ಹೊಸ ಹರಿ ಕಥೆ! ಕತ್ತಲ ರಾತ್ರಿಗಳು; ನಾಲ್ಕೇ ಪಾತ್ರಗಳು

Team Udayavani, Mar 10, 2017, 3:45 AM IST

harikate.jpg

ಅದೊಂದು ದಿನ ನಿರ್ದೇಶಕ ಪವನ್‌ ಒಡೆಯರ್‌ಗೆ ಒಬ್ಬ ಹುಡುಗ ಬಂದು “ಎವಿಲ್‌ ಡೆಡ್‌’ ಎಂಬ ಕಿರುಚಿತ್ರವೊಂದನ್ನು ತೋರಿಸುತ್ತಾರೆ. ಹಾರರ್‌ ಜಾನರ್‌ನಲ್ಲಿದ್ದ ಆ ಕಿರುಚಿತ್ರ ನೋಡಿ ಪವನ್‌ ಒಡೆಯರ್‌ಗೆ ಥ್ರಿಲ್‌ ಆಗುತ್ತಾರೆ. ಈ ಹುಡುಗನಲ್ಲಿ ಟ್ಯಾಲೆಂಟ್‌ ಇದೆ, ಮುಂದೊಂದು ದಿನ ಬಳಸಿಕೊಳ್ಳಬಹುದು ಎಂದು ಮನಸ್ಸನಲ್ಲಿ ಅಂದುಕೊಂಡು ಹುಡುಗನನ್ನು ಕಳುಹಿಸಿಕೊಡುತ್ತಾರೆ. ಕಟ್‌ ಮಾಡಿದರೆ, ನಿರ್ಮಾಪಕರಿಬ್ಬರು ಬಂದು ನಿಮ್ಮ ಜೊತೆ ಒಂದು ಸಿನಿಮಾ ಮಾಡಬೇಕೆಂದು ಪವನ್‌ ಅವರನ್ನು ಕೇಳಿಕೊಳ್ಳುತ್ತಾರೆ. ಪವನ್‌ ಬೇರೆ ಸಿನಿಮಾದಲ್ಲಿ ಕಮಿಟ್‌ ಆಗಿದ್ದ ಕಾರಣ ಅವರಿಗೆ ತಟ್ಟನೆ ನೆನಪಿಗೆ ಬಂದಿದ್ದು “ಎವಿಲ್‌ ಡೆಡ್‌’ ಹುಡುಗ. ತಟ್ಟನೆ ಫೋನ್‌ ಹಾಕಿ ಆ ಹುಡುಗನನ್ನು ಕರೆಸಿಕೊಂಡು ನಿರ್ಮಾಪಕರಿಗೆ ಕಥೆ ಹೇಳಿಸುತ್ತಾರೆ. ಆದರೆ, ಆ ಕಥೆ ನಿರ್ಮಾಪಕರ ಬಜೆಟ್‌ಗೆ ಹೊಂದಿಕೆಯಾಗುವುದಿಲ್ಲ. ಅಷ್ಟರಲ್ಲಿ ಆ ಹುಡುಗ “ಸಾರ್‌ 15 ನಿಮಿಷ ಟೈಮ್‌ ಕೊಡಿ, ಇನ್ನೊಂದು ಕಥೆ ಹೇಳುತ್ತೇನೆ’ ಎಂದು ಹೇಳಿ, ಮತ್ತೂಂದು ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆ ಹೇಳುತ್ತಾರೆ. ಕಥೆ ಕೇಳಿ ಎಲ್ಲರೂ ಖುಷ್‌. ಸಿನಿಮಾ ನಿರ್ಮಾಣಕ್ಕೆ ನಿರ್ಮಾಪಕರು ರೆಡಿಯಾಗುತ್ತಾರೆ. ಈಗ ಚಿತ್ರೀಕರಣ ಕೂಡಾ ಮುಗಿದಿದೆ. ಆ ಸಿನಿಮಾ “ಐರಾ’. “ಎವಿಲ್‌ ಡೆಡ್‌’ ಹುಡುಗ ಹರಿಕೃಷ್ಣ. ಸಂಜೀವ್‌ ಕಾಸನೀಸ್‌ ಹಾಗೂ ಹರ್ಷ ಕಾಸನೀಸ್‌, “ಐರಾ’ ಚಿತ್ರದ ನಿರ್ಮಾಪಕರು. ಇತ್ತೀಚೆಗೆ ಚಿತ್ರದ ಮೋಶನ್‌ ಫೋಸ್ಟರ್‌ ಬಿಡುಗಡೆಯಾಗಿದೆ.

