ಮಾವಿನಹಣ್ಣು -ಕೇಶ ಸೌಂದರ್ಯ ವರ್ಧಕ


Team Udayavani, Apr 21, 2017, 3:45 AM IST

IMG-20170417-WA0018.jpg

ಸಮೃದ್ಧ ಪೋಷಕಾಂಶಗಳ ಹಾಗೂ ಜೀವಸಣ್ತೀಗಳ ಆಗರವಾಗಿರುವ ಮಾವಿನಹಣ್ಣು ಬೇಸಿಗೆಯಲ್ಲಿ ವಿಪುಲವಾಗಿ ದೊರೆಯುತ್ತದೆ. ಮಾವಿನಹಣ್ಣನ್ನು ಬಳಸಿ ವಿವಿಧ ರೀತಿಯಲ್ಲಿ ಕೂದಲಿನ ಆರೈಕೆ ಮಾಡಿದರೆ ನೈಸರ್ಗಿಕವಾಗಿಯೇ ಕೂದಲಿನ ಹೊಳಪು, ಸೌಂದರ್ಯ ವೃದ್ಧಿಯಾಗುತ್ತದೆ.

ಅಂತಹ ಕೇಶಸೌಂದರ್ಯ ವರ್ಧಕಗಳ ಕುರಿತಾಗಿ ಈ ಕೆಳಗೆ ತಿಳಿಸಲಾಗಿದೆ.

ಮಾವಿನಹಣ್ಣು -ಬಾದಾಮಿ ತೈಲದ ಹೇರ್‌ಪ್ಯಾಕ್‌
ಚೆನ್ನಾಗಿ ಕಳಿತ ಒಂದು ಮಾವಿನ ಹಣ್ಣಿನ ತಿರುಳನ್ನು ಅರೆದು ಪೇಸ್ಟ್‌ ತಯಾರಿಸಬೇಕು. ಅದಕ್ಕೆ 1/4 ಕಪ್‌ ದಪ್ಪ ಮೊಸರು ಬೆರೆಸಿ, 1 ಚಮಚ ಬಾದಾಮಿ ತೈಲ ಬೆರೆಸಬೇಕು. ಇವೆಲ್ಲವನ್ನು ಚೆನ್ನಾಗಿ ಕಲಕಿ ಪೇಸ್ಟ್‌ ತಯಾರಿಸಿ ಕೂದಲಿಗೆ ಲೇಪಿಸಬೇಕು.

ನಂತರ 20 ನಿಮಿಷಗಳ ಬಳಿಕ ಬೆಚ್ಚಗೆ ನೀರಲ್ಲಿ ಕೂದಲನ್ನು ತೊಳೆದರೆ ಕೂದಲಿನ ಹೊಳಪು, ಮೃದುತ್ವ ವರ್ಧಿಸುತ್ತದೆ. ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

ಮಾವಿನ ಹಣ್ಣು -ಪಪ್ಪಾಯ- ಆಲಿವ್‌ ತೈಲದ ಹೇರ್‌ಪ್ಯಾಕ್‌
ತುಂಬಾ ಒಣಕೂದಲು ಒರಟು ಕೂದಲು ಹಾಗೂ ತೆಳ್ಳಗಿನ ಕೂದಲುಳ್ಳವರಿಗೆ ಈ ಹೇರ್‌ಪ್ಯಾಕ್‌ ಉತ್ತಮ.

1 ಕಪ್‌ ಮಾವಿನ ಹಣ್ಣಿನ ತಿರುಳು, ಅಷ್ಟೇ ಭಾಗ ಚೆನ್ನಾಗಿ ಕಳಿತ ಪಪ್ಪಾಯದ ತಿರುಳು ಎರಡನ್ನೂ ಬೆರೆಸಿ ಅರೆಯಬೇಕು. ತದನಂತರ ಮೂರು ಚಮಚ ಆಲಿವ್‌ತೈಲ ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಕೂದಲಿಗೆ ಚೆನ್ನಾಗಿ ಲೇಪಿಸಿ ಶವರ್‌ಕ್ಯಾಪ್‌ ಹಾಕಬೇಕು. ನಂತರ 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಲ್ಲಿ ತೊಳೆದರೆ ಒಣ ಕೂದಲು ಮೃದು ಹಾಗೂ ಸ್ನಿಗ್ಧವಾಗಿ ಹೊಳೆಯುತ್ತದೆ.

