ಕಾಂಗ್ರೆಸ್‌ ಮೇಲೆ ಬಿಜೆಪಿ ಸೇಡಿನ ರಾಜಕಾರಣ


Team Udayavani, Apr 26, 2023, 2:52 PM IST

ಕಾಂಗ್ರೆಸ್‌ ಮೇಲೆ ಬಿಜೆಪಿ ಸೇಡಿನ ರಾಜಕಾರಣ

ಮಾಗಡಿ: ಪ್ರಧಾನಿ ಮೋದಿ ಕಾಂಗ್ರೆಸ್‌ನ ವರಿಷ್ಠ ರಾಹುಲ್‌ ಗಾಂಧಿ ಅವರ ಮನೆ ಖಾಲಿ ಮಾಡಿಸುವ ಯತ್ನ ನಡೆಸಿದರು. ಇಡಿ, ಐಟಿ, ಸಿಬಿಐ ತನಿಖೆ ಎಂದು ಡಿಕೆಶಿ ಅವರನ್ನು ಕಟ್ಟಿ ಹಾಕುವ ಹುನ್ನಾರ ನಡೆಸುತ್ತಿರುವುದು ಅಕ್ಷರಶಃ ಇದು ಸೇಡಿನ ರಾಜಕಾರಣ ಎಂದು ಮಾಜಿ ಸಚಿವ ಎಚ್‌.ಎಂ. ರೇವಣ್ಣ ಹೇಳಿದರು.

ಪಟ್ಟಣದ ಎಚ್‌ಎಂಆರ್‌ ತೋಟದ ಮನೆಯಲ್ಲಿ ನಡೆದ ಅಹಿಂದ ಸಮುದಾಯದವರ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಬಸವಲಿಂಗಪ್ಪನವರಿಂದ ಹಿಡಿದು ಬಂಗಾರಪ್ಪ, ಡಿ.ದೇವರಾಜ ಅರಸು, ಮೊಯ್ಲಿ, ಸಿದ್ದರಾಮಯ್ಯ ಅವರವರೆಗೆ ಯಾರು ಸೇಡಿನ ರಾಜಕಾರಣ ಮಾಡಲಿಲ್ಲ. ತಮ್ಮದೇ ಆದ ಚಿಂತನೆಯಿಂದ ರಾಜ್ಯವನ್ನು ಮುನ್ನೆಡಿಸಿದ ಕೀರ್ತಿ, ದೇಶಕ್ಕೆ ಕೊಟ್ಟ ಕೊಡುಗೆ ಅನನ್ಯವಾದುದು ಎಂದರು.

ಬಿಜೆಪಿಯ ಬಿ ಟೀಂ ಜೆಡಿಎಸ್‌: ಕಳೆದ 20 ವರ್ಷ ನನ್ನ ವಿರುದ್ಧ ರಾಜಕೀಯ ಹೋರಾಟ ಮಾಡಿಕೊಂಡು ಬಂದಿದ್ದ ಬಾಲಕೃಷ್ಣ ಅವರು ಈಗ ಮೂಲ ಕಾಂಗ್ರೆಸ್‌ ಮುಖಂಡರನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಪಕ್ಷದ ಗೆಲುವು, ಇಲ್ಲಿನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ನಮ್ಮೆಲ್ಲರ ಗುರುತರ ಜವಾಬ್ದಾರಿಯಾಗಿದೆ. ಹಳೇ, ಹೊಸ ಕಾಂಗ್ರೆಸ್ಸಿಗರೆಲ್ಲರೂ ಒಟ್ಟಾಗಿ ಸೇರಿ ಆಸಕ್ತಿಯಿಂದ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಪಣ ತೊಟ್ಟಿದ್ದಾಗಿ ತಿಳಿಸಿದ್ದಾರೆ. ಬಿಜೆಪಿಯ ಬಿ ಟೀಂ ಜೆಡಿಎಸ್‌ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ನಾಯಕರು ಶಕ್ತಿಯಾಗಿದ್ದಾರೆ: ರಾಜ್ಯ ದಲ್ಲಿ ಬಿಜೆಪಿಯಷ್ಟೇ ಕಾಂಗ್ರೆಸ್‌ ನಾಯಕರು ಶಕ್ತಿ ಯಾಗಿ ದ್ದಾರೆ. ಬಿಜೆಪಿ ಅವರು ಭಾವನಾತ್ಮಕವಾದ ತೋ ರಿಕೆ ಹೇಳಿಕೆ ಕೊಡುವ ಮೂಲಕ ಜನರ ಮನಸ್ಸನ್ನು ಗೆಲ್ಲುವ ಯತ್ನ ಮಾಡುತ್ತಿದ್ದಾರೆ. ನಮ್ಮವರು ಸಹ ಜನಪರವಾದ ಕಾರ್ಯಕ್ರಮ ಕೊಡುವ ಯೋಜನೆ ರೂಪಿಸಿದ್ದು, ಗೆಲ್ಲುವ ತಂತ್ರಗಾರಿಕೆ ನಮ್ಮ ವರಲ್ಲೂ ಇದೆ. ಅತ್ಯುತ್ತಮ ಸಂಘಟನೆಕಾರರಾದ ಸಿದ್ದ ರಾ ಮಯ್ಯ, ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಚುನಾ ವಣೆ ನಡೆಯಲಿದ್ದು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರು.

