ಸಂತಸ ತಂದ ಮೊದಲ ಸಂಪಾದನೆ


Team Udayavani, Jul 12, 2019, 5:00 AM IST

u-12

ಕೆಲವೊಂದು ಅನುಭವಗಳು ಎಷ್ಟು ಖುಷಿಯನ್ನು ನೀಡುತ್ತವೆ ಅಂತಂದ್ರೆ ಜೀವನದಲ್ಲಿ ಆ ಘಟನೆಯನ್ನು ಮರೆಯೋದಕ್ಕೆ ಸಾಧ್ಯವೇ ಇಲ್ಲ. ಕಾಲೇಜಿನ ಸೆಮಿಸ್ಟರ್‌ ಪರೀಕ್ಷೆ ಮುಗಿದ ಅನಂತರ ಬಂದಂತಹ ಮೊದಲ ಅವಕಾಶ ಪುರಸಭೆಯಲ್ಲಿ ಡಾಟಾ ಎಂಟ್ರೀ ಮಾಡೋ ಕೆಲಸ. ನುಡಿ-ಬರಹದ ಪರಿಚಯ ಇದ್ದುದಕ್ಕೆ ಅದ್ಯಾಕೋ ನನ್ನ ಕೇಳದೇ ಆ ಕೆಲಸಕ್ಕೆ ನನ್ನ ಹೆಸರನ್ನ ನೋಂದಾವಣಿ ಮಾಡಿಬಿಟ್ಟಿದ್ರು. ಪುರಸಭೆಯಿಂದ ಕರೆ ಬಂದು “ನಾಡಿದ್ದಿನಿಂದ ಬಂದು ಸೇರ್ಕೊಳ್ಳಿ’ ಅಂತ ಹೇಳಿದಾಗ, ಮನೆಯಲ್ಲಿ ಒಂದು ಮಾತೂ ಹೇಳದೇ ಹೊರಟು ನಿಂತಿದ್ದೆ. ಏನು ಬೇಕಾದ್ರೂ ಆಗ್ಲಿ ಒಂದು ಪ್ರಯತ್ನ ಅಂತಂದು ನನ್ನ ಪಾಡಿಗೆ ಕೈಗೆ ಸಿಕ್ಕ ಒಂದಷ್ಟು ಬಟ್ಟೆಯನ್ನು ಬ್ಯಾಗಿಗೆ ತುರುಕಿಕೊಂಡು ಮನೆ ಬಿಟ್ಟಿದ್ದೆ.

ಹನ್ನೆರಡು ಸಾವಿರ‌ ಸಂಬಳ. ಅಂದಿನಿಂದಲೇ ನನ್ನ ಕೆಲಸ ಪ್ರಾರಂಭ. ಹೇಳುವುದನ್ನು ಕೇಳಿ ಮಾತ್ರ ಗೊತ್ತಿದ್ದ ನನಗೆ ಈಗ ಅಸಲೀ ಪುರಸಭೆಯ ಕೆಲಸದ ಅನುಭವವೂ ದೊರೆಯುವುದರಲ್ಲಿತ್ತು. ಒಳಹೋಗಿ ಪರಿಚಯ ಹೇಳಿದಾಗ ನನ್ನ ಒಂದು ಕಂಪ್ಯೂಟರ್‌ ಮುಂದೆ ತಂದು ನಿಲ್ಲಿಸಿಬಿಟ್ಟರು. ಅಲ್ಲಿಂದ ನನ್ನ ಕಟಕಟ, ಕುಟುಕುಟು ಕುಟ್ಟುವ ಕೆಲಸ ಜಾರಿಯಾಗಿ ಕುಟ್ಟುವುದಕ್ಕೆ ಪ್ರಾರಂಭಿಸಿದೆ. ಎಷ್ಟುದ್ದ ಹೆಸರುಗಳು, ಏನೇನೋ ಹೆಸರುಗಳು, ಪದಗಳಿಗೆ ಸಿಕ್ಕದಂಥವೂ ಇತ್ತು.

ನಾನಂತೂ ಸಂಪೂರ್ಣವಾಗಿ ಕುಟ್ಟುವುದರಲ್ಲೇ ತಲ್ಲೀನಳಾಗಿ ಹೋದೆ. ನಾವೆಷ್ಟು ಪದಗಳನ್ನು ಟೈಪಿಸಿದ್ದೇವೆ ಅನ್ನುವುದರ ಮೇಲೆ ಹಾಗೂ ವೇಗದ ಮೇಲೆ ನನ್ನ ಸಂಬಳವು ನಿಗದಿಯಾಗಿತ್ತು.ಒಂದೆರಡು ವಾರಗಳು ಯಾವುದೇ ತೊಂದರೆಯಿಲ್ಲದೇ ನನ್ನ ಟೈಪಿಸುವ ಕೆಲಸ ಜಾರಿಯಲ್ಲಿತ್ತು. ಅನಂತರ ಬೇಜಾರು ಅನ್ನಿಸೋಕೆ ಶುರುವಾಗಿ ಇದೂ ಒಂದು ಕೆಲಸನಾ ಅನ್ನಿಸುವಷ್ಟರಲ್ಲಿ ಮತ್ತೆ ಕಾಲೇಜು ಪ್ರಾರಂಭವಾಗಿತ್ತು. ನಾನೆಷ್ಟು ಪದಗಳನ್ನು , ಹೆಸರುಗಳನ್ನು ಟೈಪಿಸಿದ್ದೆ ಎಂದೇ ನನಗೆ ನೆನಪಿರಲಿಲ್ಲ. ಗಣಿತಕ್ಕೂ ಸಿಕ್ಕಿರಲಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ನನ್ನ ಕೈಗೆ ಸಿಗಲಿದ್ದ ಮೊತ್ತದ ಕನಿಷ್ಟ ಅಂದಾಜೂ ನನಗಿರಲಿಲ್ಲ.

ಕಾಲೇಜಿನಲ್ಲಿ ತರಗತಿಗಳು ಪ್ರಾರಂಭವಾಗಿ ಬಿಡುವಿನ ಸಂದರ್ಭದಲ್ಲಿ ನನ್ನ ವಿಭಾಗ ಮುಖ್ಯಸ್ಥರು ಕರೆದು ಲೆಟರ್‌ ಒಂದನ್ನು ಕೈಗಿಟ್ಟು “ನಿನಗ್ಯಾವುದೋ ಲೆಟರ್‌ ಬಂದಿದೆ. ಅದೇನು ನೋಡು’ ಅಂತಂದರು. ಕ್ಲಾಸ್‌ನಲ್ಲಿ ತೆರೆದು ನೋಡಿದಾಗ ಅದು ಬರೋಬ್ಬರಿ ಹನ್ನೆರಡು ಸಾವಿರ ರೂಪಾಯಿಗಳ ಒಂದು ಚೆಕ್‌! ಅದೇ ನನ್ನ ಮೊದಲ ಕಾಲೇಜು ದಿನಗಳ ಸಂಪಾದನೆಯಾಗಿತ್ತು. ಇದಕ್ಕಾಗಿ ನಾನು ಪಟ್ಟ ಕಷ್ಟವೆಲ್ಲ ಆ ಚೆಕ್‌ನ್ನು ಕಂಡಾಗ ಮರೆತುಹೋಗಿತ್ತು.

ಅಪರ್ಣಾ ಎ. ಎಸ್‌.
ಪತ್ರಿಕೋದ್ಯಮ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.