ಫಾರಿನ್‌ಗೆ ಬ್ರಿಡ್ಜ್ ಕಟ್ಟಿ


Team Udayavani, Oct 9, 2018, 6:00 AM IST

shutterstock348166706.jpg

ಯಾವುದೇ ವಿಷಯದಲ್ಲಿ ಪದವಿ ಪಡೆದವರೂ, ನಂತರ ಯುಪಿಎಸ್ಸಿ ಪರೀಕ್ಷೆ ಬರೆದು ವಿದೇಶಾಂಗ ಸಚಿವಾಲಯ ಇಲಾಖೆಯಲ್ಲಿ ಆಫೀಸರ್‌ ಆಗಬಹುದು. ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ದೇಶ- ದೇಶಗಳ ನಡುವಿನ ಸಂಪರ್ಕ ಸೇತುವೆಗಳಿರುತ್ತಾರೆ…

ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳ ಜವಾಬ್ದಾರಿ ದೊಡ್ಡದು. ಎರಡು ರಾಷ್ಟ್ರಗಳ ನಡುವಣ ಸಂಬಂಧ ವೃದ್ಧಿಯಾಗಲು ಶ್ರಮಿಸುವ ಹೊಣೆಗಾರಿಕೆ ಅವರ ಮೇಲಿರುತ್ತದೆ. ಈ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಒಂದರ್ಥದಲ್ಲಿ ಪ್ರತಿಷ್ಠೆಯ ವಿಚಾರವೂ ಹೌದು. ಯಾವುದೇ ವಿಷಯದಲ್ಲಿ ಪದವಿ ಪಡೆದವರು ನಂತರ ಯುಪಿಎಸ್ಸಿ ಪರೀಕ್ಷೆ ಬರೆದು ವಿದೇಶಾಂಗ ಸಚಿವಾಲಯ ಇಲಾಖೆಯಲ್ಲಿ ಆಫೀಸರ್‌ ಆಗಬಹುದು.

 ಒಂದು ದೇಶ ಮತ್ತೂಂದು ದೇಶದ ನಡುವೆ ವ್ಯಾಪಾರ, ಸಾಂಸ್ಕೃತಿಕ ಬಾಂಧವ್ಯ, ಹೂಡಿಕೆ, ದ್ವಿಪಕ್ಷೀಯ ಮಾತುಕತೆ, ರಾಜಕೀಯ ಸಹಕಾರ, ಮಾಧ್ಯಮ ಸಂಬಂಧ ಇವೆಲ್ಲವನ್ನೂ ಏತಕ್ಕಾಗಿ ಮಾಡುತ್ತದೆ. ಎಂದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ದೇಶವನ್ನು ಉತ್ತಮ ಸ್ಥಿತಿಯಲ್ಲಿಡಲು, ಯುದ್ಧ, ಪ್ರಾಕೃತಿಕ ವಿಕೋಪ ಇತ್ಯಾದಿ ಸಂಕಷ್ಟಗಳ ಸಂದರ್ಭದಲ್ಲಿ ಸಹಾಯ ಪಡೆಯಲು. ಆಮದು- ರಫ‌¤ನ್ನು ಹೆಚ್ಚಿಸಿಕೊಳ್ಳಲು… ಹೀಗೇ ಅನೇಕ ಕಾರಣಗಳಿರುತ್ತವೆ.

ಈ ಬಾಂಧವ್ಯ ಏರ್ಪಡುವಂತೆ ಮಾಡಲು, ಅದನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಎಲ್ಲ ರಾಷ್ಟ್ರಗಳೂ ವಿದೇಶಾಂಗ ವ್ಯವಹಾರಗಳ ಇಲಾಖೆಯನ್ನು ಹೊಂದಿರುತ್ತವೆ. ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಗುರುತರ ಜವಾಬ್ದಾರಿಗಳು ಇರುತ್ತವೆ. ಮುಖ್ಯವಾಗಿ ಎರಡು ರಾಷ್ಟ್ರಗಳ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಅಭಿವೃದ್ದಿಪಡಿಸುವ ಜವಾಬ್ದಾರಿ ಅವರ ಮೇಲಿರುತ್ತದೆ. 

ಏನನ್ನು ಓದಿರಬೇಕು?
ಕಲೆ ಅಥವಾ ವಿಜ್ಞಾನದಲ್ಲಿ ಪದವಿ. ನಂತರ ಯುಪಿಎಸ್‌ಸಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಸಂದರ್ಶನದಲ್ಲೂ ತೇರ್ಗಡೆ ಹೊಂದಿ ಐಎಫ್ಎಸ್‌ ಆಫೀಸರ್‌ ಆಗಬಹುದು. ಪ್ರಿಲಿಮಿನರಿ ಪರೀಕ್ಷೆಯಲ್ಲಿ ಎರಡು ಪೇಪರ್‌ಗೆ (ಜನರಲ್‌ ಸ್ಟಡೀಸ್‌ ಮತ್ತು ಜನರಲ್‌ ಆಪ್ಟಿಟ್ಯೂಡ್‌ ಪೇಪರ್) ಉತ್ತರಿಸಿ ಉತ್ತಮ ಅಂಕ ಪಡೆದರೆ, ಮೇನ್‌ ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಸಿಗುತ್ತದೆ. ಮೇನ್‌ ಪರೀಕ್ಷೆಯಲ್ಲಿ ಒಟ್ಟು 9 ಪತ್ರಿಕೆಗಳಿರುತ್ತವೆ. ಇದರ ನಂತರ ಸಂದರ್ಶನ ನಡೆಯುತ್ತದೆ. ಐಎಫ್ಎಸ್‌ ಅಧಿಕಾರಿಗಳಲ್ಲಿ ಮೊದಲು ಮೂರನೇ ವರ್ಗದ ಸೆಕ್ರೆಟರಿಯಿಂದ ಪ್ರಮೋಷನ್‌ ಪಡೆದು, ಸೆಕೆಂಡ್‌ ಸೆಕ್ರೆಟರಿ ಹುದ್ದೆ ಮತ್ತು ಫ‌ಸ್ಟ್‌ ಸೆಕ್ರೆಟರಿಯಾಗಿ ವಿದೇಶಾಂಗ ಸಚಿವರು, ಮಂತ್ರಿಗಳು, ಕಮೀಷನರ್‌ಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬಹುದು.

ಎಲ್ಲೆಲ್ಲಿ ಅವಕಾಶಗಳು? 
– ರಾಯಭಾರ ಕಚೇರಿ
– ಉನ್ನತ ಆಯೋಗಗಳು 
– ವಿದೇಶಾಂಗ ಸಚಿವಾಲಯ
– ಯುಎನ್‌ನಂಥ ಬಹುಪಕ್ಷೀಯ ಸಂಸ್ಥೆಗಳು
– ವಿಶ್ವ ಸಾಂಸ್ಕೃತಿಕ ಮತ್ತು ವ್ಯಾಪಾರ ಸಂಘಟನೆಗಳು

ಬೇಕಿರುವ ಕೌಶಲಗಳು?
– ಅಂತಾರಾಷ್ಟ್ರೀಯ ವ್ಯವಹಾರಗಳ ಬಗೆಗೆ ತಿಳಿವಳಿಕೆ, ವಿಶ್ಲೇಷಣಾ ಸಾಮರ್ಥ್ಯ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯ.
– ರಾಜತಾಂತ್ರಿಕ ವಿಷಯಗಳ ಕುರಿತ ಕುಶಾಗ್ರಮತಿಗಳಾಗಿರಬೇಕು.
– ರಾಷ್ಟ್ರೀಯ ಭಾವನೆ ಉತ್ತಮವಾಗಿರಬೇಕು.
– ನಾಯಕತ್ವ ಗುಣ ಮತ್ತು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಶಕ್ತಿ.
– ಪರಿಸ್ಥಿತಿಯನ್ನು ನಿಭಾಯಿಸುವ, ಸಮತೋಲನ ಕಾಪಾಡುವ ಜಾಣ್ಮೆ.
– ವಿವಿಧ ಸಂಸ್ಕೃತಿ ಕುರಿತ ಅರಿವು ಮತ್ತು ಹೊಂದಿಕೊಳ್ಳುವ ಗುಣ.
– ಅನೇಕ ಭಾಷೆಗಳ ಜ್ಞಾನ, ವಿವಿಧ ಮಾಧ್ಯಮಗಳನ್ನು ನಿರ್ವಹಿಸುವ ಅರಿವು ಮುಖ್ಯ.

ಎಲ್ಲಿ ಕಲಿತರೆ ದಾರಿ ಸುಲಭ?
– ಅಚೀವರ್ ಐಎಎಸ್‌ ಕ್ಲಾಸಸ್‌, ಜಯನಗರ, ಬೆಂಗಳೂರು
– ಯೂನಿವರ್ಸಲ್‌ ಕೋಚಿಂಗ್‌ ಸೆಂಟರ್‌, ಆರ್‌ಪಿಸಿ ಲೇಔಟ್‌, ಬೆಂಗಳೂರು
– ಬ್ರಿಕ್ಸ್‌ ಅಕಾಡೆಮಿ, ಮಲ್ಲೇಶ್ವರಂ, ಬೆಂಗಳೂರು
– ಜೈನ್‌ ಯೂನಿವರ್ಸಿಟಿ (ಬಿಎಸ್ಸಿ, ಎಂಎಸ್ಸಿ ಫಾರೆನ್ಸಿಕ್‌ ಸೈನ್ಸ್‌), ಬೆಂಗಳೂರು 
– ಫಾರಿನ್‌ ಸರ್ವಿಸ್‌ ಇನ್ಸ್‌ಟಿಟ್ಯೂಟ್‌, ನವದೆಹಲಿ
– ಲಾಲ್‌ ಬಹದ್ದೂರ್‌ ಶಾಸ್ತ್ರಿಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌, ಮಸ್ಸೂರಿ, ಡೆಹ್ರಾಡೂನ್‌

– ಅನಂತನಾಗ್‌ ಎನ್‌.

ಟಾಪ್ ನ್ಯೂಸ್

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.