ಬೆಂಕಿ ಹಾರಿದ ಜಿಂಕೆ!


Team Udayavani, Jun 7, 2018, 6:00 AM IST

lead-kathe-jinke.jpg

ಒಂದು ಕಾಡಿನಲ್ಲಿ ಜಿಂಕೆಗಳು ಒಗ್ಗಟ್ಟಾಗಿ ಬಾಳ್ವೆ ನಡೆಸುತ್ತಿದ್ದವು. ಆ ಕಾಡಿನಲ್ಲಿ ಹುಲಿ ಸಿಂಹಗಳಿರಲಿಲ್ಲ. ಹೀಗೆಂದು ಜಿಂಕೆಗಳು ಸುಖವಾಗಿದ್ದವು ಎಂದುಕೊಂಡರೆ ತಪ್ಪಾಗುತ್ತದೆ. ಏಕೆಂದರೆ ಅವುಗಳಿಗಿದ್ದ ಒಂದೇ ಭಯವೆಂದರೆ ಬೇಟೆಗಾರರದು. ಕಾಡಿನಲ್ಲಿ ಅಪಾಯಕಾರಿ ಮಾಂಸಾಹಾರಿ ಪ್ರಾಣಿಗಳು ಕಡಿಮೆ ಸಂಖ್ಯೆಯಲ್ಲಿದ್ದುದರಿಂದ ಬೇಟೆಗಾರರ ಹಾವಳಿ ತುಂಬಾ ಇತ್ತು. ಅವರು ಮನಸ್ಸು ಬಂದಾಗಲೆಲ್ಲಾ ಕಾಡಿಗೆ ನುಗ್ಗಿ ಜಿಂಕೆಗಳನ್ನು ಬೇಟೆಯಾಡುತ್ತಿದ್ದರು. ಹೀಗಾಗಿ ಯಾವಾಗಲೂ ಎಚ್ಚರಿಕೆಯಿಂದಲೇ ಇರಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು.

ಜಿಂಕೆಗಳ ಸಮೂಹದಲ್ಲಿ ಒಂದು ಹಿರಿಯ ಹೆಣ್ಣು ಜಿಂಕೆಯಿತ್ತು. ಸಮಸ್ಯೆ ಎದುರಾದಾಗ ಎಲ್ಲಾ ಜಿಂಕೆಗಳು ಪರಿಹಾರ ಕೇಳಲು ಅದರ ಬಳಿಗೆ ತೆರಳುತ್ತಿದ್ದವು. ಎಂಥಾ ಸಮಸ್ಯೆ ಬಂದರೂ ಹಿರಿಯ ಜಿಂಕೆ ಪರಿಹಾರ ನೀಡುತ್ತಿತ್ತು. ಒಮ್ಮೆ ಬೇಟೆಗಾರರ ತಂಡ ದಿಢೀರನೆ ಭೀಕರ ಕಾಡಿಗೆ ನುಗ್ಗಿಯೇ ಬಿಟ್ಟಿತು. ಅವರ ಬಳಿ ಬಿಲ್ಲು, ಬಾಣ, ಭರ್ಜಿ, ಬಲೆ ಇನ್ನೂ ಅನೇಕ ಆಯುಧಗಳಿದ್ದವು. ಪ್ರತಿ ಸಾರಿ ಜಿಂಕೆಗಳು ತಮ್ಮ ಕೈತಪ್ಪಿ ಹೋಗುವುದಕ್ಕೆ ಹಿರಿಯ ಜಿಂಕೆ ಕಾರಣವೆನ್ನುವುದು ಬೇಟೆಗಾರರಿಗೆ ತಿಳಿದುಹೋಗಿತ್ತು. ಹೀಗಾಗಿ ಈ ಬಾರಿ ಹಿರಿಯ ಜಿಂಕೆಯನ್ನು ಹಿಡಿಯಲೆಂದೇ ತಯಾರಾಗಿ ಬಂದಿದ್ದರು. 

ಇತರೆ ಜಿಂಕೆಗಳನ್ನೆಲ್ಲಾ ದೂರ ಓಡಿಸಿದ ಬೇಟೆಗಾರರು ಹಿರಿಯ ಜಿಂಕೆಯಿದ್ದ ಜಾಗದ ಸುತ್ತಲೂ ಬೆಂಕಿ ಹಾಕಿದರು. ಜಿಂಕೆಗೆ ಏನು ಮಾಡುವುದೆಂದು ತೋಚಲಿಲ್ಲ. ಅದನ್ನು ಬೆಂಕಿ ಅವರಿಸಿತ್ತು. ಕ್ಷಣಕ್ಷಣಕ್ಕೂ ಬೆಂಕಿಯ ಕೆನ್ನಾಲಗೆ ಜಿಂಕೆಯ ಬಳಿ ಬರತೊಡಗಿತ್ತು. ಅದು ಭಯದಿಂದ ತತ್ತರಿಸಿ ಹೋಯಿತು. ಇತರೆ ಜಿಂಕೆಗಳು ಏನು ಮಾಡುವ ಹಾಗಿರಲಿಲ್ಲ. ಹಿರಿಯ ಜಿಂಕೆ ಅಲ್ಲೇ ಇದ್ದರೆ ಸಾಯುವುದು ಖಚಿತವಾಗಿತ್ತು. ಅದೇನಾದರೂ ಬೆಂಕಿಯನ್ನು ಹಾರಿ ಬಂದರೆ ಹಿಡಿಯಲು ಬೇಟೆಗಾರರು ಸಿದ್ಧವಾಗಿದ್ದರು. ಹೀಗಾಗಿ ಏನು ಮಾಡಿದರೂ ಹಿರಿಯ ಜಿಂಕೆ ಸಿಕ್ಕಿಕೊಳ್ಳುವುದು ಖಚಿತವಾಗಿತ್ತು. 

ಹಿರಿಯ ಜಿಂಕೆಯ ಮೈಚರ್ಮ ಸುಡತೊಡಗಿತು. ಅದರ ನೋವಿನಿಂದ ತಪ್ಪಿಸಿಕೊಳ್ಳಲು ಅದು ಬೆಂಕಿಯನ್ನು ಹಾರಿ ಬಂದಿತು. ಇನ್ನೇನು ಬೇಟೆಗಾರರ ಕೈಗೆ  ಸಿಕ್ಕಿಬಿಟ್ಟಿತು ಎನ್ನುವಷ್ಟರಲ್ಲಿ ಘರ್ಜನೆಯೊಂದು ಕೇಳಿಸಿತು. ಬೇಟೆಗಾರರು ಆ ಸದ್ದು ಕೇಳಿ ಭಯದಿಂದ ನಡುಗಿದರು. ಏಕೆಂದರೆ ಅದು ಅವರಿಗೆ ತುಂಬಾ ಪರಿಚಿತವಾಗಿದ್ದ ಸಿಂಹದ ಘರ್ಜನೆಯಾಗಿತ್ತು. ಇಷ್ಟು ದಿನ ಇಲ್ಲದಿದ್ದ ಸಿಂಹ ಈಗ ಹೇಗೆ ಬಂತು ಎಂದು ಅವರಿಗೆ ತಿಳಿಯಲಿಲ್ಲ. ಬೇಟೆಗಾರರು ಅಲ್ಲಿಂದ ಜಾಗ ಖಾಲಿ ಮಾಡಿದರು. ಇನ್ನೆಂದೂ ಕಾಡಿಗೆ ಬರಲಿಲ್ಲ.

ಬೇಟೆಗಾರರು ಜಿಂಕೆಯನ್ನು ಹಿಡಿಯಲು ಹಾಕಿದ ಬೆಂಕಿಯಿಂದಾಗಿ ದಟ್ಟ ಹೊಗೆ ಆಕಾಶ ಮುಟ್ಟಿತ್ತು. ಪಕ್ಕದ ಕಾಡಿನಲ್ಲಿದ್ದ ಪ್ರಾಣಿಗಳಿಗೆ ಜಿಂಕೆಗಳು ಸಂಕಷ್ಟಕ್ಕೆ ಸಿಕ್ಕಿಕೊಂಡಿರುವುದು ಗೊತ್ತಾಗಿ ಸಿಂಹವನ್ನು ಕಳುಹಿಸಿದ್ದರು. ಜಿಂಕೆಗಳೆಲ್ಲವೂ ತಮ್ಮ ನಾಯಕಿಯನ್ನು ಉಳಿಸಿದ್ದಕ್ಕೆ ಸಿಂಹವನ್ನು ಅಭಿನಂದಿಸಿದವು.

– ಬನ್ನೂರು ಕೆ. ರಾಜು

ಟಾಪ್ ನ್ಯೂಸ್

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.