ಮತ್ತೆ ಮತ್ತೆ ಶಕೀಲಾ


Team Udayavani, Sep 21, 2018, 6:00 AM IST

z-17.jpg

ದಕ್ಷಿಣ ಭಾರತದ ಸೆಕ್ಸ್‌ ತಾರೆಯರು ಈಗ ಬಾಲಿವುಡ್‌ ಚಿತ್ರ ನಿರ್ಮಾಪಕರಿಗೆ ಅತ್ಯಂತ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ. ಕ್ಯಾಬರೆ ಡ್ಯಾನ್ಸರ್‌ ಸಿಲ್ಕ್ ಸ್ಮಿತಾ ಬದುಕಿನ ಸಬ್ಜೆಕ್ಟ್ ಇಟ್ಟುಕೊಂಡು ಮಾಡಿದ ಡರ್ಟಿ ಪಿಕ್ಚರ್‌ ಬಾಕ್ಸಾಫೀಸಿನಲ್ಲಿ ಸೂಪರ್‌ಹಿಟ್‌ ಆದದ್ದು ಮಾತ್ರವಲ್ಲದೆ, ಸಿಲ್ಕ್ ಪಾತ್ರಧಾರಿ ವಿದ್ಯಾ ಬಾಲನ್‌ಗೆ  ಶ್ರೇಷ್ಠ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಇದೀಗ ದಕ್ಷಿಣದ ಇನ್ನೊಬ್ಬ ಸೆಕ್ಸ್‌ ತಾರೆ ಶಕೀಲಾ ಸರದಿ. 

ಹಿಂದೊಂದು ಕಾಲದಲ್ಲಿ ಮಲಯಾಳ ಚಿತ್ರರಂಗವನ್ನು ಆಳಿದ್ದ ಶಕೀಲಾ ಬದುಕೇ ಒಂದು ಸಿನೆಮಾದಷ್ಟು ರೋಚಕವಾಗಿದೆ. ನಾಯಕಿಯ ಯಾವ ಲಕ್ಷಣವೂ ಇಲ್ಲದ ಡುಮ್ಮಿ ಶಕೀಲಾ ನಟಿಯಾದದ್ದೇ ಒಂದು ಸೋಜಿಗ. ಆ ಕಾಲದಲ್ಲಿ ಬಂದ ಸಾಲು ಸಾಲು ಶಕೀಲಾ ಚಿತ್ರಗಳು ಮಲಯಾಳ ಚಿತ್ರರಂಗವನ್ನೇ ಅಲ್ಲೋಲಕಲ್ಲೋಲ ಮಾಡಿತ್ತು. ಶಕೀಲಾ ಬ್ರಾಂಡ್‌ ಚಿತ್ರ ಎಂಬ ಹೊಸ ಮಾದರಿಯೇ ರೂಪುಗೊಂಡಿತ್ತು. ಮಿಂಚಿನಂತೆ ಬಂದಪ್ಪಳಿಸಿದ ಶಕೀಲಾ ಅಷ್ಟೇ ಬೇಗ ನೇಪಥ್ಯಕ್ಕೂ ಸರಿದು ಹೋದಳು. ಇದೀಗ ಅವಳ ಬದುಕಿನ ಕುರಿತು ತಯಾರಾಗುತ್ತಿರುವ ಚಿತ್ರದಲ್ಲಿ ಶಕೀಲಾ ಆಗಿ ಕಾಣಿಸಿಕೊಳ್ಳುತ್ತಿರುವಾಕೆ ರೀಚಾ ಛಡ್ಡಾ !

ಹತ್ತು ವರ್ಷದ ಹಿಂದೆ ಓಯೇ ಲಕ್ಕಿ ! ಲಕ್ಕಿ ಓಯೇ ! ಚಿತ್ರದ ಮೂಲಕ ಬಾಲಿವುಡ್‌ಗೆ ಬಂದ ರೀಚಾ ಛಡ್ಡಾಳಿಗೆ ಸಿಕ್ಕಿದ್ದೆಲ್ಲ ಗೆಳತಿ, ತಂಗಿ, ಅಕ್ಕ, ಅತ್ತಿಗೆಯಂಥ ಪೋಷಕ ಪಾತ್ರಗಳೇ. ಹಾಗೆಂದು ಅವಳಲ್ಲಿ ಪ್ರತಿಭೆಗೇನೂ ಕೊರತೆಯಿಲ್ಲ. ಗ್ಯಾಂಗ್ಸ್‌ ಆಫ್ ವಸೇಪುರ್‌ ಚಿತ್ರದ ಪೋಷಕ ಪಾತ್ರವೇ ಅವಳಿಗೆ ಫಿಲ್ಮ್ಫೇರ್‌ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಮೂರು ವರ್ಷದ ಹಿಂದೆ ಮಸಾನ್‌ ಎಂಬ ಡಾರ್ಕ್‌ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರೂ ಆ ಚಿತ್ರ ಹೆಚ್ಚೇನೂ ಪ್ರಚಾರ ಪಡೆದುಕೊಂಡಿರಲಿಲ್ಲ. ಆದರೂ ರೀಚಾ ಪಾತ್ರ  ಕಾನ್ಸ್‌ ಚಿತ್ರೋತ್ಸವದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. 

ಬಾಲಿವುಡ್‌ನ‌ ಫ‌ಯರ್‌ ಬ್ರಾಂಡ್‌ ನಟಿಯರ ಸಾಲಿಗೆ ರೀಚಾ ಸೇರುತ್ತಾಳೆ. ಹೀಗಾಗಿ, ಆಕೆಗೆ ಮಿಸ್‌ ಫ‌ಯರ್‌ ಎಂಬ ಅಡ್ಡ ಹೆಸರೂ ಇದೆ. ಅನ್ಯಾಯವನ್ನು ಕಂಡಲ್ಲೇ ಪ್ರತಿಭಟಿಸುವ, ತಪ್ಪುಗಳನ್ನು ಮುಖಕ್ಕೆ ಹೊಡೆದಂತೆ ಹೇಳುವ ಸ್ವಭಾವದಿಂದಾಗಿ ಅವಳು ಸಾಕಷ್ಟು ಕಳೆದುಕೊಂಡಿದ್ದಾಳೆ. ಆದರೆ, ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಸ್ವಭಾವ ಮಾತ್ರ ಅವಳದ್ದಲ್ಲ. ಶಕೀಲಾ ಬೆನ್ನಿಗೆ ಲವ್‌ ಸೋನಿಯಾ ಮತ್ತು ಪಂಗಾ ಎಂಬೆರಡು ಚಿತ್ರಗಳಲ್ಲೂ ರೀಚಾ ನಟಿಸುತ್ತಿದ್ದಾಳೆ. ಹತ್ತು ವರ್ಷಗಳ ಬಳಿಕವಾದರೂ ಬಾಲಿವುಡ್‌ ತನ್ನ ಪ್ರತಿಭೆಯನ್ನು ಗುರುತಿಸಿದ ಧನ್ಯತೆಯಲ್ಲಿದ್ದಾಳೆ ರೀಚಾ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.