ದಂಗು ಪಡಿಸುವ ದಂಗಲ್‌ ನಟಿ

Team Udayavani, Feb 17, 2017, 3:45 AM IST

Zaira.jpg

ನಟಿಸಿದ ಒಂದೇ ಒಂದು ಚಿತ್ರದಿಂದಾಗಿ ರಾತ್ರಿ ಬೆಳಗಾಗುವುದರೊಳಗೆ ಜನಪ್ರಿಯರಾಗುವವರನ್ನು ಒನ್‌ ಫಿಲ್ಮ್ ವಂಡರ್‌ ಎಂದೆನ್ನುತ್ತಾರೆ. ಈ ಮಾತಿಗೆ ತಾಜಾ ಉದಾಹರಣೆಯೆಂದರೆ ಜೈರಾ ವಾಸಿಮ್‌. ದಂಗಲ್‌ ಚಿತ್ರದಲ್ಲಿ ಅಮೀರ್‌ ಖಾನ್‌ ಮಗಳಾಗಿ ನಟಿಸಿದ ಜೈರಾ ಈಗ ಇಡೀ ದೇಶದಲ್ಲಿ ಭಾರೀ ಜನಪ್ರಿಯ ತಾರೆ. ಹಾಗೆಂದು ಇದು ದಂಗಲ್‌ ನಲ್ಲಿ ಅವಳ ಅಮೋಘ ನಟನೆಗೆ ಸಂದ ಮನ್ನಣೆಯಲ್ಲ. ಜೈರಾ ಜನಪ್ರಿಯಳಾಗಿರುವುದು ವಿವಾದಗಳಿಂದ. 

ಇನ್ನೂ 16ರ ಹರೆಯದ ಜೈರಾ ಕಾಶ್ಮೀರದವಳು. ಕಾಶ್ಮೀರ ಸೇಬಿನಷ್ಟೇ ಸುಂದರವಾಗಿರುವ ಮುಗ್ಧ ಚೆಲುವೆ. ದಂಗಲ್‌ ನಲ್ಲಿ ಜೈರಾ ನಿರ್ವಹಿಸಿದ ಕಿರಿಯ ಗೀತಾ ಫೋಗಟ್‌ ಪಾತ್ರ ಅಷ್ಟೇನೂ ಗಮನ ಸೆಳೆಯುವಂಥದ್ದಾಗಿರಲಿಲ್ಲ. ಗೀತಾ ಫೋಗಟ್‌ ಬಾಲ್ಯದ ಪಾತ್ರಕ್ಕಷ್ಟೇ ಜೈರಾಳ ಉಪಸ್ಥಿತಿ ಸೀಮಿತವಾಗಿತ್ತು. ತನ್ನ ಮಂತ್ರಮುಗ್ಧಗೊಳಿಸುವ ಸ್ನಿಗ್ಧ ಚೆಲುವಿನಿಂದ ಗಮನ ಸೆಳೆದ ಜೈರಾಳಿಗೆ ಮಾಧ್ಯಮಗಳು ತುಸು ಹೆಚ್ಚಿಗೆ ಪ್ರಚಾರ ನೀಡಿದವು. ಇದರಿಂದಾಗಿ ಜೈರಾ ಗಮನ ಸೆಳೆದಳು. ಸಮಸ್ಯೆಗಳು ಪ್ರಾರಂಭವಾದದ್ದೇ ಆ ಬಳಿಕ. ದಂಗಲ್‌ ನಟಿ ಎಂದು ಗುರುತಿಸಲ್ಪಟ್ಟ ಬಳಿಕ ಜೈರಾ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯನ್ನು ಭೇಟಿ ಮಾಡಿದಳು. ಇದು ಕಾಶ್ಮೀರದ ಕೆಲವು ಮೂಲಭೂತವಾದಿಗಳ ಆಕ್ರೋಶಕ್ಕೆ ಗುರಿಯಾಯಿತು. ಮರುದಿನ ಜೈರಾ ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿ ಬಹಿರಂಗ ಪತ್ರವೊಂದನ್ನು ಪೋಸ್ಟ್‌ ಮಾಡಿದಳು. 

