ವಿದೇಶಾಂಗ ವ್ಯವಹಾರ: ರಷ್ಯದ ಭಿಡೆ, ಭಾರತದ ನಿರ್ಭಿಡೆ


Team Udayavani, Feb 1, 2017, 3:30 AM IST

Indo-Russia-31-1.jpg

ಈಚೆಗೆ ನಿಧನರಾದ ಅಲೆಗ್ಸಾಂಡರ್‌ ಕದಾಕಿನ್‌ ಭಾರತದಲ್ಲಿ ರಶ್ಯದ ರಾಯಭಾರಿಯಷ್ಟಕ್ಕೆ ಸೀಮಿತರಾಗಿದ್ದವರಲ್ಲ. ಅವರು ಭಾರತ ಪ್ರಾಮಾಣಿಕ ಗೆಳೆಯರಾಗಿದ್ದರು. ಅವರ ಭಾರತ ಪ್ರೀತಿಗೆ ಅನುಗುಣವಾಗಿ ರಶ್ಯ ಸರಕಾರವೂ ಅವರನ್ನು ವಿದೇಶ ಖಾತೆಯ ವಿವಿಧ ಪದಾಧಿಕಾರಗಳೊಂದಿಗೆ ಭಾರತದಲ್ಲಿಯೇ ಉಳಿಸಿಕೊಂಡಿತ್ತು. ವಿದೇಶ ಸಚಿವರಾಗಿದ್ದ ಎಸ್‌. ಎಂ. ಕೃಷ್ಣ ಅವರನ್ನು ಭಾರತ ಸರಕಾರ ಹೇಗೆ ನಡೆಸಿಕೊಂಡಿತು ಅನ್ನುವುದು ಬೇಡವೆಂದರೂ ಈ ಕ್ಷಣ ನೆನಪಾಗುತ್ತದೆ.

ಹೊರರಾಷ್ಟ್ರಗಳಿಂದ ಅನೇಕ ರಾಯಭಾರಿಗಳು ಹೊಸದಿಲ್ಲಿಗೆ ನೇಮಕಗೊಂಡು ಬಂದಿದ್ದಾರೆ, ಸೇವಾವಧಿ ಮುಗಿಸಿ ಹೋಗಿದ್ದಾರೆ. ಆದರೆ ನೆನಪಿನಲ್ಲಿ ಉಳಿದಿರುವವರು ಕೆಲವರಷ್ಟೆ. ಇಂಥವರಲ್ಲಿ ನಮ್ಮ ಗಣರಾಜೋತ್ಸವದ ಹಿಂದಿನ ದಿನ ನಿಧನ ಹೊಂದಿದ ರಶ್ಯನ್‌ ರಾಯಭಾರಿ ಅಲೆಗ್ಸಾಂಡರ್‌ ಕದಾಕಿನ್‌ ಒಬ್ಬರು. ನಮ್ಮ ದೇಶದಲ್ಲಿ ಸೇವೆ ಸಲ್ಲಿಸಿದ ವಿದೇಶೀ ರಾಯಭಾರಿಗಳಲ್ಲಿ ಬಹುಶಃ ಅಲೆಗ್ಸಾಂಡಡರ್‌ ಕದಾಕಿನ್‌ ಹೆಚ್ಚು ಸುಪರಿಚಿತರು. ದಿಲ್ಲಿಯಲ್ಲಿ ಸೇವೆ ಸಲ್ಲಿಸಿದ ಅಮೆರಿಕದ ಜಾನ್‌ ಕೆನೆತ್‌ ಗಾಲ್‌ಬ್ರೇತ್‌ ಮತ್ತು ಚೆಸ್ಟರ್‌ ಬೊವೆಲ್ಸ್‌ರಂಥ, ಹಾಗೆಯೇ ಬ್ರಿಟನಿನ ಮ್ಯಾಲ್ಕಂ ಮೆಕ್‌ಡೊನಾಲ್ಡ್‌ ಹಾಗೂ ಆಫಾ ಹಿಲಾಲಿ, ಎ.