಲದ ಪೃಥ್ವಿ ಶಾ ಅವರನ್ನು ಕೈಬಿಟ್ಟು ಫಿಲಿಪ್‌ ಸಾಲ್ಟ್ ಅವರನ್ನು ಆರಂಭಿಕನನ್ನಾಗಿ ಇಳಿಸಿದರೂ ಪ್ರಯೋಜ ನವಾಗಲಿಲ್ಲ. ಅವರು ಗೋಲ್ಡನ್‌ ಡಕ್‌ ಆಗಿ ಮರಳಿ ದರು. ಭುವನೇಶ್ವರ್‌ ಪಂದ್ಯದ 3ನೇ ಎಸೆತದಲ್ಲೇ ಸಾಲ್ಟ್ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು.

ಫಾರ್ಮ್ ಕಳೆದುಕೊಂಡಿರ ಮತ್ತೋರ್ವ ಬ್ಯಾಟರ್‌ ಮಿಚೆಲ್‌ ಮಾರ್ಷ್‌ ಇಲ್ಲಿ ಒಂದಿಷ್ಟು ಹೊತ್ತು ನಿಂತು 15 ಎಸೆತಗಳಿಂದ 25 ರನ್‌ ಹೊಡೆದರು (5 ಬೌಂಡರಿ). ಇವರು ನಟರಾಜನ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆದರು.
ನಾಯಕ ಡೇವಿಡ್‌ ವಾರ್ನರ್‌ ಎಂದಿನಂತೆ ಕ್ರೀಸ್‌ ಆಕ್ರಮಿಸಿಕೊಳ್ಳುವ ಕಾಯಕದಲ್ಲಿ ತೊಡಗುವಂತೆ ಕಂಡರು. ಆದರೆ ವಾಷಿಂಗ್ಟನ್‌ ಸುಂದರ್‌ ಎಸೆದ ಪಂದ್ಯದ 8ನೇ ಓವರ್‌ನಲ್ಲಿ ಇವರ ಆಟವೂ ಕೊನೆಗೊಂಡಿತು. ಡೆಲ್ಲಿ ಕಪ್ತಾನನ ಗಳಿಕೆ 20 ಎಸೆತಗಳಿಂದ 21 ರನ್‌ (2 ಬೌಂಡರಿ, 1 ಸಿಕ್ಸರ್‌). ವಾರ್ನರ್‌ ಈ ಐಪಿಎಲ್‌ನಲ್ಲಿ ಹೊಡೆದ ಮೊದಲ ಸಿಕ್ಸರ್‌ ಇದಾಗಿತ್ತು. ಈ ಮೂಲಕ ವಾಷಿಂಗ್ಟನ್‌ ಪ್ರಸಕ್ತ ಐಪಿಎಲ್‌ನಲ್ಲಿ ವಿಕೆಟ್‌ ಖಾತೆಯನ್ನೂ ತೆರೆದರು.
ಇದೇ ಓವರ್‌ನಲ್ಲಿ ವಾಷಿಂಗ್ಟನ್‌ ಸುಂದರ್‌ ಮತ್ತೆರಡು ವಿಕೆಟ್‌ ಕೆಡವಿ ಡೆಲ್ಲಿ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದರು. ಸಫ‌ìರಾಜ್‌ ಖಾನ್‌ (10) ಮತ್ತು ಅಮಾನ್‌ ಹಕೀಂ ಖಾನ್‌ (4) ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. 2ಕ್ಕೆ 57 ರನ್‌ ಮಾಡಿದ್ದ ಡೆಲ್ಲಿ 5ಕ್ಕೆ 62 ಎಂಬ ಸ್ಥಿತಿ ತಲುಪಿತು.

ಈ ಹಂತದಲ್ಲಿ ಮನೀಷ್‌ ಪಾಂಡೆ-ಅಕ್ಷರ್‌ ಪಟೇಲ್‌ ತಂಡದ ನೆರವಿಗೆ ನಿಂತರು. 6ನೇ ವಿಕೆಟಿಗೆ 69 ರನ್‌
ಪೇರಿಸಿ ಪರಿಸ್ಥಿತಿಯನ್ನು ಸುಧಾರಿಸಿದರು. ಇಬ್ಬರೂ ತಲಾ 34 ರನ್‌ ಹೊಡೆದರು. ಈ ಜೋಡಿ ಬೇರ್ಪಟ್ಟೊಡನೆ ಡೆಲ್ಲಿ ಮತ್ತೆ ಕುಸಿತ ಕಂಡಿತು.

