ಮನಸ್ಸಿನಲ್ಲಿ ಉಳಿದುಬಿಟ್ಟ ಬಿಂಬ 

Team Udayavani, Jan 25, 2019, 12:30 AM IST

w-12.jpg

ಒಮ್ಮೆ ನಾನು ಮತ್ತು ನನ್ನ ಅಮ್ಮ ಮಾರ್ಕೆಟ್‌ಗೆ ಹೋಗಿದ್ದೆವು. ಮನೆಗೆ ಬೇಕಾದ ಸಾಮಾನು-ದಿನಸಿಗಳನ್ನು ಖರೀದಿಸಿದ ಬಳಿಕ ಇನ್ನೇನು ಮರಳ್ಳೋಣ ಎಂಬಷ್ಟರಲ್ಲಿ ನನ್ನ ದೃಷ್ಟಿ ಅಲ್ಲೇ ಬದಿಯಲ್ಲಿ ಕುಳಿತಿದ್ದ ಭಿಕ್ಷುಕನೊಬ್ಬನ ಕಡೆಗೆ ಹೊರಳಿತು. ಅಲ್ಲೊಂದು ಮರವಿತ್ತು. ಅದರ ನೆರಳಿನಲ್ಲಿ ಆತ ಕುಳಿತಿದ್ದ. ತಲೆಗೂದಲು ಕೆದರಿತ್ತು. ಕಾಲು ತುಂಡಾಗಿತ್ತು, ದೇಹ ಸೊರಗಿತ್ತು. ದೇಹದಲ್ಲಿ ದೈನ್ಯತೆ ಎದ್ದು ಕಾಣುತ್ತಿತ್ತು. ನನಗೆ ಅವನನ್ನು ನೋಡಿ ತುಂಬ ಸಂಕಟವೆನಿಸಿತು.

ನಾವು ಅವನ ಮುಂದೆ ಹಾದು ಹೋಗುತ್ತಿದ್ದಂತೆ ತನ್ನ ಎರಡೂ ಕೈಗಳನ್ನು ಮುಂದೆ ಚಾಚಿ, “ಅಮ್ಮಾ , ಏನಾದ್ರೂ ಇದ್ರೆ ಕೊಡಮ್ಮ’ ಎಂದು ಬೇಡಿಕೊಂಡ. ನನ್ನ ಕೈಯಲ್ಲಿ ಇಪ್ಪತ್ತು ರೂಪಾಯಿ ನೋಟು ಇತ್ತು. ಏನನ್ನೋ ಖರೀದಿಸಲು ಇಟ್ಟುಕೊಂಡಿದ್ದೆ. ಅದನ್ನು ಅವನ ಕೈಗೆ ಹಾಕಿದೆ. ಆ ನೋಟನ್ನು ತನ್ನ ಎರಡೂ ಕಣ್ಣುಗಳಿಗೆ ತಾಕಿಸಿ, ತನ್ನಲ್ಲಿಟ್ಟುಕೊಳ್ಳುತ್ತ ಎರಡೂ ಕೈಗಳನ್ನು ಜೋಡಿಸಿ ಧನ್ಯವಾದ ಹೇಳಿದನು.

ನನ್ನ ಕಂಠ ಗದ್ಗದವಾಯಿತು. ನನ್ನ ಕಣ್ಣುಗಳು ಹನಿಗೂಡಿದವು. ನಾನು ಸುಮ್ಮನೆ ಅವನನ್ನೇ ನೋಡುತ್ತ ನಿಂತಿದ್ದೆ. “ಬರ್ಪುಜನದೆ ಪೊರ್ತಾಂಡ್‌’- (“ಬರುವುದಿಲ್ಲವೇನೇ ಹೊತ್ತಾಯ್ತು’) ಎಂದು ಅಮ್ಮ ಕರೆದರು. ನಾನು ತತ್‌ಕ್ಷಣಕ್ಕೆ ವಾಸ್ತವಕ್ಕೆ ಬಂದೆ. ಅವರು ನನ್ನಿಂದ ಸಾಕಷ್ಟು ಮುಂದೆ ಹೋಗಿದ್ದರು. ಭಿಕ್ಷುಕನನ್ನೇ ನೋಡುತ್ತ ಅಮ್ಮನತ್ತ ಬೇಗ ಬೇಗನೆ ನಡೆಯತೊಡಗಿದೆ.

ಎಂಥ ಬಂಧವೊ ಏನೋ, ಅವನ ದೈನ್ಯದ ಬಿಂಬವೇ ನನ್ನ ಕಣ್ಣೆದುರು ಗಾಢವಾಗಿ ಕುಳಿತುಬಿಟ್ಟಿತ್ತು. ಹುಟ್ಟುವಾಗ ಆತ ಹೇಗಿದ್ದನೋ, ಆಮೇಲೆ ಯಾಕೆ ಹಾಗಾದನೊ, ಅವನಲ್ಲಿ  ಎಂಥ ಕನಸುಗಳಿದ್ದವೊ, ಆ ಕನಸುಗಳೆಲ್ಲ ಯಾಕೆ ಕಮರಿ ಹೋದವೊ- ಎಂದೆಲ್ಲ ಯೋಚಿಸುತ್ತ ನನ್ನ ಮನಸ್ಸು ತಳಮಳಪಟ್ಟಿತು. ಸುತ್ತಮುತ್ತ ನೋಡಿದರೆ ಜನರೆಲ್ಲ ಅವರವರದೇ ಲೋಕದಲ್ಲಿ ಮುಳುಗಿ ಹೋಗಿದ್ದರು.

ನಿಕ್ಷಿತಾ ಕುಲಾಲ್‌
ದ್ವಿತೀಯ ಪಿಯುಸಿ, ಎಕ್ಸಲೆಂಟ್‌ ಕಾಲೇಜ್‌, ಮೂಡುಬಿದಿರೆ

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.