India-China ಮಾತಿಗೆ ಕರೆದಿದ್ದು ಚೀನ ದೇಶ; ಮೋದಿ-ಕ್ಸಿ ಮಾತುಕತೆ ಕುರಿತು ಸ್ಪಷ್ಟನೆ

ಚೀನಾ ವಾದಕ್ಕೆ ಭಾರತದ ತಿರುಗೇಟು

Team Udayavani, Aug 25, 2023, 9:22 PM IST

India-China ಮಾತಿಗೆ ಕರೆದಿದ್ದು ಚೀನ ದೇಶ; ಮೋದಿ-ಕ್ಸಿ ಮಾತುಕತೆ ಕುರಿತು ಸ್ಪಷ್ಟನೆ

ಜೊಹಾನ್ಸ್‌ಬರ್ಗ್‌:ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್‌ ಶೃಂಗ ಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವೆ ನಡೆದ ಮಾತುಕತೆಯಲ್ಲೂ ಚೀನಾ ತನ್ನ ವಕ್ರಬುದ್ಧಿ ತೋರಿಸಿದೆ.

ಭಾರತದ ಕೋರಿಕೆಯ ಮೇರೆಗೆ ಈ ಮಾತುಕತೆ ನಡೆದಿತ್ತು ಎಂದು ಚೀನಾ ಹೇಳಿಕೊಂಡಿದೆ. ಇದಕ್ಕೆ ಗುರುವಾರ ಖಡಕ್‌ ಪ್ರತಿಕ್ರಿಯೆ ನೀಡಿರುವ ಭಾರತ, “ದ್ವಿಪಕ್ಷೀಯ ಮಾತುಕತೆಗೆ ಕೋರಿಕೆ ಸಲ್ಲಿಸಿದ್ದೇ ಚೀನಾ. ನಾವು ಆ ಕೋರಿಕೆಗೆ ಇನ್ನೂ ಒಪ್ಪಿಗೆಯನ್ನೇ ನೀಡಿಲ್ಲ’ ಎಂದು ಹೇಳಿದೆ.

ಉಭಯ ನಾಯಕರು ಬುಧವಾರ ಶೃಂಗದ ನೇಪಥ್ಯದಲ್ಲಿ ಅನೌಪಚಾರಿಕವಾಗಿ ಭೇಟಿಯಾಗಿ ಕೆಲ ಹೊತ್ತು ಮಾತುಕತೆ ನಡೆಸಿದ್ದರು. ಈ ಮಾತುಕತೆಯ ಕುರಿತು ವಿವರ ನೀಡಿದ್ದ ಚೀನಾ ವಿದೇಶಾಂಗ ಸಚಿವಾಲಯ, “ಬ್ರಿಕ್ಸ್‌ ಸಭೆಯ ಸಂದರ್ಭದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಪ್ರಧಾನಿ ಮೋದಿಯವರ ಕೋರಿಕೆಯ ಮೇರೆಗೆ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ’ ಎಂದು ಹೇಳಿತ್ತು. ಈ ವಾದವನ್ನು ಭಾರತ ತಳ್ಳಿಹಾಕಿದ್ದು, ಕೋರಿಕೆ ಸಲ್ಲಿಸಿದ್ದ ಚೀನಾವೇ ಹೊರತು ಭಾರತವಲ್ಲ ಎಂದು ಸ್ಪಷ್ಟಪಡಿಸಿದೆ.