ಸ್ಕೋರ್‌ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್‌
ಡೇವಿಡ್‌ ವಾರ್ನರ್‌ ಸಿ ಬ್ರೂಕ್‌ ಬಿ ವಾಷಿಂಗ್ಟನ್‌ 21
ಫಿಲಿಪ್‌ ಸಾಲ್ಟ್ ಸಿ ಕ್ಲಾಸೆನ್‌ ಬಿ ಭುವನೇಶ್ವರ್‌ 0
ಮಿಚೆಲ್‌ ಮಾರ್ಷ್‌ ಎಲ್‌ಬಿಡಬ್ಲ್ಯು ನಟರಾಜನ್‌ 25
ಸಫ‌ìರಾಜ್‌ ಖಾನ್‌ ಸಿ ಭುವನೇಶ್ವರ್‌ ಬಿ ವಾಷಿಂಗ್ಟನ್‌ 10
ಮನೀಷ್‌ ಪಾಂಡೆ ರನೌಟ್‌ 34
ಅಮಾನ್‌ ಹಕೀಂ ಸಿ ಅಭಿಷೇಕ್‌ ಬಿ ವಾಷಿಂಗ್ಟನ್‌ 4
ಅಕ್ಷರ್‌ ಪಟೇಲ್‌ ಬಿ ಭುವನೇಶ್ವರ್‌ 34
ರಿಪಲ್‌ ಪಟೇಲ್‌ ರನೌಟ್‌ 5
ಆ್ಯನ್ರಿಚ್‌ ನೋರ್ಜೆ ರನೌಟ್‌ 2
ಕುಲದೀಪ್‌ ಯಾದವ್‌ ಔಟಾಗದೆ 4
ಇಶಾಂತ್‌ ಶರ್ಮ ಔಟಾಗದೆ 1
ಇತರ 4
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 144
ವಿಕೆಟ್‌ ಪತನ: 1-1, 2-39, 3-57, 4-58, 5-62, 6-131, 7-134, 8-139, 9-139.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 4-0-11-2
ಮಾರ್ಕೊ ಜಾನ್ಸೆನ್‌ 2-0-27-0
ವಾಷಿಂಗ್ಟನ್‌ ಸುಂದರ್‌ 4-0-28-3
ಟಿ. ನಟರಾಜನ್‌ 3-0-21-1
ಮಾಯಾಂಕ್‌ ಮಾರ್ಕಂಡೆ 4-0-34-0
ಉಮ್ರಾನ್‌ ಮಲಿಕ್‌ 2-0-14-0
ಐಡನ್‌ ಮಾರ್ಕ್‌ರಮ್‌ 1-0-7-0
ಸನ್‌ರೈಸರ್ ಹೈದರಾಬಾದ್‌
ಹ್ಯಾರಿ ಬ್ರೂಕ್‌ ಬಿ ನೋರ್ಜೆ 7
ಎಂ. ಅಗರ್ವಾಲ್‌ ಸಿ ಅಮಾನ್‌ ಬಿ ಅಕ್ಷರ್‌ 49
ರಾಹುಲ್‌ ತ್ರಿಪಾಠಿ ಸಿ ಸಾಲ್ಟ್ ಬಿ ಇಶಾಂತ್‌ 15
ಅಭಿಷೇಕ್‌ ಶರ್ಮ ಸಿ ಮತ್ತು ಬಿ ಕುಲದೀಪ್‌ 5
ಐಡನ್‌ ಮಾರ್ಕ್‌ರಮ್‌ ಬಿ ಪಟೇಲ್‌ 3
ಹೆನ್ರಿಚ್‌ ಕ್ಲಾಸೆನ್‌ ಸಿ ಖಾನ್‌ ಬಿ ನಟರಾಜನ್‌ 31
ವಾಷಿಂಗ್ಟನ್‌ ಔಟಾಗದೆ 24
ಮಾರ್ಕ್‌ವೊ ಔಟಾಗದೆ 02
ಇತರ 01
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟ್‌ಗೆ) 137
ವಿಕೆಟ್‌ ಪತನ: 1-31, 2-69, 3-75, 4-79, 5-85, 6-126
ಬೌಲಿಂಗ್‌:
ಇಶಾಂತ್‌ ಶರ್ಮ 3-0-18-0
ಆ್ಯನ್ರಿಚ್‌ ನೋರ್ಜೆ 4-0-33-2
ಮುಕೇಶ್‌ ಕುಮಾರ್‌ 3-0-27-0
ಅಕ್ಷರ್‌ ಪಟೇಲ್‌ 4-0-21-2
ಕುಲದೀಪ್‌ ಯಾದವ್‌ 4-0-22-1
ಮಿಚೆಲ್‌ ಮಾರ್ಷ್‌ 2-0-16-0

ಟಾಪ್ ನ್ಯೂಸ್

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

Rohan Bopanna

Paris Olympics; ಬಾಲಾಜಿ, ಭಾಂಬ್ರಿ: ಜತೆಗಾರನ ಹೆಸರು ಸೂಚಿಸಿದ ಬೋಪಣ್ಣ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.