ಮ್ಯಾಂಗೋ ಮಹೋತ್ಸವ! ಬನ್ನಿರಿ ಬನ್ನಿರಿ ಮಾವಿನ ಮನೆಗೆ


Team Udayavani, May 19, 2018, 3:56 PM IST

5.jpg

ಬೇಸಗೆ ಕಾಲದಲ್ಲಿ ಎಲ್ಲರ ಕಣ್ಣು ಹಣ್ಣಿನಂಗಡಿಯತ್ತಲೇ ಹೊರಳಿರುತ್ತದೆ. ಮಾವಿನ ಹಣ್ಣು ಮಾರ್ಕೆಟ್‌ಗೆ ಬಂದಾಯ್ತ? ಯಾವ್ಯಾವ ಮಾವಿನ ತಳಿಗೆ ಎಷ್ಟು ದರ? ಹಣ್ಣು ಹುಳಿ ಇದೆಯಾ ಅಥವಾ ಸಿಹಿ ಹಣ್ಣೇ ಸಿಗುತ್ತಿದೆಯಾ…? ಇವೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆಂದರೆ ಅವರು ಮಾವು ಪ್ರಿಯರೆಂದು ಕಣ್ಮುಚ್ಚಿ ಹೇಳಿಬಿಡಬಹುದು. ಈ ಬಾರಿ ಹೀಗೆ ಕಾಯುತ್ತಿದ್ದವರನ್ನು “ಹಣ್ಣುಗಳ ರಾಜ’ ಸ್ವಲ್ಪ ಜಾಸ್ತಿಯೇ ಕಾಯಿಸಿದ್ದಾನೆ. ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಫ‌ಸಲು ಸ್ವಲ್ಪ ತಡವಾಗಿ ಸಿಕ್ಕಿರುವದು ಇದಕ್ಕೆ ಕಾರಣ. ಲೇಟಾದರೇನಂತೆ, ಲೇಟೆಸ್ಟಾಗಿ ಜನರ ಬಾಯಲ್ಲಿ ನೀರೂರಿಸಲು ಮಾವು ತಯಾರಾಗುತ್ತಿದೆ. ಮಾವು ಪ್ರಿಯರು ಕಾತರದಿಂದ ಎದುರು ನೋಡುತ್ತಿರುವ ಲಾಲ್‌ಬಾಗ್‌ ಮಾವು ಮೇಳ ಮೇ 25ರಿಂದ ಪ್ರಾರಂಭಗೊಳ್ಳುತ್ತಿದೆ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ನಡೆಯುತ್ತದೆ ಈ ಮೇಳ. ಸುಮಾರು 25-30 ದಿನಗಳ ಕಾಲ ಲಾಲ್‌ಬಾಗ್‌ನಲ್ಲಿ ಹಣ್ಣುಗಳ ರಾಜನ ದರ್ಬಾರು ನಡೆಯಲಿದೆ.    
   
“ತಳಿ’ರು ತೋರಣ
ಈ ವರ್ಷ ಕಡಿಮೆ ಇಳುವರಿಯ ಕಾರಣದಿಂದ ಮಾವಿನ ದರ ಹೆಚ್ಚಿದ್ದು, ಈಗ ಸಿಗುತ್ತಿರುವ ಹಣ್ಣುಗಳು ರುಚಿಯ ವಿಷಯದಲ್ಲಿ ಅಷ್ಟಕ್ಕಷ್ಟೆ ಎಂದು ಬೇಸರಿಸುವ ಗ್ರಾಹಕರು ಲಾಲ್‌ಬಾಗ್‌ ಮಾವು ಮೇಳಕ್ಕೆ ಭೇಟಿ ನೀಡಬಹುದು. ಅಲ್ಲಿ ಖಂಡಿತ ನಿರಾಸೆಯಾಗದು. ಮೇಳದಲ್ಲಿ ಸುಮಾರು 40-50 ಮಾವಿನ ಮಳಿಗೆಗಳು ಇರಲಿವೆ. ಅಮ್ರಪಾಲಿ, ನೀಲಂ, ಆಲ್ಫಾನ್ಸೊ, ಬೈಗಾನ್‌ಪಲ್ಲಿ, ಮಲ್ಲಿಕಾ, ಬಾದಾಮಿ, ದಶೇರಿ, ಕಾಲಪ್ಪಾಡು, ಕೇಸರ್‌, ಮಲಗೋವ, ರಸಪುರಿ, ಸೇಂಧೂರ, ತೋತಾಪುರಿ, ಆಮೇಟ್‌, ರುಮಾನಿಯಾ, ಬೆನೆಶಾನ್‌, ಖಾದರ್‌, ಅರ್ಕಾ ನೀಲಕರಣ, ಮಲಗೋವಾ, ಅರ್ಕಾ ಪುನಿತ, ಸಿಂಧು, ಪೈರಿ, ಅರ್ಕಾ ಅರುಣ, ದಶಹರಿ, ತೋತಾಪುರಿ ಇತ್ಯಾದಿ ಜಾತಿಗಳ ಮಾವುಗಳು ಇಲ್ಲಿ ದೊರೆಯಲಿವೆ. ಇಷ್ಟು ಆಯ್ಕೆಗಳನ್ನು ಓದುತ್ತಿದ್ದಂತೆಯೇ ಅನೇಕರ ಬಾಯಲ್ಲಿ ನೀರೂರಿರುತ್ತದೆ. ಇನ್ನು ರುಚಿ ನೋಡಿದರೆ?!

ಮನೆಬಾಗಿಲಿಗೇ ಮಾವು
ಮಾವಿನ ಮೇಳಕ್ಕೆ ಹೋಗಿ ಅಲ್ಲಿ ರಾಶಿ ರಾಶಿ ಹಣ್ಣುಗಳನ್ನು ಕಣ್ತುಂಬಿಕೊಂಡು, ಚೀಲವನ್ನೂ ತುಂಬಿಸಿಕೊಂಡು ಮನೆಗೆ ಮರಳುವ ಖುಷಿಯೇ ಬೇರೆ. ಇನ್ನು ಕೆಲವರು ಅಲ್ಲಿಯವರೆಗೆ ಕಾಯಲಾರದೆ ಇರುವವರು ಆನ್‌ಲೈನಿನಲ್ಲಿ ಆರ್ಡರ್‌ ಮಾಡಬಹುದು. ನಾವು ನಮಗೆ ಬೇಕಾದ ವಸ್ತುಗಳನ್ನು ಶಾಪಿಂಗ್‌ ವೆಬ್‌ಸೈಟಿನಿಂದ ಇಂಟರ್‌ನೆಟ್‌ ಮೂಲಕ ಹೇಗೆ ಖರೀದಿಸುತ್ತೇವೋ ಅದೇ ರೀತಿ ಉತ್ತಮ ಗುಣಮಟ್ಟದ ಮಾವನ್ನು ಖರೀದಿಸಬಹುದು. “ಮ್ಯಾಂಗೊ ಟಾಸ್ಟಿಕ್‌’ ಅಂಥ ವೆಬ್‌ಸೈಟ್‌ಗಳಲ್ಲೊಂದು. 

ಮ್ಯಾಂಗೋ ಮಾರುವ ಟೆಕ್ಕಿ
ಮ್ಯಾಂಗೊ ಟಾಸ್ಟಿಕ್‌ ಅನ್ನು ಪ್ರಾರಂಭಿಸಿದವರು ರವೀಂದ್ರ ಬಾಬು ಎಂಬ ಐಟಿ ಉದ್ಯೋಗಿ. 14 ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದ ಅವರು, ತಂತ್ರಜ್ಞಾನ ಹಾಗೂ ಮಾರ್ಕೆಟಿಂಗ್‌ ವಿಷಯದಲ್ಲಿ ಪರಿಣತರು. ಆ ಜ್ಞಾನವನ್ನು ಬಳಸಿಕೊಂಡು ಅವರು ಈ ಆನ್‌ಲೈನ್‌ ತಾಣವನ್ನು ರೂಪಿಸಿದರು. ಮೂಲತಃ ಕೋಲಾರದವರಾಗಿ, ಮಾವು ಬೆಳೆಗಾರರನ್ನು ಹತ್ತಿರದಿಂದ ನೋಡಿರುವ ಅವರು ಕೋಲಾರ, ಶ್ರೀನಿವಾಸಪುರ ಹಾಗೂ ಉತ್ತರಕರ್ನಾಟಕದ ಕೆಲ ಭಾಗಗಳಿಂದ ರುಚಿರುಚಿಯಾದ ಹಣ್ಣುಗಳನ್ನು ಖರೀದಿಸಿ, ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಇವರಂತೆಯೇ ಅನೇಕರು ಆನ್‌ಲೈನ್‌ ಮಾವು ಮಳಿಗೆಗಳನ್ನು ತೆರೆದಿದ್ದಾರೆ. ಮಲಾ°ಡ್‌ ಮ್ಯಾಂಗೋ, ಬಿಗ್‌ ಬಾಸ್ಕೆಟ್‌, ಗ್ರೋಫ‌ರ್ನಿಂದಲೂ ಮಾವಿನಹಣ್ಣುಗಳ ರುಚಿಯನ್ನು ಮಾವುಪ್ರಿಯರು ಸವಿಯಬಹುದು.

ರೇಟ್‌ ಎಷ್ಟು?
“ಮ್ಯಾಂಗೊ ಟಾಸ್ಟಿಕ್‌’ನಲ್ಲಿ ಆಲ#ನ್ಸೊ, ಬಂಗನಪಲ್ಲಿ, ಮಲ್ಲಿಕಾ, ಸಿಂಧೂರ, ಮಲ್ಲಿಕ ಹಾಗೂ ತೋತಾಪುರಿ ಹಣ್ಣುಗಳು ದೊರೆಯಲಿವೆ. ಖರೀದಿಸುವಾಗ ಬಾಕ್ಸ್‌ ಲೆಕ್ಕದಲ್ಲಿ ಖರೀದಿಸಬೇಕಾಗುತ್ತದೆ. ಒಂದು ಬಾಕ್ಸ್‌ನಲ್ಲಿ 3 ಕೆಜಿ ಹಣ್ಣುಗಳಿರುತ್ತವೆ. ಡೆಲಿವರಿ ಶುಲ್ಕ ಪ್ರತ್ಯೇಕ. ಆರ್ಡರ್‌ ಮಾಡಿದ ಕೆಲ ದಿನಗಳಲ್ಲಿ, ಮಾವಿನರಾಜ ಮನೆ ಬಾಗಿಲಿಗೆ ಬರುತ್ತಾನೆ. 

“ನಾನು ಮೂಲತಃ ಕೋಲಾರದವನು. ಅಲ್ಲಿನ ಮಾವು ಬೆಳೆಗಾರರ ಸ್ಥಿತಿ ಚೆನ್ನಾಗಿ ಗೊತ್ತಿತ್ತು. ಅಲ್ಲಿ ಮಾವು ಬೆಳೆದು ಲಾಭ ಮಾಡಿದವರ ಸಂಖ್ಯೆ ಬಹಳ ಕಡಿಮೆ. ಮಾವಿನ ತೋಟವನ್ನು ಭೋಗ್ಯಕ್ಕೆ ಕೊಟ್ಟರೆ ಲಾಭಕ್ಕಿಂತ ನಷ್ಟವಾಗುವುದೇ ಜಾಸ್ತಿ. ಮಂಡಿಗೆ ಹಾಕಿದರೆ ಮಾರುಕಟ್ಟೆ ದರಕ್ಕಿಂತ 10-15% ಹೆಚ್ಚು ಸಿಗಬಹುದು. ಹಾಗಾಗಿ ನಾನು ಮಾವಿನ ಆನ್‌ಲೈನ್‌ ಮಾರ್ಕೆಟಿಗ್‌ ಶುರು ಮಾಡುವ ಯೋಚನೆ ಬಂತು. ಕೋಲಾರ, ಶ್ರೀನಿವಾಸಪುರದ ಸುತ್ತಮುತ್ತಲಿನ ತೋಟ ಹಾಗೂ ಉತ್ತರಕರ್ನಾಟಕದ ಕೆಲ ಭಾಗಗಳಿಂದ ಹಣ್ಣುಗಳನ್ನು ತರಿಸುತ್ತೇವೆ. ರೈತರಿಗೆ ನಷ್ಟವಾಗದಂತೆ, ಸ್ವಲ್ಪ ಜಾಸ್ತಿ ಹಣ ಕೊಟ್ಟೇ ಖರೀದಿಸುತ್ತೇವೆ. ಗ್ರಾಹಕರಿಗೆ ತಾಜಾ ಮತ್ತು ಸ್ವಾಭಾವಿಕವಾಗಿ ಹಣ್ಣಾದ ಮಾವು ಸಿಗುತ್ತದೆ. ಆಕರ್ಷಕ ಪ್ಯಾಕಿಂಗ್‌ ಮಾಡಿ, ಬೆಂಗಳೂರಿನ ಯಾವುದೇ ಭಾಗಕ್ಕೂ ತಲುಪಿಸುತ್ತೇವೆ. ಕಾರ್ಪೋರೇಟ್‌ ಸ್ಟಾಲ್‌ಗ‌ಳಿಗೂ ಸಪ್ಲೆ„ ಮಾಡಲಾಗುತ್ತದೆ’
-ರವೀಂದ್ರ ಬಾಬು, ಮ್ಯಾಂಗೊ ಟಾಸ್ಟಿಕ್‌  

ಆನ್‌ಲೈನ್‌ ಮಾವು ಮಳಿಗೆ-   www.mangotastic.in : ಸಂಪರ್ಕ:9620241345
www.malnadmangoes.com
www.goo.gl/co73KM
www.goo.gl/1MpUe2

ಟಾಪ್ ನ್ಯೂಸ್

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌  ʼಸಲಾರ್‌ʼ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Dharwad; ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

11-plastic

Eco-friendly Bio Plastic: ಪರಿಸರ ಸ್ನೇಹಿ ಮೆಕ್ಕೆಜೋಳದ ಬಯೋ ಪ್ಲಾಸ್ಟಿಕ್‌

16-uv-fusion

Aranthodu: ವಾಹನಗಳ ಮಧ್ಯೆ ಸರಣಿ ಅಪಘಾತ; ಬೈಕ್ ಸವಾರ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌  ʼಸಲಾರ್‌ʼ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Dharwad; ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.