ವಿದ್ಯುತ್‌ ಸ್ಥಾವರ ಸ್ಥಾಪನೆ ಪ್ರಶ್ನಿಸಿದ್ದ ಪಿಐಎಲ್‌ ವಜಾ

Team Udayavani, Mar 10, 2019, 6:22 AM IST

highcourt2.jpg

ಬೆಂಗಳೂರು: ಪುಟ್ಟೇನಹಳ್ಳಿ ಕೆರೆಯ 500 ಮೀಟರ್‌ ವ್ಯಾಪ್ತಿಯೊಳಗೆ “ಅನಿಲ ಆಧಾರಿತ ಸಂಯುಕ್ತ ಆವರ್ತ ವಿದ್ಯುತ್‌ ಸ್ಥಾವರ’ ಸ್ಥಾಪನೆಗೆ ನೀಡಿರುವ “ಪರಿಸರ ಪರವಾನಗಿ’ಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ಹೈಕೋರ್ಟ್‌ ವಜಾಗೊಳಿಸಿದೆ. 

ಈ ಕುರಿತಂತೆ ಯಲಹಂಕ ಪುಟ್ಟೇನಹಳ್ಳಿ ಲೇಕ್‌ ಆ್ಯಂಡ್‌ ಬರ್ಡ್‌ ಕನ್ಸರ್ವೇಷನ್‌ ಟ್ರಸ್ಟ್‌ ಅಧ್ಯಕ್ಷ ಡಾ.ಕೆ.ಎಸ್‌.ಸಂಗುಣ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ರವಿ ಮಳಿಮಠ ಹಾಗೂ ನ್ಯಾ.ಎಸ್‌.ಜಿ. ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ, ಈ ಕರಿತು “ರಾಷ್ಟ್ರೀಯ ಹಸಿರು ನ್ಯಾಯಪೀಠ’ಕ್ಕೆ (ಎನ್‌ಜಿಟಿ) ಅರ್ಜಿ ಸಲ್ಲಿಸಲು ಅರ್ಜಿದಾರರು ಸ್ವತಂತ್ರರಾಗಿದ್ದಾರೆ ಎಂದು ಹೇಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇತ್ಯರ್ಥಪಡಿಸಿತು.

ವಿದ್ಯುತ್‌ ಸ್ಥಾವರ ಸ್ಥಾಪನೆ ಆಕ್ಷೇಪಿಸಿ ಸಲ್ಲಿಸಲಾಗಿರುವ ಮನವಿ ಪರಿಗಣಿಸಬೇಕು ಹಾಗೂ ವಿದ್ಯುತ್‌ ಸ್ಥಾವರ ಸ್ಥಾಪನೆಗೆ “ರಾಜ್ಯ ಮಟ್ಟದ ಪರಿಸರ ಪರಿಣಾಮ ನಿರ್ಧಾರಣಾ ಪ್ರಾಧಿಕಾರ’ವು 2015ರ ಸೆ.1ರಂದು ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತಕ್ಕೆ (ಕೆಪಿಸಿಎಲ್‌) ನೀಡಿರುವ ಪರಿಸರ ಪರವಾನಗಿಯನ್ನು ರದ್ದುಗೊಳಿಸುವಂತೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು.

ಪುಟ್ಟೇನಹಳ್ಳಿ ಕೆರೆ ಸಂರಕ್ಷಣೆಗೆ ಅಗತ್ಯ ಆರ್ಥಿಕ ನೆರವು ಒದಗಿಸಲು ರಾಜ್ಯ ಅರಣ್ಯ ಇಲಾಖೆಗೆ ಸೂಚನೆ ನೀಡಬೇಕು. ಅರ್ಜಿ ಇತ್ಯರ್ಥ ಆಗುವವರೆಗೆ ಪರಿಸರ ಪರವಾನಗಿ ಆದೇಶಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಪುಟ್ಟೇನಹಳ್ಳಿ ಕೆರೆಯನ್ನು “ಪಕ್ಷಿ ಸಂರಕ್ಷಣಾ ಮೀಸಲು’ ಎಂದು ಘೋಷಿಸಿ ರಾಜ್ಯ ಅರಣ್ಯ ಇಲಾಖೆ 2015ರ ಎ.29ರಂದು ಅಧಿಸೂಚನೆ ಹೊರಡಿಸಿದೆ. ವಿವಿಧ ಪ್ರಭೇದದ 127 ಪಕ್ಷಿಗಳು ಇಲ್ಲಿವೆ.

ಒಂದು ವೇಳೆ ಈ ಕೆರೆಯ 500 ಮೀ. ವ್ಯಾಪ್ತಿಯಲ್ಲಿ ವಿದ್ಯುತ್‌ ಸ್ಥಾವರ ಸ್ಥಾಪಿಸದರೆ ಪಕ್ಷಿ ಸಂಕುಲ ನಾಶವಾಗಲಿದೆ. ಇದರಿಂದ ಕೇವಲ ಪುಟ್ಟೇನಹಳ್ಳಿ ಅಥವಾ ಯಲಹಂಕ ಕೆರೆ ಅಷ್ಟೇ ಅಲ್ಲ, ನಗರದ ಇಡೀ ರಾಜಕಾಲುವೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಾಗಾಗಿ, ವಿದ್ಯುತ್‌ ಸ್ಥಾವರ ಸ್ಥಾಪನೆಗೆ ನೀಡಲಾಗಿರುವ ಪರಿಸರ ಪರವಾನಗಿ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

ಟಾಪ್ ನ್ಯೂಸ್

1-eewqewqeqwe

Davanagere; ಪೊಲೀಸ್ ಕಸ್ಟಡಿಯಲ್ಲಿದ್ದ ಅರೋಪಿ ಸಾವು: ಬಿಗುವಿನ ವಾತಾವರಣ

Fraud Case ವಿದೇಶದಲ್ಲಿ ಉದ್ಯೋಗ: 36.34 ಲ.ರೂ. ವಂಚನೆ

Fraud Case ವಿದೇಶದಲ್ಲಿ ಉದ್ಯೋಗ: 36.34 ಲ.ರೂ. ವಂಚನೆ

ದರ್ಬೆತ್ತಡ್ಕ: ಹೃದಯಾಘಾತದಿಂದ ಸಾವು ಮರಣೋತ್ತರ ವರದಿಯಲ್ಲ ಉಲ್ಲೇಖ

Darbethadka: ಹೃದಯಾಘಾತದಿಂದ ಸಾವು ಮರಣೋತ್ತರ ವರದಿಯಲ್ಲ ಉಲ್ಲೇಖ

1-aaasa

IPL 2024; ರಾಜಸ್ಥಾನ್ ಮಣಿಸಿ ಸನ್‌ರೈಸರ್ ಹೈದರಾಬಾದ್‌ ಫೈನಲ್‌ಗೆ ಲಗ್ಗೆ

ಬೈಕಿನೊಂದಿಗೆ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದ ವ್ಯಕ್ತಿ ಸಾವು

ಬೈಕಿನೊಂದಿಗೆ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದ ವ್ಯಕ್ತಿ ಸಾವು

Manipal ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Manipal ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Heavy rain ಮುಂದುವರಿದ ಮಳೆಯಬ್ಬರ: ಸಿಡಿಲಿಗೆ ಒಂದು ಬಲಿ

Heavy rain ಮುಂದುವರಿದ ಮಳೆಯಬ್ಬರ: ಸಿಡಿಲಿಗೆ ಒಂದು ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

ಕೈಗಾರಿಕೆಗೆಂದು ಅಭಿವೃದ್ಧಿಪಡಿಸಿದ ಜಾಗದಲ್ಲಿ ನೂರಾರು ದೊಡ್ಡ ಗಿಡ ನೆಟ್ಟ ಅನಾಮಿಕರು!

8

Bengaluru Road: ಮಳೆ ನಿಂತ ನಂತರ ರಸ್ತೆ ಗುಂಡಿ ದುರಸ್ತಿ  ಶುರು 

7

ಹೊಯ್ಸಳ ಪೊಲೀಸರನ್ನು ಕಳ್ಳ ಕಳ್ಳ ಎಂದು ಬೆನ್ನಟ್ಟಿದ ಸಾರ್ವಜನಿಕರು!

6

Bengaluru: 13 ವರ್ಷದ ಅಪ್ರಾಪ್ತ ಸಹೋದರನಿಂದಲೇ 3 ತಿಂಗಳ ಗರ್ಭಿಣಿಯಾದ ತಂಗಿ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-eewqewqeqwe

Davanagere; ಪೊಲೀಸ್ ಕಸ್ಟಡಿಯಲ್ಲಿದ್ದ ಅರೋಪಿ ಸಾವು: ಬಿಗುವಿನ ವಾತಾವರಣ

Fraud Case ವಿದೇಶದಲ್ಲಿ ಉದ್ಯೋಗ: 36.34 ಲ.ರೂ. ವಂಚನೆ

Fraud Case ವಿದೇಶದಲ್ಲಿ ಉದ್ಯೋಗ: 36.34 ಲ.ರೂ. ವಂಚನೆ

ದರ್ಬೆತ್ತಡ್ಕ: ಹೃದಯಾಘಾತದಿಂದ ಸಾವು ಮರಣೋತ್ತರ ವರದಿಯಲ್ಲ ಉಲ್ಲೇಖ

Darbethadka: ಹೃದಯಾಘಾತದಿಂದ ಸಾವು ಮರಣೋತ್ತರ ವರದಿಯಲ್ಲ ಉಲ್ಲೇಖ

1-aaasa

IPL 2024; ರಾಜಸ್ಥಾನ್ ಮಣಿಸಿ ಸನ್‌ರೈಸರ್ ಹೈದರಾಬಾದ್‌ ಫೈನಲ್‌ಗೆ ಲಗ್ಗೆ

ಬೈಕಿನೊಂದಿಗೆ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದ ವ್ಯಕ್ತಿ ಸಾವು

ಬೈಕಿನೊಂದಿಗೆ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.