ತಂಪು ತಂಪು ಸಲಾಡ್‌


Team Udayavani, Mar 22, 2019, 12:30 AM IST

dsc01616.jpg

ವಿವಿಧ ಹಣ್ಣು-ತರಕಾರಿಗಳನ್ನು ಮಿಶ್ರಮಾಡಿ ತಯಾರಿಸುವ ಸಲಾಡ್‌ ಗಳು ಹೇರಳವಾದ ನಾರಿನಂಶ, ಕಬ್ಬಿಣಾಂಶ, ಕ್ಯಾಲ್ಸಿಯಂ ಇತ್ಯಾದಿ ಉತ್ತಮ ಅಂಶಗಳನ್ನೊಳಗೊಂಡಿದ್ದು ದೇಹಕ್ಕೆ ನವಚೈತನ್ಯವನ್ನು ನೀಡುವುದು. ಸಲಾಡ್ಸ್‌ಗಳಿಗೆ ಉಪ್ಪು, ಖಾರ, ಲಿಂಬೆರಸ ಸೇರಿಸದೆಯೂ ತಯಾರಿಸಬಹುದು. ಪ್ರತಿ‌ಯೊಂದು ಹಣ್ಣು, ತರಕಾರಿಗಳಿಗೂ ಅದರದೇ ಆದ ರುಚಿಯಿರುತ್ತದೆ. ಇದು ಮಿಶ್ರವಾದಾಗ ಹೊಸ ರುಚಿಯನ್ನು ನೀವು ಸವಿಯಬಹುದು. ಸಲಾಡ್ಸ್‌ಗಳನ್ನು ಎರಡು ಊಟಗಳ ನಡುವಿನ ಅವಧಿಯಲ್ಲಿ  ಹಸಿವಾದಾಗ ಸೇವಿಸಬಹುದು. ಮಧುಮೇಹಿಗಳಿಗೆ, ಹೃದಯದ ತೊಂದರೆಗಳಿರುವವರಿಗೆ, ಕೊಬ್ಬು , ಒಬೆಸಿಟಿಯಿಂದ ಬಳಲುವವರಿಗಂತೂ ಸಲಾಡ್ಸ್‌ಗಳು ವರದಾನವಾಗಿದೆ

ಸ್ವೀಟ್‌ಕಾರ್ನ್ ಸಿಹಿ ಸಲಾಡ್‌
ಬೇಕಾಗುವ ಸಾಮಗ್ರಿ
: ಸ್ವೀಟ್‌ಕಾರ್ನ್- ಆರು ಚಮಚ, ಮೊಳಕೆ ಹೆಸರುಕಾಳು- ಎಂಟು ಚಮಚ, ದಾಳಿಂಬೆ- ಎಂಟು ಚಮಚ, ಖರ್ಜೂರ- ಆರು ಚಮಚ, ತೆಂಗಿನತುರಿ-ಎರಡು ಚಮಚ, ಕೊತ್ತಂಬರಿಸೊಪ್ಪು ಮತ್ತು ಬ್ಲ್ಯಾಕ್‌ಸಾಲ್ಟ್  ರುಚಿಗೆ ಬೇಕಿದ್ದರೆ

ತಯಾರಿಸುವ ವಿಧಾನ: ಸ್ವೀಟ್‌ಕಾರ್ನ್ನ ಜೊತೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಖರ್ಜೂರ ಅಥವಾ ಚೆರಿಯಿಂದ ಅಲಂಕರಿಸಿ ಸರ್ವ್‌ ಮಾಡಬಹುದು.

ಚಕೋತಾ ಹಣ್ಣಿನ ಸಲಾಡ್‌
ಬೇಕಾಗುವ ಸಾಮಗ್ರಿ:
ಚಕೋತಾ ಹಣ್ಣಿನ ಎಸಳುಗಳು- ನಾಲ್ಕು ಚಮಚ, ಕ್ಯಾರೆಟ್‌ತುರಿ- ಆರು ಚಮಚ, ಸ್ವೀಟ್‌ಕಾರ್ನ್- ಆರು ಚಮಚ, ಮೊಳಕೆ ಹೆಸರುಕಾಳು- ನಾಲ್ಕು ಚಮಚ, ಸಿಪ್ಪೆ ತೆಗೆದು ಹೆಚ್ಚಿದ ಸೌತೆಕಾಯಿ- ಆರು ಚಮಚ, ತೆಂಗಿನತುರಿ- ನಾಲ್ಕು ಚಮಚ, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ಬ್ಲ್ಯಾಕ್‌ಸಾಲ್ಟ್  ರುಚಿಗೆ ಬೇಕಷ್ಟು, ಸಕ್ಕರೆ- ಎರಡು ಚಮಚ ಬೇಕಿದ್ದರೆ ಮಾತ್ರ, ಹೆಚ್ಚಿದ ಖರ್ಜೂರ- ನಾಲ್ಕು ಚಮಚ, ಉಪ್ಪು ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ಮಿಕ್ಸಿಂಗ್‌ ಬೌಲ್‌ಗೆ ಚಕೋತಾ ಎಸಳು ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಮಾಡಿ. ನಂತರ, ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಮಾಡಿ ಮೇಲಿನಿಂದ ಖರ್ಜೂರ ಹರಡಿ ಸರ್ವ್‌ ಮಾಡಬಹುದು.

ಸೀಬೆಹಣ್ಣಿನ ಸಲಾಡ್‌ 
ಬೇಕಾಗುವ ಸಾಮಗ್ರಿ:
ಬೀಜ ತೆಗೆದು ಸಣ್ಣಗೆ ಹೆಚ್ಚಿದ ಸೀಬೆ- ಆರು ಚಮಚ, ಕ್ಯಾರೆಟ್‌ತುರಿ- ಐದು ಚಮಚ, ಸ್ವೀಟ್‌ಕಾರ್ನ್- ಆರು ಚಮಚ, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಸೌತೆಕಾಯಿ- ಆರು ಚಮಚ, ಹೆಚ್ಚಿದ ಟೊಮೆಟೋ- ಒಂದು, ಕೊತ್ತಂಬರಿಸೊಪ್ಪು ಸ್ವಲ್ಪ, ಕೆಂಪುಮೆಣಸಿನ ಹುಡಿ ಮತ್ತು ಬ್ಲ್ಯಾಕ್‌ಸಾಲ್ಟ್ನ ಮಿಶ್ರಣ- ರುಚಿಗೆ ಬೇಕಷ್ಟು, ತೆಂಗಿನತುರಿ- ಮೂರು ಚಮಚ.

ತಯಾರಿಸುವ ವಿಧಾನ: ಸಣ್ಣಗೆ ಹೆಚ್ಚಿದ ಸೀಬೆಯ ಜೊತೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಂಗ್‌ ಬೌಲ್‌ನಲ್ಲಿ ಚೆನ್ನಾಗಿ ಮಿಶ್ರಮಾಡಿ. ನಂತರ, ಸರ್ವ್‌ ಮಾಡುವಾಗ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಬಹುದು. ಡಯಟ್‌ ಮಾಡುವವರು ಊಟಕ್ಕಿಂತ ಮೊದಲು ಇದನ್ನು ಸೇವಿಸಿ ಉತ್ತಮ ಪ್ರಯೋಜನ ಪಡೆಯಬಹುದು.

ಮೊಳಕೆಮೆಂತೆ ವಿದ್‌ ದಾಳಿಂಬೆ ಸಲಾಡ್‌
ಬೇಕಾಗುವ ಸಾಮಗ್ರಿ
: ಮೊಳಕೆಕಟ್ಟಿದ ಮೆಂತೆ- ಆರು ಚಮಚ, ದಾಳಿಂಬೆ- ಎಂಟು ಚಮಚ, ಹೆಚ್ಚಿದ ಸೇಬು- ಆರು ಚಮಚ, ಕ್ಯಾರೆಟ್‌ತುರಿ- ಆರು ಚಮಚ, ತೆಂಗಿನತುರಿ- ನಾಲ್ಕು ಚಮಚ, ಕೊತ್ತಂಬರಿಸೊಪ್ಪು- ಎರಡು ಚಮಚ, ಲಿಂಬೆರಸ- ಒಂದು ಚಮಚ, ಉಪ್ಪು ರುಚಿಗೆ, ಹಸಿಮೆಣಸು ಅಥವಾ ವೈಟ್‌ಪೆಪ್ಪರ್‌ ರುಚಿಗೆ ಬೇಕಷ್ಟು ಬೇಕಿದ್ದರೆ ಮಾತ್ರ

ತಯಾರಿಸುವ ವಿಧಾನ: ತೆಂಗಿನ ತುರಿಗೆ ಉಪ್ಪು-ಲಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಮಿಶ್ರಮಾಡಿ ಮೇಲಿನಿಂದ ಕೊತ್ತಂಬರಿಸೊಪ್ಪು ಹರಡಿ.

– ಗೀತಸದಾ

ಟಾಪ್ ನ್ಯೂಸ್

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.