ಬಿಜೆಪಿ ಜನರ ಭಾವನೆಗೆ ಸ್ಪಂದಿಸುತ್ತಿಲ್ಲ: ಜಿಪಂ ಮಾಜಿ ಅಧ್ಯಕ್ಷ ಎಚ್‌.ಎನ್‌.ಅಶೋಕ್‌ ಮಾತನಾಡಿ, ಡಬಲ್‌ ಎಂಜಿನ್‌ ಸರ್ಕಾರ ಶೇ.40ರಷ್ಟು ಕಮಿಷನ್‌, ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದರೂ, ಜನರ ಭಾವನೆಗೆ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ 140 ಸ್ಥಾನ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಸರ್ಕಾ ರದಲ್ಲಿ ಎಚ್‌.ಎಂ.ರೇವಣ್ಣ ಎಂಎಲ್ಸಿ ಆಗುತ್ತಾರೆ. ನಂತರ ಮಂತ್ರಿಯೂ ಆಗಲಿದ್ದಾರೆ ಎಂದರು.

ತಾಪಂ ಮಾಜಿ ಸದಸ್ಯ ಸಿ.ಜಯರಾಂ, ವಕೀಲ ಶಿವಣ್ಣ, ತ್ಯಾಗದೆರೆಪಾಳ್ಯದ ರಂಗಸ್ವಾಮಯ್ಯ, ಕಾಂ ಗ್ರೆಸ್‌ ಮುಖಂಡ ಕಲ್ಕೆರೆ ಶಿವಣ್ಣ, ರೇಷ್ಮೆ ಹುರಿ ಕಾರ್ಖಾ ನೆ ಮಾಲೀಕರ ಸಂಘದ ಅಧ್ಯಕ್ಷ ಹೊಸಪೇಟೆ ಚಂದ್ರ ಯ್ಯ, ಪುರಸಭಾ ಸದಸ್ಯ ಎಚ್‌.ಜೆ. ಪುರುಷೋತ್ತಮ್‌, ಶಿವಕುಮಾರ್‌, ಎಂ.ಸಿ. ರಾಜಣ್ಣ, ಜಿ.ಕೃಷ್ಣ ರೆಹಮಾನ್‌, ಚಕ್ರ ಬಾವಿ ಭೈರಪ್ಪ, ಬೆಳಗವಾಡಿ ರಂಗನಾಥ್‌, ಮಾನ ಗಲ್‌ ಶ್ರೀನಿವಾಸ್‌, ಎಲ್‌ಐಸಿ ಎಚ್‌. ಶಿವ ಕುಮಾರ್‌, ತೇಜ ಮೂರ್ತಿ, ಚಿಕ್ಕಣ್ಣ, ಬಸವರಾಜು, ಎಂ.ಜಿ. ಗೋಪಾಲ್‌, ತೇಜು, ದೊಡ್ಡಿ ವಿಶ್ವನಾಥ್‌, ಶಿವಣ್ಣ, ಎ.ಬಿ. ಮಹದೇವ್‌, ಕುಮಾರ್‌, ಶಶಾಂಕ್‌ ಹಾಗೂ ಇತರರು ಇದ್ದರು.

ಟಾಪ್ ನ್ಯೂಸ್

3 days fast as penance for Jagannath being a Modi devotee: Patra

Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Uppinangady: ಹೆದ್ದಾರಿ ತಡೆಗೋಡೆ ಕುಸಿತ

Uppinangady: ಹೆದ್ದಾರಿ ತಡೆಗೋಡೆ ಕುಸಿತ

MAHE

MAHE ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿ.ವಿ. ಶ್ರೇಯಾಂಕ: ಮಾಹೆಗೆ 175ನೇ ಸ್ಥಾನ

ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

IPL 2024; ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

puPU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

PU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ

1-wqewqewe

Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ

crime

Ramanagara: ತಂದೆಯಿಂದಲೇ ಮಗನ ಕೊಲೆ.!

Bengaluru-Mysuru Expressway; 15 ದಿನಗಳ‌ಲ್ಲಿ 12 ಸಾವಿರ ವಾಹನಗಳಿಗೆ ದಂಡ!

Bengaluru-Mysuru Expressway; 15 ದಿನಗಳ‌ಲ್ಲಿ 12 ಸಾವಿರ ವಾಹನಗಳಿಗೆ ದಂಡ!

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Modi insults Tamils ​​for votes: CM Stalin sparks

Election; ವೋಟಿಗಾಗಿ ತಮಿಳರಿಗೆ ಮೋದಿ ಅವಹೇಳನ: ಸಿಎಂ ಸ್ಟಾಲಿನ್‌ ಕಿಡಿ

3 days fast as penance for Jagannath being a Modi devotee: Patra

Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

This time 2004 result will repeat: Jairam Ramesh

Loksabha: ಈ ಬಾರಿ 2004ರ ರಿಸಲ್ಟ್ ಮರುಕಳಿಸಲಿದೆ: ಜೈರಾಂ ರಮೇಶ್‌

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.