ಲವ್‌ ಇನ್‌ ಬೆಂಗ್ಳೂರು


Team Udayavani, Feb 10, 2018, 4:19 PM IST

6-aa.jpg

ಪ್ರೇಮಿಗಳ ದಿನದ ಸಡಗರಕ್ಕೆ ನಾಲ್ಕು ದಿನಗಳಷ್ಟೇ ಬಾಕಿ ಉಳಿದಿವೆ. ಎಸ್ಸೆಮ್ಮೆಸ್‌/ ವಾಟ್ಸಾಪ್‌/ ಫೇಸ್‌ಬುಕ್‌ನಲ್ಲಿ ವ್ಯಾಲೆಂಟೇನ್ಸ್‌ ಡೇ ವಿಷಸ್‌ ಹೇಳುವ ಸಂಭ್ರಮದಲ್ಲಿ ಹಲವರಿದ್ದಾರೆ. ಈ ಹೊತ್ತಿನಲ್ಲೇ- 20 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪ್ರೇಮಿಗಳ ಓಡಾಟ ಎಲ್ಲೆಲ್ಲಿ ನಡೀತಿತ್ತು ಎಂಬುದರ ಮೆಲುಕು ಇಲ್ಲಿದೆ. 

ಅವಳ/ ಅವನ ಮೇಲೆ ಪ್ರೀತಿಯಾಗಿದೆ. ಈ ಸಂಗತಿ ಅವಳಿಗೂ(ಅವನಿಗೂ) ಗೊತ್ತಾಗಿದೆ. ಆ ಕಡೆಯಿಂದಲೂ ಸಮ್ಮತಿಯ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಆಗಿಂದಾಗ್ಗೆ ಗುಟ್ಟಾಗಿ ಭೇಟಿಯಾಗಬೇಕು. ಮನೆಮಂದಿಗೆ ಗೊತ್ತಾಗದಂತೆ ಕದ್ದುಮುಚ್ಚಿ ಮಾತಾಡಬೇಕು. ಇವತ್ತಿನ ದಿನಗಳಲ್ಲಿ ಇದ್ಯಾವುದೂ ಕಷ್ಟವಲ್ಲ. ಏಕೆಂದರೆ ಈಗ ಬೆಂಗಳೂರಿನ ಪ್ರತಿ ಬಡಾವಣೆಗಳಲ್ಲೂ ಖಾಸಗಿ ಮಾತುಕತೆಗೆ ಅನುವು ಮಾಡಿಕೊಡುವ ಕಾಫಿ ಡೇಗಳಿವೆ, ಪಿಜ್ಜಾ ಹಟ್‌ಗಳಿವೆ. ಅರಮನೆಯ ವಿಸ್ತಾರವನ್ನೇ ನಾಚಿಸುವಂಥ ಮಾಲ್‌ಗ‌ಳಿವೆ. ಪಿ.ವಿ.ಆರ್‌ ಥಿಯೇಟರ್‌ಗಳಿವೆ. ಇಲ್ಲೆಲ್ಲಾ ಪ್ರೇಮಿಗಳ ಖಾಸಗಿ ಭೇಟಿಗೆ, ಮಾತುಕತೆಗೆ ಅವಕಾಶವಿದೆ. ಕಾಫಿಡೇಗಳಲ್ಲಂತೂ ಭರ್ತಿ ಮೂರು ಗಂಟೆ ಕೂತು ಹರಟೆ ಹೊಡೆದರೂ ಯಾರೂ ಕೇಳುವುದಿಲ್ಲ. ಅಲ್ಲಿ ಒಂದು ಕಾಫಿಗೆ 150 ರೂ. ಬಿಲ್‌ ಮಾಡುತ್ತಾರೆ, ಜೇಬಿನ ತುಂಬಾ ದುಡ್ಡಿಟ್ಟುಕೊಂಡೇ ಹುಡುಗ- ಹುಡುಗಿ ಹೋಗಿರುತ್ತಾರೆ. ಹೀಗಾಗಿ ಪ್ರೀತಿಸುವರನ್ನು ಗುಟ್ಟಾಗಿ ಭೇಟಿಯಾಗುವುದು ಈಗ ಯಾರಿಗೂ ಕಷ್ಟ ಅನ್ನಿಸುತ್ತಿಲ್ಲ.

