ಹಬ್ಬದ ಸಂಭ್ರಮ ಪರಿಸರ ಸ್ನೇಹಿಯಾಗಿರಲಿ ದೀಪಾವಳಿ


Team Udayavani, Oct 25, 2019, 5:07 AM IST

q-83

ಸಂಭ್ರಮದ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ಹಬ್ಬದ ಸಂಭ್ರಮವನ್ನು ಇನ್ನಷ್ಟು ಮೆರುಗು ಹೆಚ್ಚಿಸಲು ಮಾರುಕಟ್ಟೆಯಲ್ಲಿ ವೈವಿಧ್ಯಮಯವಾದ ಆಫ‌ರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲಾಗುತ್ತಿದೆ. ದೀಪಾವಳಿ ಪ್ರಯುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಹೇಗಿದೆ ಎಂಬ ಮಾಹಿತಿಯನ್ನು ಈ ಲೇಖನ ನೀಡುತ್ತದೆ.

ದೀಪಗಳ ಉತ್ಸವ, ಬೆಳಕಿನ ಹಬ್ಬ ಎಂದೇ ಕರೆಯಲಾಗುವ ದೀಪಾವಳಿ ಭಾರತದ ಅತಿ ದೊಡ್ಡ ಹಬ್ಬವಾಗಿದೆ. ಸಮೃದ್ಧತೆ ಮತ್ತು ಕುಟುಂಬದ ಒಗ್ಗೂಡುಕೆಯ ಒಂದು ವಿಭಿನ್ನ ಸನ್ನಿವೇಶ. ಈ ಹಬ್ಬವನ್ನು ಸಂಭ್ರಮದಿಂದ ವಿಭಿನ್ನವಾಗಿ ಆಚರಿಸಲು ಕೊನೆ ಕ್ಷಣದ ಸಿದ್ಧತೆಗಳು ನಡೆಯುತ್ತಿವೆ. ಮನೆಗಳು ದೀಪಗಳಿಂದ ಅಲಂಕೃತಗೊಳ್ಳಲು ಅಣಿಯಾಗುತ್ತಿದ್ದರೆ ಮಾರುಕಟ್ಟೆಗಳು ಬಿರುಸಿನ ವ್ಯಾಪಾರಕ್ಕೆ ಸಿದ್ಧವಾಗಿವೆ.

ವಿಭಿನ್ನ ದೀಪಗಳಿಗೆ ಹೆಚ್ಚಿದ ಬೇಡಿಕೆ ಮನೆ, ಅಂಗಡಿಗಳನ್ನು ದೀಪಗಳಿಂದ ಅಲಂಕರಿಸುವ ಮೂಲಕ ದೀಪಾವಳಿ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ. ದೀಪಗಳ ಬೆಳಕಿನಿಂದ ಮನೆತುಂಬಾ ಸಂತಸ ತುಂಬುತ್ತದೆ. ದೀಪಾವಳಿಯಂದು ಸಂಪೂರ್ಣ ಮಾರುಕಟ್ಟೆಗಳು ಪ್ರಕಾಶಿಸುತ್ತವೆ. ದೀಪಾವಳಿಯ ಮುಖ್ಯಾಕರ್ಷಣೆಗಳೆಂದರೆ ಗೂಡುದೀಪಗಳು ಹಾಗೂ ಬಣ್ಣ ಬಣ್ಣದ ವೈವಿಧ್ಯಮಯವಾದ ಲೈಟಿಂಗ್ಸ್‌ಗಳು. ಅದರಲ್ಲೂ ವಿಭಿನ್ನತೆಯನ್ನು ಹುಡುಕುವ ಜನರಿಗಾಗಿ ಮಾರುಕಟ್ಟೆಗಳಲ್ಲಿ ಪೈಪೋಟಿ ಆರಂಭವಾಗಿದೆ. ಗೂಡುದೀಪಗಳಲ್ಲಿ ವಿವಿಧ ಮಾದರಿಯ ಬಟ್ಟೆ, ಪ್ಲಾಸ್ಟಿಕ್‌ ಮತ್ತು ಬಣ್ಣದ ಕಾಗದಗಳಿಂದ ಮಾಡಿದ ಗೂಡುದೀಪಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿವೆ. ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಿಸಬೇಕು ಎಂದು ಬಯಸುವವರು ಬಣ್ಣದ ಕಾಗದದ ಗೂಡು ದೀಪಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ.

ಆನ್‌ಲೈನ್‌ನ‌ಲ್ಲಿ ಆಫರ್‌ ಸುರಿಮಳೆ
ಹಬ್ಬಗಳು ಬಂದರೇ ಆನ್‌ಲೈನ್‌ ಶಾಂಪಿಂಗ್‌ ಸೈಟ್‌ಗಳು ಗ್ರಾಹಕರನ್ನು ಸೆಳೆಯಲು ಬೆಸ್ಟ್‌ ಡೀಲ್‌ಗ‌ಳನ್ನು ಘೋಷಿಸುತ್ತವೆ ಹಾಗೂ ಹಬ್ಬದ ಸೇಲ್‌ ಮೇಳದಲ್ಲಿ ಗ್ಯಾಜೆಟ್ಸ್‌ ಉತ್ಪನ್ನಗಳಿಗೆ ವಿಶೇಷ ರಿಯಾಯತಿ ನೀಡುತ್ತವೆ. ಹೀಗಾಗಿಯೇ ಗ್ಯಾಜೆಟ್‌ ಖರೀದಿಸುವ ಬಹುತೇಕ ಗ್ರಾಹಕರು ಇ-ಕಾಮರ್ಸ್‌ಗಳ ಆಫರ್‌ ದಿನಗಳನ್ನು ಕಾಯುತ್ತಿರುತ್ತಾರೆ. ಹಾಗೇನಾದರೂ ಈಗಾಗಲೇ ಚಾಲ್ತಿಯಲ್ಲಿರುವ ಈ ಹಬ್ಬದ ಸೇಲ್‌ ಮೇಳಗಳಲ್ಲಿ ಸ್ಮಾಟ್‌ಫೋನ್‌, ಆಡಿಯೊ ಡಿವೈಸ್‌ ಮತ್ತು ಸ್ಮಾರ್ಟ್‌ ಪ್ರೊಡೆಕ್ಟ್ಗಳಿಗೆ ಬೆಸ್ಟ್‌ ಡೀಲ್‌ ಲಭ್ಯವಿವೆ.

ಉಡುಗೊರೆಗಳಲ್ಲಿ ನಾನಾ ಆಯ್ಕೆ
ಹಬ್ಬಗಳ ಸಮಯದಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯನ್ನು ನೀಡಲು ಎಲ್ಲರೂ ಬಯಸುತ್ತಾರೆ. ದೀಪಾವಳಿ ಸಮಯದಲ್ಲಿ ಮಾರುಕಟ್ಟೆಗಳಲ್ಲಿ ವಿಭಿನ್ನ ಉಡುಗೊರೆಗಳು ಬಂದಿವೆ. ಸುಂದರವಾದ ಬಾಕ್ಸ್‌ ಗಳಲ್ಲಿ ಪ್ಯಾಕ್‌ ಮಾಡಿರುವ ಸಿಹಿ-ತಿಂಡಿ, ಚಾಕೋಲೇಟ್‌ಗಳು, ಗ್ರೀಟಿಂಗ್ಸ್‌ ಗಳು, ಶೋ ಪೀಸ್‌ಗಳು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ.

ಸಾಂಪ್ರಾದಾಯಿಕ ಉಡುಗೆಗಳಿಗೆ ಆದ್ಯತೆ
ಹಬ್ಬದ ಸಮಯದಲ್ಲಿ ಯುವಕ- ಯುವತಿಯರು ಸಾಂಪ್ರದಾಯಿಕ ಉಡುಗೆಗಳತ್ತ ವಾಲುತ್ತಾರೆ. ಮಹಿಳೆಯರು ಆಕರ್ಷಕ ಸೀರೆಗಳತ್ತ ಮನಸ್ಸು ಮಾಡಿದರೆ ಯುವತಿಯರು ಮಾಡರ್ನ್ ಸೀರೆ, ಕುರ್ತಾಗಳನ್ನೇ ಧರಿಸುತ್ತಾರೆ. ಯುವಕರು ಕೂಡ ಕುರ್ತಾ, ಶರ್ವಾನಿಗಳನನ್ನು ತೊಟ್ಟು ಸಂಭ್ರಮಿಸುತ್ತಾರೆ. ಹಬ್ಬಕ್ಕಾಗಿಯೇ ಬಟ್ಟೆ ಮಳಿಗೆ, ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳಲ್ಲಿ ಆಫರ್‌ಗಳ ಸುರಿಮಳೆ ಇದೆ. ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಬಟ್ಟೆಗಳ ಮೆಟಿರೀಯಲ್‌ಗ‌ಳ ಬಗ್ಗೆ ಎಚ್ಚರವಿರಲಿ.

ಪರಿಸರಕ್ಕೆ ಹಾನಿ ಮಾಡದಿರಲಿ ಪಟಾಕಿ
ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿಗಳದ್ದೇ ಸದ್ದು. ಹಬ್ಬದ ಸಮಯದಲ್ಲಿ ಶಬ್ದಮಾಲಿನ್ಯ, ವಾಯುಮಾಲಿನ್ಯ ಮತ್ತು ಘನ ತ್ಯಾಜ್ಯವು ಉತ್ಪತ್ತಿಯಾಗುವುದು ಸಾಮಾನ್ಯವಾಗಿರುತ್ತದೆ. ಹಾಗಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾಧ್ಯವಾದ್ದಷ್ಟು ಕಡಿಮೆ ಪಟಾಕಿಗಳನ್ನು ಬಳಸಬೇಕು. ಸಾರ್ವಜನಿಕರು ಪಟಾಕಿಗಳನ್ನು ಖರೀದಿಸುವ ಮುನ್ನ ಗುಣಮಟ್ಟ ಖಾತರಿ ಮಾಡಿಕೊಳ್ಳಬೇಕು ಹಾಗೂ ಹಬ್ಬದ ಆಚರಣೆಯಲ್ಲಿ ಬೆಳಕು ಪ್ರಧಾನವಾಗಿರಲಿ. ಪಟಾಕಿಗಳನ್ನು ಅದಷ್ಟು ದೂರವಿಟ್ಟು ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಸಿ.

ಸಿಹಿತಿಂಡಿಗಳ ಬಾಕ್ಸ್‌ಗಳೇ ಪ್ರಮುಖ ಆಕರ್ಷಣೆ
ದೀಪಾವಳಿಯಂದು ಸಿಹಿತಿಂಡಿಗಳ ವಿನಿಮಯವೂ ಪ್ರಮುಖ ವಿಚಾರ. ನೆರೆಹೊರೆಯವರು, ಸಂಬಂಧಿಕರು, ಪ್ರೀತಿಪಾತ್ರರಿಗೆ ಸಿಹಿತಿಂಡಿಗಳನ್ನು ಕಳುಹಿಸಿ ಶುಭಾಶಯ ಕೋರುವುದು ಮಾಮೂಲಿ. ಅದರಂತೆ ದೀಪಾವಳಿಗಾಗಿ ಸುಂದರ ಆಕರ್ಷಕ ಬಾಕ್ಸ್‌ಗಳಲ್ಲಿ ಸಿಹಿ, ತಿಂಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸಿಹಿ, ತಿಂಡಿಗಳಿಗಿಂತಲೂ ಅದನ್ನು ಕಳುಹಿಸುವ ಬಾಕ್ಸ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಹೆಚ್ಚು ಆಸಕ್ತಿ
ದೀಪಾವಳಿ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿದೆ. ಅದರಲ್ಲೂ ಪೇಪರ್‌ ಗೂಡುದೀಪಗಳಿಗೆ ಜನರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.
– ರವಿ ಶಂಕರ್‌, ಗೂಡುದೀಪ ವ್ಯಾಪಾರಿ

-  ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.