Robbery: ಮನೆಗೆ ನುಗ್ಗಿ ಮಾಲೀಕನ ಕೈ-ಕಾಲು ಕಟ್ಟಿ ದರೋಡೆ

ಪೊಲೀಸ್‌ ಸೋಗಿನಲ್ಲಿ ಬಂದು ಕೃತ್ಯ, ಅರಣ್ಯಾಧಿಕಾರಿ, ಇಬ್ಬರು ರೌಡಿಶೀಟರ್‌ ಸೇರಿ 11 ಮಂದಿ ಬಂಧನ

Team Udayavani, Dec 23, 2023, 3:29 PM IST

10-bng-crime

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಉಪ ಅರಣ್ಯಾಧಿಕಾರಿ, ಇಬ್ಬರು ರೌಡಿ ಶೀಟರ್‌ ಸೇರಿದಂತೆ 11 ಆರೋಪಿಗಳನ್ನು ಬಂಧಿಸಿರುವ ಪೀಣ್ಯ ಪೊಲೀಸರು 45.52 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಚಿಕ್ಕಮಗಳೂರು ಮೂಲದ ದಾವಣಗೆರೆ ಜಿಲ್ಲೆ ಚನ್ನಗಿರಿ ಅರಣ್ಯ ವಲಯದ ಉಪ ಅರಣ್ಯಾಧಿಕಾರಿ ಸುರೇಂದ್ರ(40), ತುಮಕೂರಿನ ನಿವಾಸಿ ಸುರೇಶ್‌ (33), ಚಿತ್ರದುರ್ಗದ ಹಣ್ಣಿನ ವ್ಯಾಪಾರಿ ಶ್ರೀಧರ್‌ (27), ನೆಲಮಂಗಲದ ಫೈನಾನ್ಸಿಯರ್‌ ವಸಂತ್‌ ಕುಮಾರ್‌ (38), ಅನಿಲ್‌ ಕುಮಾರ್‌(34), ಚಾಲಕ ನಾಗರಾಜ್‌(33), ರೌಡಿಶೀಟರ್‌ಗಳಾದ ನವಾಜ್‌ ಪಾಷಾ (27), ಶೇಕ್‌ ಶಹಬಾಜ್‌ ಖಲಂದರ್‌ (27), ರಾಹಿಲ್‌ ಪಾಷಾ (26), ಉಸ್ಮಾನ್‌ ಖಾನ್‌ (24), ಟಿ. ವಸಂತ್‌ ಕುಮಾರ್‌ (38) ಬಂಧಿತರು.

ಬಂಧಿತರಿಂದ 45.52 ಲಕ್ಷ ರೂ. ಮೌಲ್ಯದ 273 ಗ್ರಾಂ ಚಿನ್ನಾಭರಣ, 370 ಗ್ರಾಂ ಬೆಳ್ಳಿ, 23 ಲಕ್ಷ ರೂ.ನಗದು, 13 ಮೊಬೈಲ್‌ಗ‌ಳು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಎಚ್‌ಎಂಟಿ ಲೇಔಟ್‌ ನಿವಾಸಿ ರೂಪೇಶ್‌ ಕಾರ್ಖಾನೆ ನಡೆಸುತ್ತಿದ್ದಾರೆ.

ಆರೋಪಿ ನಾಗರಾಜ್‌ ಇವರ ಕಾರ್ಖಾನೆಯಲ್ಲಿ ಲಾರಿ ಚಾಲಕನಾಗಿದ್ದ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆಲಸ ತೊರೆದಿದ್ದ. ಮಾಲೀಕನ ಹಣದ ವ್ಯವಹಾರಗಳ ಬಗ್ಗೆ ನಾಗರಾಜ್‌ ಗಮನಿಸಿದ್ದ. ಇದೇ ವಿಷಯವನ್ನು ಸ್ನೇಹಿತ ಅನಿಲ್‌ ಕುಮಾರ್‌ ಬಳಿ ಹೇಳಿಕೊಂಡಿದ್ದ. ನಮ್ಮ ಮಾಲೀಕನ ನೋಟು ಎಣಿಸುವ ಯಂತ್ರಗಳಿರುವುದನ್ನು ಗಮನಿಸಿದರೆ ಹೆಚ್ಚಿನ ದುಡ್ಡು ಇರಬಹುದು ಎಂದು ಹೇಳಿದ್ದ. ಆರ್ಥಿಕವಾಗಿ ಹಿಂದುಳಿದಿದ್ದ ಅನಿಲ್‌ ಇದೇ ಸಂಗತಿಯನ್ನು ವಸಂತ್‌ಗೆ ತಿಳಿಸಿದ್ದ.

