Shelter: ಬೆಚ್ಚಗಿನ ಸೂರಿನಲ್ಲಿ ಗಾಳಿ-ಬೆಳಕಿರಲಿ

Team Udayavani, Feb 26, 2024, 10:10 AM IST

5-uv-fusion

ಮನೆ ಅದೆಷ್ಟೋ ಜನರ ಕನಸಿನ ಕೂಸು. ದಿನದ ಬಹುಪಾಲು ಸಮಯವನ್ನು ಮನೆಯಲ್ಲಿಯೇ ಕಳೆಯಲಿಚ್ಚಿಸುತ್ತೇವೆ. ಮನೆಯಲ್ಲಿನ ಉತ್ತಮವಾದ ವಾತಾವರಣ ಮತ್ತು ನೈಸರ್ಗಿಕ ಬೆಳಕು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ.

ಗಾಳಿ ಬೆಳಕು ಇಲ್ಲದ ಮನೆಗಳಲ್ಲಿ ಜೀವನವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಮನುಷ್ಯ  ಬದುಕುಳಿಯಲು ಗಾಳಿ ಬೆಳಕು ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲಗಳಾಗಿವೆ. ಆದ್ದರಿಂದ ನಾವು ವಾಸಿಸುವ ಮನೆಗಳಲ್ಲಿ ಗಾಳಿ ಹಾಗೂ ಸೂರ್ಯನ ಕಿರಣಗಳು ಒಳನುಸುಳುವುದು ಒಳ್ಳೆಯದು.

ಮುಂಜಾನೆಯ ತಣ್ಣನೆ ಗಾಳಿ ಹಾಗೂ ಸೂರ್ಯ ರಶ್ಮಿಯ ಸ್ಪರ್ಶದೊಂದಿಗೆ ನೀವು ಎಚ್ಚರ ಗೊಂಡಾಗ ನಿಮ್ಮ ದಿನ ಆರಂಭವಾಗುತ್ತದೆ. ಮನೆಗಳಲ್ಲಿ ಸರಾಗವಾಗಿ ಹರಿದಾಡುವ ತಾಜಾ ಗಾಳಿಯು ಮನೆಯಲ್ಲಿನ ಕೆಟ್ಟ ವಾಸನೆಯನ್ನು ತೆಗೆದು ಹಾಕಿದರೆ, ನೈಸರ್ಗಿಕ ಬೆಳಕು ಮನೆಯಲ್ಲಿನ ಫ‌ಂಗಸ್‌ ರೀತಿಯ ಮಾಲಿನ್ಯವನ್ನು ತಡೆಗಟ್ಟುವುದರ ಜತೆಗೆ ನಿಮ್ಮಲ್ಲಿನ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

ಇದರಿಂದ ವಿಟಮಿನ್‌ ಡಿ ಕೂಡ ನಿಮ್ಮ ದೇಹಕ್ಕೆ ಸಮೃದ್ಧವಾಗಿ ದೊರೆಯುತ್ತದೆ. ಇಂತಹ ಆರೋಗ್ಯಕರ ಜೀವನ ನಿಮ್ಮದಾಗಬೇಕಾದರೆ ಮನೆ ನಿರ್ಮಾಣದ ಅಥವಾ ಕೊಂಡುಕೊಳ್ಳುವ ಸಮಯದಲ್ಲಿ ಒಂದಷ್ಟು ಟಿಪ್ಸ್‌ಗಳನ್ನು ಫಾಲೋ ಮಾಡಿದ್ರೆ ಒಳ್ಳೆಯದು. ಮನೆಗಳಲ್ಲಿ ದೊಡ್ಡ ಗಾತ್ರದ, ಎದುರು ಬದುರು ಗೋಡೆಗಳಲ್ಲಿ ಕಿಟಕಿಗಳನ್ನು ನಿರ್ಮಿಸುವುದರಿಂದ ಮನೆಗಳಲ್ಲಿ ಗಾಳಿ ಬೆಳಕು ಸಮೃದ್ಧವಾಗಿರುತ್ತದೆ. ಏಕೆಂದರೆ ಇಲ್ಲಿ ಒಳಬರುವ ಗಾಳಿ ಅಲ್ಲೇ ಸುತ್ತುವರಿಯದೆ ಹೊರ ಬರುವ ದಾರಿಯು ದೊರೆಯುತ್ತದೆ. ಆದ್ದರಿಂದ ಕಿಟಕಿಯ ದೃಷ್ಟಿಕೋನ ಮನೆ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.

ದಿಕ್ಕಿನ ಪಾತ್ರವೇನು?

ಯಾವ ದಿಕ್ಕು ಬೆಳಕಿನ ಮೂಲವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ ದಿನದ ವಿವಿಧ ಸಮಯದಲ್ಲಿ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ದಿಕ್ಕುಗಳಿಗೆ ಸೂರ್ಯ ನೇರವಾಗಿ ತನ್ನ ಬೆಳಕನ್ನು ಚೆಲ್ಲುವುದರಿಂದ ಇಂತಹ ದಿಕ್ಕಿನೆಡೆಗೆ ಮನೆಯ ಬಾಗಿಲು, ಕಿಟಕಿಗಳನ್ನು ಇರಿಸುವುದು ಸಮಂಜಸ ಆಯ್ಕೆಯಾಗಿದೆ.

ಯಾವ ಅಂಶಗಳು ಮನೆಗೆ ಉತ್ತಮ ವೆಂಟಿಲೇಶನ್‌ ಹಾಗೂ ಸನ್‌ಲೈಟ್‌ಅನ್ನು ಹೊತ್ತುತರುತ್ತದೆಯೋ ಅಂತವುಗಳನ್ನು ಮನೆಯ ನಿರ್ಮಾಣದಲ್ಲಿ ಅಳವಡಿಸಿಕೊಳ್ಳುವುದನ್ನು ಮರೆಯಬೇಡಿ.  ಬೆಳಕಿನ ಮೂಲವೇ ಆಗಿರುವ ಕಿಟಕಿಗಳಿಗೆ ಮನೆಯ ಯಾವುದೇ ಉಪಕರಣಗಳು ಅಡ್ಡಿಯಾಗದಿರಲಿ, ಫ್ರಿಜ್‌, ಕೂಲರ್‌, ಪೀಠೊಪಕರಣಗಳನ್ನು ಕಿಟಕಿಗೆ ಅಡ್ಡವಾಗಿಡುವುದನ್ನು ತಪ್ಪಿಸಿ.

ನಿಮ್ಮ ಬೆಡ್‌ ನ ತಲೆಯ ಭಾಗವನ್ನು ಕಿಟಕಿಗೆ ಇಡುವುದನ್ನು ತಪ್ಪಿಸಿ. ಇದಕ್ಕಾಗಿ ನೀವು ಆಯ್ಕೆ ಮಾಡುವ ಪೈಂಟ್‌ನ ಬಣ್ಣ ಒಂದು ರೀತಿಯ ಬೂಸ್ಟ್‌  ನೀಡುತ್ತದೆ, ತಿಳಿ ನೀಲಿ,ಗುಲಾಬಿಹಳಂತಹ ತಿಳಿ ಬಣ್ಣಗಳು ತಮ್ಮ ಮೇಲ್ಮೆ„ಮೇಲೆ ಬಿದ್ದ ಬೆಳಕನ್ನು ಪಸರಿಸುತ್ತವೆ. ಇವುಗಳಿಗೆ ಕ್ಯಾಂಪ್ಲಿಮೆಂಟ್‌ ನೀಡುವಂತಹ ತಿಳಿ ಬಣ್ಣದ ಕಿಟಕಿ ಪರದೆಗಳು ರೂಮ್‌ ಗಳಿಗೆ ಕತ್ತಲು ಆವರಿಸದಂತೆ ತಡೆಯುತ್ತದೆ.

