ವಿಶ್ವ ದಾಖಲೆ ಬರೆದ ಮುಗಿಲೆತ್ತರದ ಅರಬ್‌ ರಾಷ್ಟ್ರ ಧ್ವಜ

48ನೇ ರಾಷ್ಟ್ರೀಯ ದಿನದ ಸಂಭ್ರಮದಲ್ಲಿ ಸಂಯುಕ್ತ ಅರಬ್‌ ಸಂಸ್ಥಾನ

Team Udayavani, Dec 1, 2019, 9:04 PM IST

Gulf-New-730

ದುಬೈ: ಸಂಯುಕ್ತ ಅರಬ್‌ ಸಂಸ್ಥಾನದಲ್ಲಿ ರಾಷ್ಟ್ರೀಯ ದಿನದ ಸಂಭ್ರಮ ಮೇಳೈಸಿದೆ. 1971ರ ವರ್ಷದ ಡಿಸೆಂಬರ್‌ 2ರಂದು ಆಗಿನ ಸ್ಥಾಪಕಧ್ಯಕ್ಷ ಶೇಕ್‌ ಝಾಯಿದ್‌ ಬಿನ್‌ ಸುಲ್ತಾನ್‌ ಅಲ್‌ ನಹಿಯಾನ್‌ ಮುಂದಾಳುತ್ವದಲ್ಲಿ ಸಂಯುಕ್ತ ಅರಬ್‌ ಸಂಸ್ಥಾನ ರೂಪುಗೊಂಡಿತ್ತು. ಇದು ಏಳು ರಾಜ್ಯಗಳನ್ನೊಳಗೊಂಡ ಒಕ್ಕೂಟವಾಗಿದೆ.

ಆಗ ಈ ಯುಎಇಯನ್ನು ಅಬುಧಾಬಿ, ಅಜ್ಮಾನ್‌, ಫುಜೆರ,ದುಬೈ, ಶಾರ್ಜಾ, ರಾಸ್‌ ಅಲ್‌ ಖೈಮಾ, ಉಮ್ಮಲ್‌ ಖೈಮ್‌ ಎಂಬ ಏಳು ಸಂಸ್ಥಾನಗಳಾಗಿ ವಿಂಗಡಣೆಯಾಯಿತು. ಆ ದಿನವನ್ನು ಸಂಯುಕ್ತ ಅರಬ್‌ ಸಂಸ್ಥಾನದ ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ.

ವರ್ಷ ಡಿಸೆಂಬರ್‌ 1-3ರ ವರೆಗೆ ಸಂಯುಕ್ತ ಅರಬ್‌ ಸಂಸ್ಥಾನದ ರಾಷ್ಟ್ರೀಯ ದಿನ ಎಂದು ಆಚರಿಸಲಾಗುತ್ತದೆ. ಅಂದು ದೇಶವ್ಯಾಪ್ತಿ ಸರಕಾರಿ ಕಛೇರಿ, ಕಟ್ಟಡ ಹಾಗೂ ರಸ್ತೆಗಳ ಎರಡೂ ಬದಿಗಳಲ್ಲಿ ಬಣ್ಣ ಬಣ್ಣದ ವಿದ್ಯುತ್‌ ದೀಪಾಲಂಕಾರ ಮಾಡಲಾಗುತ್ತದೆ.

ಮಾತ್ರವಲ್ಲದೇ ಈ ಮೂರು ದಿನವನ್ನು ಸರಕಾರಿ ರಜಾ ದಿನವಾಗಿ ಪಾಲನೆ ಮಾಡಲಾಗುತ್ತದೆ. ಚತುರ್ವರ್ಣ ಪತಾಕೆ ಕೊಲ್ಲಿ ರಾಷ್ಟ್ರದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತವೆ. ಯುಎಇ ಜನತೆ ಸಂಭ್ರಮದಲ್ಲಿ ಈ ದಿನವನ್ನು ಕಳೆಯುತ್ತಾರೆ. ಯುಎಇಯಾ ನಾನಾ ಭಾಗಗಳಲ್ಲಿ ಇಲ್ಲಿನ ಕಲೆ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ.

ದಾಖಲೆ ನಿರ್ಮಿಸಿದ ರಾಷ್ಟ್ರಧ್ವಜ

ರಾಷ್ಟ್ರೀಯ ದಿನದ ಹಿನ್ನೆಲೆಯಲ್ಲಿ ಅರಬ್‌ನಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಗಳು ರಂಗೇರುತ್ತಿದೆ. ಅಬುಧಾಬಿ ಯುಎಇ ರಾಷ್ಟ್ರದ ರಾಜ್ಯಧಾನಿಯಾಗಿದ್ದು ಎತ್ತ ನೋಡಿದರೂ ಸಂಭ್ರಮಗಳೇ ಕಾಣುತ್ತಿವೆ. ರಜಾದಿನವಾದ ಕಾರಣ ಕೋಟ್ಯಾಂತರ ಮಂದಿ ತಮ್ಮನ್ನು ಸಂಭ್ರಮದ ಕಡಲಿನಲ್ಲಿ ಒಂದಾಗಿಸಕೊಂಡಿದ್ದಾರೆ.

