ಬಾಳು ಬೆಳಗಿದ ಬಾಳೆ


Team Udayavani, Feb 5, 2018, 3:10 PM IST

banana.jpg

ಸಾಗರ ತಾಲೂಕಿನ ಬೊಮ್ಮತ್ತಿಯ ಯುವ ರೈತ ಕೃಷ್ಣಮೂರ್ತಿ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ  ಇವರು ಜಿ.9  ಮತ್ತು ಏಲಕ್ಕಿ ತಳಿಯ ಬಾಳೆ.  

ಕೃಷಿ ಹೇಗೆ?
ತ್ಯಾಗರ್ತಿ ರಸ್ತೆಯ ಬೊಮ್ಮತ್ತಿ ತಿರುವಿನಿಂದ ಉಳ್ಳೂರು ಸಂಪರ್ಕ ದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಕೃಷ್ಣಮೂರ್ತಿಯವರ ಹೊಲವಿದೆ. ಇವರು 2016 ರ ಆಗಸ್ಟ್‌ 3 ನೇ ವಾರದಲ್ಲಿ ಬಾಳೆ ಗಿಡದ ನಾಟಿ ಮಾಡಿದ್ದರು.  2 ಎಕರೆ ವಿಸ್ತೀರ್ಣದ ತಮ್ಮ ಖಷ್ಕಿ ಭೂಮಿಯಲ್ಲಿ 1500 ಜಿ.9 ಬಾಳೆ ಮತ್ತು 500 ಏಲಕ್ಕಿ ತಳಿಯ ಬಾಳೆ ನಾಟಿ ಮಾಡಿದ್ದರು.  ಇದಕ್ಕಿಂತ ಎರಡು ವರ್ಷ ಹಿಂದೆ ಕೊಳವೆ ಬಾವಿ ಕೊರೆಸಿ ಶುಂಠಿ ಕೃಷಿಗೆ ಕೈ ಹಾಕಿದ್ದರು. ಇಡೀ ಹೊಲವನ್ನು ಟ್ರಾÂಕ್ಟರ್‌ ನಿಂದ ಉಳುಮೆ ಮಾಡಿ ಹದಗೊಳಿಸಿದರು. ನಂತರ 1.5 ಅಡಿ ಅಗಲ, 1.5 ಅಡಿ ಆಳವಿರುವ ಗುಂಡಿಗಳನ್ನು ಮಾಡಿಸಿ ಅದಕ್ಕೆ ಥಿಮೆಟ್‌ ಮತ್ತು ಸಗಣಿ ಗೊಬ್ಬರ ಹಾಕಿ ಕಾಡಿನ ಒಣ ಎಲೆಗಳನ್ನು ಹಾಕಿಸಿದರು. ಗಿಡದಿಂದ ಗಿಡಕ್ಕೆ 6 ಅಡಿ ಅಂತರವಿರುವಂತೆ ಸಾಲು ಗುಂಡಿ ತೋಡಿಸಿದರು. ಸಾಗರದ ಹಕ್ರೆಯಲ್ಲಿರುವ ಅಂಗಾಂಶ ಕಸಿಯ ಜಿ9 ಬಾಳೆ ಸಸಿಗಳನ್ನು ತಲಾ 12 ರೂ.ನಂತೆ  ನರ್ಸರಿಯಲ್ಲಿ ಖರೀದಿಸಿ ಒಟ್ಟು 1500 ಬಾಳೆ ಸಸಿ ನೆಟ್ಟರು. ನಂತರ ಪ್ರತಿ 25 ದಿನಕ್ಕೆ ಒಮ್ಮೆಯಂತೆ 19:19:19 ಕಾಂಪ್ಲೆಕ್ಸ್‌ ಗೊಬ್ಬರವನ್ನು ದ್ರವ ರೂಪದಲ್ಲಿ ಎಲ್ಲಾ ಗಿಡಗಳಿಗೂ ನೀಡಿದರು. ಗಿಡ ನೆಟ್ಟು ಸುಮಾರು 9 ತಿಂಗಳಿಗೆ ಅಂದರೆ 2017ರ ಮೇ ಅಂತ್ಯದ ಸುಮಾರಿಗೆ ಬಾಳೆ ಗಿಡಗಳು ಹೂಬಿಟ್ಟು ಗೊನೆ ನೀಡಲು ಆರಂಭಿಸಿದವು. ಗೊನೆ ಬಿಟ್ಟ ಮೂರು ತಿಂಗಳ ಅಂತ್ಯದಲ್ಲಿ ಮೊದಲ ಫ‌ಸಲು ಕಟಾವಿಗೆ ಬಂದಿತು.