ಇತ್ತ ಫೈನಾನ್ಸಿಯರ್‌ ಅಗಿ ನಷ್ಟಕ್ಕೆ ಒಳಗಾಗಿದ್ದ ವಸಂತ್‌ಗೂ ದುಡ್ಡಿನ ಅಗತ್ಯತೆ ಇತ್ತು. ತನ್ನ ಸಹಚರರಾದ ಶ್ರೀಧರ್‌ ಹಾಗೂ ಸುರೇಶ್‌ ಮೂಲಕ ಉಪ ಅರಣ್ಯಾಧಿಕಾರಿ ಸುರೇಂದ್ರನನ್ನು ಕರೆಸಿಕೊಂಡಿದ್ದ. ಆರೋಪಿ ಗಳು ಜೊತೆಯಾಗಿ ಚರ್ಚಿಸಿ ರೂಪೇಶ್‌ ಮನೆಯಲ್ಲಿ ಡಕಾಯಿತಿ ಮಾಡಲು ಸಂಚು ರೂಪಿ ಸಿದ್ದರು. ಸುರೇಶ್‌ ಕೃತ್ಯ ಎಸಗಲು ತನ್ನ ಪರಿಚಿತರಾದ ಇಬ್ಬರು ರೌಡಿಶೀಟರ್‌ಗಳು ಹಾಗೂ ಇತರ ಮೂವರ ಸಹಾಯ ಕೇಳಿ ಅವರಿಗೆ ದುಡ್ಡಿನ ಆಮಿಷ ವೊಡ್ಡಿದ್ದ. ಇದಕ್ಕೆ ಇತರ ಆರೋಪಿಗಳು ಸೈ ಎಂದಿದ್ದರು.

ಖಾಕಿ ಸಮವಸ್ತ್ರ: ಸಂಚು ರೂಪಿಸಿದಂತೆ ಡಿ.4ರಂದು ಸಂಜೆ 7.30ಕ್ಕೆ ಉಪಅರಣ್ಯಾಧಿಕಾರಿ ಸುರೇಂದ್ರ ತನ್ನ ಖಾಕಿ ಸಮವಸ್ತ್ರ ಧರಿಸಿಕೊಂಡು ಸಹಚರರ ಜತೆಗೆ ಎಚ್‌ಎಂಟಿ ಲೇಔಟ್‌ನಲ್ಲಿರುವ ರೂಪೇಶ್‌ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಆ ವೇಳೆ ಮನೆಯಲ್ಲಿ ರೂಪೇಶ್‌ ಹಾಗೂ ಆತನ ತಾಯಿ ಇಬ್ಬರೇ ಇದ್ದರು.

ಕಾಲಿಂಗ್‌ ಬೆಲ್‌ ಒತ್ತುತ್ತಿದ್ದಂತೆ ರೂಪೇಶ್‌ ಬಾಗಿಲು ತೆಗೆದು ವಿಚಾರಿಸಿದಾಗ ಸುರೇಂದ್ರ ತನ್ನನ್ನು ಪೊಲೀಸ್‌ ಅಧಿಕಾರಿ ಎಂದು ಪರಿಚಯಿಸಿಕೊಂಡು ಮನೆಯೊಳಗೆ ಎಂಟ್ರಿ ಕೊಟ್ಟಿದ್ದ. ಮನೆಯ ಪ್ಯಾಸೇಜ್‌ನಲ್ಲಿ ಅಡಗಿ ಕುಳಿತಿದ್ದ ಇತರ ಆರೋಪಿಗಳೂ ಏಕಾಏಕಿ ಮನೆಗೆ ನುಗ್ಗಿದ್ದರು.

