Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Team Udayavani, Apr 22, 2024, 3:09 PM IST

ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

ಹಾವೇರಿ: ಬಿಜೆಪಿ ಎಲ್ಲಾ ಪತ್ರಿಕೆಗಳಲ್ಲಿ ಬಿಜೆಪಿ ಜಾಹೀರಾತು ಕೊಟ್ಟಿದೆ. ರಾಜಸ್ಥಾನದಲ್ಲಿ ಮೋದಿಯವರು ಭಾಷಣ ಮಾಡಿದ್ದಾರೆ. ನರೇಂದ್ರ ಮೋದಿ ಹಾಗೆ ಮಾತಾಡಲು ಅವರು ಯಾವುದೋ ಪಂಚಾಯಿತಿ ಸದಸ್ಯನಲ್ಲ, ಅವರು ಪ್ರಧಾನಮಂತ್ರಿ. ಎಲ್ಲಾ ನಾಗರೀಕರ ಜೀವ ಕಾಪಾಡುವ ಮೂಲಭೂತ ಜವಾಬ್ದಾರಿ ಅವರ ಮೇಲಿದೆ. ಆದರೆ ಮೋದಿಯವರು ಜವಾಬ್ದಾರಿ ಮರೆತಿರುವ ಹಾಗೆ ಕಾಣುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ‌.ಕೆ ಹರಿಪ್ರಸಾದ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೋ ಸಮುದಾಯ ಗುರಿ ಮಾಡಿ ಹೇಳಿಕೆ ಕೊಟ್ಟಿದ್ದಾರೆ ಚುನಾವಣಾ ಆಯೋಗ ನಿಷ್ಪಕ್ಷಪಾತ ಚುನಾವಣೆ ಮಾಡುವುದಾದರೆ ಮೋದಿಯವರ ಮೇಲೆ ಕ್ರಮ ಜರುಗಿಸಲಿ. ಪ್ರಚೋದನಕಾರಿ ಮಾತಾಡಿದರೆ ಪೊಲೀಸರೂ ಸೋಮೋಟೋ ಎಫ್ಐಆರ್ ದಾಖಲಿಸಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಇದೆ ಎಂದರು.

ತೆರಿಗೆ ಹಣ ಯಾವುದೋ ಒಂದು ಸಮುದಾಯಕ್ಕೆ ಹೋಗುತ್ತೆ ಅಂತ ಮೋದಿಯವರು ಹೇಳಿದ್ದಾರೆ. ತೆರಿಗೆ ಕಟ್ಟಬೇಕಾದರೆ ಒಂದೇ ಧರ್ಮ, ಭಾಷೆಯವರು ತೆರಿಗೆ ಕಟ್ಟಿರುವುದಿಲ್ಲ. ತೆರಿಗೆಯನ್ನು ಸರ್ವರಿಗೂ ಸಮಪಾಲು, ಸಮಬಾಳು ಆಶಯದ ಮೇಲೆ ತೆರಿಗೆ ಹಣ ಹಂಚಬೇಕು. ತೆರಿಗೆ ಹಣ ಸರಿ ಸಮಾನವಾಗಿ ಹಂಚಬೇಕಾಗುತ್ತದೆ ಎಂದರು.

ಬಿಜೆಪಿಯವರು ಜಾಹೀರಾತಿನಲ್ಲಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸ್ತಿದ್ದಾರೆ. ಬಿಹಾರ್ ನಲ್ಲಿ ಮೀಸಲಾತಿ ಬಗ್ಗೆ ಮಾತಾಡಿದ್ದಕ್ಕೆ ಸೋತರು. ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾಡಬೇಕು ಎಂದಿದ್ದರು. ಸಂವಿಧಾನದಲ್ಲಿ ಸಮಾನ ಅವಕಾಶದ ಹಕ್ಕಿಗೆ ವಿರುದ್ಧ ಇರುವವರು ಬಿಜೆಪಿ ಸೂತ್ರದಾರರು. ನಕ್ಸಲ್ ದಾಳಿಯೆಂದು ಹೇಳಿದ್ದಾರೆ. 19 ರಾಜ್ಯಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಮಹಾರಾಷ್ಟ್ರ ಛತ್ತೀಸ್ ಘಡ್, ಒಡಿಸ್ಸಾದಲ್ಲಿ ಕೆಲಸ ಮಾಡಿದ್ದೇನೆ. ಹಿಂದೆ ನಕ್ಸಲ್ ಅಟ್ಯಾಕ್ ಮಾಡಿದಾಗ 27 ಕಾಂಗ್ರೆಸ್ ನಾಯಕರನ್ನು ಕಳೆದುಕೊಂಡಿದ್ದೇವೆ. ನಕ್ಸಲ್ ನವರು ಹಾಗೂ ಬಿಜೆಪಿ ಸೂತ್ರದಾರರ ನಡುವೆ ಒಳ್ಳೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮೋದಿಯವರು ಅಮೃತ್ ಕಾಲ ಎಂದು ದೊಡ್ಡದಾಗಿ ಭಾಷಣ ಮಾಡಿದರು. ಜಾಹೀರಾತಿನಲ್ಲಿ ತಮ್ಮ ಹತ್ತು ವರ್ಷ ಏನು ಮಾಡಿದಾರೆ ಎಂದು ಎಲ್ಲೂ ಹೇಳಿಲ್ಲ. ಸಾಲ ಯಾರಿಗಾಗಿ ಮಾಡಿದಾರೆ ಎಂದು ಪ್ರಣಾಳಿಕೆಯಲ್ಲಿ ಹೇಳಿಲ್ಲ. ಅವರ ಪ್ರಣಾಳಿಕೆಯಲ್ಲಿ ಹತ್ತು ವರ್ಷದ ಸಾಧನೆ ಹೇಳೀಯೇ ಇಲ್ಲ. ಅಮೃತಕಾಲ ಅಲ್ಲ, ಅದು ರಾಹುಕಾಲದಲ್ಲಿ ಹೇಳಿರಬೇಕು, ಅನ್ಯಾಯ ಕಾಲ ಎಂದು ಹೇಳಿದ್ದೆವು. ನಾವು ಐದು ನ್ಯಾಯ ಪತ್ರ ಕೊಟ್ಟಿದ್ದೇವೆ ಎಂದು ಬಿಜೆಪಿ ವಿರುದ್ದ ಹರಿಪ್ರಸಾದ್ ಕಿಡಿಕಾರಿದರು.

ಇವರು ಬರೀ ಪಾಕಿಸ್ತಾನ, ಹಿಂದೂ ಮುಸ್ಲಿಂ, ಪಾಳು ಬಿದ್ದಿರುವ ದೇವಸ್ಥಾನ, ಮಸೀದಿ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಬದುಕುವುದಕ್ಕೆ ಏನು ಮಾಡಬೇಕು ಅದನ್ನು ಮಾಡಿಲ್ಲ. ಕೇಂದ್ರದಲ್ಲಿ 30 ಲಕ್ಷ ಹುದ್ದೆ ಖಾಲಿ ಇದೆ ಅದನ್ನು ಭರ್ತಿ ಮಾಡಿಲ್ಲ ಎಂದರು.

ಟಾಪ್ ನ್ಯೂಸ್

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

Belthangady ಶಾಸಕ ಹರೀಶ್‌ ಪೂಂಜ ಠಾಣೆಗೆ ಹಾಜರು; ಜಾಮೀನು

Belthangady ಶಾಸಕ ಹರೀಶ್‌ ಪೂಂಜ ಠಾಣೆಗೆ ಹಾಜರು; ಜಾಮೀನು

Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ

Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ

PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ

PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ

ಮಗನ ಮನವೊಲಿಸಿ ಅಮ್ಮನನ್ನು ಮನೆಗೆ ಸೇರಿಸಿದ ತಹಶೀಲ್ದಾರ್‌

ಮಗನ ಮನವೊಲಿಸಿ ಅಮ್ಮನನ್ನು ಮನೆಗೆ ಸೇರಿಸಿದ ತಹಶೀಲ್ದಾರ್‌

Panambur ಫಿನಾಯಿಲ್‌ ಸೇವಿಸಿ ಇಬ್ಬರು ಕಾರ್ಮಿಕರ ಆತ್ಮಹತ್ಯೆ ಯತ್ನ

Panambur ಫಿನಾಯಿಲ್‌ ಸೇವಿಸಿ ಇಬ್ಬರು ಕಾರ್ಮಿಕರ ಆತ್ಮಹತ್ಯೆ ಯತ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಅಧ್ಯಕ್ಷರ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟಿದ್ದು: ಪರಂ

Congress ಅಧ್ಯಕ್ಷರ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟಿದ್ದು: ಪರಂ

Harish Poonja ಬಂಧಿಸಿದರೆ ಮುಂದಾಗುವ ಘಟನೆಗಳಿಗೆ ಸರಕಾರ ನೇರ ಹೊಣೆ: ವಿಜಯೇಂದ್ರ ಎಚ್ಚರಿಕೆ

Harish Poonja ಬಂಧಿಸಿದರೆ ಮುಂದಾಗುವ ಘಟನೆಗಳಿಗೆ ಸರಕಾರ ನೇರ ಹೊಣೆ: ವಿಜಯೇಂದ್ರ ಎಚ್ಚರಿಕೆ

ಶಾಲೆಗೆ ಮಕ್ಕಳ ಸೇರಿಸುವ ಮುನ್ನ ಪಟ್ಟಿ ಪರಿಶೀಲಿಸಿ

ಶಾಲೆಗೆ ಮಕ್ಕಳ ಸೇರಿಸುವ ಮುನ್ನ ಪಟ್ಟಿ ಪರಿಶೀಲಿಸಿ

Prajwal ಪಾಸ್‌ಪೋರ್ಟ್‌ ರದ್ದತಿಗೆ ಸ್ಪಂದಿಸದ ಕೇಂದ್ರ ಸರಕಾರ: ಪರಮೇಶ್ವರ್‌

Prajwal ಪಾಸ್‌ಪೋರ್ಟ್‌ ರದ್ದತಿಗೆ ಸ್ಪಂದಿಸದ ಕೇಂದ್ರ ಸರಕಾರ: ಪರಮೇಶ್ವರ್‌

ಡಿಕೆಸು ನಿವಾಸದಲ್ಲಿ ಸಚಿವರಿಗೆ ಡಿಕೆಶಿ ಡಿನ್ನರ್‌ ಪಾರ್ಟಿ

ಡಿಕೆಸು ನಿವಾಸದಲ್ಲಿ ಸಚಿವರಿಗೆ ಡಿಕೆಶಿ ಡಿನ್ನರ್‌ ಪಾರ್ಟಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

Belthangady ಶಾಸಕ ಹರೀಶ್‌ ಪೂಂಜ ಠಾಣೆಗೆ ಹಾಜರು; ಜಾಮೀನು

Belthangady ಶಾಸಕ ಹರೀಶ್‌ ಪೂಂಜ ಠಾಣೆಗೆ ಹಾಜರು; ಜಾಮೀನು

Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ

Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ

PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ

PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.