ದೆಹಲಿಗೂ ತಲುಪಿದ “ತಂತಿ ಮೇಲಿನ ನಡಿಗೆ’


Team Udayavani, Oct 1, 2019, 3:10 AM IST

dehaligu

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ ಮುಸುಕಿನ ಗುದ್ದಾಟ ಈಗ ರಾಷ್ಟ್ರೀಯ ನಾಯಕರಿಗೂ ತಿಳಿಯುವಂತಾಗಿದೆ. “ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾ ದರೂ ಹತ್ತು ಬಾರಿ ಯೋಜನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ತಂತಿ ಮೇಲಿನ ನಡಿಗೆಯಂತಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆ ಈಗ ಬಿಜೆಪಿ ರಾಷ್ಟ್ರೀಯ ವರಿಷ್ಠರಿಗೆ ಮುಟ್ಟಿದೆ. ಈ ಹೇಳಿಕೆ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಬೇಕು. ಯಾವುದೇ ಕಾರಣಕ್ಕೂ ಮುಂದುವರಿಸದಂತೆ ಎಚ್ಚರ ವಹಿಸಿ ಎಂಬ ಸೂಚನೆ ಕೇಂದ್ರದಿಂದ ಬಂದಿದೆ ಎನ್ನಲಾಗಿದೆ.

ಮುಖ್ಯಮಂತ್ರಿಯವರ ತಂತಿಮೇಲಿನ ನಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌ ಅವರು ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈ ವಿಚಾರವನ್ನು ಇಲ್ಲಿಗೆ ಕೊನೆಗೊಳಿ ಸಬೇಕು. ಯಾವುದೇ ಕಾರಣಕ್ಕೂ ಇದರ ಕುರಿತಾದ ಬಹಿರಂಗ ಚರ್ಚೆ ಮುಂದುವರಿ ಯಬಾರದು ಎಂಬ ಸೂಚನೆಯನ್ನು ರಾಷ್ಟ್ರೀಯ ನಾಯಕರು ರಾಜ್ಯ ಬಿಜೆಪಿ ಮುಖಂಡರಿಗೆ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ನಾಯಕರಲ್ಲಿ ಈಗ ಎದ್ದಿರುವ ಸಮನ್ವಯದ ಕೊರತೆಯನ್ನು ಸೂಕ್ಷ್ಮವಾಗಿ ರಾಷ್ಟ್ರೀಯ ನಾಯಕರ ಗಮನಕ್ಕೆ ಇಲ್ಲಿನ ಮುಖಂಡರು ತಂದಿದ್ದಾರೆ. ಅಲ್ಲದೆ, ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬ ವಿಚಾರವನ್ನು ರಾಷ್ಟ್ರೀಯ ವರಿಷ್ಠರ ಗಮನಕ್ಕೆ ತರಲಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿರುವ ಮುರಳೀಧರ್‌ ರಾವ್‌ ಅವರು, ರಾಷ್ಟ್ರೀಯ ಕಾರ್ಯಾಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಮಾಹಿತಿಯನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮುಖ್ಯ ಮಂತ್ರಿಗಳ ನಡುವೆ ಸಮನ್ವಯದ ಕೊರತೆ ಇರು ವುದು ಬಿಜೆಪಿಯ ಕೆಲವು ನಾಯಕರ ಹೇಳಿಕೆ ಯಿಂದಲೇ ಸಾಬೀತಾಗುತ್ತಲೇ ಇದೆ. ಅನರ್ಹ ಗೊಂಡಿರುವ ಶಾಸಕರ ವಿಚಾರವಾಗಿ ಬಿಜೆಪಿ ನಾಯಕರು ಬಹಿರಂಗವಾಗಿ ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಪುಷ್ಠಿನೀಡುವಂತೆ ಮುಖ್ಯ ಮಂತ್ರಿಯವರೂ ಭಾನುವಾರ ನೀಡಿರುವ ಹೇಳಿಕೆ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.

ಅನರ್ಹಗೊಂಡಿರುವ ಶಾಸಕರ ವಿಚಾರ ಅಥವಾ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರ ಸೇರಿ ವಿವಿಧ ಪ್ರಮುಖ ವಿಷಯಗಳ ನಿರ್ಧಾರದಲ್ಲಿ ಬಿಜೆಪಿ ನಿಷ್ಠಾವಂತರ ಬಣ ಹಾಗೂ ಮುಖ್ಯಮಂತ್ರಿಗಳ ಬೆಂಬಲಿಗರ ಬಣ ನಿರ್ಮಾಣವಾಗಿದೆ ಎಂಬುದು ಕೇಂದ್ರದ ನಾಯಕರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಅಲ್ಲದೆ, ಸಂಘಟನಾತ್ಮವಾಗಿ ಬಿಜೆಪಿ ಬೆಳೆಯಬೇಕು. ಇದಕ್ಕೆಲ್ಲ ಅವಕಾಶ ನೀಡಬೇಡಿ ಎಂಬ ಸೂಚನೆ ಕೂಡ ರಾಜ್ಯದ ನಾಯಕರಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ತಂತಿ ನಡಿಗೆ ಏನಿಲ್ಲ, ಎಲ್ಲವೂ ಸರಿಯಿದೆ
ಹುಬ್ಬಳ್ಳಿ: ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿದೆ. ಯಾವ ಸಮಸ್ಯೆಯೂ ಇಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಯಾವ ಅರ್ಥದಲ್ಲಿ “ನಾನು ಒಂದು ರೀತಿ ತಂತಿ ಮೇಲೆ ನಡೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಬೃಹತ್‌ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಯವರು ಬೇರೆ ಬೇರೆ ವಿಚಾರವಾಗಿ ಆ ರೀತಿ ಹೇಳಿಕೆ ನೀಡಿದ್ದಾರೆ. ಹಾಗೆ ಯಾವ ಉದ್ದೇಶಕ್ಕೆ ಹೇಳಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ಅವರೇ ಸ್ಪಷ್ಟೀಕರಣ ನೀಡಲಿದ್ದಾರೆ. ಅದಕ್ಕೆ ಹೆಚ್ಚಿನ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ ಎಂದರು.

