ಅನುಭವ ಮಂಟಪಕ್ಕೆ ಶಾ ಭೇಟಿ


Team Udayavani, Feb 27, 2018, 12:43 PM IST

bid-2.jpg

ಬಸವಕಲ್ಯಾಣ (ಬೀದರ):ವಿಶ್ವದ ಪ್ರಥಮ ಪಾರ್ಲಿಮೆಂಟ್‌ ಎಂದೆನಿಸಿಕೊಂಡಿರು12ವ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ  ಭೇಟಿ ಬೆನ್ನಲ್ಲೇ ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭೇಟಿ ನೀಡಿ ಬಸವೇಶ್ವರರ ದರ್ಶನ ಪಡೆದರು. ಬಸವ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಧನ್ಯತೆ ವ್ಯಕ್ತಪಡಿಸಿದರು. ಈ ವೇಳೆ ಒಂದು ಶಬ್ದವನ್ನೂ ಮಾತನಾಡದಿರುವುದು ಬಸವಾನುಯಾಯಿಗಳಲ್ಲಿ ಬೇಸರ ಮೂಡಿಸಿತು.

ಸೇಡಂನಿಂದ ಹೆಲಿಕಾಪ್ಟರ್‌ ಮೂಲಕ ಬಸವಕಲ್ಯಾಣಕ್ಕೆ ಆಗಮಿಸಿ ನೆರವಾಗಿ ಅನುಭವ ಮಂಟಪಕ್ಕೆ ತೆರಳಿದ ಅಮಿತ್‌ ಶಾ ಅವರಿಗೆ ಅನುಭವ ಮಂಟಪ ಟ್ರಸ್ಟ್‌ನಿಂದ ಸ್ವಾಗತ ಕೋರಲಾಯಿತು. ಟ್ರಸ್ಟ್‌ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದ್ದೇವರು ಶಾ ಅವರ ಹಣೆಗೆ ವಿಭೂತಿ ಹಚ್ಚಿ, ರುದ್ರಾಕ್ಷಿ ಮಾಲೆ ಹಾಕಿದರು. ನಂತರ ಶಾಲು, ಪೇಟಾ ಹಾಕಿ ಸನ್ಮಾನ ಮಾಡಿದರು. ಬಸವಣ್ಣನ ನೇತೃತ್ವದಲ್ಲಿ ಶರಣರು ನಡೆಸುತಿದ್ದ ಚಿಂತನೆಯ ಪರಿಕಲ್ಪನೆಯುಳ್ಳ ಭಾವಚಿತ್ರವನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಿದರು. ತದನಂತರ ನೂತನ
ಅನುಭವ ಮಂಟಪ ಮಾದರಿಯ ವಿನ್ಯಾಸದ ಬಗ್ಗೆ ಪಟ್ಟದ್ದೇವರಿಂದ ತಿಳಿದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪಟ್ಟದ್ದೇವರು, 12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಮೊದಲ ಪಾರ್ಲಿಮೆಂಟ್‌ ಆಗಿದೆ. ರಾಜಾಶ್ರಯದ ಕಾಲದಲ್ಲಿ ಪ್ರಜಾಪ್ರಭುತ್ವದ ಮೌಲ್ಯವನ್ನು ಕೊಟ್ಟಿರುವ ಕೇಂದ್ರ ಇದಾಗಿದೆ. ಜಾತಿ- ವರ್ಗ ರಹಿತ, ಹೊಸ ಸಮಾಜ ನಿರ್ಮಾಣಕ್ಕಾಗಿ ಬಸವಣ್ಣನ ನೇತೃತ್ವದಲ್ಲಿ ಮಹಾನ್‌ ಕ್ರಾಂತಿ ಈ ನೆಲದಲ್ಲಿ ನಡೆದಿದೆ. ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನುಭವ ಮಂಟಪದ ಬಗ್ಗೆ ಪ್ರಸ್ತಾಪಿಸುವ ಮೂಲಕ ಪವಿತ್ರ ಕೇಂದ್ರದ ಮೌಲ್ಯಗಳನ್ನು ಜಗತ್ತಿಗೆ ಸಾರಿದ್ದಾರೆ ಎಂದು ಸ್ಮರಿಸಿದರು.

ವಿಶಿಷ್ಟ ಕ್ಷೇತ್ರ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗಿ ಬೆಳೆಯುವ ಮೂಲಕ ಜಗತ್ತಿಗೆ ಬಸವಣ್ಣನವರ ಸಂದೇಶಗಳನ್ನು ಸಾರಬೇಕಿದೆ. ಗುರುನಾನಕ ಜಯಂತಿ ಮಾದರಿಯಲ್ಲಿ ಬಸವಣ್ಣನವರ ಜಯಂತಿಯನ್ನು ಭಾರತ ಸರ್ಕಾರದಿಂದ ದೇಶಾದ್ಯಂತ ಆಚರಣೆಗೆ ತರಬೇಕು ಎಂದು ಮನವಿ ಮಾಡಿದ ಡಾ.ಪಟ್ಟದ್ದೇವರು, ಪ್ರಧಾನಿ ಮೋದಿ ಚಂದ್ರಗುಪ್ತನಾದರೆ, ಅಮಿತ್‌ ಶಾ ಚಾಣುಕ್ಯ ಆಗಿದ್ದಾರೆ ಎಂದು ಬಣ್ಣಿಸಿದರು. 