ಆ ಬಳಿಕ ನಡೆದ ಘಟನಾವಳಿಗಳೆಲ್ಲ ಜೈರಾಳ ನಿಯಂತ್ರಣದಾಚೆಗಿದ್ದವು. ಹಠಾತ್‌ ಆಗಿ ಸಿನೆಮಾ ಲೋಕದಿಂದ ಆಕೆ ರಾಜಕೀಯ ಲೋಕಕ್ಕೆ ಎತ್ತಂಗಡಿಯಾದಳು. ಜೈರಾಳನ್ನು ಸಮರ್ಥಿಸಿ ಮತ್ತು ವಿರೋಧಿಸಿ ರಾಜಕೀಯ ಪಕ್ಷಗಳು ಹೇಳಿಕೆಗಳ ಸುರಿಮಳೆಗರೆದುವು. ನೋಡನೋಡುತ್ತಿದ್ದಂತೆ ಜೈರಾ ದೇಶದ ಅತಿ ದೊಡ್ಡ ಸಮಸ್ಯೆ ಎಂಬಂತೆ ಚರ್ಚೆಗೊಳಗಾದಳು. ಕೆಲವು ದಿನ ಮಾಧ್ಯಮಗಳಲ್ಲಿ ಜೈರಾಳದ್ದೇ ಸುದ್ದಿ. ಆಕೆಯ ಎಳೆಯ ಮನಸ್ಸು ಈ ಕಚ್ಚಾಟವನ್ನು ನೋಡಿ ಆಘಾತಕ್ಕೊಳಗಾಗಿರಬಹುದು. 

ಇದೀಗ ಎಲ್ಲ ವಿವಾದಗಳು ತಣ್ಣಗಾಗಿವೆ. ಜೈರಾ ಹೊಸ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾಳೆ. ಇದೀಗ ಜೈರಾಳ ಕುರಿತು ನಿಜವಾದ ಚರ್ಚೆ ಶುರುವಾಗಿದೆ. ಆಕೆಯ ತಂದೆ ಬ್ಯಾಂಕ್‌ ಅಧಿಕಾರಿ. ತೀರಾ ಸಂಪ್ರದಾಯಸ್ಥ ಕುಟುಂಬದಲ್ಲಿ ಅದೂ ಕಾಶ್ಮೀರದಲ್ಲಿ ಹುಟ್ಟಿದ ಜೈರಾ ಸಿನೆಮಾ ರಂಗಕ್ಕೆ ಬಂದದ್ದೇ ಒಂದು ವಿಚಿತ್ರ. ಬಾಲನಟಿಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಜೈರಾ ಅದನ್ನೇ ಸೋಪಾನವಾಗಿ ಮಾಡಿಕೊಂಡು ಹಿರಿತೆರೆಗೆ ದೊಡ್ಡದಾಗಿ ಕಾಲಿಟ್ಟಿದ್ದಾಳೆ. ಮೊದಲ ಯತ್ನದಲ್ಲೇ ಅಮೀರ್‌ ಖಾನ್‌ ಜತೆಗೆ ನಟಿಸುವ ಅದೃಷ್ಟವೂ ಸಿಕ್ಕಿದೆ.  ರೂಪ ಲಾವಣ್ಯದಲ್ಲಿ ಸಾಟಿಯಿಲ್ಲ. ಪ್ರತಿಭೆಯೂ ಇದೆ ಎಂದು ಮೊದಲ ಚಿತ್ರದಲ್ಲೇ ಸಾಬೀತುಪಡಿಸಿದ್ದಾಳೆ. ಅವಕಾಶ ಸಿಕ್ಕಿದರೆ ಉತ್ತಮ ನಟಿಯಾಗುವ ಎಲ್ಲ ಅರ್ಹತೆಯನ್ನು ಹೊಂದಿದ್ದಾಳೆ. 

ಟಾಪ್ ನ್ಯೂಸ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.