ಲಾಭದ ಪಪ್ಪಾಯಿ


Team Udayavani, Nov 12, 2018, 4:00 AM IST

labhada.jpg

ಕೆಲಸಕ್ಕೆ ಹೋಗುವವರಿಗೆಲ್ಲ ದಿನಕ್ಕಷ್ಟು ಎಂದು ಸಂಬಳ ನಿಗದಿಯಾಗುತ್ತದೆ. ತಿಂಗಳ ಕೊನೆಯಲ್ಲಿ, ಇಂತಿಷ್ಟು ದಿನ ದುಡಿದದ್ದಕ್ಕೆ ಇಷ್ಟು ಹಣ ಎಂದು ಸಂಬಳ ನೀಡಲಾಗುತ್ತದೆ. ರೈತರೂ ಹೀಗೆ ತಿಂಗಳ ಸಂಬಳ ಪಡೆಯಲು ಸಾಧ್ಯವಿಲ್ಲವೆ? ಶ್ರದ್ಧೆಯಿಂದ ಪಪ್ಪಾಯ ಬೆಳೆದರೆ, ಪ್ರತಿ ತಿಂಗಳೂ ಕಾಸು ಎಣಿಸಲು ಸಾಧ್ಯವೆಂದು ಶಿವಮೊಗ್ಗದ ರೈತ ಶಂಕರಗೌಡ ತೋರಿಸಿಕೊಟ್ಟಿದ್ದಾರೆ. 

ಶಿವಮೊಗ್ಗ  ಜಿಲ್ಲೆ ಸಾಗರ ತಾಲೂಕಿನ ಸಾಡಗಳಲೆ ಗ್ರಾಮದ ಯುವ ರೈತ ಶಂಕರಗೌಡ ಪಪ್ಪಾಯಿ ಕೃಷಿ ನಡೆಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಗೌತಮಪುರ-ತ್ಯಾಗರ್ತಿ ಗ್ರಾಮ ಸಂಪರ್ಕ ರಸ್ತೆಯಲ್ಲಿರುವ ಇವರ ಜಮೀನು ಖುಷಿ¤ ಭೂಮಿಯಾಗಿದ್ದು ಇಳಿಜಾರಿನಿಂದ ಕೂಡಿದೆ. ಈ ಹೊಲದಲ್ಲಿ ಕೊಳವೆ ಬಾವಿ ತೆಗೆಸಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. 

ಅರ್ಧ ಎಕರೆ ವಿಸ್ತೀರ್ಣದ ಖುಷ್ಕಿ  ಹೊಲದಲ್ಲಿ ರೆಡ್‌ ಲೇಡಿ ತಳಿಯ ಸೀಡ್‌ಲೆಸ್‌ ಪಪ್ಪಾಯ ಸಸಿ ಬೆಳೆಸುತ್ತಿದ್ದಾರೆ. ಇದಕ್ಕಾಗಿ 2018 ರ ಫೆಬ್ರವರಿ ತಿಂಗಳ 2 ನೇ ವಾರದಲ್ಲಿ  ಜಮೀನು ಹದ ಗೊಳಿಸಿ ಪೊಪಾು³ ಸಸಿ ನಾಟಿ ಮಾಡಿದ್ದರು. ಇಲ್ಲಿ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ 5 ಅಡಿ ಬರುವಂತೆ 500 ಪಪ್ಪಾಯಿ ಸಸಿ ಬೆಳೆಸಲಾಗಿದೆ. ಒಂದು ಅಡಿ ಆಳ, ಒಂದು ಅಡಿ ಅಗಲದ ಚಚ್ಚೌಕಾದ ಗುಂಡಿ ನಿರ್ಮಿಸಿ ಪಪ್ಪಾಯ ಸಸಿಯ ನಾಟಿ ಮಾಡಿದರು.

ಗಿಡ ನೆಟ್ಟು ಒಂದು ತಿಂಗಳ ನಂತರ ಪ್ರತಿ ಗಿಡಕ್ಕೆ  19:19 ಕಾಂಪ್ಲೆಕ್ಸ್‌  ಗೊಬ್ಬರ ಸರಾಸರಿ 25 ಗ್ರಾಂ.ನಷ್ಟು ನೀಡಿದರು. ನಂತರ, ಪ್ರತಿ ತಿಂಗಳಿಗೊಮ್ಮೆಯಂತೆ 20:20 ಕಾಂಪ್ಲೆಕ್ಸ್‌ ಗೊಬ್ಬರವನ್ನು ನೀಡಿದ್ದರಿಂದ ಪಪ್ಪಾಯ ಕಾಂಡಕ್ಕೆ ಕೊಳೆ ರೋಗ ಬರಲೇ ಇಲ್ಲ. 3 ತಿಂಗಳಿಗೆ ಗಿಡ ಹೂ ಬಿಡಲು ಆರಂಭಿಸಿತು. ಪ್ರತಿ 20 ದಿನಕ್ಕೆ ಒಮ್ಮೆಯಂತೆ ಮಿಡಿ ಮತ್ತು ಕಾಯಿಗೆ ಔಷಧ ಸಿಂಪಡಿಸಿದರು.

ಜುಲೈ ಕೊನೆಯವಾರದಿಂದ ಪಪ್ಪಾಯ ಫ‌ಸಲು ಮಾರಾಟಕ್ಕೆ ಸಿದ್ಧವಾಯಿತು. ಈಗ  ವಾರಕ್ಕೆ ಒಮ್ಮೆ ಪಪ್ಪಾಯ ಫ‌ಸಲು ಕಟಾವು ಮಾಡುತ್ತಿದ್ದಾರೆ. ಶಿವಮೊಗ್ಗ, ಭದ್ರಾವತಿ, ಧಾರವಾಡ, ಶಿರಸಿಗಳಿಂದ ವ್ಯಾಪಾರಸ್ಥರು ಈ ಭಾಗಕ್ಕೆ ಆಗಮಿಸುತ್ತಾರೆ. ಹೊಲದಲ್ಲಿಯೇ ತೂಕಮಾಡಿ ಹಣ ನೀಡಿ ಕೊಂಡೊಯ್ಯುತ್ತಾರೆ. ಒಂದು ಪಪ್ಪಾಯ ಕಾಯಿ, ಎರಡು ಕಿ.ಲೋ ತೂಕವಿದೆ. ಪ್ರತಿ ಗಿಡದಿಂದ ವಾರಕ್ಕೆ 2 ಕಾಯಿಯಂತೆ, 500 ಗಿಡದಿಂದ ವಾರಕ್ಕೆ ಒಟ್ಟು 20 ಕ್ವಿಂಟಾಲ್‌ ಪಪ್ಪಾಯಿ ಮಾರಾಟವಾಗುತ್ತಿದೆ. 

ಕೆ.ಜಿಗೆ 10ರೂ. ಅಂದರೂ ವಾರಕ್ಕೆ 20 ಸಾವಿರ, ತಿಂಗಳಿಗೆ 80 ಸಾವಿರ ಆದಾಯ ಬರುತ್ತಿದೆ. ಖರ್ಚು 30 ಸಾವಿರ ಅಂತಿಟ್ಟುಕೊಂಡರೂ, ಉಳಿಕೆ 50 ಸಾವಿರ ರುಪಾಯಿ ಲಾಭ. ಈಗ ಇವರ ಪಪ್ಪಾಯಿಗೆ 9 ತಿಂಗಳು. ಇನ್ನೂ ಎರಡು ವರ್ಷ ಇದೇ ರೀತಿ ಲಾಭ ತಂದುಕೊಡುತ್ತದೆ.  
ರೈತರು ಮಂತ್ಲಿ ಇನ್‌ಕಮ್‌ ಮಾಡೋದು ಹೇಗೆ ಅಂತ ಶಂಕರಗೌಡ ತೋರಿಸಿದ್ದಾರೆ. 

* ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.