ಅನುಭವ ಮಂಟಪದಲ್ಲಿ ದರ್ಶನ ಪಡೆದ ಬಳಿಕ ಒಂದು ಶಬ್ದವನ್ನೂ ಮಾತನಾಡದಿರುವುದು, ಬಸವಾದಿ ಶರಣರು ಮತ್ತು ಮಂಟಪದ ಐತಿಹಾಸಿಕ ಮಹತ್ವ ಕುರಿತು ಮಾಹಿತಿಯನ್ನೂ ಪಡೆಯದಿರುವುದು ನೆರೆದಿದ್ದ ಬಸವ ಭಕ್ತರಲ್ಲಿ ನಿರಾಶೆ ಮೂಡಿಸಿತು.

ಡಾ| ಚನ್ನವೀರ ಶಿವಾಚಾರ್ಯರು, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಡಾ| ರಾಜಶೇಖರ ಸ್ವಾಮಿ ಗೋರ್ಟಾ, ಅಕ್ಕ ಅನ್ನಪೂರ್ಣತಾಯಿ, ಡಾ| ಗಂಗಾಂಬಿಕಾ ಪಾಟೀಲ, ಶ್ರೀ ಶಿವಾನಂದ ದೇವರು, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ಸಹ ಪ್ರಭಾರಿ ಪುರಂದೇಶ್ವರಿ, ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ, ಸಂಸದ ಭಗವಂತ ಖೂಬಾ, ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಮತ್ತು ಗುರುನಾಥ ಕೊಳ್ಳೂರ್‌ ಇದ್ದರು.

ಟಾಪ್ ನ್ಯೂಸ್

25

Bramavara: ಕ್ಯಾಬ್‌ ಚಾಲಕ ಸಾವು

24

Surathkal: ಗುತ್ತಿಗೆ ಕಾರ್ಮಿಕ ಬಿದ್ದು ಸಾವು

22

Gurupura: ಖಾಸಗಿ ಬಸ್ಸು, ಬೈಕ್‌ ಢಿಕ್ಕಿ ,ಸವಾರ ಸ್ಥಿತಿ ಗಂಭೀರ

B. Nagendra ರಾಜೀನಾಮೆ ನೀಡಲಿ: ಸಚಿವ ಪ್ರಹ್ಲಾದ ಜೋಶಿ

B. Nagendra ರಾಜೀನಾಮೆ ನೀಡಲಿ: ಸಚಿವ ಪ್ರಹ್ಲಾದ ಜೋಶಿ

ಬಿತ್ತನೆ ಬೀಜ ದರ ಏರಿಕೆ ಸರ್ಕಾರದ ಘನ ಕಾರ್ಯ: ಎಚ್‌ಡಿಕೆ ಟೀಕೆ

ಬಿತ್ತನೆ ಬೀಜ ದರ ಏರಿಕೆ ಸರ್ಕಾರದ ಘನ ಕಾರ್ಯ: ಎಚ್‌ಡಿಕೆ ಟೀಕೆ

Result; ಕೆ-ಸೆಟ್‌ ಪರೀಕ್ಷೆ ಫ‌ಲಿತಾಂಶ ಪ್ರಕಟ: 6,675 ಮಂದಿ ಅರ್ಹ

Result; ಕೆ-ಸೆಟ್‌ ಪರೀಕ್ಷೆ ಫ‌ಲಿತಾಂಶ ಪ್ರಕಟ: 6,675 ಮಂದಿ ಅರ್ಹ

21-

Crime News: ಕಾಸರಗೋಡು ವಿಭಾಗದ ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-bidar

Bidar: ಅಕ್ರಮ ಆಸ್ತಿ: 4 ವರ್ಷ ಶಿಕ್ಷೆ, 25 ಲಕ್ಷ ದಂಡ

1-aasasa

Bidar: ಬ್ರೇಕ್ ಫೇಲ್ ಆಗಿ ಆಲದ ಮರಕ್ಕೆ‌ ಢಿಕ್ಕಿಯಾದ ಸಾರಿಗೆ ಬಸ್

ಜೋಶಿ

Bidar; ಈಗ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಗೆ 35 ಸ್ಥಾನವು ಸಿಗದು: ಜೋಶಿ

4-bidar

Bidar: ಲಿಂಗಾಯತ ಮಹಾಮಠದ ಪೀಠಾಧ್ಯಕ್ಷರಾದ‌ ಅಕ್ಕ ಅನ್ನಪೂರ್ಣ ತಾಯಿ ನಿಧನ

ಎನ್‌ಇಪಿ ರದ್ದು, ರಾಜಕೀಯ ಪ್ರೇರಿತ: ಬೊಮ್ಮಾಯಿ

Bidar; ಎನ್‌ಇಪಿ ರದ್ದು ರಾಜಕೀಯ ಪ್ರೇರಿತ: ಬೊಮ್ಮಾಯಿ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

25

Bramavara: ಕ್ಯಾಬ್‌ ಚಾಲಕ ಸಾವು

24

Surathkal: ಗುತ್ತಿಗೆ ಕಾರ್ಮಿಕ ಬಿದ್ದು ಸಾವು

23-

Mangaluru: ರೈಲು ನಿಲ್ದಾಣದ ಬಳಿ ವೈದ್ಯರ ಮೊಬೈಲ್‌ ಕಸಿದು ಪರಾರಿ 

22

Gurupura: ಖಾಸಗಿ ಬಸ್ಸು, ಬೈಕ್‌ ಢಿಕ್ಕಿ ,ಸವಾರ ಸ್ಥಿತಿ ಗಂಭೀರ

B. Nagendra ರಾಜೀನಾಮೆ ನೀಡಲಿ: ಸಚಿವ ಪ್ರಹ್ಲಾದ ಜೋಶಿ

B. Nagendra ರಾಜೀನಾಮೆ ನೀಡಲಿ: ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.