ಮನೆಯಲ್ಲೇ ವೀಳ್ಯ


Team Udayavani, Jun 4, 2018, 11:48 AM IST

veelya.jpg

ಬಹುಪಯೋಗಿ ವೀಳ್ಯದೆಲೆ ಯಾರಿಗೆ ತಾನೆ ಬೇಡ? ಪ್ರತಿಯೊಬ್ಬರ ಮನೆಯಲ್ಲೂ ವೀಳ್ಯದೆಲೆಗಳ ಬಳಕೆ ಇದ್ದೇ ಇರುತ್ತೆ. ಅದರಲ್ಲೂ ಶುಭಕಾರ್ಯಗಳಿದ್ದಲ್ಲಿ ಅದಕ್ಕೇ ಪ್ರಥಮ ಸ್ಥಾನ. ಮನೆಯಲ್ಲಿ ಯಾರಿಗಾದರೂ ಶೀತವಾದಾಗ ಅಥವಾ ಅಜೀರ್ಣ ಸಮಸ್ಯೆಗೆ ತುತ್ತಾದಾಗ ಸಹಾಯಕ್ಕೆ ಬರುವ ಔಷಧಿ ವೀಳ್ಯದೆಲೆ. ಪೂಜಾ ಕಾರ್ಯ, ಆರೋಗ್ಯ ಸೇರಿದಂತೆ ಹಲವು ಸಂದರ್ಭಗಳಲ್ಲಿ ಬಳಕೆಯಾಗಿರುವ ಇನ್ನೂ ಹಲವು ಉಪಯೋಗಗಳಿರುವ ವೀಳ್ಯದೆಲೆಯನ್ನು ಮನೆಯಲ್ಲಿ ಬೆಳೆಯುವವರು ಕಡಿಮೆ. ಅಗತ್ಯ ಬಿದ್ದಾಗ ಸಂತೆಗೋ ಅಂಗಡಿಗೋ ಹೋಗಿ ಕೊಂಡು ತರಬಹುದಲ್ಲ ಎಂದೇ ಎಲ್ಲರ ಯೋಚನೆ. 

ವೀಳ್ಯದೆಲೆಯನ್ನು ಬೆಳೆಯಲು ಹೆಚ್ಚಿನ ಜಾಗವೇನೂ ಬೇಕಿಲ್ಲ. ಸರಳ ಉಪಾಯ ಮಾಡಿದರೆ ಎಷ್ಟು ಚಿಕ್ಕ ಜಾಗದಲ್ಲೂ ವೀಳ್ಯವನ್ನು ಬೆಳೆಯಬಹುದು. ಒಂದು ಹಳೆಯ ಪ್ಲಾಸ್ಟಿಕ್‌ ಬಕೆಟ್‌ ಅಥವಾ ಚೀಲದಲ್ಲಿ ಮೂರು ತೂತು ಮಾಡಿ, ಮಣ್ಣು ತುಂಬಿರಿ. ಒಣಗಿದ ಸಗಣಿ ಗೊಬ್ಬರ ಹಾಗೂ ಹಸಿರು ಎಲೆಗಳನ್ನು ಆ ಮಣ್ಣಿನಲ್ಲಿ ಬೆರಸಿ. ನಂತರ ವೀಳ್ಯದೆಲೆಯ ಸಸಿ ನೆಟ್ಟು ಮನೆಯ ಹೊರಗೆ ಅಥವಾ ಮಹಡಿ ಮೇಲೆ ಬಿಸಿಲು ಬೀಳುವ ಕಡೆ ಇಡಿ. ದಿನಕ್ಕೆ ಒಂದು ಬಾರಿ ನೀರು ಹಾಕಿ. ಅಡುಗೆ ಮನೆಯಲ್ಲಿ ಕತ್ತರಿಸಿ ಉಳಿದ ತರಕಾರಿಗಳು ಮತ್ತು ಕೊಳೆತ  ಹಣ್ಣು ತರಕಾರಿ, ಸೊಪ್ಪನ್ನು ಈ ಗಿಡಕ್ಕೆ ಹಾಕಿ ಮಣ್ಣು ಮುಚ್ಚಿ. ಈ ರೀತಿ ಮಾಡಿದರೆ ಗಿಡ ಸೊಗಸಾಗಿ ಬೆಳೆಯುತ್ತದೆ. ವೇಸ್ಟ್‌ ಮ್ಯಾನೇಜ್‌ಮೆಂಟ್‌ ಜೊತೆಗೆ ಸೊಂಪಾಗಿ ಬೆಳೆದ ವೀಳ್ಯದೆಲೆಯೂ ನಿಮ್ಮದಾಗುತ್ತದೆ. 

ವೀಳ್ಯದೆಲೆಯಲ್ಲಿ ಮೈಸೂರು, ರಾಸ್ಥಾನ, ಆಂಧ್ರ, ಮದರಾಸ್‌ ಎಲೆಗಳು ಎಂಬ ವಿಧಗಳಿವೆ. ಇದರಲ್ಲಿ ಕಪ್ಪು ಎಲೆಗಳು ಸ್ವಲ್ಪ ಖಾರ. ವೀಳ್ಯದೆಲೆ ಬೆಳೆಯಲು ಕೆಂಪು ಮಣ್ಣು ಉತ್ತಮ. ಮನೆಯಲ್ಲಿ ಉಳಿಯುವ ಹಸಿರು ತ್ಯಾಜ್ಯವನ್ನು ಬಳಸಿದರೆ ಬಳ್ಳಿ ಚೆನ್ನಾಗಿ ಹಬ್ಬುತ್ತದೆ. ವೀಳ್ಯದೆಲೆಗೆ ವೈಟ್‌ ಪ್ಯಾಚಸ್‌ ಅನ್ನೋ ರೋಗ ಬರುವ ಅವಕಾಶವಿರುತ್ತದೆ. ಇದಕ್ಕೆ ಮೋನೋಕ್ರಟೋಫಾಸ್‌ ಅನ್ನು ಲೀ. 5 ಎಂ.ಎಲ್‌ ರೀತಿ ಬೆರೆಸಿ ಸಿಂಪಡಿಸಬೇಕು. 

ಗಿಡಬಳ್ಳಿಗೆ ಆಸರೆಯಾಗಿ ಕಾಂಪೌಂಡ್‌ ಸರಳಿಗೆ ಅಥವಾ ಒಂದು ಬಲಿಷ್ಠ ದಾರದ ಆಸರೆಯೊಂದಿಗೆ ಹಬ್ಬಿಸಿ ಬೆಳೆಸಿದರೆ ವೀಳ್ಯದೆಲೆ ಹುಲುಸಾಗಿ ಬೆಳೆದು ನೋಡುವ ಕಣ್ಣಿಗೆ ಹಬ್ಬವುಂಟು ಮಾಡುತ್ತದೆ.  ಪಾಟ್‌ಗಳಲ್ಲೂ ಇದನ್ನು ಬೆಳೆಯಬಹುದು. ಆದರೆ ಪ್ರತಿ 6 ತಿಂಗಳಿಗೊಂದು ಸಲ ಮಣ್ಣನ್ನು ಬದಲಾಯಿಸಬೇಕು. ಒಂದು ಬಳ್ಳಿಯಲ್ಲಿ ಹೆಚ್ಚಾ ಕಮ್ಮಿ 50-60 ಎಲೆಗಳು ಇರುತ್ತವೆ. ಪ್ರತಿದಿನ ನೀರು ಕೊಡುವುದು ಕಡ್ಡಾಯ. ಮಳೆಗಾಲದಲ್ಲಿ ಎರಡು, ಮೂರು ದಿನಕ್ಕೊಮ್ಮೆ ನೀರು ಹಾಕಿದರೆ ಸಾಕು.   ಎರಡು, ಮೂರು ತಿಂಗಳಿಗೊಮ್ಮೆ ಪಾಟ್‌ನಲ್ಲಿರುವ ಕಳೆಯನ್ನು ತೆಗೆದರೆ ಗಿಡ ಸೋಂಪಾಗಿ ಬೆಳೆಯುತ್ತದೆ. 

– ರತ್ನಮ್ಮ ಎ.ಆರ್‌.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.