Roadshows: ಪ್ರವಾಸಗರಿಲ್ಲದೆ ಕಂಗೆಟ್ಟ ಮಾಲ್ಡೀವ್ಸ್.. ಭಾರತದಲ್ಲಿ ರೋಡ್ ಶೋ ನಡೆಸಲು ನಿರ್ಧಾರ

Team Udayavani, Apr 12, 2024, 9:43 AM IST

Roadshows: ಪ್ರವಾಸಗರಿಲ್ಲದೆ ಕಂಗೆಟ್ಟ ಮಾಲ್ಡೀವ್ಸ್.. ಭಾರತದಲ್ಲಿ ರೋಡ್ ಶೋ ನಡೆಸಲು ನಿರ್ಧಾರ

ಮಾಲೆ: ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾಲ್ಡೀವ್ಸ್ ನ ಮೂವರು ಮಂತ್ರಿಗಳು ನೀಡಿರುವ ಅವಹೇಳನಕಾರಿ ಹೇಳಿಕೆಗಳ ನಂತರ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಹಳಸಿದೆ.

ಇದರ ಪರಿಣಾಮ ಮಾಲ್ಡೀವ್ಸ್ ನಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಾರಂಭಿಸಿದೆ. ಪ್ರವಾಸಿಗರಿಲ್ಲದೆ ಮಾಲ್ಡೀವ್ಸ್ ನಷ್ಟ ಅನುಭವಿಸುತ್ತಿದೆ ಇದರ ಕುರಿತಾಗಿ ಮಾಲ್ಡೀವ್ಸ್ ಅಧಿಕಾರಿಗಳೇ ತಮ್ಮ ಮಂತ್ರಿಗಳ ವಿರುದ್ಧ ಪ್ರತಿಭಟನೆ ನಡೆಸಿರುವುದು ಗೊತ್ತಿರುವ ವಿಚಾರ ಇದೀಗ ಮಾಲ್ಡೀವ್ಸ್ ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಪ್ರವಾಸಿಗರನ್ನು ಓಲೈಸಲು ಮಾಲ್ಡೀವ್ಸ್ ಭಾರತದ ಪ್ರಮುಖ ನಗರಗಳಲ್ಲಿ ರೋಡ್ ಶೋ ನಡೆಸಲಿದೆಯಂತೆ.

ಮಾಲ್ಡೀವ್ಸ್ ಅಸೋಸಿಯೇಷನ್ ​​ಆಫ್ ಟ್ರಾವೆಲ್ ಏಜೆಂಟ್ಸ್ ಅಂಡ್ ಟೂರ್ ಆಪರೇಟರ್ಸ್ (MATATO), ಅದರ ಪ್ರಮುಖ ಪ್ರವಾಸೋದ್ಯಮ ಸಂಸ್ಥೆಯು ಈ ಘೋಷಣೆ ಮಾಡಿದೆ. ಆದರೆ, ಯಾವ ಯಾವ ನಗರಗಳಲ್ಲಿ ಮತ್ತು ಯಾವಾಗ ರೋಡ್ ಶೋ ನಡೆಯಲಿದೆ ಎಂಬ ಮಾಹಿತಿ ನೀಡಿಲ್ಲ.

ಭಾರತೀಯ ಪ್ರವಾಸಿಗರ ಕೊರತೆಯ ನಡುವೆ, ಎರಡು ದೇಶಗಳ ನಡುವಿನ ಪ್ರಯಾಣ ಮತ್ತು ಪ್ರವಾಸೋದ್ಯಮ ಸಹಕಾರವನ್ನು ಹೆಚ್ಚಿಸುವ ಕುರಿತು ಭಾರತದ ಹೈಕಮಿಷನರ್ ಮುನು ಮಹಾವರ್ ಅವರೊಂದಿಗೆ ಮಾಟಾಟೊ ಚರ್ಚಿಸಿದರು. ಭಾರತದ ಬಹಿಷ್ಕಾರವು ಮಾಲ್ಡೀವ್ಸ್‌ನ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತಿದೆ, ವಿಶೇಷವಾಗಿ ಪ್ರವಾಸೋದ್ಯಮ, ಇದು ಮಾಲ್ಡೀವ್ಸ್ ಆರ್ಥಿಕತೆಯ ಪ್ರಮುಖ ಭಾಗವಾಗಿದೆ.

ಪ್ರಧಾನಿ ಮೋದಿ ಜನವರಿ 3 ರಂದು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸಿದ್ದಾರೆ. ಜೊತೆಗೆ ಜನವರಿ 6ರಂದು ಅಲ್ಲಿನ ಸೌಂದರ್ಯಕ್ಕೆ ಸಂಬಂಧಿಸಿದ ಕೆಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅವರು, ‘ಪ್ರಕೃತಿ ಸೌಂದರ್ಯದ ಜೊತೆಗೆ ಲಕ್ಷದ್ವೀಪದ ಶಾಂತಿಯೂ ಮೈಮರೆತಿದೆ’ ಎಂದಿದ್ದಾರೆ. ಇದರ ನಂತರ ಲಕ್ಷದ್ವೀಪ ಮತ್ತು ಮಾಲ್ಡೀವ್ಸ್ ನಡುವೆ ಹೋಲಿಕೆ ಪ್ರಾರಂಭವಾಯಿತು. ಈ ಕುರಿತು ಮಾಲ್ಡೀವ್ಸ್‌ನ ಕೆಲವು ಸಚಿವರು ಪ್ರಧಾನಿ ಮೋದಿ ಮತ್ತು ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದು ಭಾರತದ ಜನರನ್ನು ಕೆರಳಿಸಿತು ಮತ್ತು ತೀವ್ರ ಟೀಕೆಗೆ ಗುರಿಯಾಯಿತು. ಈ ಟೀಕೆ ಎಷ್ಟರ ಮಟ್ಟಿಗೆ ತಲುಪಿತ್ತೆಂದರೆ ‘ಬಾಯ್ಕಾಟ್ ಮಾಲ್ಡೀವ್ಸ್’ ಎಂಬ ಹ್ಯಾಷ್ ಟ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆರಂಭಿಸಿದೆ. ಬಹಿಷ್ಕಾರದಿಂದಾಗಿ ಮಾಲ್ಡೀವ್ಸ್ ಭಾರೀ ನಷ್ಟವನ್ನು ಅನುಭವಿಸಿತು. ಅನೇಕ ಸೆಲೆಬ್ರಿಟಿಗಳು ಸೇರಿದಂತೆ ಭಾರತೀಯರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದರು.

ಇದನ್ನೂ ಓದಿ: Delhi Chief Secretary: ದೆಹಲಿ ಮುಖ್ಯ ಕಾರ್ಯದರ್ಶಿ ವಿರುದ್ಧ ಎಫ್‌ಐಆರ್‌

ಟಾಪ್ ನ್ಯೂಸ್

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Dina Bhavishya

ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ

NIA Raid ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ವೈದ್ಯ ವಶಕ್ಕೆ

NIA Raid ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ವೈದ್ಯ ವಶಕ್ಕೆ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ

Chabahar

Chabahar ಮಧ್ಯ ಏಷ್ಯಾಕ್ಕೆ ಭಾರತದ ಹೆಬ್ಟಾಗಿಲು

Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್‌ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ

Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್‌ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

British Prime Minister Sunak thought to change the student visa policy!

U.K; ವಿದ್ಯಾರ್ಥಿ ವೀಸಾ ನೀತಿ ಬದಲಿಸಲು ಬ್ರಿಟನ್‌ ಪ್ರಧಾನಿ ಸುನಕ್‌ ಚಿಂತನೆ!

3 students of Indian origin passed away in Georgia

Georgia ಕಾರು ಅಪಘಾತ: ಭಾರತ ಮೂಲದ 3 ವಿದ್ಯಾರ್ಥಿಗಳ ಸಾವು

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

5

ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್‌ ವಿದ್ಯಾರ್ಥಿಗಳು ದುರ್ಮರಣ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Dina Bhavishya

ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ

NIA Raid ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ವೈದ್ಯ ವಶಕ್ಕೆ

NIA Raid ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ವೈದ್ಯ ವಶಕ್ಕೆ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.