ರೂಪೇಶ್‌ ಆತಂಕಗೊಂಡು ನೀವು ಯಾರು ಎಂದು ಪ್ರಶ್ನಿಸುವಷ್ಟರಲ್ಲಿ ಆರೋಪಿಗಳು ಲಾಂಗು, ಮಚ್ಚು ಸೇರಿದಂತೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದರು. ತಾಯಿ-ಮಗನನ್ನು ರೂಮ್‌ಗೆ ಕರೆದುಕೊಂಡು ಹೋಗಿ ಟೇಪ್‌ನಿಂದ ಕೈ-ಕಾಲು ಕಟ್ಟಿ ಕೂಡಿ ಹಾಕಿದ್ದರು. ಬಳಿಕ ಮನೆ ಬೀರುವಿನ ಲಾಕರ್‌ ಒಡೆದು ಅದರಲ್ಲಿದ್ದ ನಗದು ಹಾಗೂ 500 ಗ್ರಾಂ ಚಿನ್ನಾಭರಣ ದೋಚಿದ್ದರು.

ಆರೋಪಿಗಳ ಸುಳಿವು ಕೊಟ್ಟ ಸಿಸಿ ಕ್ಯಾಮೆರಾ

ಆರೋಪಿಗಳು ಮನೆಯಿಂದ ಹೋದ ಬಳಿಕ ಕೈಗೆ ಕಟ್ಟಿದ್ದ ಟೇಪ್‌ ಬಿಡಿಸಿಕೊಂಡು ರೂಪೇಶ್‌ ಪೀಣ್ಯ ಠಾಣೆಗೆ ತೆರಳಿ ನಡೆದ ಘಟನೆ ವಿವರಿಸಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಡಕಾಯಿತರ ಜಾಡು ಹಿಡಿಯಲು ಸಿದ್ಧತೆ ನಡೆಸಿದ್ದರು.

ಪೀಣ್ಯ ಇನ್‌ಸ್ಪೆಕ್ಟರ್‌ ನೇತೃತ್ವದ ವಿಶೇಷ ತಂಡ ರಚಿಸಿ ಕೃತ್ಯ ನಡೆದ ಮನೆಯ ಸುತ್ತ-ಮುತ್ತ ಅಳವಡಿಸಲಾಗಿದ್ದ ಒಂದೊಂದೇ ಸಿಸಿ ಕ್ಯಾಮೆರಾ ಪರಿಶೀಲಿಸುತ್ತಾ ಹೋದಾಗ ಆರೋಪಿಗಳು ಕಾರಿನಲ್ಲಿ ಸಾಗಿರುವುದು ಪತ್ತೆಯಾಗಿತ್ತು. ಕೆಲವು ಆರೋಪಿಗಳ ಮುಖ ಚಹರೆಯೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಕಾರಿನ ನಂಬರ್‌ ಆಧಾರದಲ್ಲಿ ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಕಾರಿನಲ್ಲಿ ಕುಣಿಗಲ್‌ ಟೋಲ್‌ ಗೇಟ್‌ ದಾಟಿರುವುದು ಗೊತ್ತಾಗಿತ್ತು. ಟವರ್‌ ಡಂಪ್‌ ಮೂಲಕ ಆರೋಪಿಗಳ ಮೊಬೈಲ್‌ಗ‌ಳು ಕಾರ್ಯ ನಿರ್ವಹಿಸುತ್ತಿರುವ ಪ್ರದೇಶಗಳನ್ನು ಪರಿಶೀಲಿಸಿದಾಗ ಆರೋಪಿ ಸುರೇಂದ್ರನ ನಂಬರ್‌ ಆ್ಯಕ್ಟೀವ್‌ ಆಗಿತ್ತು.

ಆತನ ಮೊಬೈಲ್‌ಗೆ ಬರುವ ಕರೆಗಳನ್ನು (ಸಿಡಿಆರ್‌) ಪರಿಶೀಲಿಸಿದಾಗ ಇತರ ಆರೋಪಿಗಳಾದ ಶ್ರೀಧರ್‌, ವಸಂತ್‌ ಆತನ ಸಂಪರ್ಕದಲ್ಲಿರುವುದು ಕಂಡು ಬಂದಿತ್ತು. ಈ ಮಾಹಿತಿ ಇಟ್ಟುಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಪ್ರಮುಖ ಆರೋಪಿಗಳು ಚಿತ್ರದುರ್ಗ, ಕೊಡೈಕೆನಾಲ್‌ನಲ್ಲಿ ತಲೆಮರೆಸಿಕೊಂಡಿರುವ ಸುಳಿವು ಸಿಕ್ಕಿತ್ತು. ಅಲ್ಲಿಗೆ ತೆರಳಿದ ಪೊಲೀಸರ ತಂಡ ಒಬ್ಬೊಬ್ಬ ಆರೋಪಿಗಳನ್ನೇ ಬಂಧಿಸಿದೆ.