ಮಾವಿನಹಣ್ಣು ಹಾಗೂ ಬೆಣ್ಣೆಹಣ್ಣಿನ ಹೇರ್‌ಪ್ಯಾಕ್‌
ಪೋಷಕಾಂಶಗಳ ಕೊರತೆಯಿಂದ ಹಾಗೂ ತಲೆಹೊಟ್ಟಿನಿಂದ ಕೂದಲು ಉದುರುವವರಿಗೆ ಈ ಹೇರ್‌ಪ್ಯಾಕ್‌ ಉತ್ತಮ.
ವಿಧಾನ: 1 ಕಪ್‌ ಮಾವಿನ ಹಣ್ಣಿನ ತಿರುಳು, 1/2 ಕಪ್‌ ಬೆಣ್ಣೆಹಣ್ಣಿನ ತಿರುಳು ಎರಡನ್ನೂ ಚೆನ್ನಾಗಿ ಬೆರೆಸಿ, ಕಲಕಿ ಪೇಸ್ಟ್‌ ತಯಾರಿಸಬೇಕು. ಇದಕ್ಕೆ 2 ಚಮಚ ಮೆಂತ್ಯ ಪುಡಿ ಬೆರೆಸಿ ಚೆನ್ನಾಗಿ ಮಿಶ್ರಮಾಡಿ ಕೂದಲಿಗೆ ಲೇಪಿಸಿ ಅರ್ಧ ಗಂಟೆಯ ಬಳಿಕ ಬೆಚ್ಚಗಿನ ನೀರಲ್ಲಿ ತೊಳೆದರೆ ತಲೆಹೊಟ್ಟು ಉದುರುವುದು, ಪೋಷಕಾಂಶಗಳ ಕೊರತೆಯಿಂದ ಕೂದಲು ಉದುರುವುದು ನಿವಾರಣೆಯಾಗುತ್ತದೆ.

ತೈಲಯುಕ್ತ  ಕೇಶ ಉಳ್ಳವರಿಗೆ ಮಾವಿನಹಣ್ಣು -ಮೊಟ್ಟೆಯ ಒಳಭಾಗದ ಹೇರ್‌ಪ್ಯಾಕ್‌
ಮಾವಿನ ಹಣ್ಣು ವಿಟಮಿನ್‌ “ಎ’, “ಸಿ’ ಹಾಗೂ ವಿಟಮಿನ್‌ “ಈ’ಗಳಿಂದ ಸಮೃದ್ಧವಾಗಿದೆ. ಮೊಟ್ಟೆಯ ಬಿಳಿಭಾಗ ಪ್ರೊಟೀನ್‌, ಕ್ಯಾಲಿÏಯಂ ಹೊಂದಿದೆ.ಎಣ್ಣೆಯ ಪಸೆ ಅಧಿಕವಿದ್ದು ಅಥವಾ ಜಿಡ್ಡಿನಂಶ ಅಧಿಕವಿರುವ ಕೂದಲುಳ್ಳವರಿಗೆ ಈ ಹೇರ್‌ಪ್ಯಾಕ್‌ ಉತ್ತಮ.

ವಿಧಾನ: ಮಾವಿನ ಹಣ್ಣಿನ ತಿರುಳು 1 ಕಪ್‌, ಮೊಟ್ಟೆಯ ಬಿಳಿಭಾಗ 1/2 ಕಪ್‌, ಕಡಲೆಹಿಟ್ಟು 1 ಚಮಚ, ಹೆಸರುಹಿಟ್ಟು 2 ಚಮಚ- ಇವೆಲ್ಲವುಗಳನ್ನು ಚೆನ್ನಾಗಿ ಬೆರೆಸಿ ಸ್ವಲ್ಪ ಗುಲಾಬಿ ಜಲ ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ತಲೆಕೂದಲಿಗೆ ಚೆನ್ನಾಗಿ ಲೇಪಿಸಿ ಹೇರ್‌ಪ್ಯಾಕ್‌ ಮಾಡಬೇಕು. 1/2 ಗಂಟೆಯ ಬಳಿಕ ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ಕೂದಲನ್ನು ತೊಳೆಯಬೇಕು. ಇದರಿಂದ ಕೂದಲಿನ ಜಿಡ್ಡಿನ ಅಂಶ ನಿವಾರಣೆಯಾಗಿ ಕೂದಲಿನ ಸೌಂದರ್ಯ, ಕಾಂತಿ ವರ್ಧಿಸುತ್ತದೆ.

ರೇಶಿಮೆಯಂತಹ ಕೂದಲಿಗಾಗಿ
ಕೂದಲು ರೇಶಿಮೆಯಂತಹ ನುಣುಪು, ಕಾಂತಿ ಪಡೆದು ಸೊಂಪಾಗಿ ಬೆಳೆಯಲು ಈ ಹೇರ್‌ಪ್ಯಾಕ್‌ ಉಪಯುಕ್ತ.
ವಿಧಾನ: 2 ಕಪ್‌ ಚೆನ್ನಾಗಿ ಕಳಿತ ಮಾವಿನ ಹಣ್ಣಿನ ತಿರುಳು ಹಾಗೂ ಎಳನೀರು 1/2 ಕಪ್‌ ಅರೆದು ತಾಜಾ ಗುಲಾಬಿ ಪಕಳೆಗಳ ಪೇಸ್ಟ್‌ 2 ಚಮಚ ಸೇರಿಸಿ ಎಲ್ಲವನ್ನು ಮಿಶ್ರಮಾಡಿ ಕೂದಲಿಗೆ ಲೇಪಿಸಿ 1/2 ಗಂಟೆಯ ಬಳಿಕ ಸ್ನಾನಮಾಡಿದರೆ ಕೇಶರಾಶಿ ರೇಶಿಮೆಯ ಹೊಳಪಿನಿಂದ ಕಂಗೊಳಿಸುತ್ತದೆ.

– ಡಾ| ಅನುರಾಧಾ ಕಾಮತ್‌

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.