ಪ್ರಧಾನಿ ಮೋದಿ ಕಾಣಲು ಉಜಿರೆಗೆ ಜನಸಾಗರ 

Team Udayavani, Oct 30, 2017, 9:56 AM IST

30-Mng-1.jpg

ಬೆಳ್ತಂಗಡಿ: ಪ್ರಧಾನಿ ಮೋದಿ ಅವರ ಭಾಷಣ ಆಲಿಸಲು ರವಿವಾರ ಮುಂಜಾನೆಯಿಂದಲೇ ಜನಸಾಗರ ಹರಿದು ಬರುತ್ತಿತ್ತು. ಉಜಿರೆ ಪೇಟೆಯಷ್ಟೇ ಅಲ್ಲ ಗುರುವಾಯನಕೆರೆಯಿಂದಲೇ ರಸ್ತೆಯಲ್ಲಿ ಸಂಚಾರ ದುಸ್ತರವಾಗಿತ್ತು. ಉಜಿರೆ ಪೇಟೆ ಅಕ್ಷರಶಃ ಜನಸಾಗರದಿಂದ ತುಂಬಿ ತುಳುಕಿ 7 ವರ್ಷಗಳ ಹಿಂದೆ ನಡೆದ ವಿಶ್ವ ತುಳು ಸಮ್ಮೇಳನದ ನೆನಪು ಮೆಲುಕು ಹಾಕುತ್ತಿತ್ತು. ಸ್ವಾತಂತ್ರ್ಯದ ಅನಂತರ ಪ್ರಥಮ ಬಾರಿಗೆ ಅಧಿಕಾರದಲ್ಲಿದ್ದಾಗಲೇ ಧರ್ಮಸ್ಥಳಕ್ಕೆ ಬಂದಿಳಿದು, ಊರಿಗೆ ಆಗಮಿಸಿದ ಪ್ರಧಾನಿಯನ್ನು ನೋಡಲು ಜನ ಕಾತರ, ಕುತೂಹಲದಿಂದ ದೂರದೂರುಗಳಿಂದ ಬಂದಿದ್ದರು. ಮೋದಿ ಧರ್ಮಸ್ಥಳ ತಲುಪಿದರು ಎಂದು ಡಾ| ಬಿ. ಯಶೋವರ್ಮರು ಘೋಷಿಸಿದಾಗ ಕೇಳಿದ ಹರ್ಷೋದ್ಗಾರ, ಮೋದಿ
ಆಗಮಿಸಿ ವೇದಿಕೆಯಿಂದ ನಮಿಸಿ, ಕೈ ಬೀಸಿದಾಗ ಇವರ ಉತ್ಸಾಹ ಘೋಷಣೆಯಿಂದ ತಿಳಿಯುತ್ತಿತ್ತು.

ಮುಂಜಾನೆಯಿಂದ
ಮೋದಿ ಕಾರ್ಯಕ್ರಮಕ್ಕೆ ಮೊತ್ತಮೊದಲ ವಾಹನ ಆಗಮಿಸಿದ್ದು ಮುಂಜಾನೆ 6 ಗಂಟೆಗೆ. ಭದ್ರಾವತಿ ಯಿಂದ. ಅನಂತರ 11 ಗಂಟೆವರೆಗೂ ವಾಹನಗಳು ಬರುತ್ತಲೇ ಇದ್ದವು. ಹಾಗೆ ಆಗಮಿಸಿದ ವಾಹನಗಳಿಗೆಲ್ಲ ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆಯಿತ್ತು. ಅಲ್ಲಲ್ಲಿ ವಾಹನಗಳ ಅಶಿಸ್ತಿನ ಓಡಾಟದಿಂದಾಗಿ ಬ್ಲಾಕ್‌ ಆಗಿತ್ತು. ಎಲ್ಲೆಡೆಯಿಂದ ಬಂದವರು ವಾಹನಗಳನ್ನು ನಿಗದಿತ ತಾಣದಲ್ಲಿ ನಿಲ್ಲಿಸಿ ಒಂದೆರಡು ಕಿ.ಮೀ. ದೂರ ನಡೆದು ಹೋಗಬೇಕಿತ್ತು. ಸಭಾಂಗಣ 8.30ರ ಹೊತ್ತಿಗೆ ಸಾಮಾನ್ಯ ಭರ್ತಿಯಾಗಿತ್ತು. ಗಂಟೆ 10.30ರ ಅನಂತರವೂ ಜನ ಆಗಮಿಸುತ್ತಲೇ ಇದ್ದರು. 

ಜನಸ್ನೇಹಿ ಪೊಲೀಸರು
ಪೊಲೀಸರಂತೂ ಜನಸ್ನೇಹಿಯಾಗಿದ್ದರು. ಎಲ್ಲಿಯೂ ದರ್ಪದ ಪ್ರದರ್ಶನ ಇರಲಿಲ್ಲ. ಸೌಜನ್ಯದಿಂದ ವರ್ತಿಸುತ್ತಿದ್ದುದು ಶ್ಲಾಘನೆಗೆ ಕಾರಣವಾಗಿತ್ತು.

ಕೇಸರಿಮಯ
ರಾಜಕೀಯ ಸಮಾವೇಶ ಅಲ್ಲದಿದ್ದರೂ ಕಾರ್ಯಕ್ರಮಕ್ಕೆ ಆಗಮಿಸಿದ ಮಂದಿ ಹಾಗೂ ಮಹಿಳೆಯರು ಕೇಸರಿ ಉಡುಪಿಗೆ ಆದ್ಯತೆ ನೀಡಿದ್ದು ಕಂಡು ಬರುತ್ತಿತ್ತು. ಉಜಿರೆ ಪೇಟೆ ಕೇಸರಿಮಯವಾಗಿ ಎಲ್ಲೆಡೆ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಮಕ್ಕಳು, ಹಿರಿಯರು ಎಂಬ ಭೇದವಿಲ್ಲದೆ ಜನ ಕಾರ್ಯಕ್ರಮದಲ್ಲಿ ಭಾಗಿಯಾದರು. ವಿಐಪಿ ಪಾಸ್‌ ಸಿಗದೆ ಅನೇಕರು
ಸಾರ್ವಜನಿಕ ಪ್ರವೇಶಕ್ಕೆ ಹೋಗಲು ಮನಸ್ಸು ಒಪ್ಪದೆ ರಸ್ತೆ ಬದಿ ನಿಂತು ಕಾರ್ಯಕ್ರಮ ವೀಕ್ಷಿಸಿದರು.

ಪ್ರಧಾನಿ ಕಚೇರಿ
ಮೋದಿ ಆಸೀನರಾಗುವ ವೇದಿಕೆ ಪಕ್ಕದಲ್ಲಿಯೇ ಪ್ರಧಾನಿ ಕಚೇರಿಯೇ ತಾತ್ಕಾಲಿಕವಾಗಿ ತೆರೆದುಕೊಂಡಿತ್ತು. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಸಮಾರಂಭ ನಡೆದಿದ್ದು, ವೇದಿಕೆಯ ಹಿಂಭಾಗದಲ್ಲಿ ಪ್ರಧಾನಿ ಕಚೇರಿ ಇತ್ತು. ಸಾಮಾನ್ಯವಾಗಿ ಪ್ರಧಾನಿ ಕಚೇರಿಯಿಂದ ಯಾವೆಲ್ಲ ಸಂವಹನಗಳನ್ನು ಮಾಡಲಾಗುತ್ತದೆಯೋ ಅವೆಲ್ಲ ಸಂವಹನ ಇಲ್ಲಿಯೂ ಸಾಧ್ಯವಾಗುವಂತೆ ಏರ್ಪಾಟು ಮಾಡಲಾಗಿತ್ತು. ಪ್ರಧಾನಿಯವರ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಇಲ್ಲಿಂದಲೇ ಫೂಟೊ ಅಪ್‌ಲೋಡ್‌ ಮಾಡಲಾಗುತ್ತಿತ್ತು. ಪ್ರಧಾನಿ ಕಚೇರಿಯ ಸಿಬಂದಿಯೇ ಇದನ್ನು ನಿರ್ವಹಿಸಿದ್ದರು. ದೇವಸ್ಥಾನದ ಪ್ರಸಾದ ಸ್ವೀಕಾರ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ ಲೋಡ್‌ ಮಾಡಲಾಗಿದ್ದು ಕ್ಷಣಾರ್ಧದಲ್ಲಿ ಸಾವಿರಾರು ಮಂದಿ ಶೇರ್‌ ಮಾಡಿದ್ದರು.

ಬಿಸಿಲ ಧಗೆಗೆ ನೀರು ಹಾಗೂ ಮಜ್ಜಿಗೆ ಏರ್ಪಾಡಾಗಿತ್ತು. ಹಾಗಿದ್ದರೂ ಮುಂಜಾನೆಯಿಂದಲೇ ಸಭಾಂಗಣದಲ್ಲಿ ಕುಳಿತವರಿಗೆ ಸೆಖೆ ಕಾಡಿದ್ದು ಸುಳ್ಳಲ್ಲ.

ಪರದೆ ವ್ಯವಸ್ಥೆ
ಗ್ರಾಮಾಭಿವೃದ್ಧಿ ಯೋಜನೆಯ ದ.ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಸ್ವ ಸಹಾಯ ಸಂಘಗಳ 60,000 ಸದಸ್ಯರು, ಬಿಜೆಪಿಯ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಆದ್ದರಿಂದ ಕಾರ್ಯಕ್ರಮ ವೀಕ್ಷಣೆಗೆ ಸಭಾಂಗಣದಲ್ಲಿ 18 ಪರದೆಗಳ ವ್ಯವಸ್ಥೆ ಮಾಡಲಾಗಿತ್ತು.

ಆಧಾರ್‌ ಕಡ್ಡಾಯ
ಮೋದಿ ಸರಕಾರದಲ್ಲಿ ಎಲ್ಲದಕ್ಕೂ ಆಧಾರ್‌ ಕಡ್ಡಾಯ. ಅಂತೆಯೇ ಅವರ ಸಭೆಗೆ ಬರಲೂ ಆಧಾರ್‌ ಕಡ್ಡಾಯ ಮಾಡಲಾಗಿತ್ತು. ವಿಐಪಿ ಪಾಸ್‌ ಇದ್ದವರಿಗೆ ಆಧಾರ್‌ ಅಥವಾ ಭಾವಚಿತ್ರ ಇರುವ ಗುರುತು ಚೀಟಿ ಕಡ್ಡಾಯ ಇತ್ತು. ಇದನ್ನು ನೋಡಿಯೇ ಒಳ ಬಿಡಲಾಗುತ್ತಿತ್ತು. ಸಾರ್ವಜನಿಕರಿಗೆ ಉಜಿರೆ ಬೆಳಾಲು ರಸ್ತೆ ಸಮೀಪ ಐದು ಪ್ರವೇಶ ದ್ವಾರಗಳಿದ್ದವು. ಒಟ್ಟು 40 ಕಡೆ ಭದ್ರತಾ ತಪಾಸಣ ತಂಡಗಳಿದ್ದವು. ಆದ್ದರಿಂದ ಗೊಂದಲಕ್ಕೆ ಅವಕಾಶ ಇರಲಿಲ್ಲ.

ಕಪ್ಪು ಬಟ್ಟೆಗೆ ನಿಷೇಧ
ನಿರ್ದಿಷ್ಟ ಪಂಗಡದವರನ್ನು ಹೊರತಾಗಿ ಕಪ್ಪು ಅಂಗಿ ಧರಿಸಿದವರನ್ನು ಒಳ ಪ್ರವೇಶಿಸಲು ಬಿಡುತ್ತಿರಲಿಲ್ಲ. ಹಾಗೆಂದು ಅಂತಹ ಕಠಿನ ಶಿಸ್ತು ಮಾಡದಿದ್ದರೂ ಪ್ರತಿಭಟನ ಸೂಚಕವಾಗಿರಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿತ್ತು.

ರಸ್ತೆ ಬಂದ್‌
ರವಿವಾರ 8.45ರಿಂದಲೇ ಉಜಿರೆಯಿಂದ ಧರ್ಮಸ್ಥಳದವರೆಗೆ ರಸ್ತೆ ಸಂಚಾರ ಬಂದ್‌ ಮಾಡಲಾಯಿತು. ಉಜಿರೆಯಲ್ಲಿ ಕೂಡ ಅನೇಕ ಅಂಗಡಿ ಬಂದ್‌ ಮಾಡಲಾಗಿತ್ತು. ಉಜಿರೆ-ಧರ್ಮಸ್ಥಳ ರಸ್ತೆಯ ಅಂಗಡಿಗಳನ್ನು ಮುಚ್ಚಲಾಗಿತ್ತು. ಮುಂಜಾನೆಯಿಂದ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಅಪರಾಹ್ನದ ಅನಂತರ ಬಿಡಲಾಯಿತು.

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

A meteorite fell on farmland; Heat is coming out of the hole

Meteorite; ಕೃಷಿಭೂಮಿಗೆ ಬಿದ್ದ ಉಲ್ಕಾಶಿಲೆ; ಗುಂಡಿಯಿಂದ ಹೊರಬರುತ್ತಿದೆ ಶಾಖ

ambarish

Rebel star ಅಂಬರೀಶ್‌ ಹುಟ್ಟುಹಬ್ಬ; ಕಂಠೀರವ ಸ್ಟುಡಿಯೋದತ್ತ ಫ್ಯಾನ್ಸ್

Shortage of players: Aussies coach, head of selection committee fielded against Namibia

AUSvsNAM; ಆಟಗಾರರ ಕೊರತೆ: ಫೀಲ್ಡಿಂಗ್ ಮಾಡಿದ ಆಸೀಸ್ ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥ

Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ

Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ

13-

Madikeri: ಎರಡು ಕಳ್ಳತನ ಪ್ರಕರಣ: ಆರೋಪಿಯ ಬಂಧನ  

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

Puttur: ಕೊಳವೆಬಾವಿ ಶುದ್ಧೀಕರಣ ವೇಳೆ ಕಲ್ಲು ತೂರಾಟ

Puttur: ಕೊಳವೆಬಾವಿ ಶುದ್ಧೀಕರಣ ವೇಳೆ ಕಲ್ಲು ತೂರಾಟ

Charmady Ghat: ತಡೆಗೋಡೆಗೆ ಗುದ್ದಿದ ಬಸ್‌

Charmady Ghat: ತಡೆಗೋಡೆಗೆ ಗುದ್ದಿದ ಬಸ್‌

Crypto currency ವರ್ಗಾವಣೆಗೆ ಆ್ಯಪ್‌ ಅಪರಿಚಿತನ ಮಾತು ನಂಬಿ 1 ಕೋ.ರೂ.ಕಳೆದುಕೊಂಡ ವ್ಯಕ್ತಿ

Crypto currency ವರ್ಗಾವಣೆಗೆ ಆ್ಯಪ್‌ ಅಪರಿಚಿತನ ಮಾತು ನಂಬಿ 1 ಕೋ.ರೂ.ಕಳೆದುಕೊಂಡ ವ್ಯಕ್ತಿ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

A meteorite fell on farmland; Heat is coming out of the hole

Meteorite; ಕೃಷಿಭೂಮಿಗೆ ಬಿದ್ದ ಉಲ್ಕಾಶಿಲೆ; ಗುಂಡಿಯಿಂದ ಹೊರಬರುತ್ತಿದೆ ಶಾಖ

ambarish

Rebel star ಅಂಬರೀಶ್‌ ಹುಟ್ಟುಹಬ್ಬ; ಕಂಠೀರವ ಸ್ಟುಡಿಯೋದತ್ತ ಫ್ಯಾನ್ಸ್

Shortage of players: Aussies coach, head of selection committee fielded against Namibia

AUSvsNAM; ಆಟಗಾರರ ಕೊರತೆ: ಫೀಲ್ಡಿಂಗ್ ಮಾಡಿದ ಆಸೀಸ್ ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥ

Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ

Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ

13-

Madikeri: ಎರಡು ಕಳ್ಳತನ ಪ್ರಕರಣ: ಆರೋಪಿಯ ಬಂಧನ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.