ರಸಪೂರಿ ಚೆಲುವು


Team Udayavani, May 18, 2018, 6:00 AM IST

k-18.jpg

ಸಿಪ್ಪೆ ಸುಲಿದು ಕತ್ತರಿಸಿದರೆ ಸವಿಯಾದ ಹೋಳು, ಏಲಕ್ಕಿ-ಸಕ್ಕರೆ-ಹಾಲು ಸೇರಿಸಿದರೆ ರಸಾಯನ, ಮಿಕ್ಸಿಗೆ ಹಾಕಿದರೆ ತಣ್ಣನೆಯ ಜ್ಯೂಸು… ಹೀಗೆ ಮಾವಿನ ಉಪಯೋಗಗಳು ಅನೇಕ. ಅಬ್ಟಾ , ಅಂತೂ ಮಾವಿನ ಸೀಸನ್‌ ಬಂತಲ್ಲ ಅಂತ ಮಾವುಪ್ರಿಯರು ಸಂಭ್ರಮಿಸುತ್ತಿದ್ದಾರೆ. ವಿವಿಧ ಜಾತಿಯ, ರುಚಿಯ, ವಾಸನೆಯ ಮಾವುಗಳು ಕೇವಲ ತಿನ್ನಲಷ್ಟೇ ಅಲ್ಲ,  ಫೇಸ್‌ಪ್ಯಾಕ್‌ ಆಗಿಯೂ ಚರ್ಮಕ್ಕೆ ತಂಪು ತಂಪು. ಮಾವಿನ ಕೆಲವು ಫೇಸ್‌ಪ್ಯಾಕ್‌ ಇಲ್ಲಿವೆ…

ಮಾವು-ಮುಲ್ತಾನಿ ಮಿಟ್ಟಿ
ಚೆನ್ನಾಗಿ ಹಣ್ಣಾದ ಮಾವಿನ ಸಿಪ್ಪೆ ಸುಲಿದು ಅದರ ತಿರುಳಿಗೆ 2-3 ಚಮಚ ಮುಲ್ತಾನಿ ಮಿಟ್ಟಿ ಸೇರಿಸಿ ಚೆನ್ನಾಗಿ ಕಲಸಿ. ಟೂತ್‌ಪೇಸ್ಟಿನ ಹದಕ್ಕೆ ಬಂದ ಮೇಲೆ ಅದನ್ನು ಮುಖಕ್ಕೆ ಹಚ್ಚಿ. ಇತರ ಫೇಸ್‌ಪ್ಯಾಕ್‌ಗಳಂತೆ ಇದು ಸುಲಭದಲ್ಲಿ ಒಣಗುವುದಿಲ್ಲ. 15 ನಿಮಿಷದ  ನಂತರ ವೃತ್ತಾಕಾರವಾಗಿ ಮಸಾಜ್‌ ಮಾಡುತ್ತಾ ತಣ್ಣೀರಿನಿಂದ ಮುಖ ತೊಳೆಯಿರಿ. ಮುಖದ ಚರ್ಮ ಮೃದುವಾಗುವುದಲ್ಲದೆ, ಸಾಕಷ್ಟು ತೇವಾಂಶವೂ ಸಿಗುತ್ತದೆ.

ಮಾವು-ಬಾದಾಮಿ-ಹಾಲು
ಮಧ್ಯಮ ಗಾತ್ರದ ಮಾವಿನ ಹಣ್ಣಿನ ತಿರುಳಿಗೆ, 8-9 ಬಾದಾಮಿ ಅರೆದು ಅದರ ಪೇಸ್ಟ್‌ ಅನ್ನು ಸೇರಿಸಿ. ಅದಕ್ಕೆ 2 ಚಮಚ ಹಾಲು, 2-3 ಚಮಚ ಓಟ್ಸ್‌ , 3 ಚಮಚ ಮುಲ್ತಾನಿ ಮಿಟ್ಟಿ ಸೇರಿಸಿ. ಎಲ್ಲವನ್ನೂ ಒಟ್ಟಿಗೆ ಸೇರಿಸಿ ಅರೆದು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ತೊಳೆಯಿರಿ. ಈ ಫೇಸ್‌ಪ್ಯಾಕ್‌ ಅನ್ನು ಎಲ್ಲ ರೀತಿಯ ಚರ್ಮದವರೂ ವಾರಕ್ಕೊಮ್ಮೆ ಬಳಸಬಹುದು.

ಮಾವು-ಮೊಸರು-ರೋಸ್‌ವಾಟರ್‌
ಕಳಿತ ಮಾವಿನ ತಿರುಳಿಗೆ 3 ಚಮಚ ಮುಲ್ತಾನಿ ಮಿಟ್ಟಿ ಸೇರಿಸಿ. ಅದಕ್ಕೆ ಒಂದು ಚಮಚ ಮೊಸರು, ಒಂದು ಚಮಚ ರೋಸ್‌ ವಾಟರ್‌ ಸೇರಿಸಿ ನುಣ್ಣಗಿನ ಪೇಸ್ಟ್‌ ಮಾಡಿ. ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖವನ್ನು ಸðಬ್‌ ಮಾಡಿ ತೊಳೆಯಿರಿ. ರೋಸ್‌ವಾಟರ್‌ ಬಳಸುವುದರಿಂದ ಈ ಫೇಸ್‌ಪ್ಯಾಕ್‌ ಸೂಕ್ಷ್ಮ ಚರ್ಮದವರಿಗೂ ಹೊಂದುತ್ತದೆ.

ಮಾವು-ಕಡಲೆ ಹಿಟ್ಟು
ಮಾವಿನ ಹಣ್ಣಿನ ತಿರುಳಿಗೆ ನಾಲ್ಕು ಚಮಚ ಕಡಲೆಹಿಟ್ಟು, ಬಾದಾಮಿ ಪುಡಿ, 1 ಚಮಚ ಜೇನುತುಪ್ಪ ಸೇರಿಸಿ ಪೇಸ್ಟ್‌ ಮಾಡಿಕೊಳ್ಳಿ. ಬಿಸಿಲಿಗೆ ಕಪ್ಪಾದ ಕುತ್ತಿಗೆ, ಮುಖ, ಕೈಗೆಲ್ಲ ಪೇಸ್ಟ್‌ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಬಿಸಿಲಿನಿಂದ ಕಪ್ಪಾದ ಚರ್ಮ ಸಹಜ ಬಣ್ಣಕ್ಕೆ ತಿರುಗುತ್ತದೆ.

ಮಾವು-ಕಂದು ಸಕ್ಕರೆ
ಮಾವಿನ ತಿರುಳಿಗೆ ಎರಡು ಚಮಚ ಹಸಿಹಾಲು, ಜೇನುತುಪ್ಪ, ಅರ್ಧ ಕಪ್‌ ಕಂದು ಸಕ್ಕರೆ (ಸಾವಯವ ಬ್ರೌನ್‌ ಶುಗರ್‌) ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಆ ಪೇಸ್ಟ್‌ ಅನ್ನು ಮೈಗೆಲ್ಲಾ ಹಚ್ಚಿ , ಅರ್ಧ ಗಂಟೆ ಒಣಗಲು ಬಿಟ್ಟು ಅರೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಮೈಕಾಂತಿ ಹೆಚ್ಚುತ್ತದೆ.

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.