ದೇಗುಲಗಳು ನ್ಯಾಯಾಲಯಗಳಾಗಬೇಕು : ಡಾ| ನಾರಾಯಣನ್‌ 


Team Udayavani, Mar 15, 2019, 1:00 AM IST

degula.jpg

ಕಾಸರಗೋಡು: ಭಾರತವು ಪುಣ್ಯ ತೀರ್ಥಗಳ ನಾಡು. ಇದು ಯಜ್ಞ ಭೂಮಿಯೂ ಹೌದು. ಆಚಾರ್ಯತ್ವ, ಆಮ್ನಾಯ ಜಪ, ಉತ್ಸವ, ಅನ್ನದಾನ, ನಿಯಮ (ಆಚಾರ) ಇವು ಪಂಚತತ್ವಗಳೇ ವಿಗ್ರಹಗಳಿಗೆ ಜೀವಕಳೆ ತುಂಬುವ ಮತ್ತು ಚೈತನ್ಯ ವೃದ್ಧಿಸುವ ಘಟಕಗಳು. ಯಾವುದೇ ವೈರುಧ್ಯಗಳಿದ್ದರೂ ಪರಸ್ಪರ ಸಹಕರಿಸಿ ಜೀವಿಸುವ ಕಲೆಯನ್ನು “ಶಿವ ಕುಟುಂಬ’ ದಾರಿ ತೋರಿಸುತ್ತದೆ. ಶ್ರೀ ರುದ್ರವನ್ನು ಮನನ ಮಾಡಿಕೊಂಡು ಪಂಚಾಕ್ಷರಿ ನಾಮದೊಂದಿಗೆ ಶಿವೋಪಾಸನೆಗೈಯಬೇಕು.

ಉತ್ಸವಗಳೆಂದರೆ ಶ್ರೀ ದೇವರು ಸಂತೋಷದಿಂದಿರುವ    ಸಂದರ್ಭ ಎಂದರ್ಥ. ದೇಗುಲಗಳು ವೈದ್ಯಾಲಯಗಳಾಗುವಂತೆ ಭಗವದ್ಭಕ್ತರ ಪಾಲಿಗೆ ನ್ಯಾಯಾಲಯವೂ ಆಗಬೇಕು. ಸಣ್ಣಪುಟ್ಟ ಕೌಟುಂಬಿಕ ಸಮಸ್ಯೆಗಳಿಗೆ ಪೊಲೀಸ್‌ ಠಾಣೆಗೆ ಹೋಗುವ ಬದಲು, ಪರಿಹಾರಗಳಿಗೆ ದೇಗುಲಗಳು  ನ್ಯಾಯಾಲಯಗಳಾಗಿ ಪರಿವರ್ತಿಸಿ ಕೊಳ್ಳಬೇಕು. ಭಕ್ತರಿಗೆ ಸಹಬಾಳ್ವೆಯ ಸಂದೇಶ ನೀಡಲು ಸತ್ಸಂಗಗಳನ್ನು ಏರ್ಪಡಿಸಬೇಕು. ನಮ್ಮೆಲ್ಲರ ಜೀವನವು ಶಿವಮಯವಾಗಲಿ ಎಂದು ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿ ಕೋ-ಆರ್ಡಿನೇಟರ್‌ ಡಾ| ಎಂ. ನಾರಾಯಣನ್‌ ಭಟ್ಟತ್ತಿರಿಪ್ಪಾಡ್‌ ಹೇಳಿದರು.

ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.

ರಾಷ್ಟ್ರ ನಿರ್ಮಾಣ  
ಕಾಸರಗೋಡಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬುದಕ್ಕೆ ಕಾವಿಮಯ ಅಲಂಕಾರವೇ ಸಾಕ್ಷಿ.   ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ದೇಗುಲ ಜೀರ್ಣೋದ್ಧಾರದಿಂದ  ಪ್ರೇರಣೆ ಲಭಿಸಲಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಶ್ವ ಹಿಂದೂ ಪರಿಷತ್‌ ಕರ್ನಾಟಕ ಪ್ರಾಂತ್ಯ ಅಧ್ಯಕ್ಷ ಎಂ.ಬಿ. ಪುರಾಣಿಕ್‌ ಹೇಳಿದರು.

