ಬ್ರೇಕ್‌ ಕೆ ಬಾದ್‌! ಎರಡು ವರ್ಷಗಳ ಪ್ರೀತಿ-ಪ್ರೇಮ, ನೋವು-ನಲಿವು

Team Udayavani, Jul 7, 2017, 3:50 AM IST

break-ke-bad.jpg

ಕಿರುತೆರೆಯ ಮಂದಿ ಬೆಳ್ಳಿತೆರೆಗೆ ಕಾಲಿಡುತ್ತಿರುವುದು ಹೊಸ ಬೆಳವಣಿಗೆಯೇನಲ್ಲ. ಆ ಸಾಲಿಗೆ ಈಗ “ಆ ಎರಡು ವರ್ಷಗಳು’ ಚಿತ್ರತಂಡವೂ ಸೇರಿದೆ. ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಮಧುಸೂದನ್‌ಗೆ ಇದು ಮೊದಲ ಪ್ರಯತ್ನ. ಈಗಾಗಲೇ ಚಿತ್ರವನ್ನು ಸದ್ದಿಲ್ಲದೆಯೇ ಮುಗಿಸಿರುವ ಮಧುಸೂದನ್‌, ರಿಲೀಸ್‌ಗೆ ತಯಾರು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೂ ಮುನ್ನ ಅವರು ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

“ಪಲ್ಲವಿ ಅನುಪಲ್ಲವಿ’, “ಅನುರೂಪ’ ಎಂಬ ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಮಧುಸೂದನ್‌ಗೆ ಈ ಚಿತ್ರವೂ ಸಕ್ಸಸ್‌ ಕೊಡುತ್ತೆ ಎಂಬ ವಿಶ್ವಾಸವಿದೆಯಂತೆ. “ಇದು ಎರಡು ವರ್ಷಗಳಲ್ಲಿ ನಡೆಯೋ ಪ್ರೇಮಕಥೆ. ಹುಡುಗ -ಹುಡುಗಿ ನಡುವೆ ಪ್ರೀತಿ ಬೆಸೆದು, ಬ್ರೇಕ್‌ ಆದಾಗ ಏನೆಲ್ಲಾ ಆಗುತ್ತೆ ಅನ್ನೋದೇ ಕಥೆ. ನಾಯಕಿಗೆ ಇಲ್ಲಿ ಎರಡು ಶೇಡ್‌ ಪಾತ್ರವಿದೆ. ಅವಳ ವರ್ತನೆಯಿಂದ ನಾಯಕನ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತೆ ಎನ್ನುವುದನಿಲ್ಲಿ ಸೂಕ್ಷ್ಮವಾಗಿ ಹೇಳಿದ್ದೇನೆ. ಇಲ್ಲಿ ನೈಜತೆಗೆ, ವಾಸ್ತವಕ್ಕೆ ಹತ್ತಿರ ಇರುವಂತಹ ಅಂಶಗಳಿವೆ. ಇನ್ನುಳಿದಂತೆ ಎಲ್ಲಾ ಹಾಡುಗಳು ಕಥೆಗೆ ಪೂರಕವಾಗಿವೆ. ಮೊದಲ ಪ್ರಯತ್ನಕ್ಕೆ ನಿಮ್ಮ ಸಹಕಾರ ಇರಲಿ’ ಅಂದರು ಮಧುಸೂದನ್‌.

ನಾಯಕ ರೇಣುಕ್‌ ಅವರಿಗೆ ಇದು ಮೊದಲ ಚಿತ್ರ. “”ಅನುರೂಪ’ ಧಾರಾವಾಹಿಯಲ್ಲಿ ನಟಿಸುವಾಗಲೇ ನಿರ್ದೇಶಕರು, ಸಿನಿಮಾ ಪ್ಲಾನ್‌ ಮಾಡಿದ್ದರು. ಧಾರಾವಾಹಿ ಯಶಸ್ಸು ತಂದುಕೊಟ್ಟಿತ್ತು. ಹಾಗಾಗಿ, ಮತ್ತೆ ಇಬ್ಬರ ಕಾಂಬಿನೇಷನ್‌ನಲ್ಲಿ ಚಿತ್ರ ಮಾಡಿದ್ದೇವೆ. ನಾನಿಲ್ಲಿ ಮಿಡ್ಲ್ಕ್ಲಾಸ್‌ ಹುಡುಗನಾಗಿ ನಟಿಸಿದ್ದೇನೆ. ಮಿಡ್ಲ್ಕ್ಲಾಸ್‌ ಹುಡುಗನ ಲೈಫ‌ಲ್ಲಿ ಹುಡುಗಿಯೊಬ್ಬಳು ಎಂಟ್ರಿಯಾಗಿ, ಲವ್‌ ಮಾಡಿ, ಅರ್ಧಕ್ಕೆ ಲವ್‌ ಬ್ರೇಕ್‌ಅಪ್‌ ಆದಾಗ, ಅವನ ಲೈಫ್ಗೆ ಎಷ್ಟು ಪೆಟ್ಟಾಗುತ್ತೆ ಎಂಬುದೇ ಸಿನಿಮಾ’ ಅಂದರು ರೇಣುಕ್‌.

ನಾಯಕಿ ಅಮಿತಾ ಕುಲಾಲ್‌ಗ‌ೂ ಇದು ಮೊದಲ ಚಿತ್ರವಂತೆ. ಅವರಿಗೆ ಇದು ಮೊದಲ ಚಿತ್ರ. ಇಲ್ಲಿ ಹತ್ತು ಸಿನಿಮಾಗಳಿಗಾಗುವಷ್ಟು ಅನುಭವ ಆಗಿದೆ. ನನ್ನ ಸಿನಿಮಾ ಕೆರಿಯರ್‌ಗೆ ಇದೊಂದು ಅತ್ಯುತ್ತಮ ಸಿನಿಮಾ ಆಗಲಿದೆ’ ಅಂದರು ಅಮಿತಾ ಕುಲಾಲ್‌.

ಆಡಿಯೋ ಸಿಡಿ ಬಿಡುಗಡೆ ಮಾಡಿದ ಹಂಸಲೇಖ, “ಮುಂದಿನ ಆ ಕೆಲವು ಸಕ್ಸಸ್‌ ಸಿನಿಮಾಗಳಲ್ಲಿ “ಆ ಎರಡು ವರ್ಷಗಳು’ ಚಿತ್ರವೂ ಇರಲಿ. ಈಗ ಚಂದನವನ ಸಮೃದ್ಧಿಯಾಗಿದೆ. ಒಳ್ಳೆಯ ಚಿತ್ರಗಳು ಬರುತ್ತಿವೆ. ಹೊಸಬರ ಜಾಣತನ ಇಲ್ಲಿ ವಕೌìಟ್‌ ಆಗುತ್ತಿದೆ. ಕೆಲಸ ಮಾಡಿದ ಎಲ್ಲರಿಗೂ ಈ ಚಿತ್ರ ಯಶಸ್ಸು ಕೊಡಲಿ’ ಎಂದು ಶುಭ ಹಾರೈಸಿದರು ಹಂಸಲೇಖ.
“ನನ್ನ ಆ 40 ವರ್ಷಗಳ ಸಿನಿಮಾ ಜರ್ನಿಯಲ್ಲಿ “ಈ ಎರಡು ವರ್ಷಗಳು’ ಬಹಳ ಮುಖ್ಯ ಎಂದು ಮಾತಿಗಿಳಿದರು ಹಿರಿಯ ನಟ ರಾಮಕೃಷ್ಣ. “ನನಗಿಲ್ಲಿ ಮಜವಾದ ಪಾತ್ರವಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ಒಳ್ಳೆಯ ತಂಡದ ಜತೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ ಅಂದರು ಅವರು.

ಅನೂಪ್‌ ಸೀಳಿನ್‌ ಇಲ್ಲಿ ಐದು ಹಾಡುಗಳನ್ನು ಕೊಟ್ಟಿದ್ದಾರಂತೆ. ಸಾಕಷ್ಟು ಕೋಪ ಮಾಡಿಕೊಂಡರೂ, ನಿರ್ದೇಶಕರು ತಾಳ್ಮೆಯಿಂದಲೇ ಒಳ್ಳೇ ಹಾಡುಗಳನ್ನು ತೆಗೆಸಿದ್ದಾರೆ. ಗೆಳೆಯ ಅರಸು ಅಂತಾರೆ ಅವರ ಸಾಹಿತ್ಯ ಕಥೆಗೆ ಪೂರಕವಾಗಿದೆ ಅನ್ನುತ್ತಾರೆ ಅನೂಪ್‌.

ಗೀತರಚನೆಕಾರ ಅರಸು ಅಂತಾರೆ, ಕ್ಯಾಮೆರಾಮೆನ್‌ ರವಿಕಿಶೋರ್‌, ಸಂಕಲನಕಾರ ಅಕ್ಷಯ್‌ ಇತರರು ಮಾತಾಡುವ ಹೊತ್ತಿಗೆ ಆಡಿಯೋ ಸಿಡಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೂ ತೆರೆಬಿತ್ತು.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.