ಪಾಟೀಲರ ತೋಟದಲ್ಲಿ ಹೂವಿನಿಂದ ಹೊನ್ನು


Team Udayavani, Oct 30, 2017, 11:25 AM IST

30-14.jpg

ಬಾಗಲಕೋಟ ಜಿಲ್ಲೆ ಬಾದಾಮಿ ತಾಲೂಕಿನ ಆಡಗಲ್‌ ಗ್ರಾಮದ ಮುಖ್ಯರಸ್ತೆಯ ಕಡೆಗೆ ಹೋದರೆ ಬಣ್ಣ, ಬಣ್ಣದ ಹೂಗಳು ಕಣ್ಣು ಸೆಳೆಯುತ್ತವೆ. ಹೌದು, ಅದೇ ಯಲ್ಲನಗೌಡ ರಂಗನಗೌಡ ಪಾಟೀಲರ ತೋಟ. ಇವತ್ತು ಪಾಟೀಲರ ಕಿಸೆಗೆ ಲಕ್ಷ ಲಕ್ಷ ಆದಾಯ ತುಂಬಿಸುತ್ತಿರುವುದು ಇದೇ ಹೂಗಳು. 

ಪಾಟೀಲರಿಗೆ ಒಟ್ಟು ಐದು ಎಕರೆ ಯಲ್ಲಿ ಜಮೀನಿದೆ. ಈ ಹಿಂದೆ ಜೋಳ, ಸಜ್ಜೆಗಳನ್ನು ಬೆಳೆಯುತ್ತಿದ್ದರು. ಆದರೆ ಕೆಲಸದ ನಿಮಿತ್ತ ಬಳ್ಳಾರಿ ಕಡೆ ತಿರುಗಾಡುತ್ತಿದ್ದಾಗಲೇ ಕಣ್ಣಿಗೆ ಬಿದ್ದಿದ್ದು ಈ ಹೂವಿನ ಕೃಷಿ. ಪ್ರಯಾಣದ ವೇಳೆಯಲ್ಲಿ ವಿಸ್ತಾರವಾಗಿ ಹರಡಿರುವ ಕೃಷಿ ಭೂಮಿಯನ್ನು ಕುತೂಹಲದಿಂದ ವೀಕ್ಷಿಸುವುದು ಇವರಅಭ್ಯಾಸ. ಕುಷ್ಟಗಿ, ಗಂಗಾವತಿ, ಕಂಪ್ಲಿ ಹೀಗೆ ಹಲವು ಕಡೆಗಳಲ್ಲಿ ರಸ್ತೆಯ ಬದಿಯ ಹೊಲಗಳಲ್ಲಿ ಕಾಣುತ್ತಿದ್ದ ಸಣ್ಣ ಸಣ್ಣ ತಾಕುಗಳಲ್ಲಿ ಬೆಳೆಯುತ್ತಿದ್ದ ಹೂವಿನ ತೋಟ ಆಕರ್ಷಿಸಿತು. ಅದನ್ನು ನೋಡಿದ ನಂತರ ತಮ್ಮ ಹೊಲವನ್ನು ಪರಿವರ್ತಿಸಿದರು.  

ಕೆಲಸದವರ ಕಿರಿಕಿರಿ ಇಲ್ಲ ಪಾಟೀಲರಿಗೆ. ಏಕೆಂದರೆ, ಇವರದ್ದು ಹದಿನಾರು ಜನರ ಅವಿಭಕ್ತ ಕುಟುಂಬ. ಹೀಗಾಗಿ ತೊಂದರೆ ಆಗಲಾರದು ಎಂದು ಧೈರ್ಯವಾಗಿ ಮುನ್ನುಗ್ಗಿದ ಪರಿಣಾಮ ಇವತ್ತು ಮೂರು ಎಕರೆಯಲ್ಲಿ ಹೂವು ಅರಳಿ ನಿಂತಿದೆ.

ಸುಗಂಧ ಬೀರಿದ ಸುಗಂಧರಾಜ
ಹೂವಿನ ಕೃಷಿಯಲ್ಲಿ ಪಾಟೀಲರಿಗೆ ಐದು ವರ್ಷದ ಅನುಭವವಿದೆ. ಆರಂಭದಲ್ಲಿ ಮೂರು ಎಕರೆಯಲ್ಲಿ ಸುಗಂಧರಾಜ ಬೆಳೆದರು. ಆಳವಾಗಿ ಉಳುಮೆ ಮಾಡಿ, ಯಥೇಚ್ಚ ಕಾಂಪೋಸ್ಟ್‌ ಗೊಬ್ಬರ ಸೇರಿಸಿದರು. ನೇಗಿಲು ಹೊಡೆದು ರೆಂಟೆಯಲ್ಲಿ ಹರಗಿ ಸಾಲಿನಿಂದ ಸಾಲಿಗೆ ಎರಡೂವರೆ ಅಡಿ, ಗಿಡದ ನಡುವೆ ಒಂದು ಅಡಿ ಅಂತರವಿಟ್ಟು ಗಡ್ಡೆಗಳನ್ನು ನಾಟಿ ಮಾಡಿದರು. ಮುಂದೆ ದುರಾಗಬಹುದಾದ ಕೊಳೆರೋಗ, ಗೆದ್ದಲು ಹುಳುಗಳ ನಿಯಂತ್ರಣಕ್ಕೆ ಗಡ್ಡೆ ಊರಿದ ಸ್ಥಳದಲ್ಲಿ ಒಂದೊಂದು ಹಿಡಿಯಷ್ಟು ಬೇವಿನ ಬೀಜದ ಪುಡಿಯನ್ನು ಸುರಿದು ಮಣ್ಣಿನ ಹೊದಿಕೆ ಮಾಡಿದರು. ಮೂವತ್ತು ದಿನದಲ್ಲಿ ಚಿಗುರು ಗೋಚರಿಸಿತು. ನಾಟಿ ಮಾಡಿದ ಎರಡೂವರೆ ತಿಂಗಳಿಗೆ
ಫ‌ಲವತ್ತಾದ ಕೆರೆ ಮಣ್ಣನ್ನು ಬುಡಕ್ಕೇರಿಸಿಕೊಟ್ಟರು. ಎಕರೆಗೆ ಆರು ಟ್ರಾಕ್ಟರ್‌ ಕಾಂಪೋಸ್ಟ್‌ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಿದರು.ಆರು ತಿಂಗಳಲ್ಲಿ 4-5 ಕೆಜಿಯಿಂದ ಆರಂಭವಾದ ಹೂವು ಒಂದು ವರ್ಷ ಪೂರೈಸುವುದರೊಳಗಾಗಿ ದಿನವೊಂದಕ್ಕೆ 40-45 ಕಿ.ಗ್ರಾಂ ದೊರೆಯತೊಡಗಿತು.

ಐದನೆಯ ವರ್ಷದ ಗಡ್ಡೆಗಳು 
ಸುಗಂಧರಾಜ ಕೃಷಿಯಲ್ಲಿ ಮೂರು ವರ್ಷಕ್ಕೊಮ್ಮೆ ಸ್ಥಳ ಬದಲಾಯಿಸುವುದು ವಾಡಿಕೆ. ಆದರೆ ಇವರ ಜಮೀನಿನಲ್ಲಿರುವ ಸುಗಂಧರಾಜಕ್ಕೆ ಐದು ವರ್ಷ. ಆರಂಭದಲ್ಲಿ ನಾಟಿ ಮಾಡಿದ ಗಡ್ಡೆಗಳೇ ಈಗಲೂ ಹೊಲದಲ್ಲಿವೆ. ಭರ್ತಿ ಹೂ ಇಳುವರಿಯನ್ನೇ
ನೀಡುತ್ತಿದೆ. ಹೂವಿಗೆ ಹುಳದ ಬಾಧೆ ಕಾಡಿದರೆ ಎಂದು ತಿಂಗಳಲ್ಲಿ ಎರಡರಿಂದ ಮೂರು ಬಾರಿ ಭೂಮ್‌ ಫ್ಲವರ್‌ ಔಷಧಿ ಸಿಂಪಡಿಸುತ್ತಾರೆ. ಡಿಸೆಂಬರ್‌ ತಿಂಗಳಿನಿಂದ ಮೇ  ತಿಂಗಳ ವರೆಗೆ ಹೂವಿನ ಇಳುವರಿ ಕಡಿಮೆ.ಆಗ ದಿನಕ್ಕೆ 20-25 ಕಿ.ಗ್ರಾಂ ಸಿಗುತ್ತದೆ.ಉಳಿಕೆ ದಿನಗಳಲ್ಲಿ 70-100 ಕೆ.ಜಿಯ ವರೆಗೆ ಸಿಗುತ್ತದೆ. ಈ ವರ್ಷದ ಜುಲೈ ಮತ್ತು ಆಗಸ್ಟ್‌ ಎರಡೇ ತಿಂಗಳಲ್ಲಿ 1,37,000ಆದಾಯ ಬಂದಿದ್ದನ್ನು ನೆನಪಿಸಿಕೊಂಡರು.

ಎಚ್‌.ಆರ್‌.ಕಡಿವಾಲ

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.