ಆ ಸಂಭ್ರಮದ ಕ್ಷಣ ಪ್ರದರ್ಶನ ಆಗಬಾರ್ದು…


Team Udayavani, May 2, 2018, 12:36 PM IST

aa-sambrama.jpg

ತಾಯಿ, ಮಗುವಿಗೆ ಹಾಲೂಡಿಸುತ್ತಾಳಲ್ಲ; ಅದು ಪವಿತ್ರವಾದ ಕೆಲಸ. ಅಮ್ಮ-ಮಗು ಸಂಭ್ರಮಿಸುವ ಆ ಸಂದರ್ಭಕ್ಕೆ ಒಂದು ಘನತೆಯಿದೆ. ಗೌರವವಿದೆ. ಅದನ್ನು ನಾವೆಂದೂ ಪ್ರದರ್ಶನದ ವಸ್ತುವನ್ನಾಗಿ ನೋಡಬಾರದು. 

ಇತ್ತೀಚೆಗೆ, ಮಲಯಾಳಂನ “ಗೃಹಲಕ್ಷ್ಮಿ’ ಮ್ಯಾಗಜಿನ್‌ನ ಮುಖಪುಟ ಬಹಳ ಸುದ್ದಿ ಮಾಡಿತ್ತು. ತಾಯಿಯೊಬ್ಬಳು ಮಗುವಿಗೆ ಸಾರ್ವಜನಿಕವಾಗಿ ಸ್ತನ್ಯಪಾನ ಮಾಡಿಸುವ ಚಿತ್ರಕ್ಕೆ ನಟಿಯೊಬ್ಬರು ರೂಪದರ್ಶಿಯಾಗಿದ್ದರು. ಆ ಫೋಟೋ ಎಲ್ಲರ ಬಾಯಲ್ಲೂ, ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿತ್ತು. ಆ ಕುರಿತು ಪರ, ವಿರೋಧ ಚರ್ಚೆ ನಡೆಯಿತು. ಗೌಪ್ಯವಾಗಿರಬೇಕಾದ ಒಂದು ಶ್ರೇಷ್ಠ ಕ್ರಿಯೆಯನ್ನು ಪ್ರದರ್ಶನ ಮಾಡಿ ಸ್ತ್ರೀಯರ ಮರ್ಯಾದೆಯನ್ನು ಆ ಚಿತ್ರನಟಿ ಹರಾಜಿಗಿಟ್ಟಿದ್ದಾರೆ ಎಂದು ಮಹನೀಯರೊಬ್ಬರು ಕೋರ್ಟಿನ ಮೆಟ್ಟಿಲನ್ನೂ ಹತ್ತಿದ್ದರು. 

ಈ ಮುಖಪುಟಕ್ಕೆ ಬೆಂಬಲ ಸೂಚಿಸಿದವರೂ ಇದ್ದಾರೆ. ಇಶ್ಶೀ ಎಂದು ಮೂಗು ಮುರಿದವರೂ ಇದ್ದಾರೆ. ಬೆಂಬಲ ಸೂಚಿಸಿದರೆ, ನಮಗೆ ಯಾವ ಪೂರ್ವಗ್ರಹ ಇಲ್ಲ. ನಾವು ಬಿಂದಾಸ್‌ ಮನಸ್ಸಿನವರು ಎಂದು ಬಿಂಬಿತವಾಗುತ್ತೇವೆ ಎಂದೋ ಅಥವಾ ವಿರೋಧಿಸಿದರೆ, ನಾವು ಪೂರ್ವಗ್ರಹಪೀಡಿತ ಮನಸ್ಸಿನವರು. ಸಂಕುಚಿತ ಮನೋಭಾವದವರು ಎಂಬ ಹಣೆಪಟ್ಟಿ ಹಚ್ಚುತ್ತಾರೆ ಎಂದೋ ಯೋಚಿಸಿ, ಏನೂ ಹೇಳದೆ ತಟಸ್ಥ ಮನೋಭಾವ ಹೊಂದಿದವರೂ ಇದ್ದಾರೆ. ಅದೇನೇ ಇದ್ದರೂ, ನಮ್ಮ ಸಂಸ್ಕೃತಿ, ಸಂಸ್ಕಾರ ಎಂದು ಕೆಲವನ್ನು  ಪರದೆಯ ಹಿಂದಿಟ್ಟೇ ನೋಡುವ ಭಾರತದಂಥ ದೇಶದಲ್ಲಿ ಇಂಥ ಮುಖಪುಟದ ಅಗತ್ಯವಿರಲಿಲ್ಲ ಎನಿಸುತ್ತದೆ.

