ಸೈಬರ್‌ ಕಲೆಗೆ ಸೈ ಎನ್ನಿ!


Team Udayavani, Mar 12, 2019, 12:30 AM IST

m-6.jpg

ಗೇಮಿಂಗ್‌ ಎಂಬುದು ಆ ವಿಷಯದಲ್ಲಿ ಆಸಕ್ತರ ಎದೆ ಬಡಿತವನ್ನು ನೂರುಪಟ್ಟು ಹೆಚ್ಚಿಸುವ ಪದ! ಅದು ಸೃಷ್ಠಿಸುವ ಜಗತ್ತು, ಪರಿಸರ ವ್ಹಾಹ…! ಯುವ ಮನಸ್ಸುಗಳಿಗಂತೂ ಆ ಜಗತ್ತಿಗಿಂತ ಬೇರೆ ಪ್ರಪಂಚವೇ ಇಲ್ಲ! ಅಕ್ಷರಶಃ ಹುಚ್ಚಾಗುವ, ಗೀಳಾಗುವ ಪ್ರಪಂಚವದು! ಇರಲಿ, ಒಂದು ಹೆಜ್ಜೆ ಮುಂದೆ ಹೋಗಿ ಅಂತಹ ಆಟಗಳನ್ನು ನಾವೇ ಸೃಷ್ಠಿಸುವವರಾದರೆ? ಅನೇಕ ಗೇಮಿಂಗ್‌ ಐಡಿಯಾಗಳು ನಿಮ್ಮ ಮನಸ್ಸಿನಲ್ಲಿರಬಹುದು. ಆದರೆ ಅದನ್ನು ನನಸು ಮಾಡಿಕೊಳ್ಳುವುದು ಸಾಧ್ಯವೆ? ಹೌದು! ಅಷ್ಟೇ ಅಲ್ಲ, ಅದನ್ನು ನಿಮ್ಮ ವೃತ್ತಿಯನ್ನಾಗಿಯೂ ಮಾಡಿಕೊಳ್ಳಬಹುದು! ಅವುಗಳಲ್ಲಿ ಗೇಮ್‌ ಆರ್ಟಿಸ್ಟ್‌ ಕೂಡಾ ಒಂದು.

ಇಂದಿನ ಚೇತೋಹಾರಿ ವೃತ್ತಿಗಳಲ್ಲಿ ಗೇಮ್‌ ಆರ್ಟಿಸ್ಟ್ ಕೂಡಾ ಒಂದು! ಇವರನ್ನು ಸೈಬರ್‌ ಕಲಾವಿದ ಎನ್ನಬಹುದು. ಇವರು ಚಿತ್ರಕಲಾವಿದರೇ. ಆದರೆ ಇವರ ಕಲೆ ಕಾಗದದ ಮೇಲೆ ಮೂಡುವುದಿಲ್ಲ, ಕಂಪ್ಯೂಟರ್‌ ಪರದೆ ಮೇಲೆ ಮೂಡುತ್ತದೆ. ಸೈಬರ್‌ ಕಲಾವಿದರು ವಿವಿಧ ತಂತ್ರಾಂಶಗಳನ್ನು (ಡಿಜಿಟಲ್‌ ಆರ್ಟ್‌ ಕ್ರಿಯೇಟಿಂಗ್‌ ಸಾಫ್ಟ್ವೇರ್‌) ಬಳಸಿ ಕಲಾತ್ಮಕ ವಿಶೇಷಗಳನ್ನು ಸೃಷ್ಟಿಸುತ್ತಾರೆ. ಮೂರು ಆಯಾಮದ(3ಡಿ) ಮಾದರಿಗಳು ಮತ್ತು ರೇಖಾಚಿತ್ರಗಳ ರಚನೆ ಮತ್ತು ಬಳಕೆ ಈ ಎಲ್ಲವೂ ಇದರ ಪರಿಧಿಯಲ್ಲಿ ಬರುತ್ತದೆ. ಕೆಲವು ಆಟಗಳಿಗೆ ಸಾಂಪ್ರದಾಯಿಕ ಕಲಾ ಮಾಧ್ಯಮಗಳು, ಪರಿಕರಗಳೂ ಬೇಕಾಗುತ್ತವೆ. ತಂತ್ರಾಂಶ ರೂಪಿಸುವವರ ಜೊತೆಗೂ ಕೆಲಸ ಮಾಡುತ್ತಾ ಗೇಮಿಂಗ್‌ಗೆ ಅವಶ್ಯವಾದ ಕಲಾ ಹಂದರ, ಪಾತ್ರಗಳಿಗೆ ಮೂರ್ತರೂಪ ನೀಡುತ್ತಾರೆ. ಹಾಗೆ ನೋಡಿದರೆ ಇಡೀ ಗೇಮಿಂಗ್‌ನ ಜೀವಾಳವೇ ಅದರಲ್ಲಿ ತೋರುವ ವಿಷುವಲ್ಸ್‌ ಎನ್ನಬಹುದು. ಇವನ್ನು ರೂಪಿಸುವವರೇ ಗೇಮಿಂಗ್‌ ಆರ್ಟಿಸ್ಟ್‌. ಈ ವಿಭಾಗದಲ್ಲಿಯೇ ಅನೇಕ ಉಪವಿಭಾಗಗಳಿವೆ.

ಕಲಾ ನಿರ್ದೇಶಕರು
ಇವರು ಕಲಾವಿದ ಮತ್ತು ಅನಿಮೇಷನ್‌ ರೂಪಿಸುವ ತಂಡಗಳನ್ನು ನಿರ್ದೇಶಿಸುತ್ತಾರೆ. ಜೊತೆಗೆ ಉದ್ದೇಶಿತ ಕ್ರೀಡೆಯ ಅಭಿವೃದ್ಧಿಯ ವಿವಿಧ ವಿಭಾಗಗಳು ಮತ್ತು ವಿನ್ಯಾಸಗಾರರೊಂದಿಗೆ ಸಮನ್ವಯ ಮಾಡಿ ಪೂರ್ವನಿರ್ಧಾರಿತ ಸ್ವರೂಪಕ್ಕೆ ತರುತ್ತಾರೆ. ಇವರು ಕಲ್ಪನಾ ಹಂತದಿಂದ ಕೊನೆಯವರೆ‌ಗಿನ ಎಲ್ಲ ಜವಾಬ್ದಾರಿಯ ಹೊಣೆ ಹೊತ್ತವರು. ಗುಣಮಟ್ಟ ಮತ್ತು ಆಟದ ಸೌಂದರ್ಯಕ್ಕೂ ಇವರೇ ಜವಾಬ್ದಾರರು! 

ಕಲ್ಪನಾ ಕಲಾವಿದರು
ಇವರು ಆಟದ ಎಲ್ಲ ಕಲ್ಪನೆಗಳನ್ನು ಒಟ್ಟಾಗಿ ಸೇರಿಸಿ ಒಂದು ಹಂದರವನ್ನು ನಿರ್ಮಿಸುತ್ತಾರೆ. ಅನೇಕ ವಿನ್ಯಾಸಗಳು, ಚಿತ್ರಗಳು, ಡಿಜಿಟಲ್‌ ಪೇಂಟಿಂಗ್‌ಗಳು ಸಹ ಗೇಮ್‌ ಹೇಗೆ ಕಾಣಬೇಕು ಮತ್ತು ಎಂಥ ಅನುಭವ ಕೊಡಬೇಕು ಎಂಬುದನ್ನು ತೀರ್ಮಾನಿಸುತ್ತದೆ. ಇದು ಸಿದ್ಧವಾದ ನಂತರ ಈ ಯೋಜನೆಗಳನ್ನು ವಿವಿಧ ಕಲಾವಿದರ ತಂಡಗಳಿಗೆ ಜವಾಬ್ದಾರಿ ಹಂಚಲಾಗುತ್ತದೆ.

ಪರಿಸರ ಕಲಾವಿದರು
ಪರಿಸರ ಎಂದರೆ ಪ್ರಕೃತಿಯಲ್ಲ. ಗೇಮಿಂಗ್‌ ಪರಿಸರ ರೂಪಿಸುವವರನ್ನು ಪರಿಸರ ಕಲಾವಿದರು ಎನ್ನುತ್ತಾರೆ. ಗೇಮ್‌ಗಳು ಜೀವ ತಳೆಯುವ ಜಗತ್ತನ್ನು ಇವರು ಸೃಷ್ಟಿಸುತ್ತಾರೆ. ಗೇಮ್‌ ಎಂದರೆ ಅದೊಂದು ವಿಶಾಲ ಜಗತ್ತು. ನಿಜವಾದ ಜಗತ್ತಿನಲ್ಲಿ ಏನೇನಿದೆಯೋ ಅವೆಲ್ಲವನ್ನೂ ಗೇಮಿಂಗ್‌ ಪರಿಸರವೂ ಒಳಗೊಂಡಿರುತ್ತದೆ. ಈ ಕಾರಣಕ್ಕೆ ಗೇಮ್‌ಗಳು ಬಳಕೆದಾರರನ್ನು ಹಿಡಿದಿಡುವುದು. 

ಪಾತ್ರ ಕಲಾವಿದರು
ವಿಡಿಯೋ ಗೇಮ್‌ಗಳಲ್ಲಿನ ಪಾತ್ರಗಳನ್ನು ಸೃಷ್ಟಿಸುವ ಜವಾಬ್ದಾರಿ ಇವರದು. ವಿನ್ಯಾಸಗಾರರು ಕೊಟ್ಟ ಕಲ್ಪನೆಗನುಸಾರವಾಗಿ ಮೊದಲು ಎರಡು ಆಯಾಮದ(2ಡಿ) ಚಿತ್ರಗಳನ್ನು ರಚಿಸಿ ಆನಂತರ ಮೂರು ಆಯಾಮದ ಕಂಪ್ಯೂಟರ್‌ ಮಾದರಿಗಳನ್ನು ಸೃಷ್ಟಿಸುತ್ತಾರೆ. ಇವರು ಅನಿಮೇಷನ್‌ ತಂತ್ರಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡಿ ಆಟದ ಹರಿವು ಮತ್ತು ನಿರಂತರತೆಗೆ(ಕಂಟಿನ್ಯುಟಿ) ಹೊಂದುವಂತೆ ನೋಡಿಕೊಳ್ಳುತ್ತಾರೆ.

ಕೆಲಸ ಸಿಗುವುದು ಹೇಗೆ?
ಈ ಸೈಬರ್‌ ಕಲಾವಿದರು ಗೇಮ್‌ಗಳನ್ನು ತಯಾರಿಸುವ ಕಂಪನಿಯ ನೌಕರರಾಗಿ ಅಥವಾ ಹವ್ಯಾಸಿ ಕಲಾವಿದರಾಗಿಯೂ ಕೆಲಸ ಮಾಡಬಹುದು. ಹವ್ಯಾಸಿ ಕಲಾವಿದರಾಗಿ ಕೆಲಸ ಮಾಡುವವರು ತುಂಬಾ ಸ್ಫೂರ್ತಿಯುತರಾಗಿದ್ದು ಅನೇಕ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಫ‌ಲಿತಾಂಶಗಳನ್ನು, ಅಗತ್ಯತೆಗಳನ್ನು ಒದಗಿಸುವ ಸಾಮರ್ಥ್ಯವುಳ್ಳವರಾಗಿರಬೇಕು. ಆದಾಯದ ನಿರಂತರತೆಯನ್ನು ಕಾಪಾಡಿಕೊಳ್ಳಲು ಹೊಸ ಗ್ರಾಹಕರನ್ನು ಹಿಡಿಯುವ ಚಾಕಚಕ್ಯತೆಯೂ ಇರಬೇಕು. ನೌಕರರಾಗಿ ಕೆಲಸ ಮಾಡುವವರು ಸಂಸ್ಥೆಯ ಅಗತ್ಯಾನುಸಾರ ವಿವಿಧ ವಿಭಾಗಗಳನ್ನು ನಿರ್ವಹಿಸಬೇಕಾಗುತ್ತದೆ. ಆಟದ ಸ್ಟುಡಿಯೋಗಳಲ್ಲಿ ಇತರೆ ಕಲಾವಿದರು, ವಿನ್ಯಾಸಗಾರರೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ಇವರ ವೃತ್ತಿ ಆಟದ ವಿನ್ಯಾಸಗಾರ ಮತ್ತು ಇಲ್ಲಸ್ಟ್ರೇಟರ್‌ನ ಕೆಲಸವನ್ನೂ ಮಾಡಬೇಕಾಗಿ ಬರಬಹುದು.

ಅವಕಾಶಗಳು ಹೆಚ್ಚುತ್ತಿವೆ
ಭಾರತದ ಕಂಪ್ಯೂಟರ್‌ ಗೇಮಿಂಗ್‌ ಉದ್ಯಮವನ್ನು ಕೆಪಿಎಂಜಿ ಮತ್ತು ಗೂಗಲ್‌ 2017ರಲ್ಲೇ 360 ದಶಲಕ್ಷ ಡಾಲರ್‌ನದ್ದು ಎಂದು ಗುರುತಿಸಿತ್ತು. ಈ ಉದ್ಯಮ ಹಾಲಿವುಡ್‌ನ‌ ಬ್ಲಾಕ್‌ಬಸ್ಟರ್‌ ಸಿನಿಮಾ ತಯಾರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಹಾಗಾಗಿ ಜಾಗತಿಕವಾಗಿ ಅವಕಾಶಗಳ ಮಹಾಪೂರವೇ ಹರಿದುಬರುತ್ತಿದೆ. ಅಂತಾರಾಷ್ಟ್ರೀಯ ಗೇಮಿಂಗ್‌ ಕಂಪನಿಗಳು ಕೂಡಾ ಅನೇಕ ವಿಭಾಗಗಳನ್ನು ಭಾರತದ ಸಂಸ್ಥೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೀಡುತ್ತವೆ. ಇಡೀ ವಿಶ್ವದಲ್ಲಿ ಗೇಮಿಂಗ್‌ ಕ್ಷೇತ್ರದ ವಿಚಾರಕ್ಕೆ ಬಂದರೆ ಭಾರತವೇ ಅತಿದೊಡ್ಡ ಹೊರಗುತ್ತಿಗೆ ಕೇಂದ್ರವಾಗುತ್ತಿದೆ. ಈ ಕ್ಷೇತ್ರದ ದೈತ್ಯ ಕಂಪನಿಗಳಾದ ಯೂಬಿಸಾಫr… ಮತ್ತು ಇ.ಎ ಗೇಮ್ಸ… ಭಾರತದಲ್ಲಿಯೇ ದೊಡ್ಡ ಸ್ಟುಡಿಯೋಗಳನ್ನು ಸ್ಥಾಪಿಸಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಗೇಮ್‌ಗಳನ್ನು ಸೃಷ್ಟಿಸಲು ಭಾರತೀಯ ಸೈಬರ್‌ ಕಲಾವಿದರಿಗೆ ಅವಕಾಶಗಳನ್ನು ಹೆಚ್ಚಿಸಿವೆ. 

ಕಲ್ಗುಂಡಿ ನವೀನ್‌

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.