ಕಾರ್ಯಕ್ರಮದಲ್ಲಿ ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್‌ ನಂಬ್ಯಾರ್‌ ಅಧ್ಯಕ್ಷತೆ ವಹಿಸಿದರು. ವರದರಾಜ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ವಿದ್ಯಾಕರ ಮಲ್ಯ, ಕಾಸರಗೋಡು ವೈದ್ಯಾಧಿಕಾರಿ ಡಾ| ಜನಾದ‌ìನ ನಾಯ್ಕ, ಕರಂದಕ್ಕಾಡು ಶ್ರೀ ವೀರಹನುಮಾನ್‌ ಮಂದಿರ ಮತ್ತು ವ್ಯಾಯಾಮ ಶಾಲೆಯ ಕಾರ್ಯದರ್ಶಿ ಗಣೇಶ್‌ ಕೆ, ನೆಲ್ಲಿಕುಂಜೆ ಓಂ ಭಗವತಿ ಪ್ರಭಾ ಭಜನ ಮಂದಿರದ ಅಧ್ಯಕ್ಷ ಭಾಸ್ಕರ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ದಿನೇಶ್‌ ಎಂ.ಟಿ., ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಿ.ವಿ. ಪೊದುವಾಳ್‌ ಮೊದಲಾದವರು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ನಾರಾಯಣ ಕೆ. ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಜಯರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ವರಪ್ರಸಾದ್‌ ಕೋಟೆಕಣಿ ವಂದಿಸಿದರು. 

ಜ್ಞಾನ ಕೊಟ್ಟ ಗುರು ಗ್ರಾಮದ ದೇವಸ್ಥಾನ ಹೆತ್ತ ತಾಯಿ. ಜ್ಞಾನಕೊಟ್ಟ ಗುರು. ಇವರ ಋಣವನ್ನು ತೀರಿಸಲು ಸಾಧ್ಯವುಂಟೇ? ತಲೆಮಾರಿಗೆ ಅಪೂರ್ವವಾಗಿ ಲಭಿಸುವ ಸೌಭಾಗ್ಯವಿದು. ನಾವೆಲ್ಲ ನಿಮಿತ್ತ ಮಾತ್ರ. ಒಂದು ಕ್ಷೇತ್ರ ಜೀರ್ಣೋದ್ಧಾರವಾಯಿತೆಂದರೆ ಭಗವದ್ಭಕ್ತರಿಗೆ ಅನುಗ್ರಹ ಪ್ರಾಪ್ತಿಯಾಗಿದೆ ಎಂದರ್ಥ. ಇಲ್ಲಿ ನಾನು ಎಂಬುದು ಶೂನ್ಯ. ವಿನಾಯಾಸ ಜೀವನ, ಅನಾಯಾಸ ಮರಣ ಪ್ರಾಪ್ತಿಗಾಗಿ ನಾವು ಪ್ರಾರ್ಥಿಸಬೇಕು. ನಾವು ಮಾಡುವ ಕ್ರಿಯೆ ಮುಖ್ಯವಲ್ಲ. ಬದಲು ಭಾವನೆ ಮುಖ್ಯ. ಸದ್ಭಾವನೆಯಿಂದಗೈದ ಕರ್ಮಗಳೆಲ್ಲವೂ ಭಗವದರ್ಪಿತ .

-ವಸಂತ ಪೈ ಬದಿಯಡ್ಕ ಉದ್ಯಮಿ 
 

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ಭಾಗದ ಅಪರಾಧ ಸುದ್ದಿಗಳು

Madikeri ಭಾಗದ ಅಪರಾಧ ಸುದ್ದಿಗಳು

Untitled-1

Kasaragod ಅಪರಾಧ ಸುದ್ದಿಗಳು

Suspend

MLA ಇ. ಚಂದ್ರಶೇಖರನ್‌ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌; ಡೆಪ್ಯೂಟಿ ತಹಶೀಲ್ದಾರ್‌ ಅಮಾನತು

\172.17.1.5ImageDirUdayavaniDaily21-09-24Daily_NewsDrugs.tif\172.17.1.5ImageDirUdayavaniDaily21-09-24Daily_NewsDrugs.tif

Uppala: ಸುಮಾರು 3.5 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಕ್ಕೆ: ಓರ್ವನ ಸೆರೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.