ಒಂದು ಎಕರೆಯಲ್ಲಿ 8 ಲಕ್ಷ ಆದಾಯ

Team Udayavani, Feb 4, 2019, 12:30 AM IST

koustubha.jpg

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಪಟ್ಟಣದಲ್ಲಿ ಚಾಬೂ ಸಾಬ್‌ ಅವರ ಮನೆ ಇದೆ. ಇಲ್ಲಿ ಕಟ್ಟಡ ಕಟ್ಟಿ ಬಾಡಿಗೆ ಕೊಟ್ಟರೆ ಬಾಡಿಗೆ ಬರುತ್ತದೆ. ಇವರು ಹಾಗೆ ಮಾಡದೆ ಮನೆಯ ಸುತ್ತಮುತ್ತಲಿನ ಜಮೀನಿನಲ್ಲಿ ಅಡಿಕೆ ಬೆಳೆ ತೆಗೆಯುತ್ತಿದ್ದಾರೆ. ಇದರ ಜೊತೆ ಬಾಳೆ, ಕಾಳು ಮೆಣಸು, ಏಲಕ್ಕಿ, ನಿಂಬೆ, ಪೇರಲ, ಮಾವು ಹೀಗೆ ಬಗೆ ಬಗೆಯ ಕೃಷಿ ಎಲ್ಲರ ಗಮನ ಸೆಳೆಯುತ್ತಿದೆ.

ರಿಪ್ಪನ್‌ಪೇಟೆ -ತೀರ್ಥಹಳ್ಳಿ ಮಾರ್ಗದಲ್ಲಿ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇವರ ಖುಷ್ಕಿ ಜಮೀನಿದೆ. ಮನೆ ಮುಂಭಾಗದ ಒಂದು ಎಕರೆಯಲ್ಲಿ ಅಡಿಕೆ ತೋಟ ನಿರ್ಮಿಸಿದ್ದಾರೆ. ಅದರಲ್ಲಿ 800 ಮರಗಳಿವೆ.  ಹೊಸನಗರದ ಮಾಜಿ ಶಾಸಕರಾಗಿದ್ದ ಸ್ವಾಮಿರಾವ್‌ ಅವರ ಕೃಷಿಯಿಂದ ಪ್ರೇರಿತರಾಗಿ ಇವರು ಕೃಷಿ ಆರಂಭಿಸಿದರು. ನೀರಿನ ವ್ಯವಸ್ಥೆ ಇಲ್ಲದ ಕಾರಣ ತೆರೆದ ಬಾವಿಯಿಂದ ನೀರು ಸೇದಿ ಪ್ರತಿ ಅಡಿಕೆ,  ತೆಂಗಿನ ಗಿಡಗಳಿಗೆ ಹಾಕುತ್ತಿದ್ದರು.  ಗಿಡ ನೆಟ್ಟು 3 ನೇ ವರ್ಷ ಕೊಳವೆ ಬಾವಿ ತೆಗೆಸಿ ನೀರಿಗೆ ವ್ಯವಸ್ಥೆ ಮಾಡಿಕೊಂಡರು.

ಅಡಿಕೆ ಮರಗಳ ನಡುವೆ  800 ಗೊಬ್ಬರ ಗಿಡ ನೆಟ್ಟಿದ್ದಾರೆ. ಅವಕ್ಕೆ ಕಾಳು ಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ. ಫ‌ಣಿಯೂರು, ಕರಿಮುಂಡ ತಳಿಯ ಮೆಣಸಿನ ಬಳ್ಳಿಗಳ ವಯಸ್ಸು 12 ವರ್ಷ.  ಪ್ರತಿ ಬಳ್ಳಿಯಿಂದ ವರ್ಷಕ್ಕೆ ಸರಾಸರಿ 2 ರಿಂದ 2.5 ಕಿ.ಗ್ರಾಂ.ಕಾಳು ಮೆಣಸಿನಂತೆ, ವರ್ಷಕ್ಕೆ 18 ಕ್ವಿಂಟಾಲ್‌ ಫ‌ಸಲು ದೊರೆಯುತ್ತಿದೆ.  ಇದರಿಂದ ವರ್ಷಕ್ಕೆ ಸರಾಸರಿ ರೂ.7 ಲಕ್ಷ ಆದಾಯ ದೊರೆಯುತ್ತಿದೆ. ಗೊಬ್ಬರ, ನೀರಾವರಿ ವ್ಯವಸ್ಥೆ, ಔಷಧ ಸಿಂಪಡಣೆ, ಕೂಲಿ ನಿರ್ವಹಣೆ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಕಾಳು ಮೆಣಸಿನ ಕೃಷಿಯಿಂದ ವರ್ಷಕ್ಕೆ ಸರಾಸರಿ ಒಂದು ಲಕ್ಷ  ರೂ.ಖರ್ಚು ಬರಬಹುದೆಂದು ಲೆಕ್ಕ ಹಾಕಿದರೂ ವರ್ಷಕ್ಕೆ 6 ಲಕ್ಷ ಲಾಭ. 

ಅಡಿಕೆ ಮರಗಳಿಗೆ ಈಗ 15 ವರ್ಷದ ಪ್ರಾಯ. ಇದರಿಂದ ವಾರ್ಷಿಕ ಆದಾಯ ಸರಾಸರಿ 3 ಲಕ್ಷರೂ. ಖರ್ಚು ಸುಮಾರು 1.5 ಲಕ್ಷ ಲೆಕ್ಕ ಹಾಕಿದರೂ, 2.5 ಲಕ್ಷ ಲಾಭ. ಅಲ್ಲದೆ ಪ್ರತಿ ವರ್ಷ ಸುಮಾರು 2 ಸಾವಿರ ಅಡಿಕೆ ಸಸಿ ಮತ್ತು 2 ಸಾವಿರ ಕಾಳು ಮೆಣಸಿನ ಬಳ್ಳಿಗಳ ನರ್ಸರಿ ಗಿಡ ತಯಾರಿಸುತ್ತಾರೆ. ಅವುಗಳನ್ನು ಕಡಿಮೆ ದರದಲ್ಲಿ, ಬಡ ರೈತರಿಗೆ ಮಾರಾಟಮಾಡುತ್ತಾರೆ. ಅಡಿಕೆ ಮತ್ತು ಕಾಳು ಮೆಣಸಿಗೆ ಸಗಣಿ, ಕುರಿ ಗೊಬ್ಬರ ಮಾತ್ರ  ಬಳಸುತ್ತಾರೆ. ಇವಲ್ಲದೆ 50 ಮಾವು, 20 ನಿಂಬು,50 ತೆಂಗು,100 ಬಾಳೆ ಗಿಡಗಳೂ ಇವರ ಕೃಷಿ ಜಮೀನಿನಲ್ಲಿ ಜಾಗ ಪಡೆದುಕೊಂಡಿವೆ. ಈ ಬಹುಬಗೆಯ ಕೃಷಿ ಪದ್ಧತಿಯಿಂದ ಜಾಬೂ ಸಾಬ್‌ ಕೇವಲ ಒಂದು ಎಕರೆಯಲ್ಲಿ ಕೃಷಿಮಾಡಿಯೂ ಸುಮಾರು ಲಕ್ಷ ರೂ. ಆದಾಯ ಪಡೆಯಬಹುದು ಎಂಬುದು ಎಲ್ಲರಿಗೂ ಸಾಧಿಸಿ ತೋರಿಸಿದ್ದಾರೆ.  

– ಕೌಸ್ತುಭ ಹೆಗಡೆ ಆನಂದಪುರಂ

ಟಾಪ್ ನ್ಯೂಸ್

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.