ಆದರೆ 20 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆಗೆಲ್ಲಾ ಪ್ರೇಮಿಗಳು ಭೇಟಿಯಾಗಬೇಕು ಅಂದರೆ ನೇರವಾಗಿ ಕಬ್ಬನ್‌ ಪಾರ್ಕಿಗೋ, ಲಾಲ್‌ಬಾಗಿಗೋ ಹೋಗಬೇಕಿತ್ತು. ಇವೆರಡು ಸ್ಥಳಗಳನ್ನು ಬಿಟ್ಟರೆ ಪ್ರೇಮಿಗಳ ಪ್ರೈವೆಸಿಗೆ  ನೆರವಾಗುತ್ತಿದ್ದುದು ಗಾಂಧಿ ಬಜಾರ್‌ನ ಕಹಳೆ ಬಂಡೆ(ಬ್ಯೂಗಲ್‌ ರಾಕ್‌) ಪಾರ್ಕ್‌, ಜಯನಗರದ ಶಾಪಿಂಗ್‌ ಕಾಂಪ್ಲೆಕ್ಸ್‌ ಆಸುಪಾಸಿನ ಬೀದಿ, ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ, ಕೆಂಪೇಗೌಡ ರಸ್ತೆಯ ಉದ್ದಕ್ಕೂ ಇದ್ದ ಸಾಲು ಸಾಲು ಚಿತ್ರಮಂದಿರಗಳು!

ಆವತ್ತೂ ಅಷ್ಟೆ 
ಕಾಲೇಜಿಗೆ ಹೋಗುವವರು, ಗಾರ್ಮೆಂಟ್ಸ್‌ನಲ್ಲಿ ದುಡಿಯುವವರು, ನಿರುದ್ಯೋಗಿಗಳಾಗಿ ಮನೆಯಲ್ಲೇ ಇದ್ದವರು, ನೌಕರಿಗೆ ಸೇರಿದ ಮೇಲೆ ಲವರ್ ಆದವರು… ಇವರೇ ಇದ್ದರು. ಎಲ್ಲರಿಗೂ, ಪ್ರೀತಿಸಿದ ಜೀವದೊಂದಿಗೆ ಮಾತಾಡಬೇಕೆಂಬ ತಹತಹವಿತ್ತು, ನಿಜ. ಆದರೆ ಮನೆಯ ಹತ್ತಿರದಲ್ಲೇ ಅಂಥ ಸಾಹಸ ಮಾಡುವ ಧೈರ್ಯ ಇರುತ್ತಿರಲಿಲ್ಲ. ಯಾವುದೋ ರೀತಿಯಲ್ಲಿ, ಇಂಥ ದಿನ, ಇಷ್ಟು ಹೊತ್ತಿಗೆ ಕಬ್ಬನ್‌ ಪಾರ್ಕಿಗೆ ಹೋಗೋಣ ಎಂಬ ಸಂದೇಶವೂ ಅವರ ಮಧ್ಯೆ ವಿನಿಮಯವಾಗುತ್ತಿತ್ತು. ಅಂದುಕೊಂಡ ದಿನವೇ ಸಣ್ಣದೊಂದು ಭಯ, ಒಂದಿಷ್ಟು ಆಸೆ, ಇನ್ನೊಂದಿಷ್ಟು ಅನುಮಾನದೊಂದಿಗೇ ಅವನೂ -ಅವಳೂ ವಿಧಾನಸೌಧದ ಎದುರು ಬಸ್‌ ಇಳಿದು, ತಮ್ಮನ್ನು ಯಾರೂ ಗಮನಿಸುತ್ತಿಲ್ಲ ಎಂದು ಮತ್ತೆ ಎರಡೆರಡು ಬಾರಿ ಖಚಿತ‌ಪಡಿಸಿಕೊಂಡು, ಹೈಕೋರ್ಟಿನ ಅಂಗಳ ದಾಟಿ ಕಬ್ಬನ್‌ ಪಾರ್ಕ್‌ ತಲುಪುತ್ತಿದ್ದರು. ಮರುಕ್ಷಣವೇ ಬೆಚ್ಚಿ ಬೀಳುತ್ತಿದ್ದರು. 

