ಇಂಜಿನಿಯರ್‌ಗಳು ಸಾರ್‌ ಇಂಜಿನಿಯರ್‌ಗಳು


Team Udayavani, Sep 21, 2018, 6:00 AM IST

z-13.jpg

ಸರ್‌ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಈ ಶತಮಾನ ಕಂಡ ಪ್ರಖಾಂಡ ಮೇಧಾವಿ ಹಾಗೂ ಅತ್ಯದ್ಧುತ ವಾಸ್ತುಶಿಲ್ಪಿ. ಕನ್ನಡದವರೇ ಆದ ಇವರು, ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1861 ಸೆಪ್ಟಂಬರ್‌ 15ರಂದು ಜನಿಸಿದರು. ಆ ಮೇರುವ್ಯಕ್ತಿಯು ಹುಟ್ಟಿದ ದಿನವನ್ನು ಇಂಜಿನಿಯರ್‌ ದಿನವನ್ನಾಗಿ  ಆಚರಿಸಲಾಗುತ್ತದೆ. ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ ಆಳ್ವಿಕೆಯ ಕಾಲದಲ್ಲಿ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ತಮ್ಮ ಕಾಲಾವಧಿಯಲ್ಲಿ ಸಾಕಷ್ಟು ಮಹತ್ಕಾರ್ಯಗಳನ್ನು ಮಾಡಿದ್ದರು. ಅವುಗಳಲ್ಲಿ, ಕಾವೇರಿ ನದಿಗೆ ಮಂಡ್ಯ ಜಿಲ್ಲೆಯಲ್ಲಿ ಕಟ್ಟಲಾದ ಕೃಷ್ಣರಾಜ ಸಾಗರ ಅಣೆಕಟ್ಟು ಬಹುಮುಖ್ಯವಾದುದು. ಅದು ಅವರ ಧೀಶಕ್ತಿಯನ್ನು ಪ್ರತಿಬಿಂಬಿಸುವಂತಿದೆ. ಹರಿದು ಪೋಲಾಗುತ್ತಿದ್ದ ಅಗಾಧ ಜಲರಾಶಿಯ ಸದ್ಬಳಕೆಗೆ ದಾರಿ ಮಾಡಿಕೊಟ್ಟಿದೆ. ಹಾಗೆಯೇ, ಭದ್ರಾವತಿಯ ಉಕ್ಕಿನ ಕಾರ್ಖಾನೆ, ಜೋಗದ ಶರಾವತಿ ವಿದ್ಯುತ್‌ ಯೋಜನೆ, ಮೈಸೂರು ಸ್ಯಾಂಡಲ್‌ ಸಾಬೂನಿನ ಕಾರ್ಖಾನೆ ಇತ್ಯಾದಿಗಳು ಅವರ ಹೆಸರನ್ನು ಅಜರಾಮರವಾಗಿರುವಂತೆ ಮಾಡಿವೆ. ಬ್ರಿಟಿಷ್‌ ಸರಕಾರದಿಂದ ನೈಟ್‌ ಹುಡ್‌ ಹಾಗೂ 1955ರಲ್ಲಿ ಭಾರತರತ್ನ ಗೌರವಕ್ಕೆ ಪಾತ್ರರಾಗಿ, ನಿಜವಾದ ಭಾರತದ ರತ್ನವೇ ಆದರು. ಶಿಸ್ತು, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ಸಮಯಪರಿಪಾಲನೆ, ಗುರುತರ ಹೊಣೆಗಳ ನಿಭಾಯಿಸುವಿಕೆ, ದೂರದರ್ಶಿತ್ವ ಇವರ ಜೀವನ ಭಾಗವೇ ಆಗಿದ್ದುದು ತುಂಬಾ ಹೆಮ್ಮೆಯ ವಿಷಯ. ತುಂಬು ಜೀವನ ನಡೆಸಿದ ಇವರು  ಶತಾಯುಷಿಗಳಾಗಿ 1962ನೇ ಎಪ್ರಿಲ್‌ 12ಕ್ಕೆ ವಿಧಿವಶರಾದರು.

    ಆಗಿನ ದಿನಗಳಲ್ಲಿ ಇಂತ‌ಹ ನಿಸ್ವಾರ್ಥ ಸೇವಾಪರ ವ್ಯಕ್ತಿಗಳು ಸಾಕಷ್ಟು ಕಾಣಸಿಗುತ್ತಿದ್ದರು. ಈಗ? ಆ ಅದ್ಭುತ, ಮಹಾವ್ಯಕ್ತಿಯ ಹೆಸರಲ್ಲಿರುವ ಈ ದಿನದ ಔಚಿತ್ಯವಾದರೂ ಏನು ಎನ್ನಿಸುವುದಿಲ್ಲವೆ? ಕಳೆದ 10-15 ವರ್ಷಗಳಿಂದ, ನಮ್ಮ ದೇಶದಲ್ಲಿಯೇ ಅಣಬೆಗಳಂತೆ  ಹುಟ್ಟಿಕೊಂಡಿರುವ ಇಂಜಿನಿಯರ್‌ ಕಾಲೇಜುಗಳಿಗೆ ಲೆಕ್ಕವಿಲ್ಲ. ಅವುಗಳಲ್ಲಿ ಎಷ್ಟೋ ವಿದ್ಯಾಲಯಗಳು ಸರಕಾರದ ಅನುಮತಿಯೇ ಇಲ್ಲದೆ ರಾಜಾರೋಷವಾಗಿ ಲಕ್ಷಗಟ್ಟಲೆ ಡೊನೇಷನ್‌ ಪಡೆದು ಮಿತಿಯಿಲ್ಲದಷ್ಟು ಸಂಪತ್ತನ್ನು ಕೊಳ್ಳೆ ಹೊಡೆದು, ಮಕ್ಕಳ ಭವಿಷ್ಯದೊಡನೆ ಆಟವಾಡಿವೆ. ಬದಲಾದ ವೈಜ್ಞಾನಿಕ ಬೆಳವಣಿಗೆಯಿಂದಾಗಿ ನೂರಾರು ದೇಶೀಯ ಹಾಗೂ ವಿದೇಶೀಯ ಕಂಪೆನಿಗಳು ಪ್ರಾರಂಭವಾದುವು. ಇದರಿಂದ ಉದ್ಯೋಗಾವಕಾಶಗಳು ತುಂಬಾ ಹೆಚ್ಚಾಗುವುದರೊಂದಿಗೆ ಎಂಜಿನಿಯರುಗಳ ಬೇಡಿಕೆಯೂ ಮೇಲೇರಿತು. ಜಾತಿ-ಮತ ಬೇಧವಿಲ್ಲದೆ, ಯಾವುದೇ ವರ್ಗಗಳ ತಾರತಮ್ಯವಿಲ್ಲದೆ, ವಿದ್ಯಾರ್ಥಿಗಳು ಗಳಿಸಿದ ಅಂಕ ಹಾಗೂ ಬುದ್ಧಿಮತ್ತೆಯನ್ನು ಗಣನೆಗೆ ತೆಗೆದುಕೊಂಡು ಎÇÉಾ ಕಂಪೆನಿಗಳು ಕೆಲಸ ಕೊಡಲಾರಂಭಿಸಿದುವು. ಕೈ ತುಂಬಾ ಸಂಬಳ ! ಸಾಧಾರಣವಾಗಿ ಮಧ್ಯಮವರ್ಗದವರು ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಜೀವನಮಟ್ಟವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿರುತ್ತಾರೆ. ಎಷ್ಟೇ ಕಲಿತರೂ, ಸರಕಾರೀ ಕೆಲಸ ಸಿಗುವುದು ಗಗನ ಕುಸುಮವಾಗಿರುವ ಕಾಲಘಟ್ಟದಲ್ಲಿ ಉದ್ಯೋಗದಲ್ಲಿ ಆದ ಈ ಬದಲಾವಣೆ ನಿಜಕ್ಕೂ ಶ್ಲಾಘನೀಯ. ಇದರಿಂದಾಗಿ, ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಗು ಕಲಿತು ಮುಂದೆ ಇಂಜಿನಿಯರೇ ಆಗಬೇಕೆಂಬ ಮಹದಾಸೆ ಆರಂಭವಾಯಿತು. ಪರಿಣಾಮವಾಗಿ, ಮಾತೃಭಾಷೆಯಲ್ಲಿ ಕಲಿಕೆ ಕಡಿಮೆಯಾಗಿ, ಇಂಗ್ಲಿಶ್‌ ವ್ಯಾಮೋಹ ಹೆಚ್ಚಿತು. ವರ್ಷವರ್ಷವೂ ಲಕ್ಷಾಂತರ ಇಂಜಿನಿಯರುಗಳನ್ನು ತಯಾರಿಸುವ ಕಾರ್ಖಾನೆಗಳಾದುವು, ನಮ್ಮ ಈ ವಿದ್ಯಾಲಯಗಳು. ಸಾಮಾನ್ಯ ವರ್ಗದ ಜನರ ಜೀವನಮಟ್ಟವು ಅತೀ ವೇಗದಲ್ಲಿ ಮೇಲಕ್ಕೇರಿದ್ದೂ ಅಷ್ಟೇ ಸತ್ಯ. ಸಾಧಾರಣವಾಗಿ ಪ್ರತಿಮನೆಯಲ್ಲಿಯೂ ಒಬ್ಬಿಬ್ಬರು ಎಂಜಿನಿಯರುಗಳು ಇರುವುದು ಸಾಮಾನ್ಯವಾಯಿತು. ಪ್ರತಿಭಾವಂತರು ಹೊರ ದೇಶಗಳಲ್ಲಿಯೂ ಉದ್ಯೋಗ ಹಿಡಿದು ಸಮರ್ಥವಾಗಿ ಕೆಲಸಗಳನ್ನು ನಿಭಾಯಿಸಿ, ಅತ್ಯುತ್ತಮ ಹೆಸರನ್ನು ಗಳಿಸಿದರು. ಹಾಗೆಯೇ, ಅಮೆರಿಕದಂತಹ ಶ್ರೀಮಂತ ರಾಷ್ಟ್ರಗಳಲ್ಲಿ ಉತ್ತಮ ಕಂಪೆನಿಗಳಲ್ಲಿ ಉದ್ಯೋಗ ಹಿಡಿದು, ಅಲ್ಲಿಯ ಪ್ರಜೆಯೇ ಆಗಿ, ಅÇÉೇ ನೆಲೆಯೂರಿದವರೂ ಇ¨ªಾರೆ. ಈ ಪ್ರತಿಭಾ ಪಲಾಯನವೂ, ದೇಶಕ್ಕೆ ದೊಡ್ಡ ನಷ್ಟವೆಂದೇ ಹೇಳಬಹುದು.  ನಮ್ಮ ದೇಶದ ಇಂಜಿನಿಯರುಗಳು, ದೇಶದೊಳಗೆ ಮಾತ್ರವಲ್ಲದೆ, ಹೊರದೇಶಗಳಲ್ಲೂ, ಶಿಸ್ತು, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮತ್ತು ತುಂಬಾ ಬುದ್ಧಿವಂತರೆಂದು ಹೆಸರು ಮಾಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯೇ ಹೌದು. ಆದರೂ,  ರಾತ್ರಿ ಹಗಲೆನ್ನದೆ, ಎಡೆಬಿಡದ ಕೆಲಸದ ಒತ್ತಡದಿಂದಾಗಿ, ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತಿರುವುದು ಆತಂಕಗೊಳ್ಳುವ ವಿಚಾರವೇ ಆಗಿದೆ. ಇತ್ತೀಚೆಗಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ನಿಜಕ್ಕೂ ಗಾಬರಿಪಡುವಂತಿದೆ. ವರ್ಷ ವರ್ಷವೂ, ಅಗಾಧ ಸಂಖ್ಯೆಯಲ್ಲಿ ಹೊರಬರುತ್ತಿರುವ ಇಂಜಿನಿಯರುಗಳ ಉದ್ಯೋಗಾವಕಾಶ ಕಡಿಮೆಯಾಗುತ್ತಿದೆ. ಜಗತ್ತಿನ ವ್ಯಾಪಾರ, ವಹಿವಾಟುಗಳ ಏರುಪೇರುಗಳಿಂದಾಗಿ ಎಷ್ಟೋ ಕಂಪೆನಿಗಳು ಮುಚ್ಚಿ ಹೋಗುತ್ತಿವೆ,

     ಇವುಗಳಿಗೆ ಪರಿಹಾರ ಇಲ್ಲವೆ? ಇದೆ. ಹೌದು… ನಮ್ಮ ದೇಶದಲ್ಲೇ, ಇನ್ಫೋಸಿಸ್‌, ವಿಪ್ರೋಗಳಂತಹ ಇನ್ನೂ ಹಲವಾರು ಕಂಪೆನಿಗಳು ಪ್ರಾರಂಭವಾಗಬೇಕು. ಹೊರದೇಶಗಳಲ್ಲಿ ಸಿಗುವಂತಹ ಒಳ್ಳೆಯ ಸವಲತ್ತುಗಳು ಇಲ್ಲಿಯೂ ಸಿಗುವಂತಾಗಬೇಕು. ಒಂದಿಗೇ, ನಮ್ಮ ದೇಶಬಂಧುಗಳಲ್ಲಿ ದೇಶದ ಬಗ್ಗೆ ಭಕ್ತಿ, ಗೌರವ ಅಂತರಾಳದಿಂದಲೇ ಮೂಡಿಬರಬೇಕು. ದೇಶ ಸೇವೆ ಮಾಡುವ ಮನ ಜಾಗ್ರತವಾಗಬೇಕು. ವಿದೇಶದ ವ್ಯಾಮೋಹವನ್ನು ತೊರೆದು,  ದೇಶದ ಉದ್ಧಾರಕ್ಕೆ ಕಾರಣರಾಗಬೇಕು. ಆಗಲೇ ಈ “ಇಂಜಿನಿಯರ್‌ ದಿನ’ದ ಆಚರಣೆಗೂ ಒಂದು ಅರ್ಥ ಬಂದಂತಾಗಬಹುದು ಅಲ್ಲವೆ? 

ಶಂಕರಿ ಶರ್ಮ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.