ಕುಟುಂಬ ಜೀತಮುಕ್ತಗೊಂಡರೂ ಹರಿದಿಲ್ಲ ಪ್ರಗತಿಯ ಬೆಳಕು

ಅಭಿವೃದ್ಧಿ ಹೆಸರಲ್ಲಿ ಮರೆಮಾಚಿದ ಪುಲ್ಲಾಜೆ ಹಾಗೂ ಕೋಲೋಡಿ

Team Udayavani, Jul 11, 2019, 5:00 AM IST

0307CH13_KOLODI-MAIN

ಬೆಳ್ತಂಗಡಿ: ನೂರಾರು ವರ್ಷಗಳ ಜೀತದಿಂದ ಮುಕ್ತರಾಗಿ ಊರು ಪಟ್ಟಣವಾಗಿ ಅಭಿವೃದ್ಧಿಯಾ ದರೂ ಹತ್ತಾರು ಕುಟುಂಬಗಳ ಮೇಲಿನ್ನೂ ಪ್ರಗತಿಯ ಬೆಳಕು ಹರಿದಿಲ್ಲ. ನೆರಿಯ ಗ್ರಾಮದ ಕೋಲೋಡಿ ಕಾಲನಿಯ ಕಥೆಯಿದು. ಅಂದು 71ಮಲೆಕುಡಿಯ ಕುಟುಂಬಗಳು ಜಮೀನಾªರರ ಆಣತಿಗೆ ಗಂಟೆಗಟ್ಟಲೆ ಕಾಯುತ್ತಿದ್ದರು. 1978ರಲ್ಲಿ ಸರಕಾರ ಕುಟುಂಬಗಳನ್ನು ಜೀತ ಮುಕ್ತಗೊಳಿಸಿತ್ತು.

ನೆರಿಯದ ಎಸ್ಟೇಟ್‌ ಒಂದರ ಒಳಗಿದ್ದ ಈ ಕುಟುಂಬಗಳು ಮಾಲಕರ ವಿರುದ್ಧ ನಡೆಸಿದ ಹೋರಾಟದ ಫಲವಾಗಿ 1999-2000ದಲ್ಲಿ ಸ್ವತಂತ್ರವಾಗಿದ್ದವು. ಆದರೆ 6 ಕಿ.ಮೀ. ಕೆಟ್ಟ ರಸ್ತೆಯನ್ನೇ ಅವಲಂಬಿಸಬೇಕಿತ್ತು. ಸೇತುವೆಗಳಿಲ್ಲದೆ ಮಳೆಗಾಲದಲ್ಲಿ 6 ತಿಂಗಳು ಹೊರ ಜಗತ್ತು ಕಾಣುವಂತಿರಲಿಲ್ಲ.

ಆದಿವಾಸಿ ಕಾಲನಿಗೆ ಅತಿದೊಡ್ಡ ರಸ್ತೆ
ಮಾಜಿ ಶಾಸಕ ವಸಂತ ಬಂಗೇರ ಅವರ ಅವಧಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 2016ರಲ್ಲಿ ರಸ್ತೆ ಮಂಜೂರಾಗಿದ್ದರಿಂದ ಪ್ರಸಕ್ತ 11.66 ಕೋಟಿ ರೂ. ವೆಚ್ಚದಲ್ಲಿ ಕೋಲ್ನ-ಕೋಲೋಡಿಗೆ 5.3 ಕಿ.ಮೀ. ರಸ್ತೆ ಹಾಗೂ ಸೇತುವೆ ನಿರ್ಮಾಣ ಪೂರ್ಣ ಗೊಂಡಿದೆ. 2ನೇ ಹಂತದಲ್ಲಿ ನೆರಿಯ ಎಚ್‌.ಪಿ. ಪಂಪ್‌ ಹೌಸ್‌ನಿಂದ 3 ಕೊ.ರೂ. ವೆಚ್ಚದಲ್ಲಿ 2 ಕಿ.ಮೀ. ರಸ್ತೆ ಸೇರಿದಂತೆ ಒಟ್ಟು 14.50 ಕೋ.ರೂ.ಗಳಲ್ಲಿ 7 ದೊಡ್ಡ ಸೇತುವೆ ಸಹಿತ ಮೂಲನಿವಾಸಿಗಳ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಅತೀ ದೊಡ್ಡ ಕಾಂಕ್ರೀಟ್‌ ರಸ್ತೆಯಾಗಿದೆ. 70 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕನಸು ನನಸಾಗಿದೆ.

ಮಳೆಗಾಲದ ವನವಾಸ
ಕೊಲೋಡಿಗೆ ತಾಗಿಕೊಂಡಿರುವ ಪುಲ್ಲಾಜೆಯ ಜನರದ್ದು ಹೇಳಿ ತೀರದ ಸಂಕಷ್ಟ. ನೆರಿಯ ಹೊಳೆಗೆ ಸೇತುವೆ ನಿರ್ಮಾಣವಾಗದೆ 30 ಕುಟುಂಬಗಳು ಮಳೆಗಾಲದಲ್ಲಿ ವನವಾಸ ಅನುಭವಿಸುತ್ತಿವೆ. ತುರ್ತು ಚಿಕಿತ್ಸೆ ಬೇಕಿದ್ದರೆ ರೋಗಿಯನ್ನು 2 ಕಿ.ಮೀ. ಹೊತ್ತು ತರಬೇಕು.

ಹಕ್ಕುಪತ್ರಕ್ಕಾಗಿ ಅಲೆದಾಟ
ಕೋಲೋಡಿ ಸ್ಥಳೀಯ ಎಸ್ಟೇಟ್‌ ಮಾಲಕರ 9 ಸಾವಿರ ಎಕ್ರೆ ಪ್ರದೇಶದ ವ್ಯಾಜ್ಯ ಹೈಕೋರ್ಟ್‌ನಲ್ಲಿದೆ. ಪರಿಣಾಮ ಆದಿವಾಸಿಗಳ ನೆಲೆಗೂ ಸಮಸ್ಯೆ ಎದುರಾಗಬಹುದು. 23 ಕುಟುಂಬಗಳು ಸುಮಾರು 100 ಎಕ್ರೆ ಪಟ್ಟಾ ಜಾಗದ ಹಕ್ಕು ಪಡೆದಿದ್ದರೆ ಉಳಿದ ಕುಟುಂಬಗಳು ಹಕ್ಕುಪತ್ರಕ್ಕಾಗಿ ಹಾತೊರೆಯುತ್ತಿವೆ. ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿ ಇತ್ಯರ್ಥ ಪಡಿಸಬೇಕಿದೆ. ಸರಕಾರ ಮತ್ತು ಮಾಜಿ ಶಾಸಕ ವಸಂತ ಬಂಗೇರ ಅವರು ರಸ್ತೆ ನಿರ್ಮಿಸಿ ಕೋಲೋಡಿ ಜನರ ಪಾಲಿಗೆ ಹೊಸ ಬದುಕು ನೀಡಿದ್ದಾರೆ. ಇನ್ನೂ ಅನೇಕ ಮನೆಗಳಿಗೆ ಅಗತ್ಯ ಸೌಕರ್ಯ, ಬಸ್‌ ವ್ಯವಸ್ಥೆ, ಹಕ್ಕುಪತ್ರ ವಿತರಣೆಯಾಗಬೇಕು. ಪುಲ್ಲಾಜೆಯಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ಸೇತುವೆಯಿಲ್ಲದೆ ದಿಗ½ಂದನ ಎದುರಿಸುತ್ತಿವೆ.
– ಸುಧಾಕರ, ಕೋಲೋಡಿ ನಿವಾಸಿ
ಹಾಗೂ ನೆರಿಯ ಗ್ರಾ.ಪಂ. ಸದಸ್ಯ

ಬೇಡಿಕೆ
-ವಿದ್ಯಾವಂತರಿಗೆ ಸರಕಾರಿ ಉದ್ಯೋಗವಕಾಶ
-ನೆರಿಯದಿಂದ ಬಸ್‌ ವ್ಯವಸ್ಥೆ
-ಬಾರ್ತಾಜೆ ತೋಡು ಕೋಂಡ್ಲ ರಸ್ತೆ ಮೋರಿ ಸಮಸ್ಯೆ
-ಬಾಕಿ ಉಳಿದಿರುವ 500 ಮೀ ಕಾಂಕ್ರೀಟೀಕರಣಕ್ಕೆ ಬೇಡಿಕೆ
-ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ
-ಪುಲ್ಲಾಜೆ ನೆರಿಯ ಹೊಳೆಗೆ ಸೇತುವೆ

ಪುಲ್ಲಾಜೆ ಪ್ರದೇಶದ ನೆರಿಯಾ ಹೊಳೆಗೆ ಸೇತುವೆ ನಿರ್ಮಿಸಲು ಈಗಾಗಲೇ 1.ಕೋ.ರೂ.ನ ಪ್ರಸ್ತಾವನೆ ಕಳುಹಿಸಲಾಗಿದೆ. ಬಹುದಿನಗಳ ಬೇಡಿಕೆ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
– ಹರೀಶ್‌ ಪೂಂಜ, ಶಾಸಕ

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

Gaza: ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

1-24-sunday

Daily Horoscope:ವಸ್ತ್ರ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ,ಮಿತ್ರರೊಂದಿಗೆ ಪ್ರವಾಸ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪುತ್ರನ ಬಂಧನ ಎಂದು ಉದ್ಯಮಿಗೆ ಹಣದ ಬೇಡಿಕೆ ಇಟ್ಟ ಅನಾಮಿಕರು !

ಪುತ್ರನ ಬಂಧನ ಎಂದು ಉದ್ಯಮಿಗೆ ಹಣದ ಬೇಡಿಕೆ ಇಟ್ಟ ಅನಾಮಿಕರು !

Puttur ತಾಳಿ ಮನೆಯಲ್ಲಿ ಇಟ್ಟು ವಿವಾಹಿತೆ ಪರಾರಿ

Puttur ತಾಳಿ ಮನೆಯಲ್ಲಿ ಇಟ್ಟು ವಿವಾಹಿತೆ ಪರಾರಿ

Puttur ಕರಿಮಣಿ ಮುತ್ತಿನ ಕೈ ಬಳೆ ಕಳವು ಪ್ರಕರಣ ಬಾಲಾಪರಾಧಿ ಸಹಿತ ನಾಲ್ವರಿಗೆ ಜಾಮೀನು

Puttur ಕರಿಮಣಿ ಮುತ್ತಿನ ಕೈ ಬಳೆ ಕಳವು ಪ್ರಕರಣ ಬಾಲಾಪರಾಧಿ ಸಹಿತ ನಾಲ್ವರಿಗೆ ಜಾಮೀನು

Sullia ಡಾ| ಆರ್‌.ಕೆ. ನಾಯರ್‌ ನಿರ್ಮಿಸಿದ ಸ್ಮತಿ ವನಕ್ಕೆ ಯುನೆಸ್ಕೋ ಪ್ರಶಸ್ತಿ

Sullia ಡಾ| ಆರ್‌.ಕೆ. ನಾಯರ್‌ ನಿರ್ಮಿಸಿದ ಸ್ಮತಿ ವನಕ್ಕೆ ಯುನೆಸ್ಕೋ ಪ್ರಶಸ್ತಿ

ಫ‌ಲ ನೀಡಿದ 10 ದಿನಗಳ ಕಾರ್ಯಾಚರಣೆ: ಬಂದ ದಾರಿಯಲ್ಲೇ ಮರಳಿದ ಆನೆಗಳು!

ಫ‌ಲ ನೀಡಿದ 10 ದಿನಗಳ ಕಾರ್ಯಾಚರಣೆ: ಬಂದ ದಾರಿಯಲ್ಲೇ ಮರಳಿದ ಆನೆಗಳು!

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

Gaza: ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

ನಮೀಬಿಯಾ ವಿರುದ್ದ ಗೆದ್ದ ಇಂಗ್ಲೆಂಡ್; ಸೂಪರ್ 8ರಲ್ಲಿ ಒಂದು ಕಾಲಿಟ್ಟು ಕುಳಿತ ಬಟ್ಲರ್ ಪಡೆ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.