Rameswaram cafe ಪ್ರಕರಣದ ಆರೋಪಿಗಳ ಸೆರೆ: ಬಿಜೆಪಿ-ಟಿಎಂಸಿ ತೀವ್ರ ವಾಗ್ಸಮರ

ಸುರಕ್ಷಿತ ಸ್ವರ್ಗವಾಗಿದೆ... ಬಿಜೆಪಿ ವಿರುದ್ಧ ಆಕ್ರೋಶ

Team Udayavani, Apr 12, 2024, 7:21 PM IST

mamata

ಕೋಲ್ಕತಾ : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ ಬೆನ್ನಲ್ಲೇ ಬಿಜೆಪಿ ಮತ್ತು ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಡುವೆ ಚುನಾವಣೆ ವೇಳೆ ತೀವ್ರ ರಾಜಕೀಯ ವಾಗ್ಸಮರಕ್ಕೆ ಕಾರಣವಾಗಿದೆ.

ಇಬ್ಬರ ಬಂಧನದ ಬೆನ್ನಲ್ಲೇ ಪಶ್ಚಿಮ ಬಂಗಾಳ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಗಂಭೀರ ಆರೋಪ ಮಾಡಿದ್ದರು.

ಕೂಚ್ ಬೆಹಾರ್‌ನ ದಿನ್ಹಟಾದಲ್ಲಿ ಚುನಾವಣ ಪ್ರಚಾರ ಸಭೆಯಲ್ಲಿ ತಿರುಗೇಟು ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಬಂಧಿತರು ಬಂಗಾಳದ ನಿವಾಸಿಗಳಲ್ಲ… ಅವರು ಇಲ್ಲಿ ಅಡಗಿಕೊಂಡಿದ್ದರು. ಅವರನ್ನು ಎರಡು ಗಂಟೆಗಳಲ್ಲೇ ಬಂಧಿಸಲಾಯಿತು. ಬಂಗಾಳದಲ್ಲಿ ಶಾಂತಿ ನೆಲೆಸಿದರೆ ಬಿಜೆಪಿಗೆ ಅದನ್ನು ಸಹಿಸಲು ಸಾಧ್ಯವಿಲ್ಲ. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರದಂತಹ ಬಿಜೆಪಿ ಆಡಳಿತದ ರಾಜ್ಯಗಳು ಸುರಕ್ಷಿತವಾಗಿದೆಯೇ” ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಕುನಾಲ್ ಘೋಷ್, ಬಿಜೆಪಿಗೆ ತಿರುಗೇಟು ನೀಡಿ, ಬಂಧಿಸುವ ಸಂಸ್ಥೆ ಎನ್ಐಎ “ರಾಜ್ಯ ಪೊಲೀಸರ ಸಕ್ರಿಯ ಸಹಕಾರವನ್ನು ಸ್ವೀಕರಿಸಿದೆ. ಎನ್ಐಎ ಪತ್ರಿಕಾ ಪ್ರಕಟಣೆಯು ಅವರು ಮಾಡಿದ ಬಂಧನಗಳಲ್ಲಿ ರಾಜ್ಯ ಪೊಲೀಸರ ಸಹಕಾರವನ್ನು ಉಲ್ಲೇಖಿಸಿದೆ. ಬಂಗಾಳದ ಪೊಲೀಸರು ದೇಶವಿರೋಧಿ ಶಕ್ತಿಗಳನ್ನು ನಿಗ್ರಹಿಸುವಲ್ಲಿ ದೃಢವಾಗಿ ಉಳಿದಿದ್ದಾರೆ ಮತ್ತು ಇತರ ಏಜೆನ್ಸಿಗಳೊಂದಿಗೆ ಸಹಕರಿಸಲು ಯಾವಾಗಲೂ ಸಿದ್ಧರಾಗಿದ್ದಾರೆ ” ಎಂದು ಹೇಳಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು 10 ಜನರು ಗಾಯಗೊಂಡಿದ್ದ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಬಿಜೆಪಿ ಕಾರ್ಯಕರ್ತನನ್ನು ಪ್ರಶ್ನಿಸಿದ ವರದಿಗಳನ್ನು ಅವರು ಉಲ್ಲೇಖಿಸಿದರು.

ಶುಕ್ರವಾರ ಬೆಳಗ್ಗೆ ಪ್ರಮುಖ ಸಂಚುಕೋರರಾದ ಮುಸ್ಸಾವಿರ್ ಹುಸೇನ್ ಶಾಝೇಬ್ ಮತ್ತು ಅಬ್ದುಲ್ ಮಥೀನ್ ತಾಹಾ ಎಂಬವರನ್ನು ಕೋಲ್ಕತಾದಿಂದ 180 ಕಿಮೀ ದೂರದಲ್ಲಿರುವ ಪುರ್ಬಾ ಮೇದಿನಿಪುರ್ ಜಿಲ್ಲೆಯ ಕಾಂತಿ ಅಥವಾ ಕೊಂಟೈ ಎಂಬ ಸಣ್ಣ ಪ್ರದೇಶದ ಅಡಗು ತಾಣದಲ್ಲಿ ಎನ್‌ಐಎ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಟಾಪ್ ನ್ಯೂಸ್

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ

bjpMLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

MLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

British Prime Minister Sunak thought to change the student visa policy!

U.K; ವಿದ್ಯಾರ್ಥಿ ವೀಸಾ ನೀತಿ ಬದಲಿಸಲು ಬ್ರಿಟನ್‌ ಪ್ರಧಾನಿ ಸುನಕ್‌ ಚಿಂತನೆ!

ಅಧಿಕಾರ ಸಿಗದಕ್ಕೆ ಎಚ್‌ಡಿಕೆ ಹತಾಶರಾಗಿ ಮಾತನಾಡುತ್ತಿದ್ದಾರೆ: ಡಿಕೆಶಿ ಲೇವಡಿ

ಅಧಿಕಾರ ಸಿಗದಕ್ಕೆ ಎಚ್‌ಡಿಕೆ ಹತಾಶರಾಗಿ ಮಾತನಾಡುತ್ತಿದ್ದಾರೆ: ಡಿಕೆಶಿ ಲೇವಡಿ

“Phone Tapping’ ಮಾಡಿಲ್ಲ; ಮಾಹಿತಿ ಕೊಟ್ಟರೆ ತನಿಖೆ: ಪರಮೇಶ್ವರ್‌

“Phone Tapping’ ಮಾಡಿಲ್ಲ; ಮಾಹಿತಿ ಕೊಟ್ಟರೆ ತನಿಖೆ: ಪರಮೇಶ್ವರ್‌

ಚೀನಾ ಯಂತ್ರಗಳ ಮೂಲಕ ಟ್ಯಾಪಿಂಗ್‌: ಅಶೋಕ್‌

China ಯಂತ್ರಗಳ ಮೂಲಕ ಟ್ಯಾಪಿಂಗ್‌: ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Conspiracy case: Relief for Sudhakaran of Congress

CPM ನಾಯಕನ ಹತ್ಯೆ ಸಂಚು: ಕಾಂಗ್ರೆಸ್‌ನ ಸುಧಾಕರನ್‌ಗೆ ರಿಲೀಫ್

BJP notice to Union Minister Sinha who did not come to campaign and did not vote

BJP: ಪ್ರಚಾರಕ್ಕೆ ಬರದ, ವೋಟ್‌ ಮಾಡದ ಕೇಂದ್ರ ಸಚಿವ ಸಿನ್ಹಾಗೆ ಬಿಜೆಪಿ ನೋಟಿಸ್‌

Bangla MP who came to Kolkata goes missing

ಕೋಲ್ಕತಾಗೆ ಬಂದ ಬಾಂಗ್ಲಾ ಸಂಸದ ನಾಪತ್ತೆ

Swati Maliwal case: Data destruction on Bibhav’s phone

Swati Maliwal case: ಬಿಭವ್‌ ಫೋನ್‌ನಲ್ಲಿ ದತ್ತಾಂಶ ನಾಶ

Former AAP leader Jagbir Singh joins BJP

New Delhi; ಆಪ್‌ ಮಾಜಿ ನಾಯಕ ಜಗ್ಬೀರ್‌ ಸಿಂಗ್‌ ಬಿಜೆಪಿ ಸೇರ್ಪಡೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ

bjpMLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

MLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

British Prime Minister Sunak thought to change the student visa policy!

U.K; ವಿದ್ಯಾರ್ಥಿ ವೀಸಾ ನೀತಿ ಬದಲಿಸಲು ಬ್ರಿಟನ್‌ ಪ್ರಧಾನಿ ಸುನಕ್‌ ಚಿಂತನೆ!

ಅಧಿಕಾರ ಸಿಗದಕ್ಕೆ ಎಚ್‌ಡಿಕೆ ಹತಾಶರಾಗಿ ಮಾತನಾಡುತ್ತಿದ್ದಾರೆ: ಡಿಕೆಶಿ ಲೇವಡಿ

ಅಧಿಕಾರ ಸಿಗದಕ್ಕೆ ಎಚ್‌ಡಿಕೆ ಹತಾಶರಾಗಿ ಮಾತನಾಡುತ್ತಿದ್ದಾರೆ: ಡಿಕೆಶಿ ಲೇವಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.