ಆಶಾ ಹಮೇಶಾ…
Team Udayavani, Nov 23, 2019, 5:02 AM IST
ಸಾಮ (ಸೆಂಟರ್ ಫಾರ್ ಆರ್ಟ್ ಆಂಡ್ ಎಂಟರ್ಟೇನ್ಮೆಂಟ್) ವತಿಯಿಂದ “ಚಿತ್ರಹಾರ್-4′ ಕಾರ್ಯಕ್ರಮ ನಡೆಯುತ್ತಿದೆ. ಈ ಬಾರಿ, “ಆಶಾ ಹಮೇಶಾ’ ಎಂಬ ಪರಿಕಲ್ಪನೆಯಲ್ಲಿ, ಖ್ಯಾತ ಗಾಯಕಿ ಆಶಾ ಭೋಂಸ್ಲೆ ಅವರ ಸುಮಧುರ ಹಾಡುಗಳನ್ನು ಪ್ರಸ್ತುತ ಪಡಿಸಲಾಗುವುದು. ಹಿನ್ನೆಲೆ ಗಾಯಕಿ ಸಮನ್ವಿತಾ ಶರ್ಮ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು ಹಾಗೂ ಮುಂಬೈನ ಗಾಯಕರಾದ ಚೇತನ್ ರಾಣಾ, ಗೋವಿಂದ್ ಕರ್ನೂಲ್, ಅನಿಕೇತ್ ಪ್ರಭು, ಸುಬ್ರತ್ ಸಾಹೂ, ಶ್ರುತಿ ಭಿಡೆ ಮತ್ತು ರೋಹಿಣಿ ಪ್ರಭುನಂದನ್, ಆಶಾ ಭೋಂಸ್ಲೆ ಅವರ ಸೋಲೋ ಹಾಗೂ ಡ್ಯುಯೆಟ್ ಹಾಡುಗಳನ್ನು ಹಾಡಲಿದ್ದಾರೆ. ಕೀಬೋರ್ಡ್ ಕಲಾವಿದ ಪ್ರದೀಪ್ ಪಟ್ಕರ್ ಅವರಿಂದ ಆರ್ಕೆಸ್ಟ್ರಾ ಕೂಡ ನಡೆಯಲಿದೆ. ಟಿಕೆಟ್ಗಳು ಬುಕ್ಮೈಶೋನಲ್ಲಿ ಲಭ್ಯ. ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು, ವಿಶೇಷಚೇತನರ ವಸತಿ ಶಾಲೆಗಳಿಗೆ ನೀಡಲಾಗುವುದು.
ಎಲ್ಲಿ?: ಚೌಡಯ್ಯ ಮೆಮೋರಿಯಲ್ ಹಾಲ್, ವಯ್ಯಾಲಿಕಾವಲ್
ಯಾವಾಗ?: ನ. 23, ಶನಿವಾರ ಸಂಜೆ 6
ಪ್ರವೇಶ ದರ: 300 ರೂ. ಇಂದ ಶುರು
ಹೆಚ್ಚಿನ ಮಾಹಿತಿಗೆ: 9845040503