ಶ್ರೀರಾಮ ಕೂಡ ಸೀತೆ ತೊರೆದಿದ್ದ: ತ್ರಿವಳಿ ತಲಾಕ್‌ ಬಗ್ಗೆ ಕೈ ಸಂಸದ


Team Udayavani, Aug 10, 2018, 11:53 AM IST

hussain-dalwai-700.jpg

ಹೊಸದಿಲ್ಲಿ : ‘ಮಹಿಳೆಯರನ್ನು ನಿಕೃಷ್ಟವಾಗಿ, ಅನುಚಿತವಾಗಿ ಕಾಣುವ ಪ್ರವೃತ್ತಿ ಕೇವಲ ಮುಸ್ಲಿಂ ಸಮುದಾಯದಲ್ಲಿ ಮಾತ್ರವಲ್ಲ, ಹಿಂದು, ಸಿಕ್ಖ್, ಕ್ರೈಸ್ತ ಮುಂತಾಗಿ ಎಲ್ಲ ಸಮುದಾಯಗಳಲ್ಲಿ ಇದೆ. ಪ್ರಾಚೀನ ಕಾಲದಲ್ಲಿ  ಶ್ರೀ ರಾಮಚಂದ್ರ ಕೂಡ ತನ್ನ ಪತ್ನಿಯನ್ನು ಶಂಕಿಸಿ ಕಾಡಿಗೆ ಅಟ್ಟಿ ಆಕೆಯನ್ನು ತೊರೆದಿದ್ದ ಉದಾಹರಣೆ ಇದೆ; ಅಂತಿರುವಾಗ ಮಹಿಳೆಯರ ಸ್ಥಿತಿ-ಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸ್ವತಃ ಬದಲಾಗಬೇಕಾದ ಅಗತ್ಯವಿದೆ’ ಎಂದು ರಾಜ್ಯಸಭೆಯಲ್ಲಿನ ಹಿರಿಯ ಕಾಂಗ್ರೆಸ್‌ ನಾಯಕ ಹುಸೇನ್‌ ದಳವಾಯಿ ಹೇಳಿರುವ ಮಾತುಗಳು ಈಗ ವಿವಾದಕ್ಕೆ ಕಾರಣವಾಗಿದೆ. 

“ಮೋದಿ ಸರಕಾರಕ್ಕೆ ಮುಸ್ಲಿಂ ಮಹಿಳೆಯರನ್ನು ಉದ್ಧರಿಸುವ ಬಗ್ಗೆ ನಿಜವಾದ ಕಾಳಜಿ, ಆಸಕ್ತಿ ಇಲ್ಲ. ಮುಸ್ಲಿಂ ಮಹಿಳೆಯರಿಗೆ ಹೆಚ್ಚಿನ ಅಧಿಕಾರ ನೀಡುವುದು, ಅವರ ಸಶಕ್ತೀಕರಣಕ್ಕೆ ಯತ್ನಿಸುವುದು ಕೇವಲ ಕಣ್ಣೊರೆಸುವ ಭರವಸೆಗಳಾಗಿವೆ’ ಎಂದು ಹುಸೇನ್‌ ದಳಾವಯಿ ಹೇಳಿದ್ದರು. 

ತ್ರಿವಳಿ ತಲಾಕ್‌ ಮಸೂದೆಯಲ್ಲಿ ಮುಸ್ಲಿಂ ಪುರುಷರಿಗೆ ಜಾಮೀನು ಪಡೆಯುವ ಅವಕಾಶ ಸಹಿತ ಮೂರು ತಿದ್ದುಪಡಿಗಳಿಗೆ ಮೋದಿ ಸಚಿವ ಸಂಪುಟ ಒಪ್ಪಿರುವುದು ಏನೇನೂ ಸಾಲದು; ಈ ಮಸೂದೆಗೆ ಇನ್ನಷ್ಟು ತಿದ್ದುಪಡಿಗಳನ್ನು ತರಬೇಕಾಗಿದೆ ಎಂದು ಹುಸೇನ್‌ ಹೇಳಿದರು. 

ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕು ರಕ್ಷಣೆ ಮಸೂದೆ ಅಥವಾ ತ್ರಿವಳಿ ತಲಾಕ್‌ ಮಸೂದೆಯು ತ್ರಿವಳಿ ತಲಾಕ್‌ ನೀಡುವುದನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸುತ್ತದೆ ಮತ್ತು ತ್ರಿವಳಿ ತಲಾಕ್‌ ನೀಡುವ ಮುಸ್ಲಿಂ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. 

ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಬಗ್ಗೆ ತಾನಾಡಿದ ಮಾತುಗಳು ವಿವಾದಕ್ಕೆ ಗುರಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಂಸದ ಹುಸೇನ್‌, “ನಾನು ಕೂಡ ಶ್ರೀ ರಾಮಚಂದ್ರ ದೇವರ ಭಕ್ತನೇ; ಆದರೆ ರಾಜ್ಯಸಭೆಯಲ್ಲಿ ನಾನು ಏನು ಹೇಳಲು ಹೊರಟಿದ್ದೆಂದರೆ ಪ್ರಾಚೀನ ಕಾಲದಲ್ಲೂ ಸೀತೆಯಂತಹ ಮಹಿಳೆಯರು ಪುರುಷ ಪ್ರಧಾನ ಸಮಾಜದಲ್ಲಿ ಹಿಂಸೆ, ಸಂಕಷ್ಟಗಳಿಗೆ ಗುರಿಯಾಗುತ್ತಲೇ ಬಂದಿದ್ದಾರೆ ಎನ್ನುವುದೇ ಆಗಿತ್ತು’ ಎಂದು ಹೇಳಿದರು. 

ಮಹಾರಾಷ್ಟ್ರದ ಕಾಂಗ್ರೆಸ್‌ ಸಂಸದರಾಗಿರುವ ಹುಸೇನ್‌ ಅವರು “ಯಾವುದೇ ಧರ್ಮವನ್ನು ಅವಹೇಳನ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದರು. 

ಹುಸೇನ್‌ ಅವರು ಕಳೆದ ವರ್ಷ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌  ಅವರಿಗೆ ಪತ್ರ ಬರೆದು “ತ್ರಿವಳಿ ತಲಾಕನ್ನು  ಅಪರಾಧೀಕರಿಸುವುದು ಅತ್ಯಂತ ಸಮಸ್ಯಾತ್ಮಕ ಕ್ರಮ’ ಎಂದು ಎಚ್ಚರಿಸಿದ್ದರು. 

ಟಾಪ್ ನ್ಯೂಸ್

Modi Interview

24 ವರ್ಷ 101 ಬಾರಿ ಬೈಗುಳ: ವಿಪಕ್ಷಗಳ ಕುರಿತು ಪಿಎಂ ಮೋದಿ ಹೇಳಿದ್ದೇನು?

arrested

Madhya Pradesh ಶಾಲೆಗಳಲ್ಲಿ 100 ಕೋಟಿ ರೂ. ಪುಸ್ತಕ ಹಗರಣ: 20 ಪ್ರಾಂಶುಪಾಲರ ಬಂಧನ

penPen Drive Case ಪ್ರಜ್ವಲ್‌ ವಿಡಿಯೋ ಮಾಡಿರುವುದು ಎಲ್ಲಿಂದ?: ಪತ್ತೆಗಿಳಿದ ಎಸ್‌ಐಟಿ

Pen Drive Case ಪ್ರಜ್ವಲ್‌ ವಿಡಿಯೋ ಮಾಡಿರುವುದು ಎಲ್ಲಿಂದ?: ಪತ್ತೆಗಿಳಿದ ಎಸ್‌ಐಟಿ

1-qweqweqw

Everest ಪರ್ವತ ತಪ್ಪಲಲ್ಲಿ ಈಗ ಟ್ರಾಫಿಕ್‌ ಜಾಮ್‌

ಮಳೆಗಾಲದ ಸಂಭಾವ್ಯ ಸವಾಲು ಎದುರಿಸಲು ಮೆಸ್ಕಾಂ ಇಲಾಖೆ ಸಜ್ಜು

ಮಳೆಗಾಲದ ಸಂಭಾವ್ಯ ಸವಾಲು ಎದುರಿಸಲು ಮೆಸ್ಕಾಂ ಇಲಾಖೆ ಸಜ್ಜು

1-wqewew

Odisha; ನಡುಗುತ್ತಿದ್ದ ಪಟ್ನಾಯಕ್‌ ಅವರ ಕೈ ಎಳೆದ ಪಾಂಡ್ಯನ್‌: ಬಿಜೆಪಿಯಿಂದ ಲೇವಡಿ

Devarajegowda ಜಾಮೀನು ಅರ್ಜಿ ವಿಚಾರಣೆ ಇಂದು

Devarajegowda ಜಾಮೀನು ಅರ್ಜಿ ವಿಚಾರಣೆ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Madhya Pradesh ಶಾಲೆಗಳಲ್ಲಿ 100 ಕೋಟಿ ರೂ. ಪುಸ್ತಕ ಹಗರಣ: 20 ಪ್ರಾಂಶುಪಾಲರ ಬಂಧನ

kejriwal-2

Kejriwal ಅರ್ಜಿ ತುರ್ತು ವಿಚಾರಣೆಗೆ ಒಪ್ಪದ ಸುಪ್ರೀಂ

1-qeeqwew

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

1-wewewqe

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

1-raf

26 Rafale ಖರೀದಿಗೆ ನಾಳೆ ಭಾರತ, ಫ್ರಾನ್ಸ್‌ ಮಾತುಕತೆ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Modi Interview

24 ವರ್ಷ 101 ಬಾರಿ ಬೈಗುಳ: ವಿಪಕ್ಷಗಳ ಕುರಿತು ಪಿಎಂ ಮೋದಿ ಹೇಳಿದ್ದೇನು?

arrested

Madhya Pradesh ಶಾಲೆಗಳಲ್ಲಿ 100 ಕೋಟಿ ರೂ. ಪುಸ್ತಕ ಹಗರಣ: 20 ಪ್ರಾಂಶುಪಾಲರ ಬಂಧನ

penPen Drive Case ಪ್ರಜ್ವಲ್‌ ವಿಡಿಯೋ ಮಾಡಿರುವುದು ಎಲ್ಲಿಂದ?: ಪತ್ತೆಗಿಳಿದ ಎಸ್‌ಐಟಿ

Pen Drive Case ಪ್ರಜ್ವಲ್‌ ವಿಡಿಯೋ ಮಾಡಿರುವುದು ಎಲ್ಲಿಂದ?: ಪತ್ತೆಗಿಳಿದ ಎಸ್‌ಐಟಿ

IMD

Pakistan; ತಾಪ 52 ಡಿಗ್ರಿ: ಆರ್ಥಿಕ ಸಂಕಷ್ಟದ ನಡುವೆ ಏರಿದ ಬಿಸಿಲು

1-qweqweqw

Everest ಪರ್ವತ ತಪ್ಪಲಲ್ಲಿ ಈಗ ಟ್ರಾಫಿಕ್‌ ಜಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.