Film Review: ಸಿಹಿ ಖಾರ ಗುಂಟೂರು ಖಾರಂ

Team Udayavani, Feb 2, 2024, 3:18 PM IST

13-uv-fusion

ಗುಂಟೂರು ಮೆಣಸಿನಕಾಯಿ ತನ್ನ ಖಾರ ಮತ್ತು ರುಚಿಗೆ ಪ್ರಸಿದ್ದವಾಗಿದೆ. ಇದೆ ಹೆಸರಿನಲ್ಲಿ ಪ್ರಿನ್ಸ್ ಮಹೇಶ್‌ ಬಾಬು ನಟಿಸಿರುವ ಗುಂಟೂರು ಖಾರಂ ಚಿತ್ರ ತೆರಕಂಡಿದ್ದು, ಸದಾ ಚಿರಯುವಕನಂತೆ ಕಂಗೊಳಿಸುವ ಮಹೇಶ್‌ ಬಾಬು ಮತ್ತು ಕ್ಯೂಟ್‌ ನಟಿ ಶ್ರೀಲಿಲಾರ ಮೈಸೂರು ಪಾಕ್‌ ನಂತ ಜೋಡಿ ಗುಂಟೂರು ಖಾರಂ ನೋಡುವ ಪ್ರೇಕ್ಷಕರಿಗೆ ಸಿಹಿಯಾದ ಖಾರವನ್ನು ಸವಿಯುವಂತೆ ಮಾಡುತ್ತದೆ.

ಕೌಟುಂಬಿಕ ಸಮಸ್ಯೆಗಳಿಂದ ದೂರವಾದ ತಾಯಿ ಮಗ ಮತ್ತೆ ಒಂದಾಗುವುದೆ ಗುಂಟೂರು ಖಾರಂ ಚಿತ್ರದ ಸಾರಾಂಶ. ಚಿತ್ರದ ಕಥೆ ಒಂದು ದಶಕದಷ್ಟು  ಹಳೆಯದೆಂದೆನಿಸಿದರು ಪ್ರಸ್ತುತ ದಿನಮಾನಕ್ಕೆ ತಕ್ಕಂತೆ ಚಿತ್ರದ ನಿದೇರ್ಶಕ ತ್ರೀವಿಕಂ ಶ್ರೀನಿವಾಸ ಚಿತ್ರಿಕರಿಸಿದ್ದಾರೆ.

ಗುಂಟೂರು ಖಾರಂ ಚಿತ್ರದ ಮುಖ್ಯ ಆಕರ್ಷಣೆಯೆ ಮಹೇಶ್‌ ಬಾಬು ತಮ್ಮ ವಿಶಿಷ್ಟ ಉಡುಗೆ,ವಿಭಿನ್ನ ಮ್ಯಾನರಿಜಂ, ಡೈಲಾಗ್‌ ಡೀಲವರಿ, ಆ್ಯಕ್ಷನ್‌ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಾರೆ.  ನಲವತ್ತೇಂಟು ತುಂಬಿದರು ಇಪ್ಪತ್ತೇಂಟರ ಯುವಕನಂತೆ ಕಾಣುವ ಮಹೇಶ್‌ ಬಾಬುರ ಅಭಿನಯ, ಅವರ ಲುಕ್‌ ಇಗಲೂ ಪ್ರಶ್‌ ಆಗಿದೆ.

ಚಿತ್ರದ ನಟಿ ಶ್ರೀಲಿಲಾ ತುಂಬಾ ಗ್ಲಾಮರಸ್‌ ಆಗಿ ಈ ಚಿತ್ರದಲ್ಲಿ ಕಾಣುತ್ತಾರೆ , ಶ್ರೀಲೀಲಾರ ಹಾವಬಾವ ನೋಡುಗರಿಗೆ ಎರಡು ದಶಕದ ಹಿಂದೆ ತೆರೆಕಂಡ ಪೋಕರಿ ಚಿತ್ರದ ಇಲಿಯಾನರನ್ನು ನೆನಪಿಸುತ್ತದೆ. ಗುಂಟೂರು ಖಾರಂ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಹೆಚ್ಚು ಮಹತ್ವವಿಲ್ಲದಿದ್ದರು ತಮ್ಮ ಸೀಮಿತ ಪರಿಧಿಯಲ್ಲಿ ಶ್ರೀಲಿಲಾ ತಮ್ಮ ನಟನೆ ಮತ್ತು ಸೌಂದರ್ಯದ ಛಾಪು ಚಿತ್ರ ನೋಡಿದವರಲ್ಲಿ ಮೂಡಿಸುತ್ತಾರೆ.

ಚಿತ್ರದಲ್ಲಿನ ಹಿರಿಯ ಕಲಾವಿದರಾದ ಜಯರಾಂ , ಪ್ರಕಾಶ್‌ ರೈ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದು ಚಿತ್ರದ ಯಶಸ್ವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಚಿತ್ರದಲ್ಲಿನ ಮುಖ್ಯ ಆಕರ್ಷಣೆ ತಾಯಿಯ ಪಾತ್ರಧಾರಿ ರಮ್ಯಾಕೃಷ್ಣರವರು ಇವರ ನಟನೆಗೆ ಯಾರದೆ ಸರ್ಟಿಫಿಕೇಟ್‌ ಬೇಡವಾಗಿದೆ.

ರಮ್ಯಾ ಕೃಷ್ಣರ ತಾಯಿಯ ಪ್ರಾತದಲ್ಲಿನ ಗಾಂಭೀರ್ಯ, ಘನತೆ, ಕರುಣೆ ಎಲ್ಲವನ್ನೂ ಚಿತ್ರದಲ್ಲಿ ಧಾರೆ ಎರದಂತೆ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಮುಟ್ಟುವ ನಟನೆಯನ್ನು ಮಾಡಿದ್ದಾರೆ. ಚಿತ್ರದ ಸಂಗೀತ ನಿದೇರ್ಶಕ ತಮನ್‌ ರ ಹಿನ್ನಲೆ ಸಂಗೀತ ಮತ್ತು ಹಾಡುಗಳನ್ನು ಪ್ರಯತ್ನ ಮಾಡಿದ್ದರೆ ಇನ್ನೂ ಚೆನ್ನಾಗಿ ಮೂಡಿಬರುವಂತೆ ಮಾಡಬಹುದಿದ್ದರು ಒಮ್ಮೆ ಪ್ರೇಕ್ಷಕರರು ಕೇಳುವ ಹಾಗೆ ಇದೆ.

ಒಂದು ದಶಕದ ಹಿಂದೆ ಈ ಚಿತ್ರ ಮೂಡಿಬಂದಿದ್ದರೆ ಸೂಪರ್‌ ಹಿಟ್‌ ಅಗುವುದರಲ್ಲಿ ಯಾವುದೇ ಸಂಶಯವಿರಲಿಲ್ಲ , ಆದರು ಮಹೇಶ್‌ ಬಾಬುರ ಅಭಿಮಾನಿಗಳಿಗೆ ಬೇಕಾದ ಪಂಚ್‌ ಡೈಲಾಗ್‌ , ಸ್ಟಂಟ್‌ ಚಿತ್ರದಲ್ಲಿದ್ದು , ಇಡೀ ಕುಟುಂಬ ಒಮ್ಮೆ ನೋಡುವ ಚಿತ್ರ ಗುಂಟೂರು ಖಾರಂ.

-ರಾಸುಮ ಭಟ್‌

ಕುವೆಂಪು ವಿ.ವಿ., ಶಿವಮೊಗ್ಗ

ಟಾಪ್ ನ್ಯೂಸ್

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

vJune 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

June 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.