ವಂಶ ರಾಜಕೀಯದಲ್ಲಿ ದೇವೇಗೌಡ ಹೊಸ ದಾಖಲೆ


ಅರಕೆರೆ ಜಯರಾಮ್‌, Mar 27, 2019, 5:48 AM IST

w-7

ದೇವೇಗೌಡರ ಕುಟುಂಬ ಇದೀಗ ತನ್ನ ಮೂರನೆಯ ತಲೆಮಾರನ್ನು ರಾಜಕೀಯ ಕಣದಲ್ಲಿ ಇಳಿಸುವ ಮೂಲಕ ಕರ್ನಾಟಕ ರಾಜಕಾರಣದಲ್ಲಿ ಹೊಸ ದಾಖಲೆಯೊಂದನ್ನು ಸ್ಥಾಪಿಸಿದಂತಾಗಿದೆ. ದೇವೇಗೌಡರ ಮೊಮ್ಮಕ್ಕಳಾದ ನಿಖೀಲ್‌ ಕುಮಾರ ಸ್ವಾಮಿ (ಮಂಡ್ಯ ಲೋಕಸಭಾ ಕ್ಷೇತ್ರ) ಹಾಗೂ ಪ್ರಜ್ವಲ್‌ ರೇವಣ್ಣ (ಹಾಸನ ಲೋಕಸಭಾ ಕ್ಷೇತ್ರ) ತಮ್ಮ ನಾಮಪತ್ರಗಳನ್ನು ಸಲ್ಲಿಸುವುದರೊಂದಿಗೆ ದೇವೇಗೌಡ ವಂಶದ ಹೊಸ ತಲೆಮಾರಿನ ಕುಡಿಗಳಿಬ್ಬರೂ ಮತದಾರರನ್ನು ಎದುರಿಸಲು ಸಜ್ಜಾಗಿದ್ದಾರೆ.

ಗೌಡರ ಕುಟುಂಬದ ಎರಡನೆಯ ತಲೆಮಾರು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಕಾರಣ ರಾಜ್ಯದ ಜನರು ಹಾಗೂ ಕಾಂಗ್ರೆಸ್‌ ಪಕ್ಷ ಇವರಿಗೆ ಅತ್ಯಂತ ಪ್ರಮುಖ ಹಾಗೂ ಪ್ರಬಲ ಅಧಿಕಾರ ಸ್ಥಾನಗಳನ್ನು ನೀಡಿದ್ದಾರೆ. ಇವರೆಂದರೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ. ಈ ಪೈಕಿ ಕುಮಾರಸ್ವಾಮಿ ಮಾಜಿ ಸಂಸದರೂ ಹೌದು. ಈ ಸಹೋದರರಲ್ಲಿ ರೇವಣ್ಣ ಮಾತ್ರ ಶ್ರೇಣೀಕೃತ ಪದಾಧಿಕಾರಿಗಳಲ್ಲಿದ್ದು ಬೆಳೆದು ನಿಂತವರು. ಹಾಸನ ಜಿಲ್ಲಾ ಸದಸ್ಯರಾಗಿ ಹಾಗೂ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಸದಸ್ಯರಾಗಿದ್ದು ರಾಜ್ಯಮಟ್ಟದ ರಾಜಕಾರಣಕ್ಕೆ ಪದಾರ್ಪಣ ಮಾಡಿದವರು. ಗಮನಿಸಬೇಕಾದ ಸಂಗತಿಯೆಂದರೆ ಗೌಡರ ಕುಟುಂಬದ ಮೊಮ್ಮಕ್ಕಳಿಬ್ಬರೂ ಸಿನಿಮಾರಂಗದಲ್ಲಿ ಸ್ವಲ್ಪಮಟ್ಟಿನ ಅನುಭವ ಗಳಿಸಿಕೊಂಡಿರುವುದು ಹೌದಾದರೂ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳಾಗಿ ನಿಲ್ಲುವ ಮೂಲಕ ರಾಜಕೀಯಕ್ಕೆ ನೇರ ಪ್ರವೇಶ ಪಡೆದಿರುವವರು. ಬೇರೆ ಯಾವುದೇ. ರಾಜಕೀಯೇತರ ಕುಟುಂಬವೊಂದರ ಯುವಕ ಅಥವಾ ಯುವತಿ ಹೀಗೆ ರಾಜ್ಯಮಟ್ಟದ ಅಥವಾ ರಾಷ್ಟ್ರಮಟ್ಟದ ಪಕ್ಷವೊಂದರ ಟಿಕೆಟ್‌ ಮೂಲಕ ಲೋಕಸಭಾ ಚುನಾವಣೆಗೆ ನಿಲ್ಲುವ ಕನಸನ್ನಾದರೂ ಕಾಣುವುದು ಸಾಧ್ಯವಿತ್ತೆ?

ರಾಜಕೀಯ ಪ್ರಭಾವವುಳ್ಳ ಕುಟುಂಬದ ಕುಡಿಯಾಗಿ ಜನಿಸಿ ರಾಜಕೀಯಕರಣ ನಿಕಟವಾಗಿ ವೀಕ್ಷಿಸುವ ಸುವರ್ಣಾವಕಾಶವಿದ್ದಲ್ಲಿ ರಾಜಕೀಯ ಮಹತ್ತಾಕಾಂಕ್ಷೆಯಿರುವ ಯಾರಿಗೇ ಆಗಲಿ ರಾಜಕೀಯ ಕಣಕ್ಕೆ ಧುಮುಕುವುದಕ್ಕೆ ಪ್ರೇರಣೆ – ಪ್ರಚೋದನೆ ದೊರಕುವುದು ಸಹಜವೇ. ಅಭ್ಯರ್ಥಿಯ ವಯಸ್ಸು ಕನಿಷ್ಠ ಪಕ್ಷ ಇಂತಿಷ್ಟಿರಬೇಕೆಂಬ ಶರತ್ತು ಹಾಗೂ ಮತದಾರನಾಗಿ ನೋಂದಾಯಿಸಿಕೊಳ್ಳಬೇಕೆಂಬ ಶ‌ರತ್ತು, ಇವೆರಡನ್ನು ಬಿಟ್ಟರೆ ರಾಜ್ಯ ವಿಧಾನಸಭೆ ಅಥವಾ ಸಂಸತ್ತಿಗೆ ಆಯ್ಕೆಯಾಗಲು ಬೇರೆ ಅರ್ಹತಾ ಮಾನದಂಡಗಳನ್ನು ವಿಧಿಸಲಾಗಿಲ್ಲ. ಆದರೆ ನೆರೆರಾಷ್ಟ್ರವಾದ ಪಾಕಿಸ್ಥಾನದಲ್ಲಿ ಹೀಗಿಲ್ಲ. ಅಲ್ಲಿ ಸಂಸತ್‌ ಸದಸ್ಯರಿಗೆ, ಸೆನೇಟ್‌ ಸದಸ್ಯರಿಗೆ ಅಥವಾ ರಾಷ್ಟ್ರೀಯ ವಿಧಾನ ಸಭೆಗೆ ಸದಸ್ಯರಾಗಬೇಕಿದ್ದರೆ ವಿ.ವಿ. ಪದವಿ ಪಡೆದಿರಬೇಕೆಂಬ ನಿಯಮ ಚಾಲ್ತಿಯಲ್ಲಿದೆ.

ವಂಶಪಾರಂಪರ್ಯವಾಗಿ ನ್ಯಾಯಧೀಶರಾಗಿರುವವರಿಲ್ಲವೆ, ಅದೇ ರೀತಿ ನಾಗರಿಕ ಸೇವಾ ಹುದ್ದೆಗಳನ್ನು, ವೃತ್ತಿಪರ ಸಂಸ್ಥೆಗಳಲ್ಲಿ ಹುದ್ದೆಗಳನ್ನು ಪಡೆದಿರುವವರಿಲ್ಲವೆ ಎಂದು ವಾದಿಸುವವರಿ ರಬಹುದು. ಆದರೆ ಗಮನಿಸಲೇಬೇಕಾದ ಅಂಶವೆಂದರೆ, ಅಗತ್ಯವೆಂದು ಪರಿಗಣಿಸಲಾಗಿರುವ ವಿದ್ಯಾರ್ಹತೆ ಹಾಗೂ ವೃತ್ತಿಪರ ಸಾಮರ್ಥ್ಯವಿಲ್ಲದಿದ್ದರೆ ಯಾರೂ ಯಾವ ಹಂತದಲ್ಲೂ ನ್ಯಾಯಧೀಶ ಹುದ್ದೆ ಪಡೆಯಲು ಸಾಧ್ಯವಿಲ್ಲ. ಯಾರೋ ಒಬ್ಬರ ತಂದೆ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದಾರೆಂಬ ಸಂಗತಿ, ಸ್ವಲ್ಪ ಮಟ್ಟಿಗೆ ನೆರವಾಗಬಹುದೇನೋ ನಿಜ. (ಕೆಲ ಅಡ್ವೊಕೇಟ್‌ಗಳಿಂದ ಇಂಥ ಆರೋಪ ಆಗಾಗ ಕೇಳಿಬರುವುದುಂಟು.) ಐಎಎಸ್‌ ಹಾಗೂ ಐಪಿಎಸ್‌ ಅಭ್ಯರ್ಥಿಗಳ ಆಯ್ಕೆ ನಡೆಯುವಾಗ, ಅವರ ಹೆತ್ತವರು ಇಂಥಿಂಥ ಹುದ್ದೆಯಲ್ಲಿದ್ದಾರೆಂಬ ಸಂಗತಿ ಅವರನ್ನು ಆಯ್ಕೆ ಮಾಡುವ ಕೇಂದ್ರ ಲೋಕ ಸೇವಾ ಆಯೋಗದ ಮೇಲೆ ಪ್ರಭಾವ ಬೀರುವುದಿಲ್ಲ ಎಂಬುದೇ ಇದುವರೆಗಿನ ನಂಬಿಕೆ. ಆದರೆ ಸ್ವಾತಂತ್ರ್ಯಪೂರ್ವದ ಮೈಸೂರು ಪ್ರಾಂತ್ಯದಲ್ಲಿ ದಿವಾನರುಗಳ ಅಥವಾ ಹಿಂದಿನ ದಿವಾನರುಗಳ ಮಕ್ಕಳು, ಕೆಲ ಹಿರಿಯ ಅಧಿಕಾರಿಗಳ ಮಕ್ಕಳು ಮೈಸೂರು ನಾಗರಿಕ ಸೇವಾ ಹುದ್ದೆಗಳಿಗೆ ಆಯ್ಕೆಯಾದ ಉದಾಹರಣೆಗಳಿವೆ. ಇಂಥ ಪ್ರಸಂಗಗಳನ್ನು ಇಂದು ನೆನಪು ಮಾಡಿಕೊಂಡ ಹೊತ್ತಿನಲ್ಲೇ, ಇಂಥ ಅಧಿಕಾರಿಗಳು ತಮ್ಮ ಸೇವಾ ಸಾಮರ್ಥ್ಯದ ಮೂಲಕ ತಮ್ಮ ಯೋಗ್ಯತೆಯನ್ನು ಚೆನ್ನಾಗಿಯೇ ಸಾಬೀತುಪಡಿಸಿದ್ದಾರೆಂದೂ ಹೇಳಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಕೂಡ ಅನುವಂಶೀಯ ಕುಲ ಸಚಿವರ ನೇಮಕವಾಗಿರುವುದನ್ನು ಕಂಡಿದ್ದೇವೆ. ವಂಶಾಡಳಿತ/ಆನುವಂಶೀಯತೆ ಸಿನಿಮಾ ರಂಗವನ್ನೂ ಬಿಟ್ಟಿಲ್ಲ. ಹಿಂದಿ ಚಿತ್ರರಂಗವೇ ಇರಲಿ, ಕನ್ನಡ ಚಿತ್ರರಂಗವೇ ಇರಲಿ ಸಿನಿಪ್ರಿಯರ ಪಾಲಿಗೆ ಇದು ಸಂತೋಷದ ವಿಷಯವೇ ಆಗಿದೆ. ವಂಶ‌ ರಾಜಕಾರಣದ ಮಾತು ಬಂದಾಗ ಸಹಜವಾಗಿ ನೆನಪಾಗುವುದು ನೆಹರೂ – ಇಂದಿರಾ ಗಾಂಧಿ ವಂಶಾಡಳಿತ. ನೆಹರೂ – ಇಂದಿರಾ ವಂಶಾಡಳಿತಕ್ಕೆ ಹೋಲಿಸಿದರೆ ದೇವೇಗೌಡರ ವಂಶ ಪಾರಂಪರ್ಯ ಪ್ರವೃತ್ತಿ ಏನೇನೂ ಅಲ್ಲವೆಂಬಷ್ಟು ಗೌಣ! ನೆಹರೂ – ಇಂದಿರಾ ವಂಶದ ವಿಸ್ತರಿತ ತಲೆಮಾರುಗಳ ವ್ಯಕ್ತಿಗಳ ಪೈಕಿ ಸಂಸತ್ತಿಗೆ ಆಯ್ಕೆಯಾದವರ ಲೆಕ್ಕ ತೆಗೆದಾಗ ನನಗೆ 14 ಮಂದಿ ನೆನಪಾಗಿದ್ದಾರೆ. ಇಂಥವರ ಯಾದಿಯಲ್ಲಿ ಇಂದಿರಾ ಕುಟುಂಬದ ಸದಸ್ಯರು, ರಾಜೀವ್‌ ಗಾಂಧಿ, ಸಂಜಯಗಾಂಧಿ ಮತ್ತು ಇದೀಗ ಸೋನಿಯಾ ಗಾಂಧಿ ಸೇರಿದ್ದಾರೆ. ಈ ಯಾದಿಯಲ್ಲಿ ಶೀಲಾ ಕೌಲ್‌ (ಇವರ ಪತಿ ಕಮಲಾ ನೆಹರೂ ಅವರ ತಮ್ಮ) ಹಾಗೂ ಮೋತಿಲಾಲ್‌ ಅವರ ಸಹೋದರ ಸಂಬಂಧಿ ನಂದಲಾಲ್‌ ನೆಹರೂ ಅವರ ಮೊಮ್ಮಗ ಅರುಣ್‌ ನೆಹರೂ ಇವರ ಹೆಸರುಗಳೂ ಇವೆ. ಈ ಯಾದಿಯಲ್ಲಿ ಫಿರೋಜ್‌ ಗಾಂಧಿ (ಇಂದಿರಾ ಪತಿ)ಯ ಹೆಸರನ್ನು ಸೇರಿಸಿಲ್ಲ; ಅವರೊಬ್ಬ ಸ್ವಪ್ರಯತ್ನದಿಂದ ಬೆಳೆದು ನಿಂತಿದ್ದ ರಾಜಕೀಯ ನಾಯಕ, ತನ್ನ ಮಾವನನ್ನೇ ಎದುರು ಹಾಕಿಕೊಳ್ಳುವಷ್ಟು ಧೈರ್ಯ ತೋರಿದ್ದ ಸ್ವಾಭಿಮಾನಿ.

ನೆಹರೂ ಕುಟುಂಬದ ಐದನೆಯ ತಲೆಮಾರಿನ ಸದಸ್ಯರು (ಮೋತಿಲಾಲ್‌ ಅವರಿಂದಲೇ ಲೆಕ್ಕ ಹಾಕಿ ನೋಡಿದಾಗ) ರಾಜಕೀಯ ರಂಗವನ್ನು ಪ್ರವೇಶಿಸುವುದರೊಂದಿಗೆ ದೇಶದಲ್ಲಿ ಬಹುದೀರ್ಘ‌ಕಾಲ, ಅರ್ಥಾತ್‌ ಭಾರತದ ಕೆಲ ರಾಜವಂಶಗಳಿ ಗಿಂತಲೂ ಹೆಚ್ಚು ಕಾಲ ಆಡಳಿತ ನಡೆಸುತ್ತ ಬಂದಿರುವ ವಂಶ ಇದೆಂಬ ಹೆಗ್ಗಳಿಕೆಗೆ ಈ ಕುಟುಂಬ ಪಾತ್ರವಾ ದಂತಾಗಿದೆ. ಕೆಲ ರಾಜವಂಶಗಳನ್ನು ಎರಡು ಅಥವಾ ಮೂರು ತಲೆಮಾರುಗಳ ಬಳಿಕ ಕಿತ್ತೆಸೆಯಲಾಯಿತು. ಆದರೆ ನೆನಪಿಡಬೇಕು, 1950ರಿಂದ ನಮ್ಮಲ್ಲಿ ಗಣತಂತ್ರದ ಸಂವಿಧಾನ ಚಾಲ್ತಿಗೆ ಬಂದಿದೆ. ಆದರೆ ಅದು ವಂಶಾಡಳಿತ ರಾಜಕಾರಣದ ಪ್ರವೃತ್ತಿಗೆ ಅಡ್ಡ ಬಂದಿಲ್ಲ. ನೈಜ ಗಣತಂತ್ರವೆಂದರೇನೆಂಬುದನ್ನು ಈ ದೇಶದ ಜನಸಾಮಾನ್ಯರಲ್ಲಿ ಅನೇಕರು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಈ ನಡುವೆ ಮೈಸೂರು/ಕರ್ನಾಟಕದಲ್ಲಿ ತಮ್ಮ ಮಕ್ಕಳನ್ನು ಅಥವಾ ಮೊಮ್ಮಕ್ಕಳನ್ನು ರಾಜಕೀಯಕ್ಕೆ ಪ್ರವೇಶಿಸಲು ಪ್ರೇರಣೆ ನೀಡಿಲ್ಲದ ಮುಖ್ಯಮಂತ್ರಿಗಳು ಯಾರೆಂದು ನೆನಪು ಮಾಡಿಕೊಳ್ಳುವುದಾದರೆ, ಇಂಥವರ ಯಾದಿಯಲ್ಲಿ ಕೆ.ಸಿ. ರೆಡ್ಡಿ , ಕೆ. ಹನುಮಂತಯ್ಯ, ಕಡಿದಾಳ್‌ ಮಂಜಪ್ಪ, ಎಸ್‌. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಹಾಗೂ ಎಸ್‌.ಎಂ. ಕೃಷ್ಣ ಇದ್ದಾರೆ. ವೀರಪ್ಪ ಮೊಯಿಲಿಯವರ ಮಕ್ಕಳು ಕೂಡ ಇದುವರೆಗೂ ರಾಜಕೀಯದಿಂದ ದೂರವೇ ಉಳಿದಿದ್ದಾರೆ. ಹೆಗಡೆಯವರ ಓರ್ವ ಪುತ್ರಿಯರಲ್ಲಿ ಒಬ್ಟಾಕೆ ಅವರ ನಿಧನದ ಬಳಿಕ ಚುನಾವಣಾ ಕಣಕ್ಕಿಳಿದರೂ ಯಶಸ್ಸು ಕಾಣಲಿಲ್ಲ. ಎಸ್‌.ಆರ್‌. ಕಂಠಿಯವರ ಪುತ್ರರಲ್ಲೊಬ್ಬರು ಅರ್ಥಶಾಸ್ತ್ರಜ್ಞರೂ ಆಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ರಾಜಕೀಯ ಆಸಕ್ತಿಯನ್ನು ಇರಿಸಿಕೊಂಡಿದ್ದಾರೆ.

ಕುಟುಂಬ ರಾಜಕೀಯ ಮಾಡುತ್ತಿರುವುದು ಗಾಂಧಿ ಮತ್ತು ದೇವೇಗೌಡರ ಕುಟುಂಬಗಳಷ್ಟೇ ಅಲ್ಲ; ಕೆಲವರಂತೂ ವಂಶಪಾರಂಪರ್ಯ ಪ್ರಜ್ಞೆಯ ಮಟ್ಟಿಗೆ ಇತರರಿಗಿಂತ ತುಂಬಾ ಮುಂದಿದ್ದಾರೆ ಎಂದೂ ಹೇಳುವವರಿಬಹುದು. ಹಾಗೆ ನೋಡಿದರೆ ಭಾರತೀಯ ರಾಜಕಾರಣದಲ್ಲಿ ಒಟ್ಟಾರೆಯಾಗಿ ಕುಟುಂಬ ರಾಜಕೀಯದ್ದೇ ಮೇಲುಗೈ. ಕರ್ನಾಟಕದಲ್ಲಾಗಲಿ, ಇತರ ರಾಜ್ಯಗಳಲ್ಲಾಗಲಿ ಬಿಜೆಪಿಯ ಅನೇಕ ನಾಯಕರು ಕೌಟುಂಬಿಕ ರಾಜಕಾರಣದ ಬಲದಿಂದಲೇ ಚುನಾವಣಾ ಕಣಕ್ಕೆ ಧುಮುಕಿರುವವರು. ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರ ಪ್ಪನವರ ಪುತ್ರ ಬಿ.ಎಸ್‌. ರಾಘವೇಂದ್ರ ಇಂಥವರೊ ಲ್ಲಬ್ಬರು. ತಾನು ಶ್ರಮ ಸಾಫ‌ಲ್ಯದ ಹಿನ್ನೆಲೆಯಿಂದ ರೂಪುಗೊಂಡ ನಾಯಕರ ಪಕ್ಷವೆಂದು ಬಿಜೆಪಿ ಒಂದು ಕಾಲದಲ್ಲಿ ಹೇಳಿಕೊಳ್ಳುತ್ತಿತ್ತು. ಆದರೆ ಇಂದು? ಮುಂದಾಳುಗಳ ಮಕ್ಕಳೇ ಪಕ್ಷದ ಕಚೇರಿಗಳಲ್ಲಿ ದುಡಿದು ನಾಯಕರಾಗಿ ಬೆಳೆದವರನ್ನು ಅನಾಯಾಸವಾಗಿ ಹಿಂದಿಕ್ಕಿ, ಬಂದ ಅವಕಾಶಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ಸು ಕಾಣುತ್ತಿದ್ದಾರೆ.

ಸಂಸತ್‌ ಸದಸ್ಯರುಗಳ ಹಿನ್ನೆಲೆ ಕುರಿತಂತೆ ನಡೆಸಲಾದ ಅಧ್ಯಯನವೊಂದರ ಪ್ರಕಾರ 2009ರ ಲೋಕಸಭೆಯಲ್ಲಿದ್ದ ಸದಸ್ಯರ ಪೈಕಿ ಶೇಕಡಾ 30.7ರಷ್ಟು ಮಂದಿ ರಾಜಕೀಯ ಕುಟುಂಬಗಳಿಂದ ಬಂದವರು, 16ನೆಯ ಲೋಕಸಭೆಯಲ್ಲಿ ಈ ಪ್ರಮಾಣ ಶೇ. 22ಕ್ಕೆ ಇಳಿಯಿತು. 2004ರ ಲೋಕಸಭೆಯಲ್ಲಿ ರಾಜಕೀಯ ಕುಟುಂಬಗಳಿಂದ ಬಂದವರ ಪ್ರಮಾಣ ಶೇ. 21ರಷ್ಟಿತ್ತು.

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.