ಕೆ. ಬ್ರೋಹಿಯಂಥ ಪ್ರಖ್ಯಾತರ ಸಾಲಿನಲ್ಲಿ ನಿಲ್ಲಬೇಕಾದವರು. ಗಾಲ್‌ಬ್ರೇತ್‌ ಪ್ರಸಿದ್ಧ ಅರ್ಥಶಾಸ್ತ್ರಜ್ಞರಾಗಿದ್ದು, 1962ರ ಚೀನದ ಆಕ್ರಮಣದ ಸಂದರ್ಭದಲ್ಲಿ ನಮಗೆ ನೆರವೀಯುವಂತೆ ಅಧ್ಯಕ್ಷ ಜೆ.ಕೆ. ಕೆನಡಿಯವರ ಮನವೊಲಿಸಿದ್ದಕ್ಕಾಗಿ ನಮ್ಮ ನೆನಪಿನಲ್ಲಿ ಉಳಿದಿರುವವರು. ಮೆಕ್‌ಡೊನಾಲ್ಡ್‌ ಅವರು ಇಂಗ್ಲೆಂಡಿನ ಮಾಜಿ ಪ್ರಧಾನಿ ರಾಮೆÕ ಮೆಕ್‌ಡೊನಾಲ್ಡ್‌ ಅವರ ಪುತ್ರ. ಆಫಾ ಹಿಲಾಲಿ ಐಸಿಎಸ್‌ ಸೇವೆಯಲ್ಲಿದ್ದ ಬೆಂಗಳೂರಿಗರು; ನಮ್ಮ ದಿವಾನರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಸೋದರನ ಪುತ್ರ. ಬ್ರೋಹಿಯವರು ಕರಾಚಿಯ ಸುಪ್ರಸಿದ್ಧ ನ್ಯಾಯವಾದಿಯಾಗಿದ್ದವರು.

ಆದರೆ ಕದಾಕಿನ್‌ ಮೇಲೆ ಹೇಳಿದವರಿಗಿಂತ ಭಿನ್ನವಾಗಿ ಕಾಣಿಸುವುದಕ್ಕೆ ಕಾರಣ, ಅವರು ಭಾರತದ ಪ್ರಾಮಾಣಿಕ ಗೆಳೆಯರಾಗಿದ್ದುದು. ಹೆಚ್ಚೇನು, 2004ರಲ್ಲಿ ರಾಯಭಾರಿ ಹುದ್ದೆಯಿಂದ ನಿವೃತ್ತಿ ಪಡೆದ ಮೇಲೆ ಅವರು ಹೊಸದಿಲ್ಲಿಯನ್ನೇ ತಮ್ಮ ನಿವಾಸ ಸ್ಥಳವಾಗಿಸಿಕೊಂಡಿದ್ದರು. ಬಹು ದೀರ್ಘ‌ಕಾಲ ರಾಜತಾಂತ್ರಿಕ ಹುದ್ದೆಯನ್ನು ನಿರ್ವಹಿಸಿರುವವರೆಂಬ ಹೆಗ್ಗಳಿಕೆ ಅವರದು (1971ರಿಂದ 2004). ಹಿಂದಿ ಭಾಷೆಯ ಮೇಲೆ ಅದ್ಭುತ ಪ್ರಭುತ್ವವಿದ್ದ ಅವರು ಭಾರತವನ್ನು ತಮ್ಮ ಕರ್ಮಭೂಮಿ, ಜ್ಞಾನ ಭೂಮಿ ಹಾಗೂ ಪ್ರೇಮ ಭೂಮಿಯಾಗಿಸಿಕೊಂಡಿದ್ದರು. ಭೂತಪೂರ್ವ ಸೋವಿಯತ್‌ ಒಕ್ಕೂಟ ಹಾಗೂ ಆ ಬಳಿಕ ರೂಪುಗೊಂಡ ರಶ್ಯನ್‌ ಸರಕಾರ ಭಾರತದೊಂದಿಗೆ ಹೊಂದಿದ್ದ ಗೆಳೆತನದ ಮೌಲ್ಯಕ್ಕೆ ಅವರು ಸಲ್ಲಿಸಿದ್ದ ಅದ್ಭುತ ಕೊಡುಗೆಯಾಗಿತ್ತು ಈ ನಿಲುವು. ಹಿಂದಿನ ಹಾಗೂ ಈಗಿನ (ಸೋವಿಯತ್‌ ಹಾಗೂ ರಶ್ಯಾ) ಸರಕಾರಗಳೆರಡೂ ಕದಾಕಿನ್‌ ಅವರಿಗೆ ವಿವಿಧ ಪದಾಧಿಕಾರಗಳನ್ನಿತ್ತು ಭಾರತದಲ್ಲೇ ಇರಿಸಿಕೊಂಡಿದ್ದವು. ಭಾರತವನ್ನೇ ತಮ್ಮ ಮನೆಯನ್ನಾಗಿಸಿಕೊಂಡ ಸುಪ್ರಸಿದ್ಧ ವರ್ಣಚಿತ್ರ ಕಲಾವಿದರಾದ ನಿಕೊಲಾಯ್‌ ರೋರಿಚ್‌ ಮತ್ತವರ ಪುತ್ರ ಸ್ವೆತಸ್ಲಾವ್‌ರಂಥ ರಶ್ಯನ್‌ ಮೂಲದ ಮಹನೀಯರಲ್ಲಿ ಕದಾಕಿನ್‌ ಅವರೂ ಒಬ್ಬರಾಗಿದ್ದರು. ರೋರಿಚ್‌ ಮತ್ತವರ ಪತ್ನಿ ದೇವಿಕಾರಾಣಿ ಹಾಗೂ ಸ್ವೆತಸ್ಲಾವ್‌ ಇವರುಗಳ ಆಸ್ತಿಪಾಸ್ತಿ ಹಾಗೂ ಕಲಾಕೃತಿಗಳ ಮೇಲ್ವಿಚಾರಣೆ ಮಾಡುವುದಕ್ಕಾಗಿ ಅಲೆಗ್ಸಾಂಡಡರ್‌ ಕದಾಕಿನ್‌ ಆಗಾಗ ಬೆಂಗಳೂರಿಗೆ ಭೇಟಿ ನೀಡುತ್ತಿದ್ದರು. 

ಕದಾಕಿನ್‌ ಆಸ್ಥೆ ಮತ್ತು ಎಸ್‌.ಎಂ. ಕೃಷ್ಣರ ಅವಸ್ಥೆ
ರಶ್ಯ ಸರಕಾರ ಕದಾಕಿನ್‌ ಅವರನ್ನು ನಡೆಸಿಕೊಂಡ ವಿಧಾನವನ್ನು ಭಾರತ ತನ್ನ ವಿದೇಶ ನೀತಿಯನ್ನು ನಿಭಾಯಿಸುವ ವಿಧಾನದೊಂದಿಗೆ ಹೋಲಿಸುವುದು ಪ್ರಸ್ತುತವೆನ್ನಿಸುತ್ತದೆ. ಕಳೆದ ರವಿವಾರ ಎಸ್‌.ಎಂ. ಕೃಷ್ಣ ಅವರು ಕಾಂಗ್ರೆಸ್‌ನಿಂದ ನಿರ್ಗಮಿಸುವ ಬಗೆಗಿನ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತ ಹೇಳಿದ ಮಾತನ್ನು ಗಮನಿಸಿ. 2012ರಲ್ಲಿ ತಮ್ಮನ್ನು ವಿದೇಶಾಂಗ ಖಾತೆಯ ಸಚಿವ ಹುದ್ದೆಯಿಂದ ತೆಗೆದು ಹಾಕಿದ್ದೇಕೆ ಎಂಬುದು ತಮಗಿನ್ನೂ ತಿಳಿದಿಲ್ಲ ಎಂಬುದಾಗಿತ್ತು ಅವರ ಹೇಳಿಕೆ. ಆಮೇಲೆ ಈ ಹುದ್ದೆಗೆ ಬಂದ ಸಲ್ಮಾನ್‌ ಖುರ್ಷಿದ್‌ ಸಾಧಿಸಿದ್ದೇನು ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು. ವಿಶ್ವ ಸಂಸ್ಥೆಯ ಸಮಾವೇಶದಲ್ಲಿ ಪೋರ್ಚುಗೀಸ್‌ ರಾಯಭಾರಿಗಾಗಿ ಸಿದ್ಧಪಡಿಸಲಾಗಿದ್ದ ಭಾಷಣವನ್ನು ಕೃಷ್ಣ ಅವರು (ಕೆಲಹೊತ್ತು) ಓದುವ ಮೂಲಕ ಪ್ರಮಾದವೆಸಗಿದ್ದರೆಂದು ದಿಲ್ಲಿಯಲ್ಲಿ ಎಐಸಿಸಿ ವಕ್ತಾರ ಅಜಯ್‌ ಮಾಕೆನ್‌ ಅವರು ನೀಡಿರುವ ಹೇಳಿಕೆ ತೀರಾ ತಮಾಶೆಯದ್ದು. ವಿದೇಶಾಂಗ ಸಚಿವಾಲಯದಲ್ಲಿ ಅಧಿಕಾರಿ ವರ್ಗದ್ದೇ ಮೇಲುಗೈಯಾಗಿದೆ. ಈ ಅಧಿಕಾರಿ ವರ್ಗದ ತೆರೆಮರೆಯ ಆಟಕ್ಕೆ ಎಸ್‌.ಎಂ. ಕೃಷ್ಣ ಬಲಿಪಶುವಾಗಿರುವ ಸಾಧ್ಯತೆಯಿದೆ. ಮೇಲೆ ಹೇಳಿದ ದಕ್ಷಿಣದ ರಾಜ್ಯ ವಿದೇಶಾಂಗ ಖಾತೆಗೆ ಕಿರಿಯ ಅಧಿಕಾರಿಗಳನ್ನು ಪೂರೈಕೆ ಮಾಡುವ ಸಂಪ್ರದಾಯ ಅಬಾಧಿತವಾಗಿ ಚಾಲ್ತಿಯಲ್ಲಿದೆ. ರಾಜ್ಯದಿಂದ ಬಂದ ಒಂದು ನಿರ್ದಿಷ್ಟ ವರ್ಗದ ಮಂದಿ ಆ ಖಾತೆಯಲ್ಲಿ ಉನ್ನತ ಸ್ಥಾನಗಳಿಗೆ ಏರಿ ಕುಳಿತಿದ್ದಾರೆ. ಮೂವರೋ ನಾಲ್ವರೋ ಐಎಫ್ಎಸ್‌ ಅಧಿಕಾರಿಗಳನ್ನು ಬಿಟ್ಟರೆ, ಕರ್ನಾಟಕದಿಂದ ರಾಯಭಾರಿಗಳಾಗಿ ನೇಮಿತರಾಗಿರುವವರು ಕೆಲವೇ ಕೆಲವರಷ್ಟೆ ಎಂಬ ಮಾತಿನಲ್ಲಿ ಹೇಳಲೇಬೇಕಾಗಿದೆ. ವಿದೇಶಾಂಗ ಖಾತೆ ಸಚಿವರಾಗಿ ಸೇವೆ ಸಲ್ಲಿಸಿರುವ ಕನ್ನಡಿಗ ಎಸ್‌.ಎಂ. ಕೃಷ್ಣ ಒಬ್ಬರೇ. ಇದಕ್ಕೆ ವ್ಯತಿರಿಕ್ತವಾಗಿ ನೆರೆಯ ಪಾಕಿಸ್ಥಾನದಲ್ಲಿ ಎರಡು ಸರಕಾರಗಳ ಅವಧಿಯಲ್ಲಿ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ ರಾಜಕಾರಣಿಯೊಬ್ಬರು ಆಗಿ ಹೋಗಿದ್ದಾರೆ. ಅವರೇ ಯಾಕೂಬ್‌ ಅಲಿಖಾನ್‌. ಖಾನ್‌ ಅವರನ್ನು ವಿದೇಶ ಸಚಿವರಾಗಿ ನೇಮಿಸಿದ್ದು ಅಲ್ಲಿನ ರಾಷ್ಟ್ರಾಧ್ಯಕ್ಷ ಜಿಯಾ ಉಲ್‌ ಹಕ್‌. ಮುಂದೆ ಅಧಿಕಾರಕ್ಕೆ ಬಂದ ಬೆನಜೀರ್‌ ಭುಟ್ಟೋ ಯಾಕೂಬ್‌ ಅವರನ್ನೇ ವಿದೇಶಾಂಗ ಸಚಿವರನ್ನಾಗಿ ಉಳಿಸಿಕೊಂಡರು. ಅದೇ ನಮ್ಮಲ್ಲಿ ಕಾಂಗ್ರೆಸ್‌ ಸರಕಾರ ಯಾವ ಕಾರಣವನ್ನೂ ನೀಡದೆ ಕೃಷ್ಣ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಸಲ್ಮಾನ್‌ ಖುರ್ಷಿದ್‌ ಅವರನ್ನು ನೇಮಿಸಿತು. ಇದರ ಹಿಂದೆ ಕಾರಣಗಳಿರಬಹುದಾದರೂ ವಿರೋಧ ಪಕ್ಷಗಳು ಕೂಡ ಈ ವಿಷಯವನ್ನು ಮುಂಚೂಣಿಗೆ ತಂದು ದೇಶದೆದುರು ವಸ್ತುಸ್ಥಿತಿ ವಿವರಿಸುವಲ್ಲಿ ವಿಫ‌ಲವಾದವು.

ಇತಿಹಾಸದತ್ತ ಹೊರಳಿ ನೋಡಿದರೆ ಕುತೂಹಲಕಾರಿ ಸಂಗತಿಯೊಂದು ನಮ್ಮ ಗಮನ ಸೆಳೆಯುತ್ತದೆ – ಅದೆಂದರೆ, ನಮ್ಮ ದೇಶಕ್ಕೆ ವಿದೇಶಾಂಗ ರಾಯಭಾರಿಯಾಗಿ ಒಬ್ಬರನ್ನು ನೇಮಕ ಮಾಡುವಂತೆ ನಮ್ಮ ಪ್ರಧಾನಿಯವರೇ ಆ ರಾಷ್ಟ್ರವನ್ನು ವಿನಂತಿಸಿದ್ದು! 1948ರಲ್ಲಿ ಜವಾಹರಲಾಲ್‌ ನೆಹರೂ ಅವರು ಸರ್‌ ಆರ್ಕಿಬಾಲ್ಡ್‌ನ್ನೇ ಅವರನ್ನು ಭಾರತಕ್ಕೆ ಹೈ ಕಮಿಶನರ್‌ ಆಗಿ ನೇಮಿಸುವಂತೆ ಕ್ಲೆಮೆಂಟ್‌ ಅಟ್ಲೀ ಅವರ ನೇತೃತ್ವದ ಬ್ರಿಟಿಷ್‌ ಸರಕಾರವನ್ನು ಕೋರಿಕೊಂಡಿದ್ದರು. ಆರ್ಕಿಬಾಲ್ಡ್‌ ಅವರು ಮದ್ರಾಸ್‌ ರಾಜ್ಯದ ರಾಜ್ಯಪಾಲ ಹುದ್ದೆಯಿಂದ ಆಗ ತಾನೇ ಕೆಳಗಿಳಿದಿದ್ದರು. ಆರ್ಕಿಬಾಲ್ಡ್‌ ಭಾರತ ಹಾಗೂ ಅದರ ನೀತಿಗಳನ್ನು ಟೀಕಿಸುವ ಮನೋಭಾವ ಹೊಂದಿದ್ದರೂ ನೆಹರೂ ಈ ರೀತಿ ನಡೆದುಕೊಂಡರು. ಹೈಕೋರ್ಟ್‌ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಭಾರತ ಸರಕಾರದ ಹೊಸ ನೀತಿಯನ್ನು ಪ್ರಶ್ನಿಸಿದ್ದ ಮದ್ರಾಸ್‌ ಹೈಕೋರ್ಟಿನ ನ್ಯಾಯಾಧೀಶ ಸರ್‌ ಫ್ರೆಡರಿಕ್‌ ಜೆಂಟ್ಲ ಅವರನ್ನು ಆರ್ಕಿಬಾಲ್ಡ್‌ ಬೆಂಬಲಿಸಿದ್ದರು; ಈ ವಿಷಯದಲ್ಲಿ ಕೇಂದ್ರದ ಗೃಹ ಸಚಿವಾಲಯದ ಅಭಿಪ್ರಾಯ ಪ್ರಕಟಿಸುವುದಕ್ಕೆ ಅವರ ವಿರೋಧವಿತ್ತು. ಹೆಚ್ಚೇನು, ಬ್ರಿಟಿಷ್‌ ಕಾಮನ್‌ವೆಲ್ತ್‌ ಒಕ್ಕೂಟಕ್ಕೆ ಭಾರತದ ಸೇರ್ಪಡೆಯ ಪ್ರಸ್ತಾವಕ್ಕೂ ಅವರ ವಿರೋಧವಿತ್ತು. ಆದರೆ ಪಂಡಿತ್‌ ನೆಹರೂ ಇದನ್ನೆಲ್ಲ ಲೆಕ್ಕಿಸದೆ ತಮ್ಮದೇ ಹಾದಿಯಲ್ಲಿ ನಡೆದರು!

ಮರವೆಗೆ ಸಂದಿರುವ ಆರ್ಥರ್‌ ಎಸ್‌. ಲಾಲ್‌ ರಾಯಭಾರಿಗಳ ಪ್ರಸಕ್ತಿ ಬಂದಾಗ, ದುರದೃಷ್ಟವಶಾತ್‌ ನಾವೆಲ್ಲರೂ ಇಂದು ಬಹುತೇಕ ಮರೆತೇಬಿಟ್ಟಿರುವ ತಮ್ಮ ಕಾಲದಲ್ಲಿ ಸುಪರಿಚಿತರಾಗಿದ್ದ ರಾಯಭಾರಿಯೊಬ್ಬರ ಉಲ್ಲೇಖ ಮಾಡಲೇಬೇಕು. ಅವರೇ, ಆರ್ಥರ್‌ ಸಾಮ್ಯುವೆಲ್‌ ಲಾಲ್‌. ಲಾಹೋರ್‌ ಮೂಲದವರಾದ ಲಾಲ್‌, ಐಪಿಎಸ್‌ಗೆ ಸೇರ್ಪಡೆಗೊಂಡು ವಿದೇಶಾಂಗ ಸೇವೆಯನ್ನು ಆಯ್ದುಕೊಂಡರು. ನಾಗರಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡಬಯಸುವ ಅಭ್ಯರ್ಥಿಗಳನ್ನು ವಿದೇಶಾಂಗ ಸೇವೆ ಆಕರ್ಷಿಸುತ್ತಿದ್ದ ದಿನಗಳಾಗಿದ್ದವು ಅವು. ವಿಶ್ವಸಂಸ್ಥೆಯ ಆರಂಭಿಕ ಕಾರ್ಯನಿರ್ವಹಣೆಯ ವರ್ಷಗಳಲ್ಲಿ ನಮ್ಮ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಲಾಲ್‌, ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣವನ್ನು ವಿರೋಧಿಸುತ್ತಿದ್ದವರು; ತಮ್ಮೀ ನಿಲುವಿನಿಂದಾಗಿಯೇ ಪ್ರಸಿದ್ಧರಾದವರು. ವರ್ಷಗಟ್ಟಲೆ ನಡೆದ ನಿಶ್ಶಸ್ತ್ರೀಕರಣ ಸಮಾವೇಶಗಳಲ್ಲಿ ಅವರು ನಮ್ಮ ರಾಯಭಾರಿಯಾಗಿ ಪಾಲ್ಗೊಂಡವರು. ಕಮ್ಯುನಿಸ್ಟ್‌ ರಶ್ಯಾಪರ ನಿಲುವಿನ ಭಾರತದ ರಕ್ಷಣಾ ಸಚಿವರಾಗಿದ್ದ ವಿ.ಕೆ. ಕೃಷ್ಣ ಮೆನೋನ್‌ ಅವರ ಹೇಳಿಕೆಗಳಿಂದ ಅಮೆರಿಕದೊಂದಿಗಿನ ನಮ್ಮ ಸಂಬಂಧಕ್ಕೆ ಆದ ಹಾನಿಯನ್ನು ನಿವಾರಿಸಲು ಲಾಲ್‌ ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದ್ದರು. ಕಾಶ್ಮೀರ ಸಮಸ್ಯೆ ಇಂದಿಗಿಂತಲೂ ಹೆಚ್ಚು ‘ಬಿಸಿ’ಯಾಗಿದ್ದ ವರ್ಷಗಳಲ್ಲಿ, ವಿಶ್ವ ಸಂಸ್ಥೆಗೆ ತೆರಳುತ್ತಿದ್ದ ಭಾರತೀಯ ನಿಯೋಗದ ನೇತೃತ್ವ ವಹಿಸುತ್ತಿದ್ದವರು ಮೆನೋನ್‌ ಅವರೇ. ಇನ್ನು, ಆರ್ಥರ್‌ ಲಾಲ್‌ ಇಂದು ಮರವೆಗೆ ಸಂದಿರುವುದಕ್ಕೆ ಒಂದು ಕಾರಣ ಹೀಗಿರಬಹುದು. ಅವರು ತಮ್ಮ ನಿವೃತ್ತಿಯ ಬಳಿಕ ನೆಲೆಸಿದ್ದು ನ್ಯೂಯಾರ್ಕಿನಲ್ಲಿ.

ರಶ್ಯದ ಜತೆಗಿನ ಭಾರತದ ಸಂಬಂಧ ಇಂದು ಹಿಂದೆಂದಿಗಿಂತ ಭಿನ್ನವಾಗಿದೆ; ಎಂದೇ ಅಲೆಗ್ಸಾಂಡರ್‌ ಕದಾಕಿನ್‌ ಅವರ ನಿಧನದ ಪರಿಣಾಮ ನಮ್ಮ ಮೇಲೆ ಹೆಚ್ಚು ಗಾಢ ಹಾಗೂ ತೀವ್ರವಾಗಿ ಉಂಟಾಗಲಿದೆ. ಈಗಾಗಲೇ ಪಾಕಿಸ್ಥಾನ, ರಶ್ಯನ್‌ ಸಶಸ್ತ್ರ ಪಡೆಗಳೊಂದಿಗೆ ಜಂಟಿ ಮಿಲಿಟರಿ ಕವಾಯತುಗಳನ್ನು ನಡೆಸುವಲ್ಲಿ ಹೇಗೆ ಯಶಸ್ವಿಯಾಗಿದೆ ನೋಡಿ.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.