ಜೂಜಿನಿಂದ ಸಾಲ: ಡಕಾಯಿತಿಗಿಳಿದ ಅರಣ್ಯಾಧಿಕಾರಿ!

ಚಿಕ್ಕಮಗಳೂರಿನ ಚೆನ್ನಗಿರಿ ಅರಣ್ಯ ವಲಯದ ಉಪ ಅರಣ್ಯಾಧಿಕಾರಿ ಸುರೇಂದ್ರ ಜೂಜಾಟದ ಚಟ ಹೊಂದಿದ್ದ. ಜೂಜಾಟದಲ್ಲಿ ದುಡ್ಡು ಕಳೆದುಕೊಂಡಿದ್ದ ಸುರೇಂದ್ರನಿಗೆ ಹಣದ ಅಗತ್ಯವಿತ್ತು. ಹೀಗಾಗಿ ಕೃತ್ಯ ಎಸಗಲು ಆರೋಪಿಗಳೊಂದಿಗೆ ಶಾಮೀಲಾಗಿದ್ದ. ಇತರ ಆರೋಪಿಗಳೂ ದುಡ್ಡಿನ ಆಸೆಗಾಗಿ ಡಕಾಯಿತಿಗೆ ಇಳಿದಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಇನ್ನು ಡಕಾಯಿತಿಯಿಂದ ಬಂದ ದುಡ್ಡನ್ನು ಪ್ರಮುಖ ಐವರು ಆರೋಪಿಗಳು ಹಂಚಿಕೊಂಡು ಇತರ ಆರೋಪಿಗಳಿಗೆ ಅದರಲ್ಲಿ ಸ್ವಲ್ಪ ದುಡ್ಡು ಕೊಡಲು ಚಿಂತಿಸಿದ್ದರು ಎನ್ನಲಾಗಿದೆ. ಕೃತ್ಯ ಎಸಗುವ ವೇಳೆ ಪೊಲೀಸರಿಗೆ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಆರೋಪಿಗಳೂ ಕೆಲವೊಂದು ಮುನ್ನೆಚ್ಚರಿಕೆ ವಹಿಸಿದ್ದರು. ಆದರೆ, ಆರೋಪಿಗಳ ಆಟ ಖಾಕಿ ಮುಂದೆ ನಡೆಯಲಿಲ್ಲ. ಪ್ರಕರಣ ನಡೆದ 9 ದಿನಗಳಲ್ಲಿ ಬೆಂಗಳೂರು ಪೊಲೀಸರು 11 ಮಂದಿ ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಪ್ ನ್ಯೂಸ್

IMD

Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ‌ ರಜೆ

Prajwal Revanna ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ

Prajwal Revanna ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ

covid

Covaxin ಸೈಡ್‌ಎಫೆಕ್ಟ್ ವರದಿಗೆ ಐಸಿಎಂಆರ್‌ ಕಿಡಿ

bCongress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿCongress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿ

Congress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿ

1-rava

Vote ನೀಡದವರಿಗೆ ತೆರಿಗೆ ಹೆಚ್ಚು ಮಾಡಿ: ನಟ ಪರೇಶ್‌ ರಾವಲ್‌ ಸಲಹೆ

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

1-asasa

LS Election; 5ನೇ ಹಂತದಲ್ಲಿ ಶೇ.58.96 ಮತದಾನ:TMC ಮತ್ತು BJP ನಡುವೆ ವಿವಿಧೆಡೆ ಗಲಾಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

7

ಇನ್‌ಸ್ಪೆಕ್ಟರ್‌ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್‌ ಸೆರೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

IMD

Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ‌ ರಜೆ

Prajwal Revanna ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ

Prajwal Revanna ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ

covid

Covaxin ಸೈಡ್‌ಎಫೆಕ್ಟ್ ವರದಿಗೆ ಐಸಿಎಂಆರ್‌ ಕಿಡಿ

train-track

Train Drivers Association; ಆನೆ ಹಳಿ ದಾಟುವಾಗ ರೈಲು ನಿಲುಗಡೆ ಅಸಾಧ್ಯ

bCongress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿCongress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿ

Congress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.