ಲಾಭ ಹೇಗೆ?
ಇವರು 2 ಎಕರೆ ವಿಸ್ತೀರ್ಣದ ಹೊಲದಲ್ಲಿ 1500 ಜಿ.9 ಬಾಳೆ ಸಸಿ ಬೆಳೆಸಿದ್ದಾರೆ. 
ಪ್ರತಿ ಮರದಿಂದ ಸರಾಸರಿ 25 ರಿಂದ 30  ಕಿ.ಗ್ರಾಂ.ತೂಕದ ಬಾಳೆ ಗೊನೆ ದೊರೆತಿದೆ. ಕಿ.ಗ್ರಾಂ.ಗೆ ಸರಾಸರಿ ರೂ.13 ರೂ.ನಂತೆ ಬಾಳೆ ಗೊನೆ ಮಾರಾಟವಾಗಿದೆ.

ಮೊದಲ ಕಟಾವಿನಲ್ಲಿ 40 ಟನ್‌ ಮಾರಾಟವಾಗಿದೆ. ಇದರಿಂದ ಇವರಿಗೆ ರೂ.5 ಲಕ್ಷದ 50 ಸಾವಿರ ಆದಾಯ ದೊರೆತಿದೆ.  ಬಾಳೆ ಸಸಿ ನೆಡುವಿಕೆ, ಗಿಡ ಖರೀದಿ, ನೀರಾವರಿ ವ್ಯವಸ್ಥೆ, ಕೂಲಿ ವೆಚ್ಚ, ಗೊಬ್ಬರ ನೀಡುವಿಕೆ, ಕಟಾವಿನ ಕೂಲಿ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಇವರಿಗೆ ಸುಮಾರು ರೂ.2 ಲಕ್ಷ ಹಣ  ಖರ್ಚಾಗಿದೆ. ಆದರೂ ಸುಮಾರು ರೂ.3 ಲಕ್ಷದ 50 ಸಾವಿರ ರೂ. ಲಾಭ ದೊರೆತಿದೆ. ಇವರು ಕೃಷಿ ಮಾಡಿದ 500 ಏಲಕ್ಕಿ ಬಾಳೆ ಗಿಡದಿಂದ 10 ಟನ್‌ ಫ‌ಸಲು ದೊರೆತಿದೆ. ಏಲಕ್ಕಿ ಬಾಳೆ ಕ್ವಿಂಟಾಲ್‌ಗೆ ರೂ.2500 ರಂತೆ ಮಾರಾಟವಾಗಿದ್ದು  ಇದರಿಂದ ಇವರಿಗೆ ರೂ.2 ಲಕ್ಷದ 50 ಸಾವಿರ ಆದಾಯ ದೊರೆತಿದೆ. ಕೃಷಿ ವೆಚ್ಚ ಸುಮಾರು 1 ಲಕ್ಷ ತಗುಲಿದ್ದು ನಿವ್ವಳ 1 ಲಕ್ಷದ 50 ಸಾವಿರ ಲಾಭ ದೊರೆತಿದೆ.

ಬಾಳೆ ಗಿಡಗಳ ಮೊದಲ ಫ‌ಸಲು ಇದಾಗಿದ್ದು ಗೊನೆ ಬಲಿತ ನಂತರ ಕಡಿದ ಬಾಳೆಯ ಬುಡಗಳಿಂದ ಇನ್ನೊಂದು ಗಿಡ ಬೆಳೆಯುತ್ತಿದೆ.  ಅದರ ಮೂಲಕ ಮುಂದಿನ ಫ‌ಸಲು 2018 ರ ಜೂನ್‌ ಸುಮಾರಿಗೆ ಎರಡನೇ ಪಸಲು ದೊರೆಯಲಿದೆ. ಎರಡನೇ ಫ‌ಸಲಿನಲ್ಲಿ ಗಿಡ ನೆಡುವಿಕೆ, ಗಿಡ ಖರೀದಿ ,ನೀರಾವರಿ ವ್ಯವಸ್ಥೆ ಅಳವಡಿಕೆ, ಹೆಚ್ಚು ಗೊಬ್ಬರ ನೀಡುವಿಕೆ  ಇತ್ಯಾದಿ ಖರ್ಚು ಇಲ್ಲದ ಕಾರಣ ಲಾಭದ ಪ್ರಮಾಣ ಅಧಿಕವಾಗಲಿದೆ.  ಈ ವರ್ಷ ಮಲೆನಾಡಿನ ಕೃಷಿಕರು ಶುಂಠಿ, ಜೋಳ,ರಬ್ಬರ್‌ ಇತ್ಯಾದಿ ಹಲವು ವಾಣಿಜ್ಯ ಬೆಳೆಗಳ ದರ ಕುಸಿತದಿಂದ ನಷ್ಟ ಅನುಭಸುತ್ತಿದ್ದಾರೆ.ಆದರೆ ಬಾಳೆ ಕೃಷಿಯಿಂದ ಕೃಷ್ಣಮೂರ್ತಿ ಲಾಭದ ನಗು ಚೆಲ್ಲಿದ್ದಾರೆ. 

ಮಾಹಿತಿಗೆ-9482949149 

– ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

air india

Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-wewqewq

Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.