ಏಕೆಂದರೆ, ಕಬ್ಬನ್‌ಪಾರ್ಕಿನ ಪ್ರತಿ ಮರದ ಹಿಂದೆಯೂ ಒಂದೊಂದು ಜೋಡಿ ಕುಳಿತಿರುತ್ತಿತ್ತು. ಎಲ್ಲರೂ ಪ್ರೀತಿಯ ಲೋಕದಲ್ಲಿ ಮುಳುಗಿದ್ದವರೇ. ಎಲ್ಲರೂ ಗುಟ್ಟಾಗಿ ಮಾತಾಡಲೆಂದು ಬಂದವರೇ. ಅದನ್ನು ಕಂಡ ಮೇಲೆ- ನೀರಿಗಿಳಿದ ಮೇಲೆ ಮಳೆಯೇನು ಚಳಿಯೇನು ಅನ್ನಿಸಿ ಆಗಷ್ಟೇ ನಡೆದುಬಂದ ಯುವ ಜೋಡಿಗೂ ಮಾತಾಡುವ, ಹಾಗೆಯೇ ಮೈಮರೆಯುವ ಹುಕಿ ಬರುತ್ತಿತ್ತು. ಹೌದು ಆಗೆಲ್ಲ ಪ್ರೇಮಿಗಳಷ್ಟೇ ಅಲ್ಲ, ಕಬ್ಬನ್‌ ಪಾರ್ಕಿಗೂ ಖುಷಿಯಾಗುತ್ತಿತ್ತು!

ಐ ಲವ್‌ ಯೂ ಅಂದಿದ್ದಾಗಿದೆ. ಕೈ ಕೈ ಹಿಡಿದು ಸುತ್ತುವ ಧೈರ್ಯವೂ ಜತೆಗಿದೆ ಅನ್ನುತ್ತಿದ್ದವರೆಲ್ಲ ಬರುತ್ತಿದ್ದುದು ಲಾಲ್‌ಬಾಗಿಗೆ. ಅಲ್ಲಿನ ಕೆರೆಯ ದಡದಲ್ಲಿ ಪ್ರೇಮಿಗಳು ಜಗತ್ತಿನ ಪರಿವೆಯೇ ಇಲ್ಲದೆ ಅಲೆಯುತ್ತಿದ್ದರು. ತಾವು ಜತೆಗಿದ್ದುದಕ್ಕೆ ಸಾಕ್ಷಿಯಾಗಿ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಲಾಲ್‌ಬಾಗ್‌ನ ಮರಗಳ ಹಿಂದೆ ಅಡಗಿ ಕುಳಿತ ಪ್ರೇಮಿಗಳ ಮಧ್ಯೆ ಪ್ರೇಮಿಗಳ ರೊಮ್ಯಾನ್ಸ್‌ ಮಾತ್ರವಲ್ಲ, ಜಗಳವೂ ನಡೆಯುತ್ತಿತ್ತು. ಮುನಿಸಿಕೊಂಡ ಪ್ರೇಮಿಯನ್ನು ಸಮಾಧಾನಿಸುವ, ಕೈ ಮುಗಿದು “ಸಾರಿ’ ಕೇಳುವ ದೃಶ್ಯಗಳು ಅಗ್ಗವಾಗಿ ಕಾಣಿಸುತ್ತಿದ್ದವು. ನೀನಿಲ್ಲದೆ ನಾನು ಬದುಕಿರಲಾರೆ ಎನ್ನುವ ಥರದ ಆದ್ರì ಮಾತುಗಳೂ ಕೇಳಿಬರುತ್ತಿದ್ದವು. 

ಬ್ಯೂಗಲ್‌ರಾಕಿನಲ್ಲಿ “ನಾ ನಿನ್ನ ಬಿಡಲಾರೆ’
ಯಾರು ಏನೇ ಅನ್ನಲಿ, ನಾವು ಪ್ರೀತಿಸೋದೇ ಸೈ, ಜೊತೆಗಿರೋದೇ ಸೈ ಎಂಬಂಥ ಮನೋಭಾವದವರಿಗೆ “ನಾ ನಿನ್ನ ಬಿಡಲಾರೆ’ ಪ್ರೇಮಿಗಳು ಎಂಬ ಹೆಸರಿತ್ತು. ಅವರೆಲ್ಲಾ ಬರುತ್ತಿದ್ದುದು ಬ್ಯೂಗಲ್‌ ರಾಕ್‌ನ ಕಹಳೆ ಬಂಡೆ ಪಾರ್ಕಿಗೆ. ಪ್ರೀತಿಸ್ತಿರೋದು ನಿನ್ನನ್ನೇ, ನನ್ನ ಪ್ರೀತಿಗೆ ಇಲ್ಲಿರುವ ಬಸವಣ್ಣನೇ ಸಾಕ್ಷಿ. ದೇವ್ರಾಣೆ ನಿನ್ನನ್ನು ಮದುವೆಯಾಗುತ್ತೇನೆ ಎಂಬಂಥ ಮಾತು, ಆಣೆ ಪ್ರಮಾಣಗಳಿಗೆಲ್ಲ ಸಾಕ್ಷಿಯಾಗುತ್ತಿದ್ದುದು ಕಹಳೆ ಬಂಡೆ ಪಾರ್ಕ್‌. ಅಕಸ್ಮಾತ್‌, ಯಾರಾದರೂ ಪರಿಚಿತರು ಸಿಕ್ಕರೂ ಈ “ಪ್ರೇಮಿಗಳು’ ಹೆದರುತ್ತಿರಲಿಲ್ಲ. “ನಮ್ಮನೇಲಿ ಹೇಳಿ ಬಂದಿದೀನಿ. ಗಾಬರಿ ಬೀಳ್ಳೋ ಅವಶ್ಯಕತೆಯಿಲ್ಲ’ ಎಂದು ಉಡಾಫೆಯಿಂದಲೇ ಹೇಳಿ, ನಂತರ ಗಾಂಧಿ ಬಜಾರಿಗೋ, ಡಿ.ವಿ.ಜಿ ರಸ್ತೆಗೋ ಹೋಗಿಬಿಡುತ್ತಿದ್ದರು. 