“ನಿರ್ದೇಶಕ ಹರಿಕೃಷ್ಣ ಅವರಲ್ಲಿ ತುಂಬಾ ಟ್ಯಾಲೆಂಟ್‌ ಇದೆ. ನಾನು ಅವರ “ಎವಿಲ್‌ ಡೆಡ್‌’ ನೋಡಿ ಖುಷಿಯಾಗಿದ್ದೆ. ಹಾಗಾಗಿ, ಈ ಅವಕಾಶ ಅವರಿಗೆ ಸಿಕ್ಕಿದೆ. ಹೊಸ ಬಗೆಯ ಕಥೆ ಹಾಗೂ ನಿರೂಪಣೆಯನ್ನು ಈ ಸಿನಿಮಾದಲ್ಲಿ ನೋಡಬಹುದು. ನಿರ್ಮಾಪಕರಾದ ಸಂಜೀವ್‌ ಹಾಗೂ ಹರ್ಷ ಅವರು ಹೊಸ ಪ್ರತಿಭೆಗೆ ಅವಕಾಶ ಕೊಟ್ಟಿದ್ದಾರೆ’ ಎಂದು ಹೇಳಿಕೊಂಡರು ಪವನ್‌ ಒಡೆಯರ್‌. ಪವನ್‌ ಒಡೆಯರ್‌ ಈ ಸಿನಿಮಾದ ಲೈನಪ್‌ ಪ್ರೊಡಕ್ಷನ್‌ನಲ್ಲಿದ್ದಾರೆ. ನಿರ್ದೇಶಕ ಹರಿಕೃಷ್ಣ ಹೆಚ್ಚು ಮಾತನಾಡುವ ಗೋಜಿಗೆ ಹೋಗಲಿಲ್ಲ. “ಇದು ನನ್ನ ಮೊದಲ ಸಿನಿಮಾ. ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾವಾಗಿದ್ದು, ನಾಲ್ಕು ಪಾತ್ರಗಳ ಸುತ್ತ ಸುತ್ತಲಿದೆ’ ಎಂದರು. ಅಂದಹಾಗೆ, ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಇಡೀ ಸಿನಿಮಾ ರಾತ್ರಿ ಚಿತ್ರೀಕರಣವಾಗಿರುವುದು. ಚಿತ್ರದ ಕಥೆ ನೈಟ್‌ ಎಫೆಕ್ಟ್‌ನಲ್ಲಿ ನಡೆಯುತ್ತದೆಯಂತೆ. ಚಿತ್ರದಲ್ಲಿ ವಸಿಷ್ಠ, ರಾಜವರ್ಧನ್‌, ಕ್ರಿಷಿ ತಪಂಡ ಹಾಗೂ ಅತುಲ್‌ ಕುಲಕರ್ಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ವಸಿಷ್ಠ ಅವರಿಗೆ ಹಿಂದೊಮ್ಮೆ ಹರಿಕೃಷ್ಣ “ಐರಾ’ ಕಥೆ ಹೇಳಿದ್ದರಂತೆ. ಕಥೆ ಕೇಳಿ ಥ್ರಿಲ್‌ ಆದ ವಸಿಷ್ಠ “ಮಾಡೋಕೆ ರೆಡಿ’ ಎಂದರಂತೆ. ಕಥೆ ಹೇಳಿ ಹೋದ ಹರಿಕೃಷ್ಣ ಅವರ ಪತ್ತೆಯೇ ಇರಲಿಲ್ಲವಂತೆ. ಆ ನಂತರ ಅದೊಂದು ದಿನ ಪವನ್‌ ಒಡೆಯರ್‌ ಫೋನ್‌ ಮಾಡಿ, “ಐರಾ ಎಂಬ ಸಿನಿಮಾದಲ್ಲಿ ನಿಮಗೊಂದು ಪಾತ್ರವಿದೆ. ಮಾಡುತ್ತೀರಾ’ ಎಂದು ಕೇಳಿದರಂತೆ. “ಪವನ್‌ ಹೇಳಿದ ಕೂಡಲೇ ನಾನು ಖುಷಿಯಿಂದ ಒಪ್ಪಿಕೊಂಡೆ. ತುಂಬಾ ಹಸಿವಿರುವ ತಂಡವಿದು.

