ಸ್ಟಾರ್‌ ಕನ್ನಡಿಗನಿಗೆ ಸ್ಟಾರ್ಸ್ ಸಾಥ್

Team Udayavani, Oct 18, 2019, 5:26 AM IST

e-8

ಚಿತ್ರರಂಗವೆಂದರೆ ಹಾಗೆ. ಅದು ಎಂಥವರನ್ನೂ ಕೂಡ ತನ್ನತ್ತ ಆಕರ್ಷಿಸುತ್ತದೆ. ರಾಜಕಾರಣಿಗಳು, ಉದ್ಯಮಿಗಳು, ಡಾಕ್ಟರ್, ಇಂಜಿನಿಯರ್, ಅಡ್ವೋಕೆಟ್ಸ್‌, ಆಡಿಟರ್, ಐಟಿ-ಬಿಟಿ, ಹೀಗೆ ಎಲ್ಲಾ ಕ್ಷೇತ್ರದವರೂ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹ ಚಿತ್ರರಂಗದಲ್ಲಿ ಈಗ ಆಟೋರಿಕ್ಷಾ ಚಾಲಕರು ಮತ್ತು ಕ್ಯಾಬ್‌ ಚಾಲಕರು ಕೂಡ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಆಟೋರಿಕ್ಷಾ ಓಡಿಸುತ್ತಿರುವವರು ಮತ್ತು ಕ್ಯಾಬ್‌ ಓಡಿಸುತ್ತಿರುವ ಅನೇಕ ಸಮಾನ ಮನಸ್ಕರು ಸೇರಿ ಈಗ “ಸ್ಟಾರ್‌ ಕನ್ನಡಿಗ’ಎನ್ನುವ ಚಿತ್ರವನ್ನು ನಿರ್ಮಿಸಿದ್ದಾರೆ. ಆಟೋರಿಕ್ಷಾ ಚಾಲಕ ಮಂಜುನಾಥ್‌ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು, ಜೊತೆಗೆ ನಿರ್ದೇಶನದ ಹೊಣೆಯನ್ನೂ ತಾನೇ ಹೊತ್ತುಕೊಂಡಿದ್ದಾರೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಪ್ರಾರಂಭವಾದ ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇದೇ ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದಂದು ತೆರೆಗೆ ಬರುತ್ತಿದೆ.

ಸದ್ಯ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರ ಇತ್ತೀಚೆಗೆ “ಸ್ಟಾರ್‌ ಕನ್ನಡಿಗ’ ಚಿತ್ರದ ಟ್ರೇಲರ್‌ ಮತ್ತು ಆಡಿಯೋವನ್ನು ಹೊರತಂದಿದೆ. “ಸ್ಟಾರ್‌ ಕನ್ನಡಿಗ’ ಚಿತ್ರದಲ್ಲಿ ಮಂಜುನಾಥ್‌, ಶಾಲಿನಿ ಭಟ್‌, ರಾಕ್‌ಲೈನ್‌ ಸುಧಾಕರ್‌ ಮೊದಲಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಪವನ್‌ ಪಾರ್ಥ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಮಹದೇವ್‌ ಛಾಯಾಗ್ರಹಣ, ಶಿವಕುಮಾರ ಸ್ವಾಮಿ ಸಂಕಲನವಿದೆ. ಆಟೋರಿಕ್ಷಾ ಮತ್ತು ಕ್ಯಾಬ್‌ ಚಾಲಕರಾದ ಚೆನ್ನೀರ, ಹರೀಶ್‌ ಜೋಗಿ, ಅರುಣಕುಮಾರ್‌, ಭೈರವ, ಲಕ್ಷ್ಮೀ, ಪ್ರಭು ಮೊದಲಾದವರು ಸೇರಿ ಜಂಟಿಯಾಗಿ ಬಂಡವಾಳ ಹೂಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇನ್ನು “ಸ್ಟಾರ್‌ ಕನ್ನಡಿಗ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಡುವ ಕನಸು ಹೊತ್ತಿರುವ ಚಾಲಕರಿಗೆ ಸಾಥ್‌ ನೀಡಿರುವ ನಟ ಧನಂಜಯ್‌, ಲೂಸ್‌ಮಾದ ಯೋಗಿ, ವಸಿಷ್ಠ ಸಿಂಹ, ನಟಿ ಹರಿಪ್ರಿಯಾ ಮೊದಲಾದವರು “ಸ್ಟಾರ್‌ ಕನ್ನಡಿಗ’ ಚಿತ್ರ ಯಶಸ್ವಿಯಾಗಲಿ ಎಂದು ಶುಭಕೋರಿದ್ದಾರೆ.

ಟಾಪ್ ನ್ಯೂಸ್

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

1-24-sunday

Daily Horoscope: ವಿರಾಮ ಆಚರಣೆಯ ನಡುವೆ ಹೊಸ ಕಾರ್ಯಗಳ ಪ್ರಸ್ತಾವ

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

1-qweewq

IPL ಇಂದು ಲೀಗ್‌ ಪಂದ್ಯಗಳಿಗೆ ತೆರೆ: KKR vs RR ಟೇಬಲ್‌ ಟಾಪರ್‌ಗಳ ಸೆಣಸಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

movies

Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

1-24-sunday

Daily Horoscope: ವಿರಾಮ ಆಚರಣೆಯ ನಡುವೆ ಹೊಸ ಕಾರ್ಯಗಳ ಪ್ರಸ್ತಾವ

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.