ನಗರದ ಪ್ರೇಮಿಗಳು ಲಗ್ಗೆಯಿಡುತ್ತಿದ್ದ ಇನ್ನೊಂದು ಸ್ಥಳ ಎಂ.ಜಿ.ರಸ್ತೆ. ಅಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಲವರ್‌ ಕೈ ಹಿಡಿದು ನಡೆಯುವುದೆಂದರೆ ಅದರ ಖುಷಿಯೇ ಬೇರೆ. ಮೇಯೋಹಾಲ್‌ ಬಳಿ ಬಸ್‌ ಇಳಿದು, ಅಲ್ಲಿಯೇ ಅವಳ ಕೈಯೊಳಗೆ “ಲಾಕ್‌’ ಮಾಡಿಕೊಂಡು, ಬ್ರಿಗೇಡ್‌ ರಸ್ತೆಗೆ ಜಂಪ್‌ ಮಾಡಿ, ದಾರಿಯುದ್ದಕ್ಕೂ ಸಿಗುತ್ತಿದ್ದ ವಿದೇಶಿ ಮತ್ತು ಮಾಡರ್ನ್ ಲಲನೆಯರನ್ನು ಕಸಿವಿಸಿ ಹಾಗೂ ಬೆರಗುಗಣ್ಣಿನಿಂದ ನೋಡುತ್ತಾ ಪ್ರೇಮಿಗಳ ಟ್ರಿಪ್ಪು ಕೊನೆಗೊಳ್ಳುತ್ತಿತ್ತು.

ದೇವರ ಉತ್ಸವ/ಮದುವೆಮನೆ/ಕವಿಗೋಷ್ಠಿ/ ಕಾಲೇಜಿನ ಅಂಗಳದಲ್ಲಿ ಪರಸ್ಪರ ಮೆಚ್ಚಿಕೊಂಡವರು ಎರಡನೇ ಭೇಟಿಗೆ ಬರುತ್ತಿದ್ದ ಜಾಗವೇ ಮಲ್ಲೇಶ್ವರಂ 8ನೇ ಕ್ರಾಸ್‌. “ಬೆಂಗಳೂರಿಗೆ ಬಂದವರು ಮಲ್ಲೇಶ್ವರಂಗೆ ಬರಲ್ವಾ?’ ಎಂಬ ಮಾತೇ ಆಗ ಚಾಲ್ತಿಯಲ್ಲಿತ್ತು. ಮನೆಯವರಿಗೆ ಬೇರೇನೋ ಕಾರಣ ಹೇಳಿ ಮಲ್ಲೇಶ್ವರಂಗೆ ವೀಕೆಂಡ್‌ನ‌ಲ್ಲಿ ಇಬ್ಬರೂ ಬರುತ್ತಿದ್ದರು. 
ಇಂಥದ್ದೇ ಸಂಭ್ರಮಕ್ಕೆ ಜಯನಗರದ ಶಾಪಿಂಗ್‌ ಕಾಂಪ್ಲೆಕ್ಸ್‌ ಕೂಡಾ ಸಾಕ್ಷಿಯಾಗುತ್ತಿತ್ತು! ಆದರೆ ಈಗ ಬದಲಾಗಿರುವ ನಮ್ಮ ನಗರಿಯ ಜತೆಗೆ ಪ್ರೇಮಿಗಳು ತಮ್ಮ ಪ್ರೀತಿಯನ್ನು ಸಂಭ್ರಮಿಸುವ ರೀತಿಯೂ ಬದಲಾಗಿದೆ.  

ಟಾಪ್ ನ್ಯೂಸ್

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

car-parkala

Road Mishap ಬೈಕ್‌ ಅಪಘಾತ: ಸವಾರ ಸಾವು

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.