ವಿವಾದ ತ್ವರಿತ ಪರಿಹಾರಕ್ಕೆ ಒಪ್ಪಿಗೆ:
ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಸೇರಿದಂತೆ ಭಾರತ-ಚೀನಾ ಗಡಿಯುದ್ದಕ್ಕೂ ಪರಿಹಾರವಾಗದೇ ಉಳಿದಿರುವ ವಿವಾದಗಳನ್ನು ತ್ವರಿತವಾಗಿ ಪರಿಹರಿಸುವ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದರು. ಪೂರ್ವ ಲಡಾಖ್‌ನಲ್ಲಿನ ಬಿಕ್ಕಟ್ಟನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳುವಂತೆ ಎರಡೂ ದೇಶಗಳ ಅಧಿಕಾರಿಗಳಿಗೆ ಸೂಚಿಸಲು ಉಭಯ ನಾಯಕರು ಒಪ್ಪಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾಟ್ರಾ ತಿಳಿಸಿದ್ದಾರೆ.

ಇನ್ನೊಂದೆಡೆ, ಮೋದಿ ಹಾಗೂ ಜಿನ್‌ಪಿಂಗ್‌ ಅವರು ಭಾರತ-ಚೀನಾ ಸಂಬಂಧ ಹಾಗೂ ಉಭಯ ದೇಶಗಳ ಹಿತಾಸಕ್ತಿಗಳಿಗೆ ಸಂಬಂಧಿಸಿ ವಿಸ್ತೃತ ಮಾತುಕತೆ ನಡೆಸಿದ್ದಾರೆ ಎಂದು ಚೀನಾದ ಪ್ರಕಟಣೆ ತಿಳಿಸಿದೆ. ಅಲ್ಲದೇ, ಭಾರತ ಮತ್ತು ಚೀನಾ ಬಾಂಧವ್ಯ ವೃದ್ಧಿಯು ಈ ಪ್ರದೇಶದ ಹಾಗೂ ಜಗತ್ತಿನ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲಿದೆ ಎಂದು ಜಿನ್‌ಪಿಂಗ್‌ ಅಭಿಪ್ರಾಯಪಟ್ಟಿದ್ದಾರೆ ಎಂದೂ ಹೇಳಿದೆ.

ಟಾಪ್ ನ್ಯೂಸ್

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

Prajwal Revanna ವೀಡಿಯೋ ವೈರಲ್‌: ಓರ್ವನ ಸೆರೆ

Prajwal Revanna ವೀಡಿಯೋ ವೈರಲ್‌: ಓರ್ವನ ಸೆರೆ

ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ

ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ

Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು

Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು

D.K. Shivakumar ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ

D.K. Shivakumar ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

1-wqeqewwqe

India ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

Insects: ಮಹಿಳೆಯ ಮೂಗಿನಲ್ಲಿ ನೂರಾರು ಹುಳಗಳು ಪತ್ತೆ!

Insects: ಮಹಿಳೆಯ ಮೂಗಿನಲ್ಲಿ ನೂರಾರು ಹುಳಗಳು ಪತ್ತೆ!

1-wqewee

Saudi Arabia; ಭೂಮಿ ನೀಡಲು ಒಪ್ಪದಿದ್ದರೆ ಹತ್ಯೆ: ಬಿಬಿಸಿ ವರದಿ

Student Missing: ಅಮೆರಿಕದಲ್ಲಿ ಮತ್ತೋರ್ವ ವಿದ್ಯಾರ್ಥಿ ನಾಪತ್ತೆ… ಕಂಗಾಲಾದ ಕುಟುಂಬ

Student Missing: ಅಮೆರಿಕದಲ್ಲಿ ಮತ್ತೋರ್ವ ವಿದ್ಯಾರ್ಥಿ ನಾಪತ್ತೆ… ಕಂಗಾಲಾದ ಕುಟುಂಬ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-wqeqewqewq

Tennis; ಇದೇ ಕೊನೆಯ ಸೀಸನ್‌:ಡೊಮಿನಿಕ್‌ ಥೀಮ್‌

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

Prajwal Revanna ವೀಡಿಯೋ ವೈರಲ್‌: ಓರ್ವನ ಸೆರೆ

Prajwal Revanna ವೀಡಿಯೋ ವೈರಲ್‌: ಓರ್ವನ ಸೆರೆ

ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ

ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ

Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು

Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.