ಕಿಟಕಿ ಮೂಲಕ ಸೂರ್ಯನ ನೇರ ಬೆಳಕು ಬೀಳುವಂತಹ ಗೋಡೆಗಳ ಮೇಲೆ ಕನ್ನಡಿಗಳನ್ನು ಅಳವಡಿಸುವುದರಿಂದ ಬೆಳಕು ಪ್ರತಿಫ‌ಲನಗೊಂಡು ಇಡೀ ಮನೆ ಬೆಳಕಿನಿಂದ ಆವೃತ್ತ‌ಗೊಳ್ಳುತ್ತದೆ. ಈ ಮುಂಚೆ ಹೇಳಿದಂತೆ ಗಾಳಿ ಮತ್ತು ನೈಸರ್ಗಿಕ ಬೆಳಕು ಮನುಷ್ಯನ ಮೈಂಡ್‌ ರಿಫ್ರೆಶ್‌ ಮಾಡುವುದರೊಂದಿಗೆ ಮನಸಿಗೆ ಆಹ್ಲಾದಕರ‌ ಸಂತೋಷವನ್ನು ನೀಡುತ್ತದೆ. ಆದ್ದರಿಂದ ಮನೆಯ ಮೂಲೆ ಮೂಲೆಗೂ ಗಾಳಿ ಹಾಗೂ ಉತ್ತಮ ಬೆಳಕಿನ ಅವಶ್ಯಕತೆ ಇದೆ.

-ಲಕ್ಷ್ಮೀ ಶಿವಣ್ಣ

ವಿವಿ ವಿಜಯಪುರ

ಟಾಪ್ ನ್ಯೂಸ್

Belagavi; ಗೋಕಾಕ ಮಾಜಿ ಶಾಸಕ ಚಂದ್ರಶೇಖರ ಟಿ. ಗುಡ್ಡಕಾಯು ನಿಧನ

Belagavi; ಗೋಕಾಕ ಮಾಜಿ ಶಾಸಕ ಚಂದ್ರಶೇಖರ ಟಿ ಗುಡ್ಡಕಾಯು ನಿಧನ

Madikeri ಪ್ರೀತಿಸಿದ ಯುವಕನ ಮೇಲೆ ಬಿಸಿನೀರು: ಆಸ್ಪತ್ರೆಗೆ ದಾಖಲು

Madikeri ಪ್ರೀತಿಸಿದ ಯುವಕನ ಮೇಲೆ ಬಿಸಿನೀರು: ಆಸ್ಪತ್ರೆಗೆ ದಾಖಲು

Madikeri ಕಾಳು ಮೆಣಸು ಕಳವು ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳ ಬಂಧನ

Madikeri ಕಾಳು ಮೆಣಸು ಕಳವು ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳ ಬಂಧನ

Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು

Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು

Road Mishap ಬೈಕ್‌ ಅಪಘಾತದ ಗಾಯಾಳು ಸಾವು

Road Mishap ಬೈಕ್‌ ಅಪಘಾತದ ಗಾಯಾಳು ಸಾವು

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Belagavi; ಗೋಕಾಕ ಮಾಜಿ ಶಾಸಕ ಚಂದ್ರಶೇಖರ ಟಿ. ಗುಡ್ಡಕಾಯು ನಿಧನ

Belagavi; ಗೋಕಾಕ ಮಾಜಿ ಶಾಸಕ ಚಂದ್ರಶೇಖರ ಟಿ ಗುಡ್ಡಕಾಯು ನಿಧನ

Madikeri ಪ್ರೀತಿಸಿದ ಯುವಕನ ಮೇಲೆ ಬಿಸಿನೀರು: ಆಸ್ಪತ್ರೆಗೆ ದಾಖಲು

Madikeri ಪ್ರೀತಿಸಿದ ಯುವಕನ ಮೇಲೆ ಬಿಸಿನೀರು: ಆಸ್ಪತ್ರೆಗೆ ದಾಖಲು

Madikeri ಕಾಳು ಮೆಣಸು ಕಳವು ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳ ಬಂಧನ

Madikeri ಕಾಳು ಮೆಣಸು ಕಳವು ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳ ಬಂಧನ

Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು

Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು

Hubli; ಜಾನುವಾರು ಮೇಯಿಸಲು ಹೋಗಿದ್ದ ಯುವಕ ಸಿಡಿಲು ಬಡಿದು ಸಾವು

Hubli; ಜಾನುವಾರು ಮೇಯಿಸಲು ಹೋಗಿದ್ದ ಯುವಕ ಸಿಡಿಲು ಬಡಿದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.