ತುಂಬಾ ಚೆನ್ನಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ಹರಿಕೃಷ್ಣ’ ಎಂದು ಸಿನಿಮಾ ಬಗ್ಗೆ ಹೇಳಿದರು. ರಾಜವರ್ಧನ್‌ ಇಲ್ಲಿ ನೀಲ್‌ ಅನ್ನೋ ಪಾತ್ರ ಮಾಡಿದ್ದಾರಂತೆ. ಇಂಡಿಯಾ-ಪಾಕಿಸ್ತಾನ ಮ್ಯಾಚ್‌ ನೋಡುವಾಗ ಇರುವಂತಹ ಕುತೂಹಲ ಈ ಸಿನಿಮಾ ನೋಡುವಾಗ ಇರುತ್ತದೆ ಎಂಬುದು ರಾಜವರ್ಧನ್‌ ಮಾತು. ಚಿತ್ರದಲ್ಲಿ ಕ್ರಿಷಿ ತಪಂಡ ನಾಯಕಿಯಾಗಿ ನಟಿಸಿದ್ದು, ಅವರಿಗೂ “ಐರಾ’ ಒಳ್ಳೆಯ ಅನುಭವ ಕೊಟ್ಟಿದೆಯಂತೆ. ನಿರ್ಮಾಪಕರಾದ ಸಂಜೀವ್‌ ಕಾಸನೀಸ್‌ ಹಾಗೂ ಹರ್ಷ ಕಾಸನೀಸ್‌ ಅವರಿಗೆ ಕನ್ನಡದಲ್ಲೊಂದು ಒಳ್ಳೆಯ ಸಿನಿಮಾ ಮಾಡಬೇಕೆಂಬ ಆಸೆ ಇತ್ತಂತೆ. ಅದು ಈ ಸಿನಿಮಾ ಮೂಲಕ ಈಡೇರಿದೆಯಂತೆ. 

– ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Untitled-1

ಪವಿತ್ರಾ – ಚಂದು ಪ್ರೀತಿಯಲ್ಲಿದ್ದರು.. ಆತ ನನ್ನ ಗಂಡ ಎಂದಿದ್ದರಂತೆ ಪವಿತ್ರಾ – ಚಂದು ಪತ್ನಿ

Untitled-1

Bihar: ಕಸ್ಟಡಿಯಲ್ಲಿದ್ದ ಅಪ್ರಾಪ್ತ ವಯಸ್ಕ ಪತ್ನಿ,ಪತಿ ಸಾವು; ಗ್ರಾಮಸ್ಥರಿಂದ ಠಾಣೆ ಧ್ವಂಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

movies

Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

7

ಇನ್‌ಸ್ಪೆಕ್ಟರ್‌ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್‌ ಸೆರೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.