ಮೊದಲ ದಿನ ಸ್ಕೈಡೈವರ್ಸ್‌ ಮುಗಿಲೆತ್ತರದಿಂದ ಅರಬ್‌ನ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಸಾವಿರಾರು ಅಡಿ ಎತ್ತರವಿರುವ ಈ ಧ್ವಜವನ್ನು ಹಿಡಿದು ಬಾನಿನಿಂದ ಜಿಗಿದಿದ್ದಾರೆ. ಇದು ವಿಶ್ವದ ಅತೀ ದೊಡ್ಡ ಮತ್ತು ಮುಗಿಲೆತ್ತರದಿಂದ ಹಾರಾಡಿದ ಮೊದಲ ರಾಷ್ಟ್ರಧ್ವಜವಾಗಿದೆ.

ನಾಲ್ಕು ಬಣ್ಣಗಳಿಂದ ಕೂಡಿದ ಅಲ್ಲಿನ ರಾಷ್ಟ್ರಧ್ವಜ ಸಿದ್ಧಪಡಿಸಲಾಗಿದೆ. ಹಸಿರು, ಬಿಳಿ, ಕಪ್ಪು, ಕೆಂಪು ಬಣ್ಣದಿಂದ ತಯಾರಿಸಲಾಗಿದೆ. ಹಸಿರು-ಫ‌ಲವತ್ತತೆ, ಬಿಳಿ-ತಟಸ್ಥ ನೀತಿ (ಧೋರಣೆ), ಕಪ್ಪು-ತೈಲ ಸಂಪತ್ತು, ಕೆಂಪು-ರಕ್ತ ಮತ್ತು ಖಡ್ಗ ಎಂಬ ಸಂಕೇತದಿಂದ ಅದನ್ನು ವರ್ಣಿಸಲಾಗುತ್ತದೆ.

ಸಂಭ್ರಮದಲ್ಲಿ ಭಾರತೀಯರು

ಅರಬ್‌ ರಾಷ್ಟ್ರಗಳಿಗೆ ಉದ್ಯೋಗ ನಿಮಿತ್ತ ನಾನಾ ದೇಶಗಳ ಜನರು ತೆರಳುತ್ತಾರೆ. ಅಲ್ಲಿ ಭಾರತೀಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಬಹುತೇಕರು ಕೇರಳದವರಾಗಿದ್ದಾರೆ.

ಹೇಗಿದೆ ಸಂಭ್ರಮ
ಇಡೀ ಅರಬ್‌ ಸಂಯುಕ್ತ ರಾಷ್ಟ್ರವನ್ನೇ ವಿದ್ಯುತ್‌ ದೀಪ ಅಲಂಕಾರದಿಂದ ಸಿದ್ದಪಡಿಸಲಾಗಿದೆ. ಬಣ್ಣ ಬಣ್ಣದ ದೀಪಗಳು, ನಗರದ ಪ್ರತಿ ಕಟ್ಟವನ್ನು ಆವರಿಸಿದೆ. ಜತೆಗೆ ದೀಪಾವಳಿಯಂತೆ ಅಲ್ಲಿಯೂ ಮುಗಿಲೆತ್ತರದಲ್ಲಿ ಬಣ್ಣದ ಬೆಳಕಿನ ಚಿತ್ತಾರ ಮನಸೂರೆಗೊಂಡಿದೆ.

ರಜಾದಿನವಾದ ಕಾರಣ ಶಾಲೆ, ಕಾಲೇಜಿನ ಮಕ್ಕಳು, ಉದ್ಯೋಗಸ್ಥರು ಸೇರಿದಂತೆ ಎಲ್ಲರೂ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಉಡುಗೆ ಮತ್ತು ಕೈಯಲ್ಲಿ 4 ಬಣ್ಣದ ಧ್ವಜ ಹಿಡಿದುಕೊಂಡು ರಸ್ತೆಯ ಇಕ್ಕೆಳಗಳಲ್ಲಿ ಓಡಾಡುತ್ತಿದ್ದಾರೆ.

ನಗರದಾದ್ಯಂತ ವಿವಿಧೆಡೆ ಸಾಂಸ್ಕೃತಿಕ ಪ್ರದರ್ಶನಗಳು ನಡೆಯುತ್ತಿದ್ದು, ರಾಷ್ಟ್ರೀಯತೆಯ ಪ್ರದರ್ಶನಗೊಳ್ಳಲಿದೆ. ಕಳೆದ ವರ್ಷದಂತೆ ಈ ವರ್ಷವೂ ದೇಶಾದ್ಯಂತ ಅತೀ ದೊಡ್ಡ ಕೇಕ್‌ ಸಿದ್ಧಪಡಿಸಲಾಗಿದ್ದು, ಕ್ರೀಮ್‌ಗಳ ಸಹಾಯದಿಂದ 4 ಬಣ್ಣಗಳುಳ್ಳ ರಾಷ್ಟ್ರದ ಧ್ವಜವನ್ನು ಬಿಡಿಸಿ ಹುಟ್ಟು ಹಬ್ಬದ ಮಾದರಿಯಲ್ಲಿ ಕೇಕ್‌ ಕತ್ತರಿಸಿ ಜನರು ಸಂಭ್ರಮಿಸುತ್ತಿದ್ದಾರೆ. ಸ್ವದೇಶಿಯರ ಸಂಭ್ರಮಕ್ಕೆ ವಿದೇಶಿಗರು ನೀರೆರೆಯುತ್ತಿದ್ದಾರೆ.

ಟಾಪ್ ನ್ಯೂಸ್

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.