ಪಾಕ್ ಮೇಲೆ ಮತ್ತೂಂದು ಸ್ಟ್ರೈಕ್: ಅಮಿತ್ ಶಾ ಪ್ರಶಂಸೆ
Team Udayavani, Jun 18, 2019, 5:37 AM IST
ಹೊಸದಿಲ್ಲಿ: “ಪಾಕಿಸ್ಥಾನದ ಮೇಲೆ ಮತ್ತೂಂದು ಸರ್ಜಿಕಲ್ ಸ್ಟ್ರೈಕ್ ನಡೆದಿದೆ, ಫಲಿತಾಂಶ ಮಾತ್ರ ಅದೇ…’ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಮ್ ಇಂಡಿಯಾ ಪರಾಕ್ರಮವನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ.
“ಪಾಕಿಸ್ಥಾನದ ಮೇಲೆ ಟೀಮ್ ಇಂಡಿಯಾದಿಂದಲೂ ಮತ್ತೂಂದು ಸ್ಟ್ರೈಕ್ ನಡೆದಿದೆ. ಫಲಿತಾಂಶ ಮಾತ್ರ ಅದೇ. ಈ ಅಮೋಘ ಸಾಧನೆಗಾಗಿ ತಂಡದ ಸದಸ್ಯರೆಲ್ಲರಿಗೂ ಅಭಿನಂದನೆಗಳು. ಪಾಕಿಸ್ಥಾನ ವಿರುದ್ಧ ಸಾಧಿಸಿದ ಇಂಥದೊಂದು ಅಧಿಕಾರಯುತ ಗೆಲುವಿಗೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಆಗುತ್ತಿದೆ’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಫೆ. 26ರಂದು ಭಾರತ ಬಾಲಾಕೋಟ್ನ ಪಾಕ್ ಉಗ್ರರ ಶಿಬಿರದ ಮೇಲೆ ಸರ್ಜಿಕಲ್ಸ್ಟ್ರೈಕ್ ನಡೆಸಿತ್ತು. ಇದಕ್ಕೆ ಹೋಲಿಸಿ ಅಮಿತ್ ಶಾ ಭಾರತದ ಕ್ರಿಕೆಟ್ ಗೆಲುವನ್ನು ಶ್ಲಾ ಸಿದರು.