ಪ್ರೀತಿಯ ದೋಣಿಯಲ್ಲಿ ನಿನ್ನೊಡನೆ ಬೇರೊಬ್ಬ…!


Team Udayavani, Jun 11, 2019, 6:00 AM IST

b-11

ನಿನ್ನ ಈಗೋ, ನನ್ನ ಅಂಜಿಕೆಯ ಸ್ವಭಾವದಿಂದ ನಮ್ಮ ಪ್ರೀತಿಯ ದೋಣಿ ದಡ ಸೇರಲೇ ಇಲ್ಲ. ಕೊನೆ ಕ್ಷಣದಲ್ಲಾದರೂ ನೀನಾಗಿಯೇ ಬಂದು, ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳುವ ಭರವಸೆಯಿತ್ತು ಅದು ಕೂಡ ಕೈಗೂಡಲಿಲ್ಲ.

ಬಹುಶಃ ಈ ಅವತಾರದಲ್ಲಿ ನಾನು ನಿನ್ನನ್ನು ನೋಡುತ್ತೀನೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಬೆಳ್‌ಬೆಳಗ್ಗೆ ಫೇಸ್‌ಬುಕ್‌ ತೆರೆದರೆ ಕಂಡಿದ್ದು ನೀನು ಮದುಮಗಳಂತೆ ಸಿಂಗಾರಗೊಂಡಿರುವ ಫೋಟೊ. ರೇಷ್ಮೆ ಸೀರೆ, ಕೊರಳಲ್ಲಿ ಬಂಗಾರದ ಒಡವೆಗಳು, ಕೈತುಂಬಾ ಮೆಹಂದಿಯ ಚಿತ್ತಾರ, ಮುಖಕ್ಕೆ ಮೆತ್ತಿರುವ ಮೇಕಪ್‌, ತೋಳು ಬಳಸಿ ನಿನ್ನ ಸಂಗಾತಿಯೊಡನೆ ಸೆಲ್ಫಿ ಕ್ಲಿಕ್ಕಿಸುವ ಪೋಸು… ಇಷ್ಟು ನೋಡಿದ್ದೇ ತಡ; ಉಸಿರು ನಿಂತಂತಾಗಿತ್ತು. ಎದೆಬಡಿತ ಜೋರಾಯಿತು. ಅದು ನಿನ್ನ ಮದುವೆಯ ಫೋಟೋವೆಂದು ತಿಳಿಯಲು ತಡವಾಗಲಿಲ್ಲ. ಅವತ್ತು ದಿನವಿಡೀ ರೂಮಿನೊಳಗೇ ಇದ್ದೆ. ಆ ರಾತ್ರಿ ನಿದ್ದೆಯೇ ಬರಲಿಲ್ಲ… ಮಧ್ಯರಾತ್ರಿ ಧುಮ್ಮಿಕ್ಕಿ ಬಂತು ನಿನ್ನ ನೆನಪು.

ಅಂದು ಕಾಲೇಜಿನ ಮೊದಲ ದಿನ. ಬೆಟ್ಟದಷ್ಟು ಕನಸು ಹೊತ್ತು ತರಗತಿಯೊಳಗೆ ಬಂದಿದ್ದೆ. ಲೆಕ್ಚರರ್‌ ಎಲ್ಲರ ಪರಿಚಯ ಕೇಳುತ್ತಿದ್ದರು. ಹುಡುಗಿಯರ ಗುಂಪಿನಿಂದ, ನೀಳ ಕೂದಲ, ಗುಳಿಕೆನ್ನೆಯ, ನಗುಮೊಗದ ನೀನು ಹೂವಿನಂತೆ ಮುಗುಳ್ನಗುತ್ತಾ ಇಂಗ್ಲಿಷ್‌ನಲ್ಲಿ ಪರಿಚಯ ಹೇಳುತ್ತಿದ್ದರೆ, ಈ ಕಡೆ ನನ್ನ ಹೃದಯ ಪ್ರೀತಿಗೆ ಮುನ್ನುಡಿ ಬರೆಯುತ್ತಿತ್ತು.

ಪ್ರೀತಿ ಗೀತಿಯಲ್ಲಿ ನಾನು ಬೀಳುವುದಿಲ್ಲವೆಂದು ಗೆಳೆಯರೆದುರು ಜಂಬ ಕೊಚ್ಚಿಕೊಳ್ಳುತಿದ್ದ ನಾನು, ನಿನ್ನನ್ನು ನೋಡಿದ ಕ್ಷಣದಲ್ಲಿ ಮೂಕನಾಗಿ ಹೋಗಿದ್ದೆ. ನನ್ನ ಬಾಳು ಬೆಳಗುವ ಹುಡುಗಿಯ ಕಲ್ಪನೆಯ ಸಾಕಾರ ರೂಪದಂತಿದ್ದೆ ನೀನು. ನಿನ್ನ ವ್ಯಕ್ತಿತ್ವ, ಸೌಂದರ್ಯ, ಮಾತಿನ ಶೈಲಿ ಎಲ್ಲವೂ ನನ್ನ ಕನಸಿನ ಹುಡುಗಿಯನ್ನೇ ಹೋಲುತ್ತಿದ್ದವು. “ಫ‌ಸ್ಟ್ ಇಂಪ್ರಷನ್‌ ಈಸ್‌ ದಿ ಬೆಸ್ಟ್ ಇಂಪ್ರಷನ್‌’ ಅಂತಾರಲ್ಲ, ಅದಕ್ಕಾಗೇ ಅವತ್ತು ನಿನ್ನನ್ನು ಸೆಳೆಯುವ ಪ್ರಯತ್ನ ಮಾಡಿದ್ದೆ. ಕ್ರಮೇಣ ಇಬ್ಬರೂ ಪರಿಚಿತರಾದೆವು. ಆದರೂ ಪ್ರೀತಿ ನಿವೇದನೆಗೆ ನನ್ನ ಹೃದಯ ಹಿಂಜರಿಯುತಿತ್ತು. ನಾನೇ ಮೊಣಕಾಲೂರಿ, ಗುಲಾಬಿ ಕೊಟ್ಟು ಪ್ರೇಮ ನಿವೇದನೆ ಮಾಡಬೇಕೆನ್ನುವ ಪಟ್ಟು ನಿನ್ನದು. ನಾನು ಕ್ಲಾಸ್‌ಗೆ ಬರದಿದ್ದಾಗ, ನೀನು ಚಡಪಡಿಸುತ್ತಿದ್ದುದು ನನಗೆ ತಿಳಿಯದ್ದೇನೂ ಆಗಿರಲಿಲ್ಲ.

ಹೂಬನದ ನಡುವೆ ನಿನ್ನೊಡನೆ ಸುಮಧುರ ಹಾಡೊಂದು ಗುನುಗಬೇಕು, ಸಮುದ್ರ ದಂಡೆಗೆ ಮುತ್ತಿಕ್ಕುವ ಅಲೆಗಳೊಂದಿಗೆ ನಾವಿಬ್ಬರೂ ಆಟವಾಡಬೇಕು. ರೈಲುಗಾಡಿಯ ಎದುರುಬದುರಿನ ಸೀಟಿಗೆ ಕುಳಿತು ನಿನ್ನೆಲ್ಲಾ ಸಿಹಿಮಾತಿಗೆ ಕಿವಿಯಾಗಬೇಕು… ಹೀಗೆ ಪ್ರತಿ ಕ್ಷಣವೂ ನೀನು ನನ್ನ ಉಸಿರಾಗಿರಬೇಕೆಂದು ಹಪಹಪಿಸುತ್ತಿದ್ದೆ.

ಆದರೆ, ಇವೆಲ್ಲ ಕೇವಲ ಭ್ರಮೆಯಾಗಿಯೇ ಉಳಿದುಬಿಟ್ಟವು. ನಿನ್ನ ಈಗೋ, ನನ್ನ ಅಂಜಿಕೆಯ ಸ್ವಭಾವದಿಂದ ನಮ್ಮ ಪ್ರೀತಿಯ ದೋಣಿ ದಡ ಸೇರಲೇ ಇಲ್ಲ. ಕೊನೆ ಕ್ಷಣದಲ್ಲಾದರೂ ನೀನಾಗಿಯೇ ಬಂದು, ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳುವ ಭರವಸೆಯಿತ್ತು ಅದು ಕೂಡ ಕೈಗೂಡಲಿಲ್ಲ. ಕಾಲೇಜು ಮುಗಿದ ಮೇಲಾದರೂ, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಾದರೂ ನನ್ನ ಭಾವಗಳಿಗೆ ಉಸಿರಾಗಿಸಿ ಜೀವ ತುಂಬಬಹುದೆಂಬ ನಿರೀಕ್ಷೆಯೂ ಸುಳ್ಳಾಯಿತು. ಇರಲಿ, ನಿನ್ನ ದಾಂಪತ್ಯ ಜೀವನ ಸುಖವಾಗಿರಲೆಂದು ಹಾರೈಸುತ್ತೇನೆ…

– ಅಂಬಿ ಎಸ್‌. ಹೈಯ್ನಾಳ್‌

ಟಾಪ್ ನ್ಯೂಸ್

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.