ತಾಯಿ ತನ್ನ ಮಗುವಿಗೆ ಮೊಲೆಹಾಲು ಕುಡಿಸುವುದು ತೀರಾ ಸಹಜ. ಅದನ್ನು ಆಕೆಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಭಾರತದಲ್ಲಿ ಯಾವ ತಾಯಿಯೂ ಹಾಗೆ ತನ್ನ ಮಗುವಿಗೆ ಸಾರ್ವಜನಿಕವಾಗಿ ಮೊಲೆಹಾಲು ಕುಡಿಸುವುದೂ ಇಲ್ಲ. ಸೆರಗನ್ನು ಮರೆಮಾಡಿ ಅಥವಾ ಒಂದು ಬಟ್ಟೆಯನ್ನಾದರೂ ಪರದೆಯಂತೆ ಮರೆಮಾಡಿ ಕುಡಿಸುತ್ತಾಳೆ. ಇದರ ಉದ್ದೇಶಗಳು ಎರಡು. ಒಂದು, ಮಗು ಹಾಲು ಕುಡಿಯುವಾಗ ಯಾರೂ ನೋಡಬಾರದು, ನೋಡಿದರೆ ದೃಷ್ಟಿ ತಾಕಿ ಮಗುವಿಗೆ ಆರೋಗ್ಯ ಕೆಡುತ್ತದೆ ಎಂಬ ಕಾಳಜಿ.

ಮತ್ತೂಂದು; ತನ್ನ ತೀರಾ ಖಾಸಗಿಯಾದ ಅಂಗಾಂಗವನ್ನು ಹಾಗೆ ಪ್ರದರ್ಶಿಸುವುದು ಸರಿಯಲ್ಲ ಎಂಬ ಭಾವನೆ/ನಂಬಿಕೆ. ಏಕೆಂದರೆ ಹೆಣ್ಣಿನಲ್ಲಿ ಗೌಪ್ಯತೆ, ಮರ್ಯಾದೆ ಎನ್ನುವುದು ಸದಾ ಜಾಗೃತವಾಗಿರುತ್ತದೆ. ಹೆಣ್ಣು, ಬಾಲ್ಯದಲ್ಲಿ ಬೊಂಬೆಯಾಟ ಆಡುತ್ತಾ ಬೊಂಬೆಯನ್ನು ತನ್ನು ಮಗುವೆಂದು ಭಾವಿಸಿ ಹಾಲು ಕುಡಿಸುವಂತೆ ನಟಿಸುತ್ತಾಳೆ. ಆಗ ಯಾರೂ ಅವಳಿಗೆ ಹೇಳಿಕೊಡದೆಯೂ ಒಂದು ಟವಲನ್ನೋ, ಒಂದು ವಸ್ತ್ರವನ್ನೋ ಎದೆಯ ಮೇಲೆ ಸೆರಗಿನಂತೆ ಹೊದ್ದುಕೊಂಡೇ ಹಾಲೂಡಿಸುವ ನಟನೆ ಮಾಡುತ್ತಾಳೆ. 

ಹೆಣ್ಣು ತನ್ನ ಮಗುವಿಗೆ ಹಾಲೂಡಿಸುವಾಗ ಸ್ವತಃ ಅವಳ ಗಂಡನಿಗೂ ಅಲ್ಲಿ ಪ್ರವೇಶ ನಿಷಿದ್ಧ. ಹೀಗಿರುವಾಗ ಸಾರ್ವಜನಿಕ ಪ್ರದರ್ಶನ ಎಲ್ಲಿ ಬಂತು? ಬಾಣಂತಿ ಇರುವ ಮನೆಯಲ್ಲಿ ಹಿರಿಯ ಅಜ್ಜಿ ಇದ್ದರೆ, ಹೇಗೆ ಹಾಲು ಕುಡಿಸಬೇಕು, ಎಲ್ಲರಿಗೂ ಕಾಣದಂತೆ ಹೇಗೆ ಮರೆಮಾಡಿಕೊಳ್ಳಬೇಕು ಎಂಬ ಪ್ರಥಮ ಪಾಠ ಮಗುವಿನ ತಾಯಿಗೆ ಆಗಿರುತ್ತದೆ. ಗಂಡ ಹೆಂಡಿರ ಸಂಬಂಧ ಎಷ್ಟು ಖಾಸಗಿಯೋ, ಅಷ್ಟೇ ಖಾಸಗಿ ಕ್ರಿಯೆ ಈ ಸ್ತನ್ಯಪಾನ.

ಅಕಸ್ಮಾತ್‌ ಸಾರ್ವಜನಿಕ ಸ್ಥಳಗಳಲ್ಲಿ ತಾಯಿ ತನ್ನ ಮಗುವಿಗೆ ಹಾಲುಣಿಸಬೇಕಾಗಿ ಬಂದರೂ ಮರೆಗೆ ಹೋಗಿ ಜನರಿಗೆ ಬೆನ್ನು ಮಾಡಿ ಕುಳಿತು ಕುಡಿಸುತ್ತಾಳೆ. ಸೆರಗನ್ನು ಮರೆ ಮಾಡಿಕೊಳ್ಳುತ್ತಾಳೆಯೇ ವಿನಾ ಜನರಿಗೆ ಕಾಣುವ ಹಾಗೆ ಹಾಲು ಕುಡಿಸುವುದಿಲ್ಲ. ಸಾರ್ವಜನಿಕವಾಗಿ ಸ್ತನ್ಯಪಾನ ಮಾಡಿಸುತ್ತಿರುವ ಚಿತ್ರ ಪ್ರಕಟಿಸಿದ್ದರ ಉದ್ದೇಶ, ವಿಶ್ವದಲ್ಲಿರುವ ಎಲ್ಲಾ ಸ್ತ್ರೀಯರೂ ಅಥವಾ ಎಲ್ಲಾ ಅಮ್ಮಂದಿರೂ ಒಂದೇ. ಇಲ್ಲಿ ಭೇದಭಾವವಿಲ್ಲ ಎಂಬುದೇ ಆಗಿರಬಹುದು.

ಆದರೆ ಸಾರ್ವಜನಿಕವಾಗಿ ಯಾವುದೇ ಮುಜುಗರವಿಲ್ಲದೆ ಹೆಣ್ಣು ಗಂಡು ಪರಸ್ಪರ ಚುಂಬಿಸಿಕೊಳ್ಳುವಂಥ ಪಾಶ್ಚಾತ್ಯ ದೇಶಗಳಲ್ಲಿ ಸಾರ್ವಜನಿಕವಾಗಿ ಹಾಲು ಕುಡಿಸುವುದು ಅಲ್ಲಿನ ಸಂಸ್ಕೃತಿಗೆ ತಪ್ಪು ಎನಿಸುವುದಿಲ್ಲ. ಅಂಥ ದೇಶಗಳಲ್ಲಿ ಮಾತ್ರ ಹಾಲುಡಿಸುವ ಸಂದರ್ಭದ ಸಾರ್ವಜನಿಕ ಪ್ರದರ್ಶನ ಸರಿಯೆನಿಸಬಹುದೇನೋ?  ತಾಯಿ ತನ್ನ ಮಗುವಿಗೆ ಹಾಲೂಡಿಸುವುದು ಅತ್ಯಂತ ಪವಿತ್ರವಾದ ಕೆಲಸ. ಅದರಲ್ಲೂ ಕೊಂಕು ತೆಗೆಯುವ ಜನಕ್ಕೆ ಇನ್ನೆಂಥಾ ಹುಳುಕು ಮನಸ್ಸಿರಬಹುದು ಎನ್ನುವವರಿದ್ದಾರೆ.

ಅಕ್ಕಮಹಾದೇವಿ, ಲೌಕಿಕ ಬಂಧನಗಳ ಗೊಡವೆಯೇ ಬೇಕಿಲ್ಲವೆಂದು ಉಟ್ಟ  ಬಟ್ಟೆಯನ್ನೂ ಎಸೆದು ಬೆತ್ತಲೆಯಾಗಿ, ತನ್ನ ದಟ್ಟ ತಲೆಗೂದಲಿನಿಂದ ಮಾನವನ್ನು ಮುಚ್ಚಿಕೊಂಡಿರುತ್ತಾಳೆ. ಅವಳು ಅನುಭವ ಮಂಟಪಕ್ಕೆ ಬಂದಾಗ ಅಲ್ಲಮ ಪ್ರಭು, “ತಾಯಿ, ಲೌಕಿಕದ ಗೊಡವೆಯೇ ಬೇಡವೆಂದು ಉಟ್ಟ ಬಟ್ಟೆಯನ್ನೂ ಬಿಸುಟವಳು ನೀನು. ಕೇಶದಿಂದ ನಿನ್ನ ಗೌಪ್ಯತೆಯನ್ನು ಕಾಪಾಡಿಕೊಂಡಿರುವ ಉದ್ದೇಶವೇನು? ನಿನ್ನಲ್ಲಿ ಇನ್ನೂ ಮನೋವಿಕಾರಗಳೇನಾದರೂ ಉಳಿದಿದೆಯೇ?’ ಎಂದು ಕೇಳುತ್ತಾರೆ.

ಅದಕ್ಕೆ ಅಕ್ಕ ಉತ್ತರಿಸುತ್ತಾಳೆ, “ಪ್ರಭುವೇ, ಕೇಶದಿಂದ ಮೈಮುಚ್ಚಿಕೊಂಡಿರುವುದು ನನ್ನ ಮನೋವಿಕಾರಕ್ಕಾಗಿ ಅಲ್ಲ. ನಿಮ್ಮಲ್ಲಿ (ಸಾರ್ವಜನಿಕರಲ್ಲಿ) ಮನೋವಿಕಾರಗಳೇನೂ ಮೂಡದಿರಲಿ ಎಂದು’. ಸಾರ್ವಜನಿಕವಾಗಿ ತಾಯಿ ತನ್ನ ಮಗುವಿಗೆ ಹಾಲೂಡಿಸಬೇಕಾದಾಗ ಸೆರಗಿನಿಂದ ಮರೆಮಾಡಿಕೊಳ್ಳುವುದು, ಕಂದನಿಗೆ ಸ್ತನ್ಯಪಾನ ಮಾಡಿಸುವುದು ಪವಿತ್ರವಾದ ಕಾರ್ಯವೇ ಆದರೂ ಅದನ್ನು ನೋಡುವವರಿಗೆ ಕೆಟ್ಟ ಯೋಚನೆ ಬಾರದಿರಲಿ ಎಂಬ ಉದ್ದೇಶದಿಂದ ಇರಬಹುದಲ್ಲವೇ? 

ತಾಯಿಯ ಹಾಲು ಅತ್ಯಂತ ಪುಷ್ಟಿದಾಯಕವಾದದ್ದು , ಅದರಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಎಲ್ಲ ತಾಯಂದಿರೂ ಕಡ್ಡಾಯವಾಗಿ ಮಗುವಿಗೆ ಹಾಲೂಡಿಸಬೇಕು ಎಂದು ಪ್ರಚಾರ ಮಾಡುವುದು ಒಳ್ಳೆಯದೇ. ಆದರೂ ಹೀಗೆ ಸಾರ್ವಜನಿಕ ವಸ್ತು ಪ್ರದರ್ಶನಕ್ಕಿಟ್ಟಂತೆ ತೋರುವುದು ಚೆಂದವಲ್ಲ. ತಾಯಿ ತನ್ನ ಮಗುವಿಗೆ ಹಾಲೂಡಿಸುವ ಕ್ರಿಯೆಯಲ್ಲೂ  ಒಂದು ಘನತೆಯಿದೆ, ಗೌರವವಿದೆ. ಅದನ್ನು ನಾವೆಂದೂ ಪ್ರದರ್ಶನದ ವಸ್ತುವಾಗಿಸಬಾರದು. 

* ವೀಣಾ ರಾವ್‌

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.