ಮಿನಿ-ಮಮ್ ,ಗಿಡ್ಡ ಡ್ರೆಸ್ ಕೇರಾಫ್ ಚಿಟ್ಟೆ ಅಡ್ರೆಸ್ಸು
Team Udayavani, Jan 18, 2017, 3:45 AM IST
ಹಾಗೆ ಕಣ್ಣು ಹಾಯಿಸಿದರೆ ನಮ್ಮೂರಿನ ಹೆಣ್ಮಕ್ಕಳು ಧರಿಸುವ ಸಾದಾಸೀದ ಕುರ್ತಾದ ಹಾಗೆ ಕಾಣಬಹುದು, ಆದರೆ ಕುರ್ತಾದ ಜೊತೆಗೆ ಧರಿಸುವ ಲೆಗ್ಗಿಂಗ್ಸ್ ಈ ಡ್ರೆಸ್ ಜೊತೆಗಿಲ್ಲ. ಡ್ರೆಸ್ ಸ್ಟಿಚಿಂಗ್, ಬಣ್ಣವನ್ನು ನೋಡಿದರೆ ಚೀನಿ ಉಡುಗೆಯ ಹೋಲಿಕೆ ಕಾಣಬಹುದು. ಶ್ರದ್ಧಾ ಕಪೂರ್ ಎಂಬ ಮುಂಜಾನೆ ಹೂವಂಥ ಸುಂದರಿ ಧರಿಸಿದ ಈ ಪುಷ್ಪದುಡುಗೆಗೆ ಏನು ಹೆಸರು? ಬಟರ್‌ಫ್ಲೈ ಪ್ರಿಂಟೆಡ್ ಟ್ಯಾಂಗರಿನ್ ಕಲರ್x ಮಿನಿ ಡ್ರೆಸ್ !
*
ಮಣಿರತ್ನಂ ಅವರ “ಓ ಕಾದಲ್ ಕಣ್ಮಣಿ’ ಸಿನಿಮಾ ಹಿಂದಿಯಲ್ಲಿ “ಓಕೆ ಜಾನು’ ವಾಗುತ್ತಿದೆ. ಇಲ್ಲಿ ದುಲVರ್ ಸಲ್ಮಾನ್, ನಿತ್ಯಾ ಮೆನನ್ ನಟಿಸಿದ್ರೆ ಅಲ್ಲಿ ಶ್ರದ್ಧಾ ಕಪೂರ್ ಹಾಗೂ ಆದಿತ್ಯ ರಾಯ್ ಕಪೂರ್ ನಟಿಸುತ್ತಿದ್ದಾರೆ. ಈ ರೊಮ್ಯಾಂಟಿಕ್ ಸಿನಿಮಾ ಪ್ರಮೋಶನ್‌ನಲ್ಲಿ ಭಾಗವಹಿಸಿದ ಶ್ರದ್ಧಾ ಡ್ರೆಸ್‌ಬಗ್ಗೆ ಫ್ಯಾಶನ್ ಪ್ರಿಯರೆಲ್ಲ ಮಾತನಾಡಿಕೊಳ್ತಿದ್ದಾರೆ. ಚಿತ್ರದ ಪ್ರಮೋಶನ್ ಓಡಾಟದಲ್ಲಿ ಶ್ರದ್ಧಾ ಒಂದನ್ನೊಂದು ಮೀರಿಸುವಂಥ ಗ್ಲ್ಯಾಮರಸ್ ಡ್ರೆಸ್ ತೊಟ್ಟಿದ್ದಾರೆ. ಅವುಗಳಲ್ಲಿ ಮಿನಿಡ್ರೆಸ್‌ಗಳದ್ದೇ ಸಿಂಹಪಾಲು. ಅವುಗಳಲ್ಲೊಂದು ಬೆಳ್ಳಕ್ಕಿ ಬಿಳುಪಿನ ಮಿನಿಸ್ಕರ್ಟ್ ಮತ್ತು ರಕ್ತಗೆಂಪು ಗೆರೆಗಳ ರೌಂಡ್‌ನೆಕ್ ಸ್ವೆಟರ್. ಇನ್ನೊಂದು ನಸು ಬೂದುಬಣ್ಣದ ಎಂಬ್ರಾಯಿಡರಿ ಸ್ವೆಟರ್ ಮತ್ತು ಅದೇ ಬಣ್ಣದ ಮಿನಿಸ್ಕರ್ಟ್.
ಇನ್ನೊಂದು ಹೆಚ್ಚು ಹೊಸತನದಿಂದ ಮಿಂಚುತ್ತಿರೋದು ಬಟರ್‌ಫ್ಲೈ ಪ್ರಿಂಟೆಡ್ ಟ್ಯಾಂಗರಿನ್ ಕಲರ್x ಮಿನಿ ಡ್ರೆಸ್. ನೀವು ಚೀನಿ ಮಹಿಳೆಯರ ಸಾಂಪ್ರದಾಯಿಕ ಉಡುಗೆಗಳನ್ನು ಗಮನಿಸಿರಬಹುದು. ರಕ್ತಗೆಂಪು ಬಣ್ಣ, ಚಿಟ್ಟೆಯಾಕಾರದ ಕೈಯ ವಿನ್ಯಾಸ ಮೊದಲು ಗಮನಸೆಳೆಯುವಂಥಾದ್ದು. ಆ ಕೆಂಪು ಬಣ್ಣದ ಉಡುಗೆಗಳಲ್ಲಿ ಚೀನೀ ಸಾಂಪ್ರದಾಯಿಕ ಚಿತ್ರಗಳ ಪ್ರಿಂಟ್ ಇರೋದೂ ಇದೆ, ಅಲ್ಲಲ್ಲಿ ಬಂಗಾರದ ಎಳೆಯ ಡಿಸೈನ್‌ಗಳು ಅಥವಾ ಹೊಳೆಯುವ ಬಣ್ಣಗಳ ಚಿತ್ರಗಳು ಫಕ್ಕನೆ ಗಮನಸೆಳೆಯುತ್ತವೆ.
ಇಲ್ಲಿ ಶ್ರದ್ಧಾ ಕಪೂರ್ ತೊಟ್ಟಿರುವ ಡ್ರೆಸ್‌ನಲ್ಲಿ ಆ ಚೀನೀಯ ಉಡುಪಿನ ಛಾಯೆ ದಟ್ಟವಾಗಿದೆ.
ಬಟರ್‌ಫ್ಲೈ ಪ್ರಿಂಟೆಡ ಟ್ಯಾಂಗರಿನ್ ಕಲರ್x ಮಿನಿ ಡ್ರೆಸ್ ಎಂಬ ಉದ್ದದ ಹೆಸರಿಟ್ಟುಕೊಂಡಿರುವ ಈ ಪುಟ್ಟ ಡ್ರೆಸ್‌ನ ಡಿಸೈನರ್ ಆ್ಯಂಡ್ರೂ ಜಿಎನ್. ತನ್ನ ಕಲೆಕ್ಷನ್‌ಗಳು ಮೋಹಕತೆ ಮತ್ತು ಅನಿರೀಕ್ಷಿತತೆಗಳ ಒಟ್ಟುಮೊತ್ತದಂತಿರುತ್ತವೆ ಎನ್ನುವ ಈ ಡಿಸೈನರ್, 21 ಶತಮಾನದ ಯೋಚನೆಗಳು ಹಾಗೂ 18ನೇ ಶತಮಾನದ ಹೃದಯ ತನ್ನ ವಿನ್ಯಾಸ ಅನನ್ಯತೆ ಎನ್ನುತ್ತಾರೆ. ಈತನ ಕಲೆಕ್ಷನ್‌ಗಳು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿವೆ. ಶ್ರದ್ಧಾ ಕಪೂರ್‌ಗೆ ಆಕೆಯೇ ಹೇಳಿಕೊಳ್ಳುವಂತೆ ಆ್ಯಂಡ್ರೂ ಡ್ರೆಸ್‌ಗಳ ಕ್ರೇಜ್ ಬಹಳಷ್ಟಿದೆ. ಆ್ಯಂಡ್ರೂ ಅವರ ಡ್ರೆಸ್ ತೊಟ್ಟು “ಓಕೆ ಜಾನು’ ಪ್ರಮೋಶನ್‌ನಲ್ಲಿ ಭಾಗವಹಿಸೋದಕ್ಕೆ ಹೆಮ್ಮೆ ಅನಿಸುತ್ತೆ ಅಂತ ಶ್ರದ್ಧಾ ಇತ್ತೀಚೆಗೆ ಹೇಳ್ಕೊಂಡಿದ್ರು.
ಈ ಮಿನಿ ಡ್ರೆಸ್ ಕುರ್ತಾ ಫಿಟ್ಟಿಂಗ್‌ನಲ್ಲಿ ಮೈಗಂಟಿಕೊಂಡಂತೆ ನಿಲ್ಲುತ್ತದೆ. ಉದ್ದದ ಬೆಲ್ ಸ್ಲಿàವ್ಸ್ ಈ ಡ್ರೆಸ್‌ನ ಪ್ಲಸ್ ಪಾಯಿಂಟ್. ಅಲ್ಲಲ್ಲಿ ನಾನಾ ಮಾದರಿಯ ಚಿಟ್ಟೆಗಳ ಪ್ರಿಂಟ್ ಇದೆ. ಅದಕ್ಕೆ ಪೂರಕವಾದ ಹೂವಿನ ವಿನ್ಯಾಸವೂ ಇದೆ. ಈ ಚಿಟ್ಟೆಗಳ ಪ್ರಿಂಟ್ ಹೊಳೆಯುವ ಬಣ್ಣದಲ್ಲಿರೋ ಕಾರಣ ಎದ್ದು ಕಾಣುತ್ತವೆ. ಎದುರೊಂದು ಪಟ್ಟಿಯ ವಿನ್ಯಾಸ. ಕುರ್ತಾದಲ್ಲಿ ಬರುವಂಥ ಕತ್ತಿನ ವಿನ್ಯಾಸ ಈ ಬಗೆಯ ಮೆಟೀರಿಯಲ್‌ಗೆ ಹೊಸತು.
ಸಾಂಪ್ರದಾಯಿಕತೆ ಮತ್ತು ಆಧುನಿಕತೆಗಳೆರಡನ್ನೂ ಬಳಸಿಕೊಂಡಂತಿರುವ ಈ ಡ್ರೆಸ್‌ನಲ್ಲಿ ಶ್ರದ್ಧಾ ಚೆಲುವು ಎದ್ದುಕಾಣುತ್ತಿದೆ. ಈ ಡ್ರೆಸ್ ಸ್ವಲ್ಪ ದುಬಾರಿ ಎನಿಸಿದರೂ ಈ ಡ್ರೆಸ್‌ನ ರೆಪ್ಲಿಕಾದಂತಿರುವ ಡ್ರೆಸ್‌ಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ. ಜೊತೆಗೆ ಇವುಗಳನ್ನು ಕುರ್ತಾದ ಥರವೂ ಬಳಸಬಹುದು, ಆದರೆ ಅದರಲ್ಲಿ ಹೊಸತನ ಇರಲ್ಲ, ಈವ್ನಿಂಗ್ ಪಾರ್ಟಿಗಳಿಗೆಲ್ಲ ಹೇಳಿಮಾಡಿಸಿದಂಥ ಡ್ರೆಸ್ ಇದು.
– ನಿತ್ತಿಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು