Asia Cup: ಇಂದು ಶ್ರೀಲಂಕಾ ಎದುರಾಳಿ ಬಾಂಗ್ಲಾಕ್ಕೆ ಮತ್ತೆ ಮಾಡು-ಮಡಿ ಸ್ಥಿತಿ


Team Udayavani, Sep 9, 2023, 6:33 AM IST

1-SADAD

ಕೊಲಂಬೊ: ಎರಡು ದಿನಗಳ ಬ್ರೇಕ್‌ ಬಳಿಕ “ಏಷ್ಯಾ ಕಪ್‌’ ಕ್ರಿಕೆಟ್‌ ಪಂದ್ಯಾವಳಿ ಶನಿವಾರ ಮುಂದುವರಿ ಯಲಿವೆ. ಕೊಲಂಬೊದಲ್ಲಿ ಆತಿಥೇಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಪರಸ್ಪರ ಎದುರಾಗಲಿವೆ.

ಲೀಗ್‌ ಹಂತದಲ್ಲಿ ಮಾಡು-ಮಡಿ ಸ್ಥಿತಿಯಲ್ಲಿದ್ದ ಬಾಂಗ್ಲಾದೇಶವೀಗ ಸೂಪರ್‌ -4 ಹಂತದಲ್ಲೂ ಇದೇ ಸಂಕಟ ಎದುರಿಸುತ್ತಿದೆ. ಲಾಹೋರ್‌ನಲ್ಲಿ ಪಾಕಿಸ್ಥಾನ ಎದುರಿನ ಮೊದಲ ಪಂದ್ಯದಲ್ಲಿ 7 ವಿಕೆಟ್‌ ಸೋಲನುಭವಿಸಿದ ಕಾರಣ ಶ್ರೀಲಂಕಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡ ಶಕಿಬ್‌ ಪಡೆಯ ಮೇಲಿದೆ. ಇನ್ನೊಂದು ಸೋಲನುಭವಿಸಿದರೆ ಬಾಂಗ್ಲಾ ಬಹುತೇಕ ಹೊರಬೀಳಲಿದೆ.

ಲೀಗ್‌ ಹಂತದಲ್ಲಿ ಇಂಥದೇ ಸಂಕಟದಲ್ಲಿದ್ದಾಗ ಅಫ್ಘಾನಿಸ್ಥಾನ ವಿರುದ್ಧ 5ಕ್ಕೆ 334 ರನ್‌ ಪೇರಿಸಿದ ಬಾಂಗ್ಲಾ 89 ರನ್ನುಗಳಿಂದ ಗೆದ್ದು ಸೂಪರ್‌-4 ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲಿ ನಜ್ಮುಲ್‌ ಹುಸೇನ್‌, ಮೆಹಿದಿ ಹಸನ್‌ ಮಿರಾಜ್‌ ಸೆಂಚುರಿ ಬಾರಿಸಿ ಮಿಂಚಿದ್ದರು. ಇದೀಗ ಶ್ರೀಲಂಕಾ ವಿರುದ್ಧವೂ ಇಂಥದೊಂದು ಅಸಾಮಾನ್ಯ ಕ್ರಿಕೆಟ್‌ ಪ್ರದರ್ಶನ ನೀಡಬೇಕಾದ ಸ್ಥಿತಿ ಎದುರಾಗಿದೆ.

ಆದರೆ ಶ್ರೀಲಂಕಾ ಮತ್ತು ಪಾಕಿಸ್ಥಾನ ವಿರುದ್ಧ ಬಾಂಗ್ಲಾ ಬ್ಯಾಟಿಂಗ್‌ ಕ್ಲಿಕ್‌ ಆಗಿರಲಿಲ್ಲ. ಗಳಿಸಿದ್ದು 164 ಮತ್ತು 193 ರನ್‌ ಮಾತ್ರ. ಅರ್ಥಾತ್‌, ಟಾಪ್‌ ಕ್ಲಾಸ್‌ ಎದುರಾಳಿಗಳ ವಿರುದ್ಧ ಬಾಂಗ್ಲಾ ಟೈಗರ್ ಮಿಂಚಲು ವಿಫ‌ಲವಾಗುತ್ತಿದೆ.

ಅಪಾಯಕಾರಿ ಸ್ಪಿನ್ನರ್
ಶ್ರೀಲಂಕಾ ಅಪಾಯಕಾರಿ ಸ್ಪಿನ್ನರ್‌ಗಳನ್ನು ಹೊಂದಿರುವ ತಂಡ. ಪತಿರಣ ಮತ್ತು ತೀಕ್ಷಣ 6 ವಿಕೆಟ್‌ ಹಂಚಿಕೊಂಡು ಲೀಗ್‌ ಮುಖಾಮುಖಿಯಲ್ಲಿ ಬಾಂಗ್ಲಾವನ್ನು ಕೆಡವಿದ್ದರು. ಇದೀಗ ಪೇಸರ್‌ ಕಸುನ್‌ ರಜಿತ ಆಗಮನವಾಗಿದೆ. ಅಫ್ಘಾನ್‌ ವಿರುದ್ಧ ರಜಿತ 4 ವಿಕೆಟ್‌ ಹಾರಿಸಿ ಮಿಂಚಿದ್ದರು. ಆದರೂ ಲಂಕಾ ಬೌಲಿಂಗ್‌ ಅಫ್ಘಾನಿಸ್ಥಾನ ವಿರುದ್ಧ ಸಂಪೂರ್ಣ ಲಯ ಕಳೆದುಕೊಂಡಿದ್ದನ್ನು ಮರೆಯುವಂತಿಲ್ಲ. ಅಫ್ಘಾನ್‌ ಪಡೆ ಕೇವಲ 37.4 ಓವರ್‌ಗಳಲ್ಲಿ 289 ರನ್‌ ಪೇರಿಸಿತ್ತು. ಬಾಂಗ್ಲಾ ರೇಸ್‌ನಲ್ಲಿ ಉಳಿಯಬೇಕಾದರೆ ಇಂಥದೇ ಬ್ಯಾಟಿಂಗ್‌ ಮ್ಯಾಜಿಕ್‌ ಮಾಡಬೇಕಿದೆ.

ಟಾಪ್ ನ್ಯೂಸ್

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

Rohan Bopanna

Paris Olympics; ಬಾಲಾಜಿ, ಭಾಂಬ್ರಿ: ಜತೆಗಾರನ ಹೆಸರು ಸೂಚಿಸಿದ ಬೋಪಣ್ಣ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

9-davangere

Davangere: ಮರ ಬಿದ್ದು ಕಾರು ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು

8-doddanagudde

ದೊಡ್ಡಣ್ಣಗುಡ್ಡೆ: ಕ್ಷೇತ್ರದಲ್ಲಿ ಬ್ರಹ್ಮಕಲಾಶೋತ್ಸವದ ಪೂರ್ವಭಾವಿ ಕಾರ್ಯಕ್ರಮ ಸಂಪನ್ನ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

raichur

Raichur: ಗೇಟ್ ಹಾರಿ ಕಳವು ಮಾಡಿದ ಮಹಿಳೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.