ಬಿಎಸ್‌ವೈಗೆ ಎಚ್‌ಡಿಕೆ ಟಾಂಗ್‌
ಬೆಂಗಳೂರು: “ತಂತಿ ಮೇಲೆ ನಡೆಯುತ್ತಿದ್ದೇನೆ’ ಎಂಬ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿಕೆಗೆ ಟ್ವೀಟ್‌ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟಾಂಗ್‌ ನೀಡಿದ್ದಾರೆ. ಯಡಿಯೂರಪ್ಪನವರೇ ತಂತಿ ಮೇಲಿಂದನೇ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಜನರ ಕಡೆಗೂ ನೋಡಿ. ಜನರ ಸಮಸ್ಯೆ ಬಗೆಹರಿಸಲು ಆಗದಿದ್ದರೆ ಜನರೇ ನಿಮ್ಮನ್ನು “ತಂತಿ’ ಮೇಲಿನಿಂದ ಇಳಿಸುತ್ತಾರೆ ಎಂದು ಹೇಳಿದ್ದಾರೆ. ಅತೃಪ್ತ ಶಾಸಕರನ್ನು ಅಡ್ಡ ದಾರಿಯಲ್ಲಿ ತೃಪ್ತಿಪಡಿಸಿ ಸಿಎಂ ಪದವಿ ಏರಿದ ಯಡಿಯೂರಪ್ಪ ಅವರೇ ತಂತಿ ಮೇಲಿಂದನೇ ಪ್ರವಾಹ ಪೀಡಿತ ಪ್ರದೇಶ ದಲ್ಲಿರುವ ಜನರ ಕಡೆಗೂ ನೋಡಿ. ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿರುವ ಅವರ ಬದುಕನ್ನು ನಿಮ್ಮ ಸರ್ಕಾರಕ್ಕೆ ಕಟ್ಟಿ ಕೊಡೋಕೆ ಸಾಧ್ಯವಾಗದಿದ್ದರೆ, ಜನರೇ ನಿಮ್ಮನ್ನು “ತಂತಿ’ ಮೇಲಿಂದ ಇಳಿಸುತ್ತಾರೆ ಎಂದು ಟ್ವೀಟ್‌ ಮಾಡಿದ್ದಾರೆ.

ವಿಶೇಷ ಅರ್ಥ ಬೇಡ: ವಿಜಯೇಂದ್ರ
ದಾವಣಗೆರೆ: ಮುಖ್ಯಮಂತ್ರಿ ಯಡಿಯೂರಪ್ಪ ಹೋರಾಟದ ಹಿನ್ನೆಲೆಯಿಂದ ಬಂದವರು. ಆ ಹಿನ್ನೆಲೆಯಲ್ಲಿ ನನ್ನದು ತಂತಿ ಮೇಲಿನ ನಡಿಗೆ ಎಂದು ಹೇಳಿದ್ದಾರೆಯೇ ಹೊರತು ಬೇರೆ ದೃಷ್ಟಿಯಿಂದ ಅಲ್ಲ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಹೇಳಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅ ಧಿಕಾರದಲ್ಲಿ ಇರಲಿ ಬಿಡಲಿ, ವಿಪಕ್ಷದಲ್ಲೇ ಇರಲಿ, ಹೋರಾಟವನ್ನೇ ಮೈಗೂಡಿಸಿಕೊಂಡವರು. ಹಾಗಾಗಿ ಆ ಮಾತನ್ನು ಹೇಳಿದ್ದಾರೆ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ವಿರೋಧ ಪಕ್ಷಗಳು ಟೀಕೆ ಮಾಡಿದಾಗ ಟಾಂಗ್‌ ಕೊಡುವುದು ಇದೆ. ಆದರೆ ಸರ್ಕಾರದ ವಿಷಯ, ಅಧಿ ಕಾರದ ಬಗ್ಗೆ ಮಾತನಾಡಲಾಗದು ಎಂದರು.

