ಗೂಗಲ್‌ಲಿ ಸೇವ್‌ ಆದ್ರೆ ಸೇಫ್ !


Team Udayavani, Nov 19, 2018, 6:00 AM IST

oppo-realme-1-lead-copy-copy.jpg

ಮೊನ್ನೆ ಗೆಳೆಯರೊಬ್ಬರ ಅಂಡ್ರಾಯ್ಡ ಸ್ಮಾರ್ಟ್‌ ಫೋನ್‌ ಕಳೆದುಹೋಯಿತು. ಅದಕ್ಕವರು ತುಂಬಾ ಬೇಜಾರು ಮಾಡಿಕೊಂಡಿದ್ದರು. ಆರೇಳು ತಿಂಗಳ ಹಿಂದಷ್ಟೇ ಕೊಂಡಿದ್ದ ಆ ಫೋನು ಉತ್ತಮವಾಗಿ ಕೆಲಸ ಮಾಡುತ್ತಿತ್ತು. ಈಗ ಮತ್ತೆ ಹೊಸ ಫೋನ್‌ ಕೊಳ್ಳಲು ಹಣ ಖರ್ಚು ಮಾಡಬೇಕಿತ್ತು.  ಅದಕ್ಕಿಂತಲೂ ಮುಖ್ಯವಾಗಿ ಅದರಲ್ಲಿ ಸಾವಿರಾರು ಫೋನ್‌ ನಂಬರ್‌ಗಳಿದ್ದವು. ಅವೆಲ್ಲ ಹಾಳಾಗಿ ಹೋದವು. ಈಗ ಎಲ್ಲರ ನಂಬರ್‌ಗಳನ್ನೂ ಮತ್ತೆ ಕಲೆಕ್ಟ್ ಮಾಡಬೇಕೆಂದರೆ ಎಷ್ಟೊಂದು ಕಷ್ಟದ ವಿಷಯ ಎಂಬುದು  ಅವರ ಬೇಸರಕ್ಕೆ ಕಾರಣ. ನಾನು ಕೇಳಿದೆ, ಸಾರ್‌ ನಿಮ್ಮ ಕಾಂಟ್ಯಾಕ್ಟ್ (ಮೊಬೈಲ್‌, ದೂರವಾಣಿ ಸಂಖ್ಯೆಗಳು) ಗಳನ್ನು ಗೂಗಲ್‌ ಅಕೌಂಟಿನಲ್ಲಿ ನಲ್ಲಿ ಸೇವ್‌ ಮಾಡಿರಲಿಲ್ಲವೇ? ಅಂತ. ಅದಕ್ಕವರು ನನಗದು ಗೊತ್ತಿರಲಿಲ್ಲ ಅಂದರು. ಸಾಮಾನ್ಯವಾಗಿ ಅನೇಕರು ತಮ್ಮ ಮೊಬೈಲ್‌ ನಲ್ಲಿ ಇತರರ ನಂಬರ್‌ಗಳನ್ನು ಸೇವ್‌ ಮಾಡಿಕೊಳ್ಳುವಾಗ ಮೊಬೈಲ್‌ ಫೋನ್‌ಗೆ ಸೇವ್‌ ಮಾಡಿಕೊಳ್ಳುತ್ತಾರೆ. ನನ್ನ ಗೆಳೆಯರೂ ಹಾಗೇ ಮಾಡಿದ್ದರು. ನೀವು ಗೂಗಲ್‌ ನಲ್ಲಿ ಸೇವ್‌ ಮಾಡಿಕೊಂಡಿದ್ದರೆ ನಿಮ್ಮ ಒಂದು ನಂಬರೂ ಹೋಗುತ್ತಿರಲಿಲ್ಲ ಎಂದೆ. ಅಯ್ಯೋ, ಆ ವಿಷಯ ನನಗೆ ತಿಳಿದಿರಲಿಲ್ಲ ಅಂತ ಪೇಚಾಡಿಕೊಂಡರು.

ಒಂದು ವಿಷಯ ನೆನಪಿರಲಿ; ನೀವು ಸೇವ್‌ ಮಾಡಿದ ನಂಬರುಗಳು ನಿಮ್ಮ ಫೋನ್‌ನ ಆಂತರಿಕ ಸಂಗ್ರಹದಲ್ಲಿದ್ದರೆ, ಆ ಫೋನ್‌ ನಿಮ್ಮ ಬಳಿ ಇರುವವರೆಗೆ ಮಾತ್ರ ನಂಬರ್‌ಗಳು ಇರುತ್ತವೆ. ಫೋನು ಕಳುವಾದರೆ ಅಥವಾ ಕೆಟ್ಟು ಹೋದರೆ ಆಗ ನಿಮ್ಮ  ಕಾಂಟಾಕ್ಟ್ ಗಳೆಲ್ಲ ಹಾಳಾದಂತೆಯೇ. ಅದಕ್ಕೆ ಏನ್ಮಾಡಿ ಅಂದ್ರೆ- ಫೋನ್‌ ನಂಬರ್‌ಗಳನ್ನು ಗೂಗಲ್‌ ನಲ್ಲಿ ಸೇವ್‌ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಒಂದು ವೇಳೆ ನಿಮ್ಮ ಫೋನ್‌ ಹಾಳಾದರೂ, ನೀವು ಇನ್ನೊಂದು ಫೋನ್‌ ಬಳಸುವಾಗ ಗೂಗಲ್‌ ಅಕೌಂಟ್‌ ಮೂಲಕ  ಆ ಫೋನ್‌ಗೆ ಲಾಗಿನ್‌ ಆದರೆ ಸಾಕು, ನಿಮ್ಮ ಸಂಗ್ರಹದಲ್ಲಿದ್ದ ಹಳೆಯ ಮೊಬೈಲ್‌ ನಂಬರ್‌ಗಳು ಮ್ಯಾಜಿಕ್‌ ನಂತೆ ಆ ಫೋನ್‌ ನಲ್ಲಿ ಬಂದು ಕುಳಿತುಕೊಳ್ಳುತ್ತವೆ. 

ಗೂಗಲ್‌ಗೆ ನಿಮ್ಮ ಮೊಬೈಲ್‌ ನಂಬರ್‌ ಸೇವ್‌ ಮಾಡಿಕೊಳ್ಳವುದು ಹೀಗೆ:
ನೀವು ಹೊಸ ಅಂಡ್ರಾಯ್ಡ ಫೋನ್‌ ತೆಗೆದುಕೊಂಡಿರಿ ಎಂದಿಟ್ಟುಕೊಳ್ಳಿ. ಅದನ್ನು ಆನ್‌ ಮಾಡಿ ಮುಂದಕ್ಕೆ ಹೋದಂತೆಲ್ಲ ಆದು ನಿಮ್ಮ  ಜಿಮೇಲ್‌ ಅಕೌಂಟ್‌ ಗೆ ಲಾಗಿನ್‌ ಆಗಲು ಕೇಳುತ್ತದೆ. ಜಿಮೇಲ್‌ ಅಕೌಂಟ್‌ ಇಲ್ಲವಾದರೆ, ಹೊಸದಾಗಿ ಸೃಷ್ಟಿಸಲು ಹೇಳುತ್ತದೆ. ನಿಮ್ಮ ಫೋನ್‌ನಲ್ಲಿ, ಅಂಡ್ರಾಯ್ಡನ ಆ್ಯಪ್‌ಗ್ಳು ದೊರಕುವ ಜಾಗ ಗೂಗಲ್‌ ಪ್ಲೇ ಸ್ಟೋರ್‌. ಅದು ನಿಮಗೆ ದೊರಕಬೇಕಾದರೆ  ಜಿಮೇಲ್‌ ಮೂಲಕ ಲಾಗಿನ್‌ ಆಗಲೇಬೇಕು. ಆದ್ದರಿಂದ,ಯಾವ ಫೋನ್‌ಗೆ ನೀವು ಜಿಮೇಲ್‌ ಅಕೌಂಟ್‌ನಿಂದ ಲಾಗಿನ್‌ ಆಗುತ್ತೀರೋ, ಆ ಜಿಮೇಲ್‌ ಐಡಿ ಮತ್ತು ಪಾಸ್‌ ವರ್ಡ್‌ ಅನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ. ಇಲ್ಲವಾದರೆ ನಿಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಅದು ಹೊರಗಿನವರಿಗೆ ಗೊತ್ತಾಗದಂತೆ ಎಚ್ಚರವಹಿಸಿ. ಎಷ್ಟೋ ಜನರು,  ಹಳೆಯ ಫೋನ್‌ನಲ್ಲಿ ಒಂದು ಜಿಮೇಲ್‌ ಅಕೌಂಟ್‌ ಇಟ್ಟುಕೊಂಡು, ಹೊಸ ಫೋನ್‌ ಕೊಂಡಾಗ, ಹಳೆಯ ಅಕೌಂಟಿನ ಐಡಿ, ಪಾಸ್ವರ್ಡ್‌ ಎಲ್ಲ ಮರೆತಿರುತ್ತಾರೆ! ಆಗ ಗೂಗಲ್‌ನಲ್ಲಿ ನಿಮ್ಮ ನಂಬರ್‌ಗಳಿದ್ದರೂ ಪ್ರಯೋಜನವಾಗುವುದಿಲ್ಲ.
 
ಜಿಮೇಲ್‌ ಅಕೌಂಟ್‌ ಮೂಲಕ ಲಾಗಿನ್‌ ಆದ ಮೇಲೆ, ನಿಮ್ಮ ಮೊಬೈಲ್‌ನಲ್ಲಿ ಫೋನ್‌ ಬುಕ್‌ ಅಥವಾ ಕಾಂಟ್ಯಾಕ್ಟ್ ಆ್ಯಪ್‌ ಕ್ಲಿಕ್‌ ಮಾಡಿ, ಸಾಮಾನ್ಯವಾಗಿ ಇದು, ನಿಮ್ಮ ಫೋನಿನ ಕೆಳಗಿನ ಸಾಲಲ್ಲಿ ಇರುತ್ತದೆ. ನೀವು ಫೋನ್‌ ಕಾಲ್‌ ಮಾಡುವ ಆ್ಯಪ್‌ ಪಕ್ಕದಲ್ಲೇ ಇರುತ್ತದೆ. ಇನ್ನು ಕೆಲವು ಫೋನ್‌ಗಳಲ್ಲಿ ಫೋನ್‌ ಕಾಲ್‌ ಆ್ಯಪ್‌ನಲ್ಲೇ ಕಾಂಟ್ಯಾಕ್ಟ್ ಕೂಡ ಇರುತ್ತದೆ. ಹೀಗೆ ಕಾಂಟ್ಯಾಕ್ಟ್ (ಫೋನ್‌ಬುಕ್‌) ಆ್ಯಪ್‌ ಓಪನ್‌ ಆದ ನಂತರ, ಅದರಲ್ಲಿ ನ್ಯೂ ಕಾಂಟ್ಯಾಕ್ಟ್, ಅಥವಾ ಆಡ್‌ ಕಾಂಟ್ಯಾಕ್ಟ್ ಸೆಲೆಕ್ಟ್ ಮಾಡಿಕೊಳ್ಳಿ. ನಂತರ ಸೇವ್‌ ಟು ಫೋನ್‌, ಗೂಗಲ್‌, ಸಿಮ್‌ 1, ಸಿಮ್‌ 2 ಅನ್ನುವ ಆಯ್ಕೆಗಳು  ಸಿಗುತ್ತವೆ. ಅದರಲ್ಲಿ ಗೂಗಲ್‌ ಅನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ,  ಆನಂತರ ಫೋನ್‌ ನಂಬರ್‌ ಸೇವೆ ಮಾಡಿ. ಒಮ್ಮೆ ಹೀಗೆ ಮಾಡಿದರೆ ಸಾಕು,  ನಂತರದ ಎಲ್ಲ ಫೋನ್‌ ನಂಬರ್‌ಗಳೂ ಗೂಗಲ್‌ ಕಾಂಟಾಕ್ಟ್‌ನಲ್ಲೇ ಸೇವ್‌ ಆಗುತ್ತವೆ. 

ನೀವು ಡಾಟಾ  ಆಫ್ ಮಾಡಿದಾಗ ಗೂಗಲ್‌ ಸೆಲೆಕ್ಟ್ ಮಾಡಿಕೊಂಡು ಸೇವ್‌ ಮಾಡಿದರೂ, ಡಾಟಾ ಆನ್‌ ಆದ ತಕ್ಷಣ ಆ ನಂಬರ್‌ಗಳೆಲ್ಲ ನೀವು ಲಾಗಿನ್‌ ಆಗಿರುವ ಗೂಗಲ್‌ (ಜಿಮೇಲ್‌) ಅಕೌಂಟ್‌ಗೆ ಸಿಂಕ್ರನೈಸ್‌ ಆಗುತ್ತವೆ. ಹೀಗೆ ಗೂಗಲ್‌ ಕಾಂಟಾಕ್ಟ್‌ನಲ್ಲಿ ಸೇವ್‌ ಆದ ನಂಬರುಗಳು ಸುರಕ್ಷಿತವಾಗಿ ಗೂಗಲ್‌ ಅಕೌಂಟ್‌ನಲ್ಲಿರುತ್ತವೆ. ಇದು ಕೌÉಡ್‌ ಸ್ಟೋರೇಜ್‌ ಆದ್ದರಿಂದ ಭೌತಿಕವಾಗಿ ಹಾಳಾಗುವ ಚಿಂತೆಯಿಲ್ಲ. ನೀವು ಯಾವುದೇ ಬೇರೆ ಫೋನ್‌ಗೆ ಹೋಗಿ ನಿಮ್ಮ ಅದೇ ಗೂಗಲ್‌ ಅಕೌಂಟ್‌ ಗೆ ಲಾಗಿನ್‌ ಆದರೆ ಆ ಮೊಬೈಲ್‌ನಲ್ಲಿ ನೀವು ಸೇವ್‌ ಮಾಡಿದ ನಂಬರುಗಳು ಬರುತ್ತವೆ. ಪರ್ಸನಲ್‌ ಕಂಪ್ಯೂಟರ್‌ ನಲ್ಲಿ ನಿಮ್ಮ ಜಿಮೇಲ್‌ ಓಪನ್‌ ಮಾಡಿದರೆ ಈ ಎಲ್ಲ ನಂಬರ್‌ಗಳೂ ಸಿಗುತ್ತವೆ. ಜಿಮೇಲ್‌ನ ಬಲತುದಿಯಲ್ಲಿ ಚಪ್ಪಟೆಯಾಕಾರದ 9 ಸಣ್ಣ ಚುಕ್ಕಿಗಳಿರುವೆಡೆ ಕ್ಲಿಕ್‌ ಮಾಡಿದರೆ ಗೂಗಲ್‌ ನ ಎಲ್ಲ ಆ್ಯಪ್‌ಗ್ಳು ಕಾಣಸಿಗುತ್ತವೆ. ಅಲ್ಲಿ  ಕಾಂಟ್ಯಾಕ್ಟ್ಗೆ ಹೋಗಿ  ಕ್ಲಿಕ್‌ ಮಾಡಿದರೆ ನಿಮ್ಮ ಮೊಬೈಲ್‌ನಲ್ಲಿರುವ ನಂಬರ್‌ಗಳು ಕಾಣಸಿಗುತ್ತವೆ.

ಈಗಾಗಲೇ ಫೋನ್‌ನಲ್ಲೇ ತಮ್ಮ ನಂಬರ್‌ಗಳನ್ನು ಸೇವ್‌ ಮಾಡಿಕೊಂಡಿರುವವರು, ಕಾಂಟ್ಯಾಕ್ಟ್ ಅಥವಾ ಫೋನ್‌ ಬುಕ್‌ ಆ್ಯಪ್‌ಗೆ ಹೋಗಿ, ಅದರಲ್ಲಿರುವ ಸೆಟ್ಟಿಂಗ್‌ನಲ್ಲಿ ಆರ್ಗನೈಸ್‌ ಕಾಂಟ್ಯಾಕ್ಟ್ ಒತ್ತಿ, ನಂತರ ಕಾಪಿ ಕಾಂಟಾಕ್ಟ್$Õ ಗೆ ಹೋಗಿ, ಅದನ್ನು ಒತ್ತಿದರೆ ಕಾಪಿ ಕಾಂಟ್ಯಾಕ್ಟ್ ಫ್ರಂ ಅಂತ ಬರುತ್ತದೆ, ಅದರಲ್ಲಿ  ಫೋನ್‌  ಎಂಬ ಆಯ್ಕೆ ಒತ್ತಿ, ನಂತರ ಸೆಲೆಕ್ಟ್ ಆಲ್‌ ಕೊಡಿ, ಕೆಳಗೆ ಕಾಪಿ ಎಂಬ ಆಯ್ಕೆ ಇರುತ್ತದೆ, ಅದನ್ನು ಒತ್ತಿ ನಂತರ ಕಾಪಿ ಕಾಂಟ್ಯಾಕ್ಟ್$Õ ಟು ಎಂಬ ಆಯ್ಕೆ ಬರುತ್ತದೆ. ಅದರಲ್ಲಿ ಗೂಗಲ್‌ ಒತ್ತಿ. ಆಗ ನಿಮ್ಮ ಫೋನ್‌ನಲ್ಲಿ ಸೇವ್‌ ಮಾಡಿಕೊಂಡಿರುವ ಕಾಂಟಾಕ್ಟ್ಗಳೆಲ್ಲ ಗೂಗಲ್‌ ಅಕೌಂಟಿಗೆ ಕಾಪಿ ಆಗುತ್ತವೆ.
                    
– ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.