ಬದುಕೆಂದರೆ ನೋವು ಬದುಕೆಂದರೆ ನಲಿವು!


Team Udayavani, Jan 1, 2019, 12:30 AM IST

125.jpg

ಈಗ ಹಳೆಯದನ್ನೆಲ್ಲ ನೆನಪಿಸಿಕೊಂಡ್ರೆ ಎಷ್ಟೊಂದ್‌ ನಗು ಬರುತ್ತೆ ಅಂದ್ರೆ, ಎಲ್ಲರ ಜೊತೆ ನಕ್ಕು ನಕ್ಕು ಸುಸ್ತಾಗಿ, ಕೊನೆಗೆ ಒಬ್ಬಳೇ ಉಳಿದಾಗ, ನನ್ನ ಜೊತೆ ಇರೋದು ಬರೀ ಕಣ್ಣೀರು.

ನನ್ನ ಪ್ರೀತಿಯ ಹುಡುಗ ,
ದುಃಖದ ಕಡಲಿನಿಂದ ಈಗಷ್ಟೇ ಎದ್ದು ಬಂದೆ. ನನ್ನೆಲ್ಲಾ ದುಃಖದ ಮೂಲ, ನೀನಿನ್ನು ನನ್ನ ಬದುಕಿನಲ್ಲಿ ಬರಲಾರೆಯೆಂಬ ಒಂದೇ ಒಂದು ಸತ್ಯ. ನನಗೆಲ್ಲಾ ಅರ್ಥವಾಗುತ್ತೆ. ನಾನು ನೀನು ಜತೆಗಿದ್ದಾಗ ಕನಸು ಕಾಣುವುದು ಎಷ್ಟೊಂದು ಸುಲಭವಿತ್ತು. ಅದೇ ನೀನು ನಿನ್ನ ಮನೆಯಲ್ಲಿದ್ದಾಗ, ಮನೆಯವರು ಕಾಣುವ ಕನಸುಗಳಲ್ಲಿ ನೀನಿರುತ್ತೀಯ. ಅವರ ಕನಸುಗಳನ್ನು ನೀನು ಈಡೇರಿಸುತ್ತೀಯ ಎಂಬ ಅದಮ್ಯ ನಂಬಿಕೆ ಅವರಿಗಿದೆ. ಸಮಸ್ಯೆಯೆಂದರೆ, ಅವರ ಕನಸುಗಳಲ್ಲಿ ನಾನಿಲ್ಲ. ಅವರಿಗೆ ಅವರ ಕನಸುಗಳೇ ಪರಮ ಸತ್ಯ. ಆ ಸತ್ಯಗಳೇ ಅವರ ಸಂತೋಷದ‌ ಮೂಲವಸ್ತು. ಅದು ಚೂರು ಅತ್ತಿತ್ತಲಾದರೆ ಮನೆಯೆಂಬುದು ರಣರಂಗ. ನಿನ್ನನ್ನು ಮನೆಯವರೆಲ್ಲರೂ ಅದೆಷ್ಟು ಪ್ರೀತಿಸುತ್ತಾರೆ. ಅವರ ಪ್ರೀತಿಯ ಮುಂದೆ, ನಿನ್ನೆ ಮೊನ್ನೆ ಪರಿಚಯವಾದ ಹುಡುಗಿ ನಿನ್ನನ್ನು ಸಂಪೂರ್ಣವಾಗಿ ಬಯಸಿದ್ದು ತಪ್ಪಲ್ಲವಾ? 

ಹೌದೋ ಹುಡುಗ, ನೀನು ನನ್ನನ್ನು ದೂರ ಮಾಡಿ ಹೋಗುತ್ತಿರುವ ಕೋಪದಲ್ಲಿ, ನಿನ್ನನ್ನು ಮೋಸಗಾರ ಅಂತ ಹೇಳಿದ್ದೇನೋ ನಿಜ. ಆದರೆ, ನಿನ್ನ ಪರಿಸ್ಥಿತಿ ನನಗೆ ಅರ್ಥವಾಗುತ್ತೆ. ಸರಿ, ನೀನಿನ್ನು ಹೊರಡು. ನೀನು ನನ್ನ ಬದುಕಿಗೆ ದಕ್ಕಿದ್ದು ಇಷ್ಟೇ ಅಂದುಕೊಳ್ಳುತ್ತೇನೆ. ನೀನೊಂದು ಮುಗಿಯದ ಕನಸು. ಈ ಜಗತ್ತು ನನ್ನ ನಿನ್ನ ನಡುವೆ ತನಗಿಷ್ಟ ಬಂದಂತೆ ಒಂದು ಗೋಡೆ ಕಟ್ಟಿಬಿಟ್ಟಿದೆ. ನನಗೆ ಅದರ ಗೊಡವೆಯಿಲ್ಲ. ನೀನು ಯಾವತ್ತಿದ್ದರೂ ನನ್ನವನು. ನಿನ್ನ ಅನಿವಾರ್ಯತೆ, ನನ್ನ ನಿಸ್ಸಹಾಯಕತೆ ಎರಡೂ ನಮ್ಮಿಬ್ಬರ ಬಲಹೀನತೆಗಳು. ನಾವಿಬ್ಬರೂ ನಮ್ಮ ನಮ್ಮ ಪರಿಸ್ಥಿತಿಗೆ ಸೋತು ಶರಣಾದವರು. ನಾವಿಬ್ಬರೂ ಕೊಂಚ ಧೈರ್ಯ ಮಾಡಿದ್ದರೆ, ಈ ಬದುಕು ಹೇಗೋ ಇರುತ್ತಿತ್ತು. ನಾವಿಬ್ಬರೂ ಕಂಡ ಕನಸಿನಂತೆ. 

ಬಿಡು, ಈಗ ಅದೆಲ್ಲಾ ಆಗದ ಹೋಗದ ಮಾತುಗಳು. ನಿನ್ನ ಮದುವೆಯ ಸುದ್ದಿ ತಿಳಿಯಿತು. ನಂಗೆ ದುಃಖವಾಗಬೇಕಿತ್ತು. ಆದರೆ, ಒಳಗೆಲ್ಲೋ ಒಂದು ನಿರಾಳ ಭಾವ ನೆಲೆಸಿತು. ಯಾಕೋ ಗೊತ್ತಿಲ್ಲ! ನಿನ್ನ ಬದುಕಿನ ಹಾದಿಗೆ ನಾನು ಬಿಡಿಸಲಾಗದ ಬೇಲಿ, ಸರಿಸಲಾಗದ ಬಾಗಿಲಂತಾಗಿ ಬಿಟ್ಟಿದ್ದೇನೆಂಬ ಪಶ್ಚಾತ್ತಾಪ, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆನೆಂಬ ತೊಳಲಾಟದಲ್ಲಿ ನೀ ನರಳಾಡುವಾಗ, ನನ್ನನ್ನು ಆವರಿಸಿ ಕಾಡುತ್ತಿತ್ತು. ಈಗ ನಿನ್ನ ನಿರಾಕರಣೆ ನನ್ನೊಳಗೆ ಒಂದು ನೆಮ್ಮದಿ ತಂದಿದೆ. ನಿನ್ನ ಪ್ರೀತಿಯಲ್ಲಿ ಕನಸುಗಳನ್ನಷ್ಟೇ ಕಂಡಿದ್ದ ನನಗೆ, ನಿನ್ನ ನಿರಾಕರಣೆಯಲ್ಲಿ ವಾಸ್ತವದ ಪರಿಚಯವಾಗುತ್ತಿದೆ. ಬದುಕೆಂದರೆ ಇಷ್ಟೇ ಅಲ್ಲ, ಅದು ನೋವು ನಲಿವುಗಳ ಸಂಗಮ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ನಡೆಯುವ ಪಯಣ… ಉಫ್… ಸದಾ ನಗುತ್ತಾ, ಬೇರೆಯವರ ಕಾಲೆಳೆದು ಖುಷಿ ಪಡುತ್ತಾ ಇದ್ದ ನನ್ನನ್ನು, ಈ ಬದುಕು ಎದುರು ಕೂರಿಸಿಕೊಂಡು, ಎಂಥಾ ಪಾಠ ಮಾಡಿತು! ಈಗ ಹಳೆಯದನ್ನೆಲ್ಲ ನೆನಪಿಸಿಕೊಂಡ್ರೆ ಎಷ್ಟೊಂದ್‌ ನಗು ಬರುತ್ತೆ ಅಂದ್ರೆ, ಎಲ್ಲರ ಜೊತೆ ನಕ್ಕು ನಕ್ಕು ಸುಸ್ತಾಗಿ, ಕೊನೆಗೆ ಒಬ್ಬಳೇ ಉಳಿದಾಗ, ನನ್ನ ಜೊತೆೆ ಇರೋದು ಬರೀ ಕಣ್ಣೀರು. ಥೂ, ಈ ಭಾವನೆಗಳಿಗೆ ಗುಲಾಮರಾಗ್ಬಾರ್ದು. 

ಲೋ ಹುಡ್ಗ ನೀನಾದ್ರೂ ಖುಷಿಯಾಗಿ ಚೆನ್ನಾಗಿರು. ನಿನ್ನ ನೆನಪೇ ನಂಗೆ ಸವಿಗನಸು. ಯಾವತ್ತಾದ್ರೂ ದುಃಖ ಆದಾಗ, ಅವಿÛಬೇìಕಿತ್ತು ಅಂತ ನನ್ನನ್ನ ಒಂದ್‌ ಕ್ಷಣ ನೆನಪು ಮಾಡ್ಕೊà. ನಂಗೆ ಅದಷ್ಟೇ ಸಾಕು.. ಮೈ ಡಿಯರ್‌ ಕೋತಿ, ಬಾಯ… ಬಾಯ್‌… 

ನಿನ್ನವಳು (?)

ಅಮ್ಮು, ಮಲ್ಲಿಗೆಹಳ್ಳಿ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.