ಟಾಪ್ ನ್ಯೂಸ್

Koppa: ಪಾಕ್‌ ಪರ ಪೋಸ್ಟ್‌; ಯುವಕನ ವಿರುದ್ಧ ಪ್ರಕರಣ ದಾಖಲು

Koppa: ಪಾಕ್‌ ಪರ ಪೋಸ್ಟ್‌; ಯುವಕನ ವಿರುದ್ಧ ಪ್ರಕರಣ ದಾಖಲು

air india

Air India; ಕೊನೆಗೂ ಸಿಬಂದಿಗೆ ವೇತನ ಹೆಚ್ಚಳ; ಪೈಲಟ್‌ಗಳಿಗೆ ಕಾರ್ಯಕ್ಷಮತೆಯ ಗುರಿ

Statement: ರಾಜ್ಯದಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲ ಎಂದು ಹೇಳಿಲ್ಲ; ಸಿಎಂ ಸ್ಪಷ್ಟನೆ

Statement: ರಾಜ್ಯದಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲ ಎಂದು ಹೇಳಿಲ್ಲ; ಸಿಎಂ ಸ್ಪಷ್ಟನೆ

Sonia gandhi

Delhi; ಪ್ರಜಾಪ್ರಭುತ್ವ,ಸಂವಿಧಾನ ಉಳಿಸಲು ಇದು ಬಹಳ ಮುಖ್ಯ ಚುನಾವಣೆ:ಸೋನಿಯಾ

heavy rain in Dharwad

Dharwad ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ: ಮನೆಗಳಿಗೆ ನುಗ್ಗಿದ ನೀರು

akhilesh

Kyoto wale ಸೀಟ್ ಸೇರಿ ಯುಪಿಯ ಎಲ್ಲಾ ಕಡೆ ಬಿಜೆಪಿಗೆ ಸೋಲು: ಅಖಿಲೇಶ್

Kaamya Karthikeyan

Kaamya; ನೇಪಾಳ ಭಾಗದಿಂದ ಮೌಂಟ್ ಎವರೆಸ್ಟ್ ಏರಿದ ಕಿರಿಯ ಭಾರತೀಯ ಎಂಬ ಸಾಧನೆ ಮಾಡಿ 16ರ ಬಾಲಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Statement: ರಾಜ್ಯದಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲ ಎಂದು ಹೇಳಿಲ್ಲ; ಸಿಎಂ ಸ್ಪಷ್ಟನೆ

Statement: ರಾಜ್ಯದಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲ ಎಂದು ಹೇಳಿಲ್ಲ; ಸಿಎಂ ಸ್ಪಷ್ಟನೆ

SIT: ಭವಾನಿ ರೇವಣ್ಣ ಕಾರು ಚಾಲಕನಿಗೆ ಎಸ್‌ಐಟಿ 2ನೇ ಬಾರಿ ನೋಟಿಸ್‌

SIT: ಭವಾನಿ ರೇವಣ್ಣ ಕಾರು ಚಾಲಕನಿಗೆ ಎಸ್‌ಐಟಿ 2ನೇ ಬಾರಿ ನೋಟಿಸ್‌

1-asasa

Bengaluru ನಗರದ ರಸ್ತೆಗಳಲ್ಲಿ 5500 ಗುಂಡಿಗಳು!: ಕೂಡಲೇ ಮುಚ್ಚುವಂತೆ ಆದೇಶ

ಜೋಶಿ

Bidar; ಈಗ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಗೆ 35 ಸ್ಥಾನವು ಸಿಗದು: ಜೋಶಿ

Yellapura: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೆ ಮೃತ್ಯು

Yellapura: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

rape

Court; ನಿರಂತರ ರೇಪ್ ಮಾಡಿ ಮಲ ಮಗಳನ್ನು ಗರ್ಭಿಣಿಯಾಗಿಸಿದವನಿಗೆ ಜೀವಾವಧಿ ಶಿಕ್ಷೆ

Koppa: ಪಾಕ್‌ ಪರ ಪೋಸ್ಟ್‌; ಯುವಕನ ವಿರುದ್ಧ ಪ್ರಕರಣ ದಾಖಲು

Koppa: ಪಾಕ್‌ ಪರ ಪೋಸ್ಟ್‌; ಯುವಕನ ವಿರುದ್ಧ ಪ್ರಕರಣ ದಾಖಲು

air india

Air India; ಕೊನೆಗೂ ಸಿಬಂದಿಗೆ ವೇತನ ಹೆಚ್ಚಳ; ಪೈಲಟ್‌ಗಳಿಗೆ ಕಾರ್ಯಕ್ಷಮತೆಯ ಗುರಿ

Shimoga: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಯುವಕರು ಸಾವು

Shimoga: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಯುವಕರು ಸಾವು

Statement: ರಾಜ್ಯದಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲ ಎಂದು ಹೇಳಿಲ್ಲ; ಸಿಎಂ ಸ್ಪಷ್ಟನೆ

Statement: ರಾಜ್ಯದಲ್ಲಿ ಪ್ರಧಾನಿ ಅಭ್ಯರ್ಥಿ ಇಲ್ಲ ಎಂದು ಹೇಳಿಲ್